twitter
    For Quick Alerts
    ALLOW NOTIFICATIONS  
    For Daily Alerts

    'ನನ್ನ ಜೀವನದ ಅತ್ಯುತ್ತಮ ಸಿನಿಮಾ ತಲೈವಿ': ಕಂಗನಾ ರಣಾವತ್ ಭರವಸೆ

    |

    ಬಾಲಿವುಡ್ ನಟಿ ಕಂಗನಾ ರಣಾವತ್ ಸದ್ಯ 'ತಲೈವಿ' ಸಿನಿಮಾದ ಬಿಡುಗಡೆಗಾಗಿ ಕಾಯ್ತಿದ್ದಾರೆ. ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸೆಪ್ಟೆಂಬರ್ 10 ರಂದು ಮೂರು ಭಾಷೆಯಲ್ಲಿ ತಲೈವಿ ಸಿನಿಮಾ ವರ್ಲ್ಡ್‌ವೈಡ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಎಎಲ್ ವಿಜಯ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಕಂಗನಾ ರಣಾವತ್ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಯಲಿತಾ ಪಾತ್ರದಲ್ಲಿ ಅಭಿನಯಿಸಿದ್ದಾರೆ.

    ತಮಿಳುನಾಡು ಜನರ ಪಾಲಿನ ಅಮ್ಮ ಆಗಿದ್ದ ಜಯಲಲಿತಾ ಬಗ್ಗೆ ಸಿನಿಮಾ ಎನ್ನುವ ಕಾರಣಕ್ಕೆ ತಲೈವಿ ಬಹಳ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಜಯಲಲಿತಾ ಕೇವಲ ತಮಿಳುನಾಡಿಗೆ ಮಾತ್ರ ಸೀಮಿತವಾಗಿರಲಿಲ್ಲ. ದೇಶದ ರಾಜಕಾರಣದಲ್ಲಿ ಬಹುದೊಡ್ಡ ಉದಾಹರಣೆಯಾಗಿದ್ದರು. ಅಂತಹ ಕ್ರಾಂತಿಕಾರಿ ರಾಜಕಾರಣಿಯ ಜೀವನ ತೆರೆಮೇಲೆ ಬರುತ್ತಿರುವುದು ಸಹಜವಾಗಿ ಚಿತ್ರೋದ್ಯಮದಲ್ಲಿ ನಿರೀಕ್ಷೆ ಹೆಚ್ಚಿಸಿದೆ.

    'ತಲೈವಿ' ಬಿಡುಗಡೆಗೆ ವಿಘ್ನ: ಥಿಯೇಟರ್ ಮಾಲೀಕರು ವಿರುದ್ಧ ಕಂಗನಾ ಅಸಮಾಧಾನ'ತಲೈವಿ' ಬಿಡುಗಡೆಗೆ ವಿಘ್ನ: ಥಿಯೇಟರ್ ಮಾಲೀಕರು ವಿರುದ್ಧ ಕಂಗನಾ ಅಸಮಾಧಾನ

    ಹದಿನೈದು ವರ್ಷದಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ಕಂಗನಾ ರಣಾವತ್ ''ತಲೈವಿ ನನ್ನ ಜೀವನದ ಅತ್ಯುತ್ತಮ ಸಿನಿಮಾ'' ಎಂದಿದ್ದಾರೆ. ಕೊರೊನಾದಿಂದ ಚಿತ್ರಮಂದಿರ ವರ್ಷದಿಂದ ಮುಚ್ಚಿವೆ. ಇಂತಹ ಸಂಕಷ್ಟದ ಸಮಯದಲ್ಲಿ ಥಿಯೇಟರ್‌ ಜನರು ಸಹ ಬರ್ತಿಲ್ಲ. ಆದರೂ ತಲೈವಿ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಕಂಗನಾ. ಮುಂದೆ ಓದಿ...

    ತಲೈವಿ ಅತ್ಯುತ್ತಮ ಸಿನಿಮಾ

    ತಲೈವಿ ಅತ್ಯುತ್ತಮ ಸಿನಿಮಾ

    ಇತ್ತೀಚಿಗಷ್ಟೆ ಹೈದರಾಬಾದ್‌ನಲ್ಲಿ ತಲೈವಿ ಸಿನಿಮಾದ ಪ್ರಚಾರದಲ್ಲಿ ಭಾಗವಹಿಸಿದ್ದ ಕಂಗನಾ ಇನ್ಸ್ಟಾಗ್ರಾಂನಲ್ಲಿ ಚಿತ್ರದ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ. ತಲೈವಿ ನನ್ನ ಜೀವನದಲ್ಲಿ ಅತ್ಯುತ್ತಮ ಚಿತ್ರವೆಂದು ಬಹಳ ಹೆಮ್ಮೆಯಿಂದ ಬರೆದುಕೊಂಡಿದ್ದಾರೆ. ''ಇದುವರೆಗಿನ ನನ್ನ ವೃತ್ತಿಜೀವನದಲ್ಲಿ ತಲೈವಿ ಅತ್ಯುತ್ತಮ ಚಿತ್ರವಾಗಿ ನೋಡಿದ್ದು ಬಹಳ ಸಂತಸದಾಯಕ ಅನುಭವ'' ಎಂದಿದ್ದಾರೆ. 'ಇದೊಂದು ರಂಗಭೂಮಿಯ ಅನುಭವ ನೀಡಲಿದ್ದು, ಹಿಂದಿ ಮಲ್ಟಿಪ್ಲೆಕ್ಸ್, ಪಿವಿಆರ್, ಐನಾಕ್ಸ್‌ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಕರೆತರುವ ವಿಶ್ವಾಸ ಇದೆ'' ಎಂದು ಹೇಳಿದ್ದಾರೆ.

    ಮಲ್ಟಿಪ್ಲೆಕ್ಸ್ ವಿರುದ್ಧ ಅಸಮಾಧಾನ

    ಮಲ್ಟಿಪ್ಲೆಕ್ಸ್ ವಿರುದ್ಧ ಅಸಮಾಧಾನ

    ತಲೈವಿ ಸಿನಿಮಾವನ್ನು ಒಟಿಟಿಗೂ ಮಾರಾಟ ಮಾಡಲಾಗಿದೆ. ಹಾಗಾಗಿ, ಒಟಿಟಿ ಪ್ರೀಮಿಯರ್ ಹಾಗೂ ಥಿಯೇಟರ್ ರಿಲೀಸ್ ನಡುವಿನ ಅಂತರಕ್ಕೆ ಸಂಬಂಧಪಟ್ಟಂತೆ ಮಲ್ಟಿಪ್ಲೆಕ್ಸ್ ಗಳು ಅಸಮಾಧಾನಗೊಂಡಿದ್ದ, ಚಿತ್ರ ಬಿಡುಗಡೆ ಮಾಡಲ್ಲ ಎಂದು ಹೇಳಿದ್ದರು. ಈ ಬಗ್ಗೆ ಬೇಸರ ಹೊರಹಾಕಿದ್ದ ಕಂಗನಾ, ''''ಈಗಿನ ಪರಿಸ್ಥಿತಿಯಲ್ಲಿ ಯಾವ ಸಿನಿಮಾಗಳು ಚಿತ್ರಮಂದಿರವನ್ನು ಆಯ್ಕೆ ಮಾಡಿಕೊಳ್ಳುತ್ತಿಲ್ಲ. ಆದರೆ ಸಿನಿಮಾ ಮೇಲಿನ ಪ್ರೀತಿಗಾಗಿ ನಮ್ಮ ನಿರ್ಮಾಪಕರಾದ ವಿಷ್ಣು ಇಂದುರಿ ಮತ್ತು ಶೈಲೇಶ್ವರ್ ಸಿಂಗ್ ತಮ್ಮ ಲಾಭದಲ್ಲಿ ರಾಜಿ ಮಾಡಿಕೊಂಡು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳಬೇಕಿದೆ. ಹಿಂದಿ ಸಿನಿಮಾಗೆ ಎರಡು ವಾರಗಳ ಅಂತರ ಇದೆ, ಸೌತ್ ಸಿನಿಮಾಗಳಿಗೆ ನಾಲ್ಕು ವಾರ ಅಂತರ ಇದೆ. ಆದರೂ ಮಲ್ಟಿಪ್ಲೆಕ್ಸ್ ಗಳು ಗುಂಪು ಸೇರಿ ನಮ್ಮ ಬಿಡುಗಡೆಯನ್ನು ನಿಲ್ಲಿಸುತ್ತಿವೆ. ಚಿತ್ರಮಂದಿರಗಳನ್ನು ಉಳಿಸಲು ಪರಸ್ಪರ ಸಹಾಯ ಮಾಡೋಣ'' ಎಂದು ಪೋಸ್ಟ್ ಹಾಕಿದ್ದರು.

    'ಬಿಳಿಕೋತಿಗಳ ಗುಲಾಮರಂತೆ ಭಾಸವಾಗುತ್ತಿದೆ': ಇನ್ಸ್ಟಾಗ್ರಾಂ ವಿರುದ್ದ ಕಂಗನಾ ಗರಂ'ಬಿಳಿಕೋತಿಗಳ ಗುಲಾಮರಂತೆ ಭಾಸವಾಗುತ್ತಿದೆ': ಇನ್ಸ್ಟಾಗ್ರಾಂ ವಿರುದ್ದ ಕಂಗನಾ ಗರಂ

    ರಾಜಮೌಳಿ ಕಥೆ ಬರೆದಿದ್ದಾರೆ

    ರಾಜಮೌಳಿ ಕಥೆ ಬರೆದಿದ್ದಾರೆ

    ವಿಜಯೇಂದ್ರ ಪ್ರಸಾದ್ ಕಥೆ ಮಾಡಿದ್ದಾರೆ. ವಿಷ್ಣುವರ್ಧನ ಇಂದುರಿ, ಹಿತೇಶ್ ಟಕ್ಕರ್, ತಿರುಮಲ ರೆಡ್ಡಿ ಜಂಟಿಯಾಗಿ ಈ ಚಿತ್ರ ನಿರ್ಮಿಸಿದ್ದು, ಜೀ ಸ್ಟುಡಿಯೋಸ್ ವಿತರಣೆಗೆ ಕೈ ಜೋಡಿಸಿದೆ. ಜಯಲಲಿತಾ ಪಾತ್ರದಲ್ಲಿ ಕಂಗನಾ ರಣಾವತ್ ನಟಿಸಿದ್ದು, ಎಂಜಿಆರ್ ಪಾತ್ರದಲ್ಲಿ ಖ್ಯಾತ ನಟ ಅರವಿಂದ್ ಸ್ವಾಮಿ ಅಭಿನಯಿಸಿದ್ದಾರೆ. ಈ ಇಬ್ಬರ ಕಾಂಬಿನೇಷನ್ ಥ್ರಿಲ್ ಹೆಚ್ಚಿಸಿದೆ. ತಲೈವಿ ಪೋಸ್ಟರ್, ಸಾಂಗ್ ಎಲ್ಲವೂ ನೋಡುಗರನ್ನು ಸೆಳೆಯುತ್ತಿದೆ.

    50 ಪರ್ಸೆಂಟ್ ಮಾತ್ರ ಅವಕಾಶ

    50 ಪರ್ಸೆಂಟ್ ಮಾತ್ರ ಅವಕಾಶ

    ದೇಶಾದ್ಯಂತ ಸಂಪೂರ್ಣವಾಗಿ ಚಿತ್ರಮಂದಿರಗಳು ತೆರೆದಿಲ್ಲ. ಕರ್ನಾಟಕ, ಆಂಧ್ರ-ತಮಿಳುನಾಡಿನಲ್ಲಿ ಓಪನ್ ಅಗಿದ್ದರೂ ಶೇಕಡಾ 50ರಷ್ಟು ಮಾತ್ರ ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ಇನ್ನು ಕೋವಿಡ್ ಮೂರನೇ ಅಲೆಯ ಭೀತಿಯಿರುವುದರಿಂದ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಕೊರತೆ ಇದೆ. ಇಂತಹ ಸಂದರ್ಭದಲ್ಲಿ ತಲೈವಿ ಸಿನಿಮಾ ಧೈರ್ಯದಿಂದ ರಿಲೀಸ್ ಮಾಡಲು ಮುಂದಾಗಿರುವುದು ನಿಜಕ್ಕೂ ವಿಶೇಷವೇ ಸರಿ.

    English summary
    Thalaivi movie is a Best Film Of My Career Says bollywood actress Kangana Ranaut.
    Monday, September 6, 2021, 14:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X