ಸ್ನೇಹಿತನ ಮನೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡ ಯುವ ನಟ
ತಮಿಳಿನ ಯುವ ಇಂದಿರಾ ಕುಮಾರ್ ಸ್ನೇಹಿತನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ (ಫೆಬ್ರವರಿ 18) ಚೆನ್ನೈನಲ್ಲಿ ವರದಿಯಾಗಿದೆ. ಸ್ನೇಹಿತನ ಮನೆಯ ಕೋಣೆಯಲ್ಲಿ ರಾತ್ರಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ ಎಂಬ ವಿಷಯ ತಿಳಿದು ಬಂದಿದೆ.
''ಇಂದಿರಾ ಕುಮಾರ್ ಮಲಗುವ ಮುನ್ನ ಟಿವಿ ನೋಡುತ್ತಿದ್ದರು. ಆ ಮೇಲೆ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡರು. ತುಂಬಾ ಸಮಯ ಆದರೂ ಬರಲೇ ಇಲ್ಲ. ಅನುಮಾನದ ಹಿನ್ನೆಲೆ ಹೋಗಿ ನೋಡಿದರೆ ನೇಣು ಹಾಕಿಕೊಂಡಿದ್ದ'' ಎಂದು ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
''ನೇಣು ಹಾಕಿಕೊಂಡಿರುವುದನ್ನು ನೋಡಿದ ತಕ್ಷಣ ಪೊಲೀಸರಿಗೆ ವಿಷಯ ಮುಟ್ಟಿಸಿದೆ, ಪೊಲೀಸರು ಬಂದು ಇಂದಿರಾ ಕುಮಾರ್ ಪಾರ್ಥಿವ ಶರೀರವನ್ನು ಕೆಳಗಿಸಿದರು'' ಎಂದು ಸ್ನೇಹಿತ ಹೇಳಿದ್ದಾನೆ.

ಇಂದಿರಾ ಕುಮಾರ್ ಕೌಟುಂಬಿಕ ಸಮಸ್ಯೆಯಿಂದ ಬಹಳ ನೊಂದಿದ್ದರು ಎಂದು ತಿಳಿದು ಬಂದಿದೆ. ವಿವಾಹವಾಗಿದ್ದು ಒಬ್ಬ ಮಗ ಇದ್ದಾನೆ.
ಇಂದಿರಾ ಕುಮಾರ್‌ಗೆ ಸಿನಿಮಾಗಳಲ್ಲಿ ನಟಿಸುವ ಆಸೆ ಇತ್ತು. ಆದರೆ, ಯಾವ ಚಿತ್ರದಲ್ಲೂ ಅವಕಾಶ ಸಿಕ್ಕಿಲ್ಲ. ಹಾಗಾಗಿ, ಬಹಳ ಚಿಂತೆಯಲ್ಲಿದ್ದೆ ಎಂದು ಮೂಲಗಳು ಹೇಳಿರುವುದಾಗಿ ವರದಿಯಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


Click it and Unblock the Notifications











