ನನಗೆ ಅಪ್ಪ-ಅಮ್ಮ ಇಲ್ಲ, ವಿಜಯ್ ನನ್ನ ಸರ್ವಸ್ವ ಎಂದು ಥಿಯೇಟರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಅಭಿಮಾನಿ!
ನಟ ದಳಪತಿ ವಿಜಯ್ ಅವರ ಬಹುನಿರೀಕ್ಷಿತ 'ಲಿಯೋ' ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ವಿಶೇಷ ಶೋಗಳ ವಿವಾದಗಳ ಬಳಿಕ ತಮಿಳುನಾಡಿನಾದ್ಯಂತ ಬೆಳಗ್ಗೆ 9 ಗಂಟೆಗೆ ಸಿನಿಮಾ ರಿಲೀಸ್ ಆಗಿದೆ. ವಿಜಯ್ ಅವರ ಅಪ್ಪಟ ಅಭಿಮಾನಿಗಳು ಲಿಯೋ ಉತ್ಸವ ಆಚರಣೆ ಮಾಡುತ್ತಿದ್ದಾರೆ. ಇದರ ಜೊತೆಗೆ ಪುದುಕ್ಕೊಟ್ಟೈ ಥಿಯೇಟರ್‌ನಲ್ಲಿ ಒಂದು ಚಂದದ ಘಟನೆ ವರದಿಯಾಗಿದೆ.
ನಟ ವಿಜಯ್ ಅವರ ಪಕ್ಕಾ ಅಭಿಮಾನಿಯೊಬ್ಬರು, ಥಿಯೇಟರ್‌ನಲ್ಲಿ ತಮ್ಮ ಸಂಗಾತಿ ಜೊತೆಗೆ ಬಂದಿದ್ದು, ಇಬ್ಬರೂ ಸಿನಿಮಾ ಪ್ರದರ್ಶನವಾಗುವ ವೇಳೆ ಥಿಯೇಟರ್‌ನಲ್ಲಿಯೇ ತಮ್ಮ ಜೀವನದ ಬಹುಮುಖ್ಯ ದಿನವಾದ ನಿಶ್ಚಿತಾರ್ಥಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಪುದುಕ್ಕೊಟ್ಟೈ ಥಿಯೇಟರ್‌ನಲ್ಲಿದ್ದ ಎಲ್ಲರೂ ಇದಕ್ಕೆ ಸಾಕ್ಷಿಯಾಗಿದ್ದಾರೆ.

'ನನಗೆ ತಾಯಿ, ತಂದೆ ಇಲ್ಲ. ವಿಜಯ್ ಅವರೇ ನನಗೆ ಸರ್ವಸ್ವ'
ನಟ ವಿಜಯ್ ಅಭಿನಯದ ಲಿಯೋ ಚಿತ್ರ ಬಿಡುಗಡೆಯನ್ನು ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಸಿನಿಮಾವನ್ನು ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಇದೇ ವೇಳೆ ಪುದುಕೊಟ್ಟೈನಲ್ಲಿ ಲಿಯೋ ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಥಿಯೇಟರ್ ಒಂದರಲ್ಲಿ ದಳಪತಿ ವಿಜಯ್ ಅವರ ಕಟ್ಟಾ ಅಭಿಮಾನಿಯಾಗಿರುವ ವೆಂಕಟೇಶ್ ಮತ್ತು ಮಂಜುಳಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಥಿಯೇಟರ್‌ನಲ್ಲಿ ಮದುವೆ ಬಟ್ಟೆಯಲ್ಲಿ ಬಂದಿದ್ ಜೋಡಿ ಹಾರ ಮತ್ತು ಉಂಗುರಗಳನ್ನು ಬದಲಾಯಿಸಿಕೊಂಡರು. ಇದಕ್ಕೆ ಅವರ ಸುತ್ತಲಿದ್ದವರು ಸಂತೋಷದಿಂದ ಹುರಿದುಂಬಿಸಿದ್ದಾರೆ. ಜನರು ಸಂತೋಷದಿಂದ ಜೈಕಾರ ಹಾಕಿದ್ದಾರೆ. ಈ ಕುರಿತು ಮಾತನಾಡಿದ ವಿಜಯ್ ಅಭಿಮಾನಿ ವೆಂಕಟೇಶ್ " ನನಗೆ ತಾಯಿ, ತಂದೆ ಯಾರೂ ಇಲ್ಲ. ವಿಜಯ್ ನನಗೆ ಸರ್ವಸ್ವ. ಅದಕ್ಕಾಗಿಯೇ ನಾನು ಅವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡೆ" ಎಂದು ಹೇಳಿದ್ದಾರೆ.

ಈ ದಿನಕ್ಕಾಗಿ 8 ತಿಂಗಳಿನಿಂದ ಕಾಯುತ್ತಿದ್ದ ವಿಜಯ್ ಅಭಿಮಾನಿ!
ತಮಿಳುನಾಡಿನ ಪುದುಕ್ಕೊಟ್ಟೈ ವಿಜಯ್ ಜನಸಂಘದ ಜಿಲ್ಲಾತಲೈವರ್ ಉಪಸ್ಥಿತಿಯಲ್ಲಿ ಈ ವಿವಾಹ ನಿಶ್ಚಿತಾರ್ಥ ನಡೆದಿದೆ. ಲಿಯೋ ಚಿತ್ರ ಬಿಡುಗಡೆ ವೇಳೆ ತಾನು ಮದುವೆ ಮಾಡಿಕೊಳ್ಳಬೇಕು ಎಂದು 8 ತಿಂಗಳ ಕಾಲ ಕಾಯುತ್ತಿದ್ದೆ. ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ. ನಾಳೆ ನಮ್ಮ ಮದುವೆ ಪೆರುಮಾಳ್ ದೇವಸ್ಥಾನದಲ್ಲಿ ನಡೆಯಲಿದೆ" ಎಂದು ವರ ವೆಂಕಟೇಶ್ ಹೇಳಿದ್ದಾರೆ.
ಸಾಕಷ್ಟು ನಿರೀಕ್ಷೆಗಳ ನಡುವೆ ಲಿಯೋ ಚಿತ್ರ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತಮಿಳುನಾಡು, ಕರ್ನಾಟಕ ಸೇರಿದಂತೆ ಅನೇಕ ಕಡೆಗಳಲ್ಲಿ ಅಭಿಮಾನಿಗಳು ಸಿನಿಮಾ ಹಾಲ್‌ನಲ್ಲಿ ಹಬ್ಬ ಆಚರಿಸಿದ್ದಾರೆ. ತಿರುವನಂತಪುರಂನ ಶ್ರೀ ಪದ್ಮನಾಭ ಥಿಯೇಟರ್‌ನ ಹೊರಗೆ ಅಭಿಮಾನಿಗಳು ಪಟಾಕಿ ಸಿಡಿಸಿದ್ದಾರೆ. ಹಲವು ನೆಟ್ಟಿಗರು ಸಿನಿಮಾ ಹೇಳಿಕೊಳ್ಳುವ ಹಾಗಿಲ್ಲ ಎನ್ನುತ್ತಿದ್ದಾರೆ. ಈ ಹಿಂದೆಯೇ ಲೋಕೆಶ್ ಕನಕರಾಜ್ ನಿರೀಕ್ಷೆಗಳನ್ನು ಪಕ್ಕಕ್ಕೆ ಇಟ್ಟು ಥಿಯೇಟರ್‌ಗೆ ಬನ್ನಿ ಎಂದಿದ್ದರು.
ಲೋಕೇಶ್ ಕನಕರಾಜ್ ನಿರ್ದೇಶನದ 'ಲಿಯೋ' ಚಿತ್ರದಲ್ಲಿ ಸಂಜಯ್ ದತ್, ತ್ರಿಶಾ ಕೃಷ್ಣನ್ ಮತ್ತು ಅರ್ಜುನ್ ಸರ್ಜಾ ಕೂಡ ಇದ್ದಾರೆ. 2021 ರ ಬ್ಲಾಕ್‌ಬಸ್ಟರ್ 'ಮಾಸ್ಟರ್' ಸಿನಿಮಾ ನಂತರ ವಿಜಯ್ ಮತ್ತು ಕನಕರಾಜ್ 'ಲಿಯೋ' ಸಿನಿಮಾಗಾಗಿ ಮತ್ತೆ ಒಂದಾಗಿದ್ದಾರೆ. ಇತ್ತೀಚೆಗಷ್ಟೇ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ದಳಪತಿ ವಿಜಯ್ ಮತ್ತು ಸಂಜಯ್ ದತ್ ಅಭಿನಯದ 'ಲಿಯೋ' ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದರು.


Click it and Unblock the Notifications











