'ನರ್ಸ್ ಕೈಯಲ್ಲಿ ಇಂಜೆಕ್ಷನ್ ಇಲ್ಲ': ಕೋವಿಡ್ ಲಸಿಕೆ ಪಡೆದಂತೆ ನಟಿಸಿದ್ರಾ ನಯನತಾರ?

ಬಹುಭಾಷೆ ನಟಿ ನಯನತಾರ ಮಂಗಳವಾರ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದರು. ನಯನತಾರ ಜೊತೆ ಅವರ ಬಾಯ್‌ಫ್ರೆಂಡ್ ವಿಘ್ನೇಶ್ ಶಿವನ್ ಸಹ ಲಸಿಕೆ ಪಡೆದುಕೊಂಡಿದ್ದರು. ನಯನತಾರ ಲಸಿಕೆ ಹಾಕಿಸಿಕೊಂಡ ಫೋಟೋ ಶೇರ್ ಮಾಡಿದ್ದ ವಿಘ್ನೇಶ್ ಶಿವನ್ ''ಎಲ್ಲರೂ ಲಸಿಕೆ ಪಡೆದುಕೊಳ್ಳಿ, ಸುರಕ್ಷಿತವಾಗಿರಿ, ಮನೆಯಲ್ಲಿರಿ'' ಎಂದು ಪೋಸ್ಟ್ ಹಾಕಿದ್ದರು.

ಆದರೆ, ಕೋವಿಡ್ ಲಸಿಕೆ ಪಡೆದ ನಯನತಾರ ಟ್ರೋಲ್‌ಗೆ ಗುರಿಯಾದರು. ಇಂಜೆಕ್ಷನ್ ಹಾಕಿಸಿಕೊಳ್ಳುತ್ತಿರುವ ಫೋಟೋದಲ್ಲಿ ಇಂಜೆಕ್ಷನ್ ಕಾಣಿಸುತ್ತಿಲ್ಲ. ಹಾಗಾಗಿ, ಇದು ಫೇಕ್. ಲಸಿಕೆ ಪಡೆದಿಲ್ಲ. ಪಡೆದುಕೊಳ್ಳುತ್ತಿರುವಂತೆ ನಾಟಕ ಅಷ್ಟೇ ಎಂದು ಕಾಲೆಳೆಯುತ್ತಿದ್ದಾರೆ.

ಈ ಕುರಿತು ಟೀಂ ನಯನತಾರ ಸ್ಪಷ್ಟನೆ ನೀಡಿದೆ. ಕೋವಿಡ್ ಲಸಿಕೆ ಪಡೆದಿರುವ ಚಿತ್ರದಲ್ಲಿ ನಿಜವಾಗಿಯೂ ಇಂಜೆಕ್ಷನ್ / ಸಿರಿಂಜ್ ಇದೆ ಎಂದು ನಯನತಾರಾ ಟೀಂ ತಿಳಿಸಿದ್ದು, ಈ ವಿಚಾರವನ್ನು ಚಿತ್ರ ವಿಶ್ಲೇಷಕ ರಮೇಶ್ ಬಾಲ ಹಂಚಿಕೊಂಡಿದ್ದಾರೆ.

Team Nayanthara clarifies that there is indeed an injection/syringe in the Covid Vaccine

ಅಂದ್ಹಾಗೆ, ಈ ಹಿಂದೆ ಅನೇಕರು ಕೋವಿಡ್ ಲಸಿಕೆ ಪಡೆದುಕೊಂಡಿರುವಂತೆ ಫೋಟೋಗಳು, ವಿಡಿಯೋ ಹಂಚಿಕೊಂಡಿದ್ದರು. ಆದರೆ, ಅದರಲ್ಲಿ ಇಂಜೆಕ್ಷನ್ ಇರಲೇ ಇಲ್ಲ. ಸುಮ್ಮನೆ ಚುಚ್ಚಿಸಿಕೊಂಡಿರುವಂತೆ ಫೋಸ್ ಕೊಟ್ಟಿದ್ದರು.

ಬಹುಶಃ ನಯನತಾರ ಅವರು ಸಹ ಅದೇ ರೀತಿ ಫೋಸ್ ಕೊಟ್ಟಿರಬಹುದು ಅಷ್ಟೇ ಎಂಬ ಅನುಮಾನ ವ್ಯಕ್ತವಾಗಿತ್ತು. ಈಗ ಅವರ ಅಧಿಕೃತ ತಂಡವೇ ಇಂಜೆಕ್ಷನ್ ಪಡೆದಿರುವ ಬಗ್ಗೆ ಸ್ಪಷ್ಟಪಡಿಸಿದ್ದು, ಅಭಿಮಾನಿಗಳಲ್ಲಿ ಇದ್ದ ಗೊಂದಲ ನಿವಾರಣೆಯಾಗಿದೆ. ಫೋಟೋ ಝೂಮ್ ಮಾಡಿ ನೋಡಿದ್ರೆ ನರ್ಸ್ ಕೈಯಲ್ಲಿ ಇಂಜೆಕ್ಷನ್ ಇರುವುದು ಕಾಣುತ್ತದೆ.

ಸೂಪರ್ ಸ್ಟಾರ್ ರಜನಿಕಾಂತ್ ನಟಿಸುತ್ತಿರುವ 'ಅಣ್ಣಾತ್ತೆ' ಸಿನಿಮಾದಲ್ಲಿ ನಯನತಾರ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಶೂಟಿಂಗ್ ಮುಗಿಸಿ ಚೆನ್ನೈಗೆ ಮರಳಿದ್ದರು.

More from Filmibeat

English summary
Team Nayanthara clarifies that there is indeed an injection/syringe in the Covid Vaccine pic.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X