twitter
    For Quick Alerts
    ALLOW NOTIFICATIONS  
    For Daily Alerts

    ರಾಜಕೀಯದಿಂದ ಹಿಂದೆ ಸರಿದರಾ ವಿಜಯ್ ತಂದೆ? ಪಕ್ಷ ನೋಂದಾಯಿಸದಂತೆ ಮನವಿ ಮಾಡಿದ್ದೇಕೆ ಚಂದ್ರಶೇಖರ್?

    By ಫಿಲ್ಮ್ ಡೆಸ್ಕ್
    |

    ತಮಿಳು ಸಿನಿಮಾರಂಗದ ಖ್ಯಾತ ನಟ ದಳಪತಿ ವಿಜಯ್ ತಂದೆ ಎಸ್ ಎ ಚಂದ್ರಶೇಖರ್ ಅವರ ಹೊಸ ರಾಜಕೀಯ ಪಕ್ಷ ಘೋಷಣೆ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ತಂದೆಯ ದಿಢೀರ್ ರಾಜಕೀಯ ಬೆಳವಣಿಗೆ ಸ್ವತಃ ವಿಜಯ್ ಹಾಗೂ ಅವರ ಕುಟುಂಬಕ್ಕೂ ಶಾಕ್ ನೀಡಿತ್ತು. ಅಪ್ಪನ ರಾಜಕೀಯ ಪ್ರವೇಶ ವಿಜಯ್ ಅವರಿಗೆ ಕೊಂಚವೂ ಇಷ್ಟವಿರಲ್ಲ. ಕುಟುಂಬದವರ ವಿರೋಧದ ನಡುವೆಯೂ ಚಂದ್ರಶೇಖರ್ ರಾಜಕೀಯ ಪಕ್ಷ ಘೋಷಿಸಿದ್ದರು.

    ಚಂದ್ರಶೇಖರ್ ಘೋಷಿಸಿದ್ದ 'ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ' ಪಕ್ಷ ಕುಟುಂಬದಲ್ಲಿ ಭಿನ್ನಮತಕ್ಕೆ ಕಾರಣವಾಗಿತ್ತು. ಅಲ್ಲದೆ ತನ್ನ ಹೆಸರಿನಲ್ಲಿ ರಾಜಕೀಯ ಪಕ್ಷ ಘೋಷಣೆ ಮಾಡಿದ್ದು, ವಿಜಯ್ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ಹೊಸ ಪಕ್ಷವನ್ನು ಘೋಷಣೆ ಮಾಡಿ ತಿಂಗಳ ಆಗುವುದರೊಳಗೆ ಚಂದ್ರಶೇಖರ್ ಪಕ್ಷವನ್ನು ನೋಂದಣಿ ಮಾಡದಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ. ಮುಂದೆ ಓದಿ..

    'ನನ್ನ ಮಗ ವಾಪಸ್ ಬರ್ತಾರೆ': ವಿಜಯ್ ತಂದೆ ಚಂದ್ರಶೇಖರ್ ನಂಬಿಕೆ'ನನ್ನ ಮಗ ವಾಪಸ್ ಬರ್ತಾರೆ': ವಿಜಯ್ ತಂದೆ ಚಂದ್ರಶೇಖರ್ ನಂಬಿಕೆ

    ಚಂದ್ರಶೇಖರ್ ರಾಜಕೀಯ ಪಕ್ಷಕ್ಕೆ ಕುಟುಂಬದಿಂದ ವಿರೋಧ

    ಚಂದ್ರಶೇಖರ್ ರಾಜಕೀಯ ಪಕ್ಷಕ್ಕೆ ಕುಟುಂಬದಿಂದ ವಿರೋಧ

    ಚಂದ್ರಶೇಖರ್ ಅವರ ಈ ದಿಢೀರ್ ಬದಲಾವಣೆಯ ಹಿಂದಿನ ಕಾರಣ ಬಹಿರಂಗವಾಗಿಲ್ಲ. ಆದರೆ ಮೂಲಗಳ ಪ್ರಕಾರ ಕುಟುಂಬದವರಿಗೆ ಈ ಪಕ್ಷ ಸ್ಥಾಪನೆಗೆ ವಿರೋಧವಿತ್ತು ಹಾಗಾಗಿ ಈ ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಖಜಾಂಚಿಯಾಗಿ ನೇಮಕಗೊಂಡಿದ್ದ ಪತ್ನಿ ಹಾಗೂ ವಿಜಯ್ ತಾಯಿ ಶೋಭಾ ಚಂದ್ರಶೇಖರ್ ಸೇರಿದಂತೆ ಪಕ್ಷದ ಪ್ರಮುಖರು ತಮ್ಮ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ ನಂತರ ಚಂದ್ರಶೇಖರ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಪತ್ನಿಗೂ ಗೊತ್ತಿರಲಿಲ್ಲ ಚಂದ್ರಶೇಖರ್ ಹೊಸ ಪಕ್ಷದ ಮಾಹಿತಿ

    ಪತ್ನಿಗೂ ಗೊತ್ತಿರಲಿಲ್ಲ ಚಂದ್ರಶೇಖರ್ ಹೊಸ ಪಕ್ಷದ ಮಾಹಿತಿ

    ಪತಿಯ ರಾಜಕೀಯ ಪಕ್ಷದ ಬಗ್ಗೆ ಸ್ವತಃ ಪತ್ನಿ ಶೋಭಾ ಅವರಿಗೆ ತಿಳಿದಿರಲ್ಲ. ಪಕ್ಷದ ಖಜಾಂಚಿ ಆಗಿದ್ದರೂ ಯಾವುದೇ ಮಾಹಿತಿ ಇರಲಿಲ್ಲವಂತೆ. 'ಕೆಲ ದಿನಗಳ ಹಿಂದೆ ಚಂದ್ರಶೇಖರ್ ಕೆಲ ಪತ್ರಗಳಿಗೆ ಸಹಿ ಹಾಕಿಸಿಕೊಂಡಿದ್ದರು. ಅದು ಯಾವುದೋ ಅಭಿಮಾನಿ ಸಂಘ ಸ್ಥಾಪನೆಗೆ ಇರಬೇಕು ಎಂದು ಸಹಿ ಹಾಕಿದ್ದೆ' ಎಂದು ಶೋಭಾ ಹೇಳಿಕೊಂಡಿದ್ದಾರೆ.

    ರಾಜಕೀಯ ಪಕ್ಷ ಸ್ಥಾಪಿಸಿದ ವಿಜಯ್ ತಂದೆ: 'ನನಗೂ ಅದಕ್ಕೂ ಸಂಬಂಧವಿಲ್ಲ' ಎಂದ ನಟರಾಜಕೀಯ ಪಕ್ಷ ಸ್ಥಾಪಿಸಿದ ವಿಜಯ್ ತಂದೆ: 'ನನಗೂ ಅದಕ್ಕೂ ಸಂಬಂಧವಿಲ್ಲ' ಎಂದ ನಟ

    ಮಾಧ್ಯಮ ಮೂಲಕ ವಿಚಾರ ಗೊತ್ತಾಗಿದೆ ಎಂದಿದ್ದ ವಿಜಯ್

    ಮಾಧ್ಯಮ ಮೂಲಕ ವಿಚಾರ ಗೊತ್ತಾಗಿದೆ ಎಂದಿದ್ದ ವಿಜಯ್

    ಇನ್ನೂ ತಂದೆಯ ರಾಜಕೀಯ ಪಕ್ಷದ ಬಗ್ಗೆ ನಟ ವಿಜಯ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ, 'ನಮ್ಮ ತಂದೆ ಚಂದ್ರಶೇಖರನ್ ರಾಜಕೀಯ ಪಕ್ಷ ಸ್ಥಾಪಿಸಿದ್ದಾರೆ ಎಂಬುದು ಮಾಧ್ಯಮಗಳ ಮೂಲಕ ಗೊತ್ತಾಗಿದೆ. ನಾನು ನನ್ನ ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಕ್ಷಮೆ ಕೋರುತ್ತೇನೆ. ಅವರು ರಾಜಕೀಯ ಪಕ್ಷ ಸ್ಥಾಪಿಸಿರುವ ಹಿಂದೆ ನನ್ನ ನೇರ ಅಥವಾ ಪರೋಕ್ಷ ಭಾಗವಹಿಸುವಿಕೆ ಇಲ್ಲ' ಎಂದಿದ್ದರು ವಿಜಯ್.

    Recommended Video

    ಅಂಬಿ ಅಪ್ಪಾಜಿ ಬಯ್ಯೋದನ್ನ ತುಂಬಾ ಮಿಸ್ ಮಾಡ್ಕೋತಾ ಇದ್ದೀನಿ ಎಂದ ದರ್ಶನ್ | Filmibeat Kannada
    ನನ್ನ ತಂದೆಯ ಪಕ್ಷ ಎಂದು ಸೇರಿಕೊಳ್ಳಬೇಡಿ

    ನನ್ನ ತಂದೆಯ ಪಕ್ಷ ಎಂದು ಸೇರಿಕೊಳ್ಳಬೇಡಿ

    'ಅವರ ರಾಜಕೀಯ ನಿರ್ಧಾರಗಳ ಹಿಂದೆ ನನ್ನ ಹಸ್ತಕ್ಷೇಪ ಇರುವುದಿಲ್ಲ. ಅಷ್ಟೇ ಅಲ್ಲದೆ, ಅವರು ಸ್ಥಾಪಿಸಿರುವುದು ನನ್ನ ಪಕ್ಷ ಅಥವಾ ವಿಜಯ್ ತಂದೆ ಸ್ಥಾಪಿಸಿದ ಪಕ್ಷ ಎಂಬ ಕಾರಣಕ್ಕೆ ಆ ಪಕ್ಷಕ್ಕೆ ನನ್ನ ಅಭಿಮಾನಿಗಳು ಸೇವೆ ಮಾಡುವುದಾಗಲಿ, ಸೇರ್ಪಡೆಗೊಳ್ಳುವುದಾಗಲಿ ಮಾಡಬೇಡಿ' ಎಂದು ವಿಜಯ್ ಹೇಳಿದ್ದರು.

    English summary
    Actor Thalapathy Vijay Father SA Chandrasekhar withdraws his request to Register the political Party.
    Tuesday, November 24, 2020, 17:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X