For Quick Alerts
  ALLOW NOTIFICATIONS  
  For Daily Alerts

  ತಮಿಳಿನ Rap ಸಾಂಗ್ ನಲ್ಲಿ ಯಶ್ 'ಕೆಜಿಎಫ್' ಅಬ್ಬರ

  |

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಹವಾ ಎಷ್ಟರ ಮಟ್ಟಿಗೆ ಇದೆ ಅಂದರೆ ಕೇವಲ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದಲ್ಲಿ ಚಿತ್ರಾಭಿಮಾನಿಗಳು ಯಶ್ ಜಪ ಮಾಡುತ್ತಿದ್ದಾರೆ.

  ತಮಿಳುನಾಡಿನ ಅಭಿಮಾನಿಗಳ ಅಭಿಮಾನಕ್ಕೆ ಸೋತ ಯಶ್ | Yash | KGF2 | TN | Filmibeat Kannada

  ಸದ್ಯ ಕೆಜಿಎಫ್-2ಗಾಗಿ ಎಲ್ಲರು ಕಾತರದಿಂದ ಎದುರು ನೋಡುತ್ತಿದ್ದಾರೆ. ರಾಕಿ ಭಾಯ್ ಎಂಟ್ರಿಗಾಗಿ ಇಡೀ ಭಾರತೀಯ ಚಿತ್ರಾಭಿಮಾನಿಗಳು ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ. ಇದರ ನಡುವೆ ಯಶ್ ತಮಿಳು ಅಭಿಮಾನಿ ರಾಕಿಂಗ್ ಸ್ಟಾರ್ ಕೆಜಿಎಫ್ ಬಗ್ಗೆ ಒಂದು ರ್ಯಾಪ್ ಸಾಂಗ್ ಮಾಡಿದ್ದಾರೆ.

  'KGF-2' ಚಿತ್ರೀಕರಣ ಮುಗಿಸಿದ ನಟಿ ರವೀನಾ: ಸಂತಸ ಹಂಚಿಕೊಂಡಿದ್ದು ಹೀಗೆ'KGF-2' ಚಿತ್ರೀಕರಣ ಮುಗಿಸಿದ ನಟಿ ರವೀನಾ: ಸಂತಸ ಹಂಚಿಕೊಂಡಿದ್ದು ಹೀಗೆ

  ಹಸ್ಲರ್ ಭಾಯ್ ಹಾಗೂ ಹೈಡ್ ಕಾರ್ಟಿ ಎಂಬುವವರು ತಮ್ಮ ನೆಚ್ಚಿನ ಸ್ಟಾರ್ ಯಶ್ ಗೋಸ್ಕರ ಸ್ಪೆಷಲ್ Rap ಸಾಂಗ್ ಒಂದನ್ನು ಹಾಡಿ ರಿಲೀಸ್ ಮಾಡಿದ್ದಾರೆ. ಕೆಜಿಎಫ್ ಚಿತ್ರದ ಬ್ಯಾಗ್ರೌಂಡ್ ಹಾಗೆ Rap ಸಾಂಗ್ ಅನ್ನು ಶೂಟ್ ಮಾಡಿರುವುದು ವಿಶೇಷ. ಇನ್ನು ಕೆಜಿಎಫ್ ಚಿತ್ರದ ಯಶ್ ದೃಶ್ಯಗಳನ್ನು ಹಾಡಿನಲ್ಲಿ ಸೇರಿಸಿ Rap ಸಾಂಗ್ ತಯಾರಿಸಿದ್ದಾರೆ.

  ಈ ಹಾಡಿನಲ್ಲಿ ರಾಕಿ ಭಾಯ್ ಅನ್ನು ವರ್ಣನೆ ಮಾಡಲಾಗಿದೆ. ಗ್ಯಾಂಗ್ ಕಟ್ಕೊಂಡು ಬರೋನು ಗ್ಯಾಂಗ್ ಸ್ಟರ್. ಸಿಂಗಲ್ಲಾಗಿ ಬರೋನು ಮಾನ್ ಸ್ಟರ್ ಅನ್ನೋ ಡೈಲಾಗ್ ಈ ಹಾಡಿನಲ್ಲಿ ಬಳಸಲಾಗಿದೆ. ಈಗಾಗಲೆ ಹಾಡು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಯೂಟ್ಯೂಬ್ ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

  ಯಶ್ ಸದ್ಯ ಕೆಜಿಎಫ್-2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಕೊನೆ ಹಂತದ ಚಿತ್ರೀಕರಣದಲ್ಲಿ ಚಿತ್ರತಂಡ ನಿರತವಾಗಿದೆ. ಭಾರತೀಯ ಚಿತ್ರರಂಗದಲ್ಲಿ ಅತೀ ನಿರೀಕ್ಷೆಯ ಸಿನಿಮಾಗಳಲ್ಲಿ ಕೆಜಿಎಫ್-2 ಮೊದಲ ಸ್ಥಾನದಲ್ಲಿ ಇದೆ. ಅಂದರೆ ಕೆಜಿಎಫ್-2 ಮೇಲಿನ ನಿರೀಕ್ಷೆ ಎಷ್ಟರ ಮಟ್ಟಿಗೆ ಇದೆ ಎನ್ನುವುದು ಗೊತ್ತಾಗುತ್ತಿದೆ. ಅಂದ್ಹಾಗೆ ಸಿನಿಮಾ ಅಕ್ಟೋಬರ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

  English summary
  Tamil Yash Fan made Rap song on KGF kannada film.This song released on youtube.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X