ದಳಪತಿಯನ್ನು ಕೇಳಿದೆ ಅಂತ ಹೇಳಿ ; ಅಭಿಮಾನಿಯ ಮಾತಿಗೆ ನಾಚಿ ನೀರಾದ ತ್ರಿಶಾ - ವಿಡಿಯೋ ವೈರಲ್
ಚಿತ್ರರಂಗ ಹಲವಾರು ಪ್ರೇಮ ಕಥೆ ಮತ್ತು ವ್ಯಥೆಗಳಿಗೆ ಸಾಕ್ಷಿಯಾಗಿದೆ. ಕೆಲವರ ಪ್ರೇಮ ಕಥೆಯ ಮೇಲೆ ಮದುವೆಯ ಅಧಿಕೃತ ಮುದ್ರೆ ಬಿದ್ದಿದ್ದರೆ, ಇನ್ನೂ ಕೆಲವರು ವಿರಹ ವೇದನೆಯಲ್ಲಿ ನೊಂದು ಬೆಂದು ಕಣ್ಣೀರು ಹಾಕಿದ್ದಾರೆ. ಉದಾಹರಣೆಗೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಲವ್ ಸ್ಟೋರಿ ಹ್ಯಾಪಿ ಎಂಡಿಂಗ್ ಆದರೆ, ಅದೇ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಪ್ರೇಮ ಕಥಾನಕ ಸ್ಯಾಡ್ ಎಂಡಿಂಗ್. ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಮತ್ತು ಸಲ್ಮಾನ್ ಖಾನ್ ಅವರ ಲವ್ ಸ್ಟೋರಿಯ ಕ್ಲೈಮ್ಯಾಕ್ಸ್ ಕೂಡ ಸೇಮ್ ಟು ಸೇಮ್. ಇವರಷ್ಟೇ ಅಲ್ಲ ಈ ಸಾಲಿನಲ್ಲಿ ಇನ್ನೂ ಹಲವರು ಇದ್ದಾರೆ.
ಇಲ್ಲಿ ಹಲವಾರು ಪ್ರೇಮಕಥೆಗಳು ಸಿನಿಮಾ ಸೆಟ್‌ನಲ್ಲಿ ಹುಟ್ಟಿ, ಅರ್ಧಕ್ಕೆ ಮರೆಯಾಗಿವೆ.ಇನ್ನೂ ಇವೆರಡರ ನಡುವೆ ಇಲ್ಲಿ ಇನ್ನೊಂದು ಗುಂಪು ಇದೆ. ಮದುವೆಯಾಗಿ ಮಕ್ಕಳಾಗಿದ್ದರೂ ಇವರ ಮನ ಮತ್ತೊಂದು ಸಂಬಂಧದತ್ತ ಹಾತೊರೆಯುತ್ತಿರುತ್ತೆ. ಉದಾಹರಣೆಗೆ ದರ್ಶನ್ ಮತ್ತು ಪವಿತ್ರಾ ಗೌಡ ಮತ್ತು ಮುಂತಾದವರು.

ಅತ್ತ ಕೈ ಹಿಡಿದ ಪತ್ನಿಗೆ ವಿಚ್ಚೇದನವನ್ನೂ ನೀಡದೇ ಇತ್ತ ಪ್ರೇಯಸಿಯ ಕೈಯನ್ನು ಬಿಡದೇ ವಿಚಿತ್ರವಾದ ಪೀಕಲಾಟದಲ್ಲಿ ಇವರು ಸಿಲುಕಿರುತ್ತಾರೆ. ಈ ಸಾಲಿನಲ್ಲಿ ವಿಜಯ್ ಮತ್ತು ತ್ರಿಶಾ ಕೂಡ ಇದ್ದಾರೆ ಎನ್ನುವ ವಿಷಯ ಈಗಾಗಲೇ ಜಗಜ್ಜಾಹೀರಾಗಿದೆ. ವಿಜಯ್ ಪ್ರಮಾಣ ವಚನ ಸಮಾರಂಭದಲ್ಲಿ ತ್ರಿಶಾ ಅವರನ್ನು ಕಂಡು ಬಹುತೇಕರಲ್ಲಿದ್ದ ಅನುಮಾನ ನಿಜಾ ಆಗಿದೆ. ಹೀಗಿರುವಾಗ ಈಗ ವಿಜಯ್ ಹೆಸರು ಕೇಳಿ ತ್ರಿಶಾ ನಾಚಿ ನೀರಾಗಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೌದು, ಅದೇನೋ ಕಾಕತಾಳಿಯವಾ..? ಗೊತ್ತಿಲ್ಲ. ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯ ಗದ್ದುಗೆ ಏರಿದ ಬೆನ್ನಲ್ಲೇ ತ್ರಿಶಾ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿದೆ. ಆ ಚಿತ್ರದ ಹೆಸರು ''ಕರುಪ್ಪು''. ಸೂರ್ಯ ಈ ಚಿತ್ರದ ನಾಯಕ.
ನಿನ್ನೆ ( ಮೇ 15) ಅಷ್ಟೇ ಈ ಚಿತ್ರ ಬಿಡುಗಡೆಗೊಂಡಿದ್ದು ದಕ್ಷಿಣ ಭಾರತೀಯ ಚಿತ್ರರಂಗದ ಸಂಪ್ರದಾಯದಂತೆ ತ್ರಿಶಾ ತಮ್ಮ ಚಿತ್ರವನ್ನು ನೋಡಲು ಚೆನ್ನೈನ ಪ್ರಖ್ಯಾತ ರೋಹಿಣಿ ಸಿಲ್ವರ್ ಸ್ಕ್ರೀನ್ಸ್ ಚಿತ್ರಮಂದಿರಕ್ಕೆ ಹೋಗಿದ್ದರು. ಚಿತ್ರವನ್ನು ಅಭಿಮಾನಿಗಳ ಜೊತೆ ನೋಡಿ ಸಂಭ್ರಮಿಸಿದರು.
ಆದರೆ ಚಿತ್ರ ಕಣ್ತುಂಬಿಕೊಂಡು ಹೊರ ಬಂದ ತ್ರಿಶಾ, ಇನ್ನೇನು ಹೊರಡಲು ಅಣಿಯಾಗಿದ್ದರು. ಆ ಸಮಯದಲ್ಲಿ ಅಭಿಮಾನಿಯೊಬ್ಬರು ತ್ರಿಶಾ ಕಾರಿನ ಬಳಿ ಬಂದಿದ್ದಾರೆ. ತ್ರಿಶಾ ಅವರನ್ನು ಉದ್ದೇಶಿಸಿ ದಳಪತಿಯನ್ನು ಕೇಳಿದೆ ಅಂತ ಹೇಳಿ ಎಂದಿದ್ದಾರೆ.

ಅಭಿಮಾನಿಯ ಈ ಮಾತು ಕೇಳಿ ತ್ರಿಶಾ ಕೋಪಗೊಂಡಿಲ್ಲ. ಬದಲಿಗೆ ಅವರ ಮುಖದಲ್ಲಿ ನಗು ಮೂಡಿದೆ. ನಗುತ್ತಲೇ ಖಂಡಿತ ಹೇಳುತ್ತೇನೆ ಎಂದು ಹೇಳಿ ತ್ರಿಶಾ ನಾಚಿಕೆಯಿಂದ ತಲೆ ತಗ್ಗಿಸಿದ್ದಾರೆ. ಆ ನಂತರ ಯಾರಿಗೋ ಮೆಸೇಜ್ ಕಳುಹಿಸುತ್ತಾ ನಿರಂತರವಾಗಿ ಮುಗುಳು ನಕ್ಕಿದ್ದಾರೆ. ತ್ರಿಶಾ ಅವರ ಈ ಹಾವ ಭಾವ ಸಂಪೂರ್ಣವಾಗಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತ್ರಿಶಾ ಮುಖದಲ್ಲಿನ ಆ ನಾಚಿಕೆ-ಸಂಕೋಚ ನೋಡಿದರೆ ಇಬ್ಬರ ನಡುವೆ ಕೇವಲ ಸ್ನೇಹ ಮಾತ್ರ ಅಲ್ಲ ಬದಲಿಗೆ ಅಗಾಧವಾದ ಪ್ರೀತಿಯಿದೆ ಎನ್ನುವುದು ಖಚಿತ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ತ್ರಿಶಾ ಮತ್ತು ವಿಜಯ್ ನಡುವಿನ 'ಅಫೇರ್' ಸುದ್ದಿಗೆ ಈ ವಿಡಿಯೋ ಅಧಿಕೃತ ಮುದ್ರೆ ಒತ್ತಿದಂತಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇನ್ನು ಕೆಲವರು ಸಂಗೀತಾ ಪರ ವಕಾಲತ್ತು ವಹಿಸಿಕೊಂಡು ತ್ರಿಶಾ ವಿರುದ್ಧ ಕೆಂಡ ಕಾರುತ್ತಿದ್ದಾರೆ.


Click it and Unblock the Notifications