Thalaivar 170: ರಜನಿಕಾಂತ್ ಅಭಿನಯದ ತಲೈವರ್ 170ಗೆ ಮಹಿಳಾ ಮಣಿಗಳ ಸಾಥ್!
ಈ ವರ್ಷದ ತಮಿಳು ಸೂಪರ್ ಹಿಟ್ ಸಿನಿಮಾ ಜೈಲರ್ ಯಶಸ್ಸಿನ ಸಂಭ್ರಮಾಚರಣೆಯಲ್ಲಿದ್ದಾರೆ ಸೂಪರ್ ಸ್ಟಾರ್ ರಜನಿಕಾಂತ್. ಜೊತೆಗೆ ಅವರ ಇತರ ಸಿನಿಮಾಗಳ ಅಪ್‌ಡೇಟ್‌ಗಳ ಬಗ್ಗೆ ರಜನಿ ಫ್ಯಾನ್ಸ್ ಹೆಚ್ಚು ಕುತೂಹಲದಿಂದ ಕಾಯುತ್ತಿದ್ದಾರೆ. ಅವರ ಮುಂಬರುವ ಚಿತ್ರ ತಲೈವರ್ 170 ಈಗಾಗಲೇ ಸಿನಿಪ್ರಿಯರಲ್ಲಿ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ.
ತಲೈವರ್ 170 ಚಿತ್ರವು ಆಕ್ಷನ್ ಎಂಟರ್‌ಟೈನರ್ ಆಗಿರುತ್ತದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದಾರೆ. ಅವರ ತಂಡಕ್ಕೆ ನಟರು, ತಂತ್ರಜ್ಞರು, ಪ್ರಮುಖ ಪಾತ್ರಗಳ ಆಯ್ಕೆ ನಡೆಯುತ್ತಲೇ ಇದು. ಚಿತ್ರತಂಡ ಈ ಬಗ್ಗೆ ಮಾಹಿತಿ ನೀಡುತ್ತಿದೆ. ಸದ್ಯದ ಮಾಹಿತಿ ಪ್ರಕಾರ, ಮೂವರು ಘಟಾನುಘಟಿ ಮಹಿಳಾ ನಾಯಕಿರು ಸಿನಿಮಾದ ಭಾಗವಾಗಿದ್ದಾರೆ.

ರಜನಿಕಾಂತ್ ಅವರ ತಲೈವರ್ 170 ಸಿನಿಮಾ
ಇತ್ತೀಚೆಗೆ, ಚಿತ್ರದ ನಿರ್ಮಾಪಕರು ತಲೈವರ್ 170 ರ ಬಹುನಿರೀಕ್ಷಿತ ತಂಡವನ್ನು ಬಹಿರಂಗಪಡಿಸುತ್ತಿದ್ದಾರೆ. ತಂಡದ ಒಬ್ಬೋಬ್ಬರೆ ಸದಸ್ಯರನ್ನು ಪರಿಚಯ ಮಾಡಿಸುತ್ತಿದ್ದಾರೆ. ತಲೈವರ್ 170 ಚಲನಚಿತ್ರವನ್ನು ಟಿಜೆ ಜ್ಞಾನವೇಲ್ ಅವರು ನಿರ್ದೇಶಿಸಿದ್ದಾರೆ. ಟಿಜೆ ಜ್ಞಾನವೇಲ್ 2021ರಲ್ಲಿ ಬಿಡುಗಡೆಯಾಗಿದ್ದ ಸೂರ್ಯ ಅಭಿನಯದ ಜೈ ಭೀಮ್ ಸಿನಿಮಾದಿಂದ ಖ್ಯಾತಿ ಗಳಿಸಿದ್ದಾರೆ.
ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿದ್ದು, ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ. ಇತ್ತೀಚಿನ ಅಪ್‌ಡೇಟ್‌ನಲ್ಲಿ, ಚಿತ್ರತಂಡ ನಟಿಯರಾದ ದುಶಾರ ವಿಜಯನ್ ಮತ್ತು ಮಂಜು ವಾರಿಯರ್ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ ಎಂದು ಘೋಷಿಸಿದ್ದಾರೆ.

ಮಂಜು ವಾರಿಯರ್
ನಟಿ ಮಂಜು ವಾರಿಯರ್ ಚಿತ್ರರಂಗದಲ್ಲಿ ಸುಮಾರು 25 ವರ್ಷಗಳಿಂದ ಕಮಾಲ್ ಮಾಡುತ್ತಿರುವ ನಟಿ. ವೆಟ್ರಿಮಾರನ್ ಮತ್ತು ಧನುಷ್ ನಾಯಕನಾಗಿ ನಟಿಸಿದ ಅಸುರನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಮತ್ತು ಮೋಹನ್ ಲಾಲ್ ನಾಯಕನಾಗಿರುವ ಲೂಸಿಫರ್ ಮುಂತಾದ ಚಿತ್ರಗಳಲ್ಲಿ ಅವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹೌ ಓಲ್ಡ್ ಆರ್ ಯು, ಉದಹರಣಂ ಸುಜಾತ ಮುಂತಾದ ಚಿತ್ರಗಳಲ್ಲಿ ನಟಿಸುವ ಮೂಲಕ ಅವರು ತಮ್ಮ ಬಹುಮುಖ ಪ್ರತಿಭೆಯನ್ನು ಮತ್ತೆ ಮತ್ತೆ ಸಾಬೀತುಪಡಿಸಿದ್ದಾರೆ.
ದುಶಾರ ವಿಜಯನ್
ನಟಿ ದುಶಾರಾ ವಿಜಯನ್ 2019 ರಲ್ಲಿ ಬೋಧೈ ಯೇರಿ ಬುಧಿ ಮಾರಿ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ್ದಾರೆ. ನಂತರ ಪಾ.ರಂಜಿತ್ ಅವರ 2021 ರ ಕ್ರೀಡಾ ಚಲನಚಿತ್ರ ಸರ್ಪಟ್ಟ ಪರಂಬರೈನಲ್ಲಿ ಮಾರಿಯಮ್ಮನ ಪಾತ್ರವನ್ನು ನಿರ್ವಹಿಸಿ ಸಿನಿ ಪ್ರೇಮಿಗಳ ಗಮನ ಸೆಳೆದಿದ್ದರು. ಅವರು ನಚ್ಚತಿರಂ ನಗರಗಿರದು, ಅನೀತಿ ಮತ್ತು ಅನ್ಬುಲ್ಲ ಗಿಲ್ಲಿಯಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಧನುಷ್ ಅವರ ಮುಂಬರುವ ಚಿತ್ರ ಡಿ 50 ನಲ್ಲಿ ಅವರು ನಟಿಸಲಿದ್ದಾರೆ ಎಂದು ವರದಿಯಾಗಿದೆ.
ತಲೈವರ್ 170
ತಲೈವರ್ 170 ರಜನಿಕಾಂತ್ ಮತ್ತು ಟಿಜೆ ಜ್ಞಾನವೇಲ್ ಜೋಡಿಯ ಮೊದಲ ಸಿನಿಮಾ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ಮಂಜು ವಾರಿಯರ್ ಮತ್ತು ರಾಣಾ ದಗ್ಗುಬಾಟಿ ಸೇರಿದಂತೆ ಹೆಚ್ಚಿನಮ ತಾರಾಗಣವಿದೆ. ಸಿನಿಮಾದಲ್ಲಿ ನಟ ರಜನಿಕಾಂತ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ತಲೈವರ್ 171
ನಿರ್ದೇಶಕ ಟಿಜೆ ಜ್ಞಾನವೇಲ್ ತಲೈವರ್ 170 ಚಿತ್ರದ ನಂತರ ರಜನಿಕಾಂತ್ ಮುಂದಿನ ಚಿತ್ರವನ್ನು ಲೋಕೇಶ್ ಕನಕರಾಜ್ ನಿರ್ದೇಶಿಸಲಿದ್ದಾರೆ. ಚಿತ್ರಕ್ಕೆ ತಾತ್ಕಾಲಿಕವಾಗಿ ತಲೈವರ್ 171 ಎಂದು ಹೆಸರಿಸಲಾಗಿದೆ. ಇದನ್ನು ಜೈಲರ್ ಸಿನಿಮಾ ನಿರ್ಮಾಣ ಮಾಡಿರುವ ಸನ್ ಪಿಕ್ಚರ್ಸ್ ನಿರ್ಮಿಸಲಿದೆ. ತಲೈವರ್ 170 ಚಿತ್ರದಂತೆಯೇ ಈ ಚಿತ್ರಕ್ಕೂ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಲಿದ್ದಾರೆ.


Click it and Unblock the Notifications











