ಧನುಷ್ ಭೇಟಿಯಾದ 'ಫಿದಾ' ನಿರ್ದೇಶಕ: ಕುತೂಹಲ ಮೂಡಿಸಿದ ಹೊಸ ಸಿನಿಮಾ

ತಮಿಳಿನ ಸ್ಟಾರ್ ನಟ ಧನುಷ್ ಭಿನ್ನ, ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಮಾಸ್- ಕ್ಲಾಸ್ ಎನ್ನದೆ ಉತ್ತಮ ಕಥೆ ಹಿಂದೆ ಓಡುವ ಧನುಷ್ ಅದ್ಭುತ ಸಿನಿಮಾಗಳನ್ನು ನೀಡುತ್ತಿದ್ದಾರೆ. ಇನ್ನು ನಿರ್ದೇಶಕರ ವಿಚಾರದಲ್ಲೂ ಅಷ್ಟೆ ಕೇವಲ ಸ್ಟಾರ್ ನಿರ್ದೇಶನದ ಹಿಂದೆ ಮಾತ್ರ ಬೀಳುವುದಿಲ್ಲ. ಉತ್ತಮ ಕಥೆ ಹೊತ್ತುಬರುವ ನಿರ್ದೇಶಕರ ಜೊತೆ ಸಿನಿಮಾ ಮಾಡಲು ಧನುಷ್ ಗ್ರೀನ್ ಸಿಗ್ನಲ್ ನೀಡುತ್ತಾರೆ.

ಧನುಷ್ ಕೇವಲ ತಮಿಳು ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಗಡಿಗೂ ಮೀರಿ ಖ್ಯಾತಿಗಳಿಸಿರುವ ಧನುಷ್ ತಮಿಳು ಸಿನಿಮಾಗಳ ಜೊತೆಗೆ ಬಾಲಿವುಡ್ ಮತ್ತು ಹಾಲಿವುಡ್ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಇದೀಗ ತೆಲುಗಿನ ಖ್ಯಾತ ನಿರ್ದೇಶಕ ಶೇಖರ್ ಕಮ್ಮುಲ ಜೊತೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ.

ಇಬ್ಬರ ಸಿನಿಮಾದ ಬಗ್ಗೆ ಕೆಲವು ದಿನಗಳಿಂದ ಚರ್ಚೆ ನಡೆಯುತ್ತಿತ್ತು. ಇದೀಗ ಈ ಸಿನಿಮಾದ ಬಗ್ಗೆ ಅಧಿಕೃತವಾಗಿದೆ. ಹೊಸ ಪ್ರಾಜೆಕ್ಟ್ ಬಗ್ಗೆ ಮಾತುಕತೆ ನಡೆಸಲು ನಿರ್ದೇಶಕ ಶೇಖರ್ ಕಮ್ಮುಲಾ, ಧನುಷ್ ಭೇಟಿಯಾಗಿದ್ದಾರೆ. ಧನುಷ್ ಸದ್ಯ ಹೈದರಾಬಾದ್ ನಲ್ಲಿದ್ದಾರೆ. ಅಲ್ಲೇ ತೆಲುಗಿನ ಖ್ಯಾತ ನಿರ್ದೇಶಕ ಶೇಖರ್ ಕಮ್ಮುಲ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

Telugu Director Sekhar Kammula meets Actor Dhanush in Hyderabad

ಇಬ್ಬರ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ತೆಲುಗಿನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಶೇಖರ್, ಧನುಷ್ ಜೊತೆ ಯಾವ ರೀತಿಯ ಸಿನಿಮಾ ಮಾಡಲಿದ್ದಾರೆ ಎನ್ನುವುದು ಅಭಿಮಾನಿಗಳ ಕುತೂಹಲ. ನಿರ್ದೇಶಕ ಶೇಖರ್, ಸಾಯಿ ಪಲ್ಲವಿ ಮತ್ತು ವರುಣ್ ತೇಜ್ ಜೊತೆ 'ಫಿದಾ' ಸಿನಿಮಾ ಮಾಡಿದ ಬಳಿಕ ಇದೀಗ 'ಲವ್ ಸ್ಟೋರಿ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಟೀಸರ್ ಮೂಲಕ ಕುತೂಹಲ ಮೂಡಿಸಿರುವ ಲವ್ ಸ್ಟೋರಿ ಬಿಡುಗಡೆಗೆ ಕಾಯುತ್ತಿದ್ದಾರೆ.

Recommended Video

ಅಸಲಿಗೆ Dvitva ಪದದ ಅರ್ಥ ಹೇಳಿದ ನಿರ್ದೇಶಕ | Filmibeat Kannada

ಲವ್ ಸ್ಟೋರಿ ರಿಲೀಸ್ ಗೂ ಮೊದಲೇ ಶೇಖರ್, ಧನುಷ್ ಜೊತೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಸದ್ಯದಲ್ಲೇ ಧನುಷ್ ಮತ್ತು ಶೇಖರ್ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದ್ದು, ಯಾವ ರೀತಿಯ ಸಿನಿಮಾ ಮೂಡಿಬರಲಿದೆ ಎಂದು ಕಾದು ನೋಡಬೇಕು.

More from Filmibeat

English summary
Telugu Director Sekhar Kammula meets Actor Dhanush in Hyderabad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X