ಕಾರ್ ರೇಸಿಂಗ್‌ನಲ್ಲಿ ಭೀಕರ ಅಪಘಾತಕ್ಕೀಡಾದ ಅಜಿತ್ ಕಾರು, ಕೂದಲೆಳೆ ಅಂತರದಿಂದ ಪಾರಾದ ತಲಾ.!
ಅಭಿಮಾನಿಗಳಿಂದ ತಲಾ ಮತ್ತು ತಲೈ ಎಂದು ಕರೆಸಿಕೊಳ್ಳುವ ಅಜಿತ್ ಭಾರತೀಯ ಚಿತ್ರರಂಗದ ಅತ್ಯಂತ ವಿಕ್ಷಿಪ್ತ ನಟ. ಒಬ್ಬ ಸೂಪರ್ ಸ್ಟಾರ್ ಹೀಗೆ ಇರಬೇಕು, ಹೀಗೆ ನಡೆದುಕೊಳ್ಳಬೇಕು, ಅಭಿಮಾನಿಗಳ ಜೊತೆ ಹೀಗೆ ಬೆರೆಯಬೇಕು ಎಂಬ ಅಲಿಖಿತ ನಿಯಮಗಳನ್ನ ಗಾಳಿಗೆ ತೂರಿರುವ ಅಜಿತ್ ಯಾರೊಂದಿಗೂ ಬೆರೆಯದ, ಯಾವ ಅಭಿಮಾನಿ ಸಂಘಗಳೂ ಸೃಷ್ಟಿಯಾಗದಂತೆ ನೋಡಿಕೊಂಡಿರುವ ಭಾರತೀಯ ಚಿತ್ರರಂಗದ ಏಕೈಕ ಹೀರೋ ಕೂಡ ಹೌದು.
ತಾನು ಒಪ್ಪಿಕೊಂಡ ಸಿನಿಮಾದ ಕೆಲಸಗಳೆಲ್ಲ ಮುಗಿದ ಮೇಲೆ, ಆ ಕಡೆ ತಿರುಗಿಯೂ ನೋಡದ ಅಜಿತ್ ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಕಾರ್ ರೇಸಿಂಗ್ ನಲ್ಲಿ ಪಾಲ್ಗೊಳ್ಳುವುದು, ಶೂಟಿಂಗ್ ಚಾಂಪಿಯನ್ ಶಿಪ್ಪಿನಲ್ಲಿ ಭಾಗವಹಿಸುವುದು ಹೀಗೆ ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಬದುಕುವ ಶೈಲಿಯನ್ನ ರೂಡಿಸಿಕೊಂಡಿದ್ದಾರೆ.

ಇಂಥಾ ಅಜಿತ್ ಕುಮಾರ್ ಈಗ ದುಬೈನಲ್ಲಿ 24 ಗಂಟೆಗಳ ಕಾಲ ನಡೆಯಲಿರುವ 24H 2025 ಕಾರ್ ರೇಸ್‌ನಲ್ಲಿ ಭಾಗವಹಿಸಲು ಸಿದ್ಧರಾಗಿದ್ದಾರೆ. ರೇಸ್ ನಲ್ಲಿ ಕಣಕ್ಕಿಳಿಯುವ ಮೊದಲು ದುಬೈನ ರೇಸ್ ಟ್ರ್ಯಾಕ್‌ನಲ್ಲಿ ಅಭ್ಯಾಸವನ್ನು ಕೂಡ ಶುರು ಮಾಡಿದ್ದಾರೆ. ಇದೇ ಸಮಯದಲ್ಲಿ ನಿಯಂತ್ರಣ ತಪ್ಪಿ ಅಜಿತ್ ಕುಮಾರ್ ಅವರ ಕಾರು ರಣಭೀಕರ ಅಪಘಾತಕ್ಕೀಡಾಗಿದೆ. ತಡೆಗೋಡೆಗೆ ಡಿಕ್ಕಿ ಹೊಡೆದು ಐದು ಬಾರಿ ತಿರುಗಿ ನಿಂತಿದೆ. ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಅಜಿತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನುಅಜಿತ್ ಕುಮಾರ್ ಮ್ಯಾನೇಜರ್ ಸುರೇಶ್ ಚಂದ್ರ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದು, ಘಟನೆಯಲ್ಲಿ ಅಜಿತ್‌ಗೆ ಯಾವುದೇ ಗಾಯವಾಗಿಲ್ಲ, ಅವರು ಆರೋಗ್ಯವಾಗಿದ್ದಾರೆ. ಈ ಘಟನೆ ನಡೆದಾಗ ಅವರು 180 ಕಿ.ಮೀ ವೇಗದಲ್ಲಿ ಚಾಲನೆ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
ಸದ್ಯಕ್ಕೆ ಅಜಿತ್ ಅವರ ಕಾರಿನ ಅಪಘಾತದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳನ್ನು ಆತಂಕಕ್ಕೆ ತಳ್ಳಿದೆ. ಅಜಿತ್ ಅವರ ಕಾರು ಅಪಘಾತದ ಈ ವಿಡಿಯೋವನ್ನು ನೋಡಿದ ಅನೇಕರು ಸದ್ಯ ಅಜಿತ್ ತಮ್ಮ ಈ ಕಾರು ರೇಸ್‌ನ ಮುಗಿಸಿಕೊಂಡು ಸೇಫಾಗಿ ಭಾರತಕ್ಕೆ ಮರಳಿ ಬರಲಿ ಎಂದು ಪ್ರಾರ್ಥನೆಯನ್ನು ಮಾಡುತ್ತಿದ್ದಾರೆ.
ಅಂದ್ಹಾಗೇ ದುಬೈನಲ್ಲಿ ನಡೆಯಲಿರುವ ರೇಸ್‌ನಲ್ಲಿ ಕಣಕ್ಕಿಳಿಯಲಿರುವ ಅಜಿತ್ ತಮ್ಮದೇ ಅಜಿತ್ ಕುಮಾರ್ ರೇಸಿಂಗ್ ಹೆಸರಿನ ತಂಡವನ್ನು ಹುಟ್ಟುಹಾಕಿದ್ದಾರೆ.ಈ ತಂಡದ ಮಾಲೀಕತ್ವವನ್ನೂ ವಹಿಸಿಕೊಂಡಿದ್ದಾರೆ. ಬೆಲ್ಜಿಯಂನ ಜನಪ್ರಿಯ ರೇಸರ್ ಫ್ಯಾಬಿಯನ್ ಡಫಿಯಕ್ಸ್ ತಂಡದ ಜೊತೆ ಅಜಿತ್ ಕೈ ಜೋಡಿಸಿದ್ದಾರೆ.
ಈ ತಂಡದ ಅಧಿಕೃತ ಚಾಲಕನಾಗಿ ಅಜಿತ್ ಈ ಬಾರಿಯ ದುಬೈನಲ್ಲಿ ನಡೆಯಲಿರುವ 24 ಅವರ್ಸ್ ರೇಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಇನ್ನು ಇದೊಂದೇ ರೇಸ್ ಅಲ್ಲದೇ ಭವಿಷ್ಯದಲ್ಲಿ ಇನ್ನೂ ಹಲವಾರು ರೇಸ್ ಗಳಲ್ಲಿ ತಮ್ಮ ಈ ತಂಡದ ಜೊತೆ ಅಜಿತ್ ಕುಮಾರ್ ಭಾಗಿಯಾಗಲಿದ್ದು, ಮ್ಯಾತ್ಯೂ ಡೆಟ್ರಿ, ಕ್ಯರೆರಾನ್ ಮ್ಯಾಕ್ಲಿಯೋಡ್ ಕೂಡ ಅಜಿತ್ ಕುಮಾರ್ ಅವರ ತಂಡದಲ್ಲಿದ್ದಾರೆ.
ಇನ್ನುಳಿದಂತೆ ಮೋಟೋ ರೇಸಿಂಗ್ ಜೊತೆ ಬೈಕ್ ರೇಸಿಂಗ್‌ನಲ್ಲಿ ಕೂಡ ವಿಪರೀತ ಆಸಕ್ತಿಯನ್ನೊಂದಿರುವ ಅಜಿತ್ ಚೆನ್ನೈ ಮೂಲದ ಸ್ಟಾರ್ಟ್ ಅಪ್ ವೀನಸ್ ಮೋಟಾರ್ ಸೈಕಲ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದಾರೆ. ಮೋಟಾರ್ ಸೈಕಲ್ ಪ್ರವಾಸಕ್ಕೆ ಉತ್ತೇಜನ ನೀಡಲು ಈ ಮೂಲಕ ಸಿದ್ಧವಾಗಿರುವ ಅಜಿತ್ ರೇಸಿಂಗ್‌ನಲ್ಲಿ ಉತ್ಸಾಹವನ್ನು ಹೊಂದಿರುವವರಿಗೆ ತಮ್ಮ ಈ ಕಂಪನಿಯ ಮೂಲಕ ತರಬೇತಿಯನ್ನು ನೀಡಲಿದ್ದಾರೆ. ಮಹಿಳೆಯರಿಗೆ ಈ ತಿಂಗಳಿನಿಂದ ತರಬೇತಿ ಶಿಬಿರ ಆರಂಭವಾಗಲಿದೆ.
ಉಳಿದಂತೆ 2010ರ ನಂತರ ಅಜಿತ್ ಕಾರ್ ರೇಸಿಂಗ್ ಟ್ರ್ಯಾಕ್‌ಗೆ ಮರಳಿದ್ದಾರೆ. ಇನ್ನೂ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುವುದನ್ನು ಬಿಟ್ಟರೆ, ಚಿತ್ರಕ್ಕೆ ಸಂಬಂಧಿಸಿದ ಬೇರೆ ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದ ಅಜಿತ್ ಸದ್ಯಕ್ಕೆ ವಿದಾ ಮುಯರ್ಚಿ ಮತ್ತು ಗುಡ್ ಬ್ಯಾಡ್ ಅಗ್ಲಿ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.
Ajith Kumar’s massive crash in practise, but he walks away unscathed.
— Ajithkumar Racing (@Akracingoffl) January 7, 2025
Another day in the office … that’s racing!#ajithkumarracing #ajithkumar pic.twitter.com/dH5rQb18z0


Click it and Unblock the Notifications











