For Quick Alerts
  ALLOW NOTIFICATIONS  
  For Daily Alerts

  ಸಿಲ್ಕ್‌ ಸ್ಮಿತಾ ಜೀವನ ಆಧಾರಿತ ಸಿನಿಮಾದ ನಾಯಕಿ ಇವರೇ

  |

  ಜೀವನ ಆಧರಿಸಿದ ಸಿನಿಮಾಗಳ ಟ್ರೆಂಡ್ ಈಗ ನಡೆಯುತ್ತಿದೆ. ಬಾಲಿವುಡ್‌ನಿಂದ ಪ್ರಾರಂಭವಾದ ಟ್ರೆಂಡ್ ದಕ್ಷಿಣ ಭಾರತದ ಸಿನಿರಂಗಗಳಿಗೂ ವ್ಯಾಪಿಸಿದೆ. ಜೀವನ ಆಧರಿತ ಸಿನಿಮಾಗಳು ಹಿಟ್ ಆಗುತ್ತಿರುವುದು ಇನ್ನಷ್ಟು ಇಂಥಹಾ ಸಿನಿಮಾಗಳನ್ನು ಮಾಡಲು ಪ್ರೇರಣೆ ಒದಗಿಸುತ್ತಿದೆ.

  ಸಾಧಕರ ಜೀವನ ಆಧರಿಸಿ ಸಿನಿಮಾ ಮಾಡುವರ ಗುಂಪು ಒಂದೆಡೆಯಾದರೆ, ವಿವಾದಿತ ವ್ಯಕ್ತಿಗಳ ಜೀವನ ಸಿನಿಮಾ ಮಾಡುವವರು ಸಹ ಕಡಿಮೆ ಇಲ್ಲ. ಇದೀಗ ಒಂದು ಕಾಲದ ಮಾದಕ ನಟಿ ಸಿಲ್ಕ್ ಸ್ಮಿತಾ ಜೀವನವನ್ನು ಸಿನಿಮಾ ಮಾಡುವ ತಯಾರಿ ಮಾಡಿಕೊಳ್ಳಲಾಗಿದೆ.

  ಈ ಮೊದಲು 'ಡರ್ಟಿ ಪಿಕ್ಚರ್' ಸಿನಿಮಾದಲ್ಲಿ ವಿದ್ಯಾ ಬಾಲನ್ ಸಿಲ್ಕ್ ಸ್ಮಿತಾ ಪಾತ್ರದಲ್ಲಿ ನಟಿಸಿದ್ದರು. ಅದ್ಭುತವಾಗಿ ಮೂಡಿಬಂದಿದ್ದ ಆ ಸಿನಿಮಾ ದೊಡ್ಡ ಹಿಟ್ ಸಹ ಆಯಿತು. ವಿದ್ಯಾ ಬಾಲನ್, ಸಿಲ್ಕ್ ಸ್ಮಿತಾ ಅದ್ಭುತವಾಗಿ ನಟಿಸಿದ್ದರು.

  ಸಿಲ್ಕ್ ಸ್ಮಿತಾ ಪಾತ್ರದಲ್ಲಿ ಅನುಸೂಯಾ ಭಾರಧ್ವಜ್

  ಸಿಲ್ಕ್ ಸ್ಮಿತಾ ಪಾತ್ರದಲ್ಲಿ ಅನುಸೂಯಾ ಭಾರಧ್ವಜ್

  ಇದೀಗ ತಮಿಳು ಚಿತ್ರರಂಗದಲ್ಲಿ ಸಿಲ್ಕ್ ಸ್ಮಿತಾ ಜೀವನವನ್ನು ಸಿನಿಮಾ ಆಗಿ ತೆರೆಗೆ ತರಲು ಸಜ್ಜಾಗಿದ್ದು, ಸಿಲ್ಕ್ ಸ್ಮಿತಾ ಪಾತ್ರಕ್ಕೆ ಅನುಸೂಯಾ ಭಾರಧ್ವಜ್ ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ತಮ್ಮ ಗ್ಲಾಮರಸ್ ನಟನೆಯಿಂದ ಈಗಾಗಲೇ ಗಮನ ಸೆಳೆದಿರುವ ಅನುಸೂಯಾ ಭಾರಧ್ವಜ್, ಇದೀಗ ಸಿಲ್ಕ್ ಸ್ಮಿತಾ ಜೀವನ ಆಧರಿತ ಸಿನಿಮಾದಲ್ಲಿ ಇನ್ನಷ್ಟು ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ.

  ವಿಜಯ್ ಸೇತುಪತಿ ಸಹ ಇದ್ದಾರೆ

  ವಿಜಯ್ ಸೇತುಪತಿ ಸಹ ಇದ್ದಾರೆ

  ಅನುಸೂಯಾ ಭಾರಧ್ವಜ್ ನಟಿಸುತ್ತಿರುವ ಮೊದಲ ತಮಿಳು ಸಿನಿಮಾ ಇದಾಗಿದೆ. ವಿಶೇಷವೆಂದರೆ ಇದೇ ಸಿನಿಮಾದಲ್ಲಿ ಖ್ಯಾತ ನಟ ವಿಜಯ್ ಸೇತುಪತಿ ಸಹ ನಟಿಸಲಿದ್ದಾರೆ. ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ಪಾತ್ರಕ್ಕೆ ತಯಾರಾಗಿರುವ ತಮ್ಮ ಚಿತ್ರವನ್ನು ಹಂಚಿಕೊಂಡಿದ್ದಾರೆ ಅನುಸೂಯಾ ಭಾರಧ್ವಜ್.

  ಹಲವು ಸಿನಿಮಾಗಳಲ್ಲಿ ನಟಿಸಿರುವ ಅನುಸೂಯಾ

  ಹಲವು ಸಿನಿಮಾಗಳಲ್ಲಿ ನಟಿಸಿರುವ ಅನುಸೂಯಾ

  ಮೊದಲಿಗೆ ಟಿವಿ ನಿರೂಪಕಿ ಆಗಿದ್ದ ಅನುಸೂಯಾ ಭಾರಧ್ವಜ, ನಂತರ ನಿಧಾನಕ್ಕೆ ಸಿನಿಮಾಗಳಿಗೆ ಜಾರಿಕೊಂಡರು. ರಂಗಸ್ಥಳಂ, ಎಫ್‌2, ಯಾತ್ರಾ ಸಿನಿಮಾಗಳಲ್ಲಿ ನಟಿಸಿರುವ ಅನುಸೂಯಾ, ಅಲ್ಲು ಅರ್ಜುನ್ ನಟನೆಯ ಪುಷ್ಪಾ, ರವಿತೇಜ ನಟನೆಯ ಕಿಲಾಡಿ, ಕೃಷ್ಣವಂಶಿ ಜೊತೆಗೆ ರಂಗ ಮಾರ್ತಾಂಡ, ಥ್ಯಾಂಕ್‌ ಯೂ ಬ್ರದರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  ಬಿಡುಗಡೆ ಆಗುತ್ತಿದೆ ಶಕೀಲಾ ಸಿನಿಮಾ

  ಬಿಡುಗಡೆ ಆಗುತ್ತಿದೆ ಶಕೀಲಾ ಸಿನಿಮಾ

  ಇದೇ ಸಮಯದಲ್ಲಿ ಸಾಫ್ಟ್‌ ಪಾರ್ನ್ ನಟಿ ಶಕೀಲಾ ಹೆಸರಿನ ಸಿನಿಮಾ ಸಹ ಇದೇ ತಿಂಗಳಿನಲ್ಲಿ ಬಿಡುಗಡೆ ಆಗುತ್ತಿದೆ. ಕನ್ನಡದ ಇಂದ್ರಜಿತ್ ಲಂಕೇಶ್ ನಿರ್ದೇಶನದ ಶಕೀಲಾ ಸಿನಿಮಾದಲ್ಲಿ ನಟಿ ರೀಚಾ ಚಡ್ಡಾ ಶಕೀಲಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Telugu actress Anusuya Bharadhwaj playing Silk Smitha Character in Tamil movie. That movies is based on life of Silk Smitha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X