Leo trailer: ದಳಪತಿ ವಿಜಯ್ ಆಕ್ಷನ್ ಧಮಾಕ: 'ಲಿಯೋ' ಆ ಹಾಲಿವುಡ್ ಸಿನಿಮಾ ರೀಮೇಕಾ?

ತಮಿಳು ನಟ ದಳಪತಿ ವಿಜಯ್ ನಟನೆಯ 'ಲಿಯೋ' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ತಮಿಳು ಸೇರಿದಂತೆ ಕನ್ನಡ, ಹಿಂದಿ ಹಾಗೂ ತೆಲುಗಿನಲ್ಲಿ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ತೆರೆಗೆ ಬರಲಿದೆ. ಸೂಪರ್ ಹಿಟ್ ಸಿನಿಮಾಗಳ ಸರದಾರ ಲೋಕೇಶ್ ಕನಕರಾಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ವಿಜಯ್ ನಟನೆಯ 'ಬೀಸ್ಟ್' ಹಾಗೂ 'ವಾರೀಸು' ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲಿಲ್ಲ. ಹಾಗಾಗಿ 'ಲಿಯೋ' ಸಿನಿಮಾ ಮೇಲೆ ಭಾರೀ ನಿರೀಕ್ಷೆಯಿದೆ. ಇನ್ನು 'ಕೈದಿ', 'ಮಾಸ್ಟರ್', 'ವಿಕ್ರಂ' ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟ ಲೋಕೇಶ್ ಕನಕರಾಜ್ ಮತ್ತೆ ವಿಜಯ್ ಜೊತೆ ಕೈ ಜೋಡಿಸಿದ್ದು ಕುತೂಹಲ ಹೆಚ್ಚಿಸಿದೆ. ಈಗಾಗಲೇ ಚಿತ್ರದ ಸಾಂಗ್ಸ್ ರಿಲೀಸ್ ಆಗಿ ಗಮನ ಸೆಳೆದಿದೆ. ಇನ್ನು ಅದ್ಧೂರಿ ತಾರಾಗಣದಿಂದಲೂ 'ಲಿಯೋ' ನಿರೀಕ್ಷೆ ಹುಟ್ಟಾಕ್ಕಿದೆ.

Thalapathy Vijay and Lokesh Kanagarajs Leo Trailer released

'ಲಿಯೋ' ಚಿತ್ರವನ್ನು ಸೆವೆನ್ ಸ್ಕ್ರೀನ್ ಸ್ಟುಡಿಯೋ ಅಡಿಯಲ್ಲಿ ಲಲಿತ್ ಕುಮಾರ್ ನಿರ್ಮಿಸಿದ್ದಾರೆ. ವಿಜಯ್ ಜೊತೆ ತ್ರಿಶಾ ನಟಿಸುತ್ತಿದ್ದರೆ, ಅರ್ಜುನ್ ಸರ್ಜಾ ಮತ್ತು ಸಂಜಯ್ ದತ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಆಕ್ಷನ್ ಪ್ಯಾಕ್ಡ್ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

"ಆ ಸೀರಿಯಲ್ ಕಿಲ್ಲರ್ ನಡುರಸ್ತೆಯಲ್ಲಿ ನಿಂತು ಸಿಕ್ಕವರನ್ನೆಲ್ಲಾ ಶೂಟ್ ಮಾಡುತ್ತಿರುತ್ತಾನೆ. ರಸ್ತೆಯಲ್ಲಿ ಸಾಕಷ್ಟು ಜನ ಸತ್ತು ಬಿದ್ದಿರುತ್ತಾರೆ. ಅವನು ನಟೋರಿಯಸ್, ಕಂಡವರನ್ನೆಲ್ಲಾ ಸಾಯಿಸುತ್ತಿದ್ದಾನೆ. ಆಗ ಒಬ್ಬ ಧೈರ್ಯವಂತ ಪೊಲೀಸ್ ಆಫೀಸರ್ ಸಿಂಹದ ತರ ಅಲ್ಲಿಗೆ ಬಂದು ಸೀರಿಯಲ್ ಕಿಲ್ಲರ್‌ಗೆ ತಿರುಗಿಸಿ ಶೂಟ್ ಮಾಡುತ್ತಾನೆ. ಈಗ ಆ ಪೊಲೀಸರ್ ಆಫೀಸರ್ ಗನ್ ನಿನ್ನ ಕೈಯಲ್ಲಿದೆ" ಎನ್ನುವ ವಿಜಯ್ ಡೈಲಾಗ್ ಜೊತೆ ಆ ಕತೆಯನ್ನು ತೋರಿಸಲಾಗಿದೆ. ಇನ್ನು ಆ ಕಿಲ್ಲರ್‌ಗಾಗಿ ಪೊಲೀಸರು ಹುಡುಕಾಡುವುದನ್ನು ತೋರಿಸಿದ್ದಾರೆ.

ಆ ಕಿಲ್ಲರ್‌ನ ಕೊಂದ ಗನ್ ಪಾರ್ಥಿಬನ್ ಕೈಯಲ್ಲಿರುವುದರಿಂದ ವಿಲನ್ಸ್ ಆತನನ್ನು ಕೊಲ್ಲಲು ಪ್ರಯತ್ನಿಸುತ್ತಿರುತ್ತಾರೆ. ಅದು ನಾನಲ್ಲ ಎಂದು ಎಷ್ಟು ಹೇಳಿದರೂ ಕಿಲ್ಲರ್‌ನ ಕೊಂದ ಪೊಲೀಸ್ ರೀತಿ ಇದ್ದಾನೆ ಎನ್ನುವ ಕಾರಣಕ್ಕೆ ಆತನ ಹಿಂದೆ ಬೀಳುತ್ತಾರೆ. ಆತನ ಕುಟುಂಬವನ್ನು ಕಾಡುತ್ತಿರುತ್ತಾರೆ. ಆದರೆ ಕುಟುಂಬದ ತಂಟೆಗೆ ಬಂದ ಕಾರಣಕ್ಕೆ ಆತ ತಿರುಗಿ ಬೀಳ್ತಾನೆ. ಈ ಮಾಫಿಯಾ ಗಲಾಟೆಯಲ್ಲಿ ಕಿಲ್ಲರ್‌ನ ಕೊಂದಿದ್ದು ಲಿಯೋ ಅನ್ನೋದು ಗೊತ್ತಾಗುತ್ತದೆ. ಹಾಗಾದ್ರೆ ಲಿಯೋ ಯಾರು? ಕಿಲ್ಲರ್‌ನ ಕೊಂಡಿದ್ದು ಯಾಕೆ? ಲಿಯೋ, ಪಾರ್ದಿಬನ್ ಇಬ್ಬರು ಒಬ್ಬರೇನಾ? ಅನ್ನೋದನ್ನು ತೆರೆಮೇಲೆ ನೋಡಬೇಕು.

ಲಿಯೋ- ಪಾರ್ದಿಬನ್ ಇಬ್ಬರು ಒಂದೇ ರೀತಿ ಇರೋದು ಯಾಕೆ? ಚಿತ್ರದಲ್ಲಿ ವಿಜಯ್ ಡಬಲ್ ರೋಲ್ ಮಾಡಿದ್ದಾರೆ ಎನ್ನುವ ತೋರಿಸಲಾಗಿದೆ. ಹಾಗಾದ್ರೆ ನಿಜಕ್ಕೂ ವಿಜಯ್ ಡಬಲ್ ಧಮಾಕ ಕಾದಿದ್ಯಾ? ಅಥವಾ ಬರೀ ಟ್ರೈಲರ್‌ನಲ್ಲಿ ಗೊಂದಲ ಮೂಡಿಸುವ ಹೀಗೆ ಮಾಡಿದ್ದಾರಾ? ಅನ್ನೋದ ಸಿನಿಮಾ ರಿಲೀಸ್ ಆದಾಗ ಗೊತ್ತಾಗಲಿದೆ. ಅಕ್ಟೋಬರ್ 19ಕ್ಕೆ ವಿಶ್ವದಾದ್ಯಂತ 'ಲಿಯೋ' ಆರ್ಭಟ ಶುರುವಾಗಲಿದೆ.

ಚಿತ್ರದಲ್ಲಿ ಆಂಟೋನಿ ದಾಸ್ ಆಗಿ ಸಂಜಯ್ ದತ್, ಹರಾಲ್ಡ್ ದಾಸ್ ಆಗಿ ಅರ್ಜುನ್ ಸರ್ಜಾ ಅಬ್ಬರಿಸಿದ್ದಾರೆ. ಇವರಿಬ್ಬರ ಲುಕ್, ಖಡಕ್ ಅಭಿನಯ ಚಿತ್ರಕ್ಕೆ ಪ್ಲಸ್ ಆಗಿದೆ. ಇನ್ನು ಚಿತ್ರದ ಕ್ರೂಷಿಯಲ್ ಎಪಿಸೋಡ್ ಕಾಶ್ಮೀರದಲ್ಲಿ ನಡೆಯಲಿದೆ. ಮನ್ಸೂರ್ ಅಲಿಖಾನ್, ಪ್ರಿಯಾ ಆನಂದ್, ಗೌತಮ್ ವಾಸುದೇವ್ ಮೆನನ್ ಸೇರಿದಂತೆ ದೊಡ್ಡ ತಾರಾಗಣ 'ಲಿಯೋ' ಚಿತ್ರದಲ್ಲಿದೆ.

Thalapathy Vijay and Lokesh Kanagarajs Leo Trailer released

ತಮಿಳಿನ ಸೆನ್ಸೇಷನಲ್ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ 'ಲಿಯೋ' ಚಿತ್ರಕ್ಕೆ ಟ್ಯೂನ್ ಹಾಕಿದ್ದಾರೆ. ಟ್ರೈಲರ್ ಬಿಜಿಎಂ ಕೂಡ ಮಜವಾಗಿದೆ. ಇನ್ನು ಲೋಕೇಶ್ ಕನಕರಾಜ್ ಹಾಲಿವುಡ್ ಸಿನಿಮಾಗಳಿಂದ ಪ್ರೇರಣೆಗೊಂಡು ಸಿನಿಮಾಗಳನ್ನು ಕಟ್ಟಿಕೊಡುತ್ತಾರೆ. ಹಾಲಿವುಡ್ ಸಿನಿಮಾಗಳ ಪ್ರಭಾವ ತಮ್ಮ ಮೇಲೆ ಹೆಚ್ಚು ಇದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇನ್ನು 'ಲಿಯೋ' ಟ್ರೈಲರ್ ನೋಡಿದವರು ಇದು ಹಾಲಿವುಡ್‌ನ 'ಎ ಹಿಸ್ಟರಿ ಆಫ್ ವೈಲೆನ್ಸ್' ಸಿನಿಮಾ ರೀಮೆಕ್ ಎನ್ನುತ್ತಿದ್ದಾರೆ.

More from Filmibeat

English summary
Thalapathy Vijay starrer Leo film Trailer Out now
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X