For Quick Alerts
  ALLOW NOTIFICATIONS  
  For Daily Alerts

  ಸ್ನೇಹಿತನ ಮನೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡ ಯುವ ನಟ

  |

  ತಮಿಳಿನ ಯುವ ಇಂದಿರಾ ಕುಮಾರ್ ಸ್ನೇಹಿತನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ (ಫೆಬ್ರವರಿ 18) ಚೆನ್ನೈನಲ್ಲಿ ವರದಿಯಾಗಿದೆ. ಸ್ನೇಹಿತನ ಮನೆಯ ಕೋಣೆಯಲ್ಲಿ ರಾತ್ರಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ ಎಂಬ ವಿಷಯ ತಿಳಿದು ಬಂದಿದೆ.

  ''ಇಂದಿರಾ ಕುಮಾರ್ ಮಲಗುವ ಮುನ್ನ ಟಿವಿ ನೋಡುತ್ತಿದ್ದರು. ಆ ಮೇಲೆ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡರು. ತುಂಬಾ ಸಮಯ ಆದರೂ ಬರಲೇ ಇಲ್ಲ. ಅನುಮಾನದ ಹಿನ್ನೆಲೆ ಹೋಗಿ ನೋಡಿದರೆ ನೇಣು ಹಾಕಿಕೊಂಡಿದ್ದ'' ಎಂದು ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

  ಪತ್ನಿ ಬಗ್ಗೆ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್ ನಟಪತ್ನಿ ಬಗ್ಗೆ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್ ನಟ

  ''ನೇಣು ಹಾಕಿಕೊಂಡಿರುವುದನ್ನು ನೋಡಿದ ತಕ್ಷಣ ಪೊಲೀಸರಿಗೆ ವಿಷಯ ಮುಟ್ಟಿಸಿದೆ, ಪೊಲೀಸರು ಬಂದು ಇಂದಿರಾ ಕುಮಾರ್ ಪಾರ್ಥಿವ ಶರೀರವನ್ನು ಕೆಳಗಿಸಿದರು'' ಎಂದು ಸ್ನೇಹಿತ ಹೇಳಿದ್ದಾನೆ.

  ಇಂದಿರಾ ಕುಮಾರ್ ಕೌಟುಂಬಿಕ ಸಮಸ್ಯೆಯಿಂದ ಬಹಳ ನೊಂದಿದ್ದರು ಎಂದು ತಿಳಿದು ಬಂದಿದೆ. ವಿವಾಹವಾಗಿದ್ದು ಒಬ್ಬ ಮಗ ಇದ್ದಾನೆ.

  ಜೂ.ಚಿರು ರಿಲೀಸ್ ಮಾಡಿದ ಟ್ರೈಲರ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ | Filmibeat Kannada

  ಇಂದಿರಾ ಕುಮಾರ್‌ಗೆ ಸಿನಿಮಾಗಳಲ್ಲಿ ನಟಿಸುವ ಆಸೆ ಇತ್ತು. ಆದರೆ, ಯಾವ ಚಿತ್ರದಲ್ಲೂ ಅವಕಾಶ ಸಿಕ್ಕಿಲ್ಲ. ಹಾಗಾಗಿ, ಬಹಳ ಚಿಂತೆಯಲ್ಲಿದ್ದೆ ಎಂದು ಮೂಲಗಳು ಹೇಳಿರುವುದಾಗಿ ವರದಿಯಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  English summary
  Tamil TV actor Indira Kumar died by suicide in Chennai yesterday (February 18, 2021).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X