ಅವತ್ತು ಪೊಲೀಸ್ರು ನಾಟಕ ಮಾಡಿದ್ರು, ಕಾಲ್ತುಳಿತಕ್ಕೆ ನನ್ನ ಮೇಲೆ ಗೂಬೆ ಕೂರಿಸಿದ್ರು; ಕರೂರಿನಲ್ಲಿ ಸಿಎಂ ವಿಜಯ್ ಭಾವೋದ್ವೇಗ

ತಮಿಳುನಾಡಿನ ಕರೂರು ಕಾಲ್ತುಳಿತ ದುರಂತ ಇನ್ನು ಮಾಸಿಲ್ಲ. ಸೆಪ್ಟೆಂಬರ್ 27, 2025 ರಂದು ನಡೆದ ಕಾಲ್ತುಳಿತದಲ್ಲಿ 41 ಜನ ಪ್ರಾಣ ಕಳೆದುಕೊಂಡಿದ್ದರು. ಟಿವಿಕೆ ಪಕ್ಷದ ನಾಯಕ ವಿಜಯ್ ರ್ಯಾಲಿಯಲ್ಲಿ ಭಾಗವಹಿಸಲು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ದುರಂತ ಸಂಭವಿಸಿತ್ತು. ತಮಿಳುನಾಡು ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ವಿಜಯ್ ಇಂದು(ಜುಲೈ 10) ಕರೂರಿಗೆ ಭೇಟಿ ನೀಡಿದ್ದರು. ಘಟನೆಯಲ್ಲಿ ಜೀವ ಕಳೆದುಕೊಂಡವರ ಕುಟುಂಬಗಳಿಗೆ ಸಾಂತ್ವನ ಹೇಳಿದರು.

ಶೋಕ ಮತ್ತು ಒಗ್ಗಟ್ಟಿನ ಸಂಕೇತವಾಗಿ ಕಪ್ಪು ಬಟ್ಟೆ ಧರಿಸಿ ವಿಜಯ್ ಕರೂರಿಗೆ ಭೇಟಿ ನೀಡಿದ್ದರು. ಬಹಿರಂಗ ವೇದಿಕೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳನ್ನು ಉದ್ದೇಶಿಸಿ ವಿಜಯ್ ಮಾತನಾಡಿದ್ದರು. ಅವತ್ತು ರ್ಯಾಲಿ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದಾರೆ ಎಂದು ಪೊಲೀಸರು ಮೊದಲೇ ಸೂಚಿಸಿದ್ದರೆ ನಾನು ಬರುತ್ತಿರಲಿಲ್ಲ. ಈ ಘಟನೆ ನಡೆಯುತ್ತಿರಲಿಲ್ಲ. ಬದಲಾಗಿ ಪೊಲೀಸರು ನಾಟಕ ಮಾಡಿ ನನಗೆ ದಾರಿ ಮಾಡಿಕೊಟ್ಟು ಪ್ರಚಾರದ ಬಸ್ ಏರುವಂತೆ ಮಾಡಿದ್ದರು ಎಂದು ಸಿಎಂ ವಿಜಯ್ ಆರೋಪಿಸಿದ್ದಾರೆ.

Tamilnadu CM Vijay Blames Police Over Karur Stampede During Visit to Victims Families

ನಾನು ಕರೂರಿನ ಜನರಿಗಾಗಿ ಅವತ್ತು ಇಲ್ಲಿಗೆ ಬಂದೆ, ನನಗಾಗಿ ಅಲ್ಲ. ಆದರೆ ದುರಂತಕ್ಕೆ ನನ್ನನ್ನೇ ದೂರಿದರು. ಘಟನೆ ಬಳಿಕ ಪ್ರತಿಕ್ರಿಯಿಸದೇ ಮನೆಯಲ್ಲಿ ಅವಿತು ಕುಳಿತ್ತಿದ್ದೇನೆ ಎಂದು ಆರೋಪಿಸಿದರು. ಡಿಎಂಕೆ ಈ ವಿಚಾರವನ್ನು ರಾಜಕೀಯ ಮಾಡಿಬಿಟ್ರು. ನನಗೆ ಹಣಕ್ಕಿಂತ ಜನರು ಮುಖ್ಯ.. ನಾನು ನನ್ನ ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದೀನಿ. ಸಾಕಷ್ಟು ನೋವು ಅನುಭವಿಸಿದ್ದೀನಿ. ಅದೆಲ್ಲಕ್ಕಿಂತ ಕರೂರು ಕಾಲ್ತುಳಿತ ಪ್ರಕರಣ ನನ್ನ ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಕರೂರು ನನ್ನ ಹೃದಯದಲ್ಲಿ ಸದಾ ಇರುತ್ತೆ ಎಂದರು. ಘಟನೆಯಲ್ಲಿ ಜೀವ ಕಳೆದುಕೊಂಡ 41 ಜನರಿಗಾಗಿ ಸ್ಮಾರಕವನ್ನು ನಿರ್ಮಿಸುವುದಾಗಿ ಘೋಷಿಸಿದರು.

ಜನರನ್ನು ಕಾಯಿಸುವ ಉದ್ದೇಶ ನನಗೆ ಇರಲಿಲ್ಲ. ಜನರಿಗಾಗಿ ರಾಜಕೀಯಕ್ಕೆ ಬಂದವನು ಈ ವಿಜಯ್.. ನನಗೆ ಎಲ್ಲವನ್ನು ಕೊಟ್ಟ ಜನರಿಗಾಗಿ ಎಲ್ಲಾ ಬಿಟ್ಟು ಜನರಿಗಾಗಿ ಜನರ ಸೇವೆ ಮಾಡಲು ಬಂದವನು ವಿಜಯ್.. ನಮಗೆ ಇಷ್ಟೆಲ್ಲಾ ನೋವು ಕೊಟ್ಟವರಿಗೆ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ಕೊಟ್ಟಿದ್ದೀರಾ. ಆದ್ರೆ ಇಷ್ಟು ಸಾಲದು. ನಿರಂತರವಾಗಿ ಮತ್ತೆ ಎದ್ದು ಬರಲು ಸಾಧ್ಯವಾಗದಂತೆ ತಿರುಗೇಟು ಕೊಡಬೇಕು. ಇಷ್ಟೆಲ್ಲಾ ಆಗಿಬಿಟ್ರೆ ನಾನು ಓಡಿ ಹೋಗ್ತೀನಿ ಅಂದುಕೊಂಡಿದ್ದಾರೆ. ಅವತ್ತು ಇವತ್ತು ಯಾವತ್ತು ನಾನು ಜನರನ್ನು ಬಿಟ್ಟು ಹೋಗಲ್ಲ. ಹಣ ಮುಖ್ಯವೋ, ಜನ ಮುಖ್ಯವೋ ಎಂದು ಕೇಳಿದ್ರೆ ಜನರೇ ನನಗೆ ಮುಖ್ಯ. ನನ್ನ ರೀತಿ ಮಾತನಾಡಲು ಅವರಿಗೆ ಧೈರ್ಯ ಇದ್ಯಾ? ಎಂದು ವಿಜಯ್ ಪ್ರಶ್ನಿಸಿದ್ದಾರೆ.

ಇದೇ ವೇಳೆ ಸಿಎಂ ವಿಜಯ್ ಕಾಲ್ತುಳಿತ ಪ್ರಕರಣದಲ್ಲಿ ಜೀವ ಕಳೆದುಕೊಂಡ 32 ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿ ಸರ್ಕಾರಿ ಉದ್ಯೋಗಗಳನ್ನು ಒದಗಿಸುವ ನೇಮಕಾತಿ ಆದೇಶಗಳನ್ನು ಹಸ್ತಾಂತರಿಸಿದರು.ತಮ್ಮ ಭಾಷಣದ ಉದ್ದಕ್ಕೂ ಡಿಎಂಕೆ ಪಕ್ಷ, ಮಾಜಿ ಸಿಎಂ ಸ್ಟಾಲಿನ್ ವಿರುದ್ಧ ವಿಜಯ್ ವಾಗ್ದಾಳಿ ನಡೆಸಿದರು. ನೀವು ಅಧಿಕಾರದಲ್ಲಿ ಇದ್ದಾಗ ನಾನು ಅಲ್ಲಿ ಹೋಗಬಾರದು, ಇಲ್ಲಿಗೆ ಹೋಗಬಾರದು ಎಂಧು ತಡೆಯುವ ಪ್ರಯತ್ನ ಮಾಡಿದ್ರಿ. ಈಗ ಕೂಡ ಅದೇ ಪ್ರಯತ್ನ ಮಾಡುತ್ತಿದ್ದೀರಾ.. ನಾನು ಅಲ್ಲಿಗೆ ಹೋಗಬಾರದು ಇಲ್ಲಿಗೆ ಹೋಗಬಾರದು ಎನ್ನುತ್ತಿದ್ದೀರಾ. ನಿಮ್ಮ ಸರ್ಕಾರ ಇಲ್ಲ. ಈಗ ನಮ್ಮ ಸರ್ಕಾರ ಇರೋದು ಎನ್ನುವುದನ್ನು ಮರೆತುಬಿಟ್ಟಂತೆ ಕಾಣುತ್ತಿದೆ ಎಂದು ವಿಜಯ್ ವ್ಯಂಗ್ಯವಾಡಿದ್ದಾರೆ.

ರಾಜಕೀಯದಲ್ಲಿ ಸೋಲನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಮತ್ತೆ ಗೆದ್ದು ಬನ್ನಿ. ಅದು ಬಿಟ್ಟು ಅಧಿಕಾರದ ಹುಚ್ಚು ಹಿಡಿಸಿಕೊಂಡು ಅಲೆಯಬೇಡಿ. ಒಳ್ಳೆ ರಾಜಕೀಯ ಮಾಡಿ.. ಓಹ್ ಅದು ನಿಮಗೆ ಗೊತ್ತಿಲ್ಲ ಅಲ್ಲವೇ? ಎಂದು ವಿಜಯ್ ವ್ಯಂಗ್ಯವಾಡಿದ್ದಾರೆ. ಚೆನ್ನೈನಿಂದ ವಿಮಾನದ ಮೂಲಕ ತಿರುಚ್ಚಿಗೆ ತಲುಪಿದ ವಿಜಯ್ ಬಳಿಕ ಕಾರ್ ಏರಿ ಕರೂರ್ ತಲುಪಿದರು.

Read more about: vijay politics kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X