"ಫಸ್ಟ್ ಹಾಫ್ ಸೂಪರ್, ಸೆಕೆಂಡ್ ಹಾಫ್ ಚೆನ್ನಾಗಿಲ್ಲ ಅಂದೆ, ಫೋನ್ ಕಟ್ ಮಾಡ್ದ", 'ಲಿಯೋ' ವಿಜಯ್ ತಂದೆ ಟೀಕೆ

ದಳಪತಿ ವಿಜಯ್ ಹಾಗೂ ತಂದೆ ಎಸ್‌. ಎ ಚಂದ್ರಶೇಖರ್ ನಡುವೆ ಕೆಲ ಭಿನ್ನಾಭಿಪ್ರಾಯಗಳಿವೆ. ತಂದೆ- ಮಗನ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು ಪದೇ ಪದೆ ಸಾಬೀತಾಗುತ್ತಿದೆ. ಈ ಹಿಂದೆ ತಂದೆಯ ವಿರುದ್ಧವೇ ನಟ ವಿಜಯ್ ಕಾನೂನು ಹೋರಾಟಕ್ಕೆ ಮುಂದಾಗಿದ್ದರು. ಒಂದ್ಕಾಲದಲ್ಲಿ ಸಿನಿಮಾ ನಿರ್ದೇಶಕರಾಗಿದ್ದ ಎಸ್‌. ಎ ಚಂದ್ರಶೇಖರ್ ಇವತ್ತಿನ ಸಿನಿಮಾಗಳ ಬಗ್ಗೆ ಟೀಕೆ ಟಿಪ್ಪಣಿ ಮಾಡುತ್ತಿರುತ್ತಾರೆ.

ಕಳೆದ ವರ್ಷ ದಸರಾ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ ದಳಪತಿ ವಿಜಯ್ ನಟನೆಯ 'ಲಿಯೋ' ಸಿನಿಮಾ ಹಿಟ್ ಆಗಿತ್ತು. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕರೂ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ವಿಜಯ್‌ಗೆ ದೊಡ್ಡ ಅಭಿಮಾನಿ ಬಳಗ ಇದ್ದು ಸಿನಿಮಾಗಳು ದೊಡ್ಡಮಟ್ಟದಲ್ಲಿ ಕಲೆಕ್ಷನ್ ಮಾಡುತ್ತವೆ. ಆದರೆ 'ಲಿಯೋ' ನಿರೀಕ್ಷೆ ತಲುಪುವಲ್ಲಿ ವಿಫಲವಾಗಿತ್ತು.

Thalapathy Vijay Fathers SA Chandrasekhar takes an indirect dig at leo Director Lokesh Kanakaraj

ಸದ್ಯ ವಿಜಯ್ ತಂದೆ ಎಸ್‌. ಎ ಚಂದ್ರಶೇಖರ್ 'ಲಿಯೋ' ಸಿನಿಮಾ ಹೆಸರು ಹೇಳದೆ ಟೀಕಿಸಿದ್ದಾರೆ. ಬಿಡುಗಡೆಗೂ 5 ದಿನ ಮೊದಲೇ ನಾನು ಸಿನಿಮಾ ವೀಕ್ಷಿಸಿದೆ. ಈ ಬಗ್ಗೆ ನಿರ್ದೇಶಕರಿಗೆ ಫೋನ್ ಮಾಡಿ ಮಾತನಾಡಿದೆ. ಆದರೆ ಸೆಕೆಂಡ್ ಹಾಫ್ ಬಗ್ಗೆ ಮಾತನಾಡುತ್ತಿದ್ದಂತೆ ಫೋನ್ ಕಟ್ ಮಾಡಿಬಿಟ್ಟ. ಬಳಿಕ ಫೋನ್ ಮಾಡಲಿಲ್ಲ ಎಂದು ಚಂದ್ರಶೇಖರ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಚಂದ್ರಶೇಖರ್, ಈಗಿನ ಸಿನಿಮಾ ನಿರ್ದೇಶಕರ ಬಗ್ಗೆ ಮಾತನಾಡಿದ್ದಾರೆ. "ಈಗ ಹೀರೋ ಇದ್ದರೆ ಕಥೆಯೇ ಬೇಕಿಲ್ಲ ಎಂದುಕೊಂಡಿದ್ದಾರೆ. ನಾಯಕನಿಂದಲೇ ಚಿತ್ರ ಹಿಟ್ ಆಗಿದ್ದರೂ ತಾನೊಬ್ಬ ದೊಡ್ಡ ನಿರ್ದೇಶಕ ಎಂಬ ಭಾವನೆ ಮೂಡುತ್ತದೆ. ಇತ್ತೀಚೆಗಷ್ಟೇ ಒಂದು ವಾರದಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾ ನೋಡಿದೆ. ಚಿತ್ರದ ಮೊದಲರ್ಧ ಇಷ್ಟವಾಯಿತು. ದ್ವಿತೀಯಾರ್ಧ ಇಷ್ಟವಾಗಲಿಲ್ಲ. ದ್ವಿತೀಯಾರ್ಧದಲ್ಲಿ, ಸ್ವಂತ ತಂದೆ ತನ್ನ ಮಗನನ್ನು ಕೊಲ್ಲಲು ಬಯಸುವ ಕೆಲವು ಮೂಢನಂಬಿಕೆಯ ದೃಶ್ಯಗಳು ನನಗೆ ಇಷ್ಟವಾಗಲಿಲ್ಲ. ಡೈರೆಕ್ಟರ್‌ಗೆ ಫೋನ್ ಮಾಡಿ ಫಸ್ಟ್ ಹಾಫ್ ಚೆನ್ನಾಗಿದೆ, ಸಿನಿಮಾ ಮಾಡಿದರೆ ನಿಮ್ಮ ರೀತಿ ಮಾಡಬೇಕು ಎಂದೆ. ಬಳಿಕ ಸೆಕೆಂಡ್ ಹಾಫ್‌ ಸರಿಯಿಲ್ಲ. ಕೆಲವು ಸೀನ್‌ಗಳು ಚೆನ್ನಾಗಿಲ್ಲ, ಚೇಂಜ್ ಮಾಡಿದ್ರೆ ಚೆನ್ನಾಗಿರುತ್ತೆ ಅಂತ ಮಾತಾಡ್ತಾ ಇದ್ದಾಗ, ಸಾರ್, ಊಟ ಮಾಡ್ತಿದ್ದೀನಿ, ಮತ್ತೆ ಮಾಡ್ತೀನಿ ಎಂದು ಫೋನ್ ಕಟ್ ಮಾಡಿದರು"

Thalapathy Vijay Fathers SA Chandrasekhar takes an indirect dig at leo Director Lokesh Kanakaraj

"ಆ ನಿರ್ದೇಶಕ ಮತ್ತೆ ಫೋನ್ ಮಾಡಲಿಲ್ಲ. ಸಿನಿಮಾ ಬಿಡುಗಡೆ ಆದ ಬಳಿಕ ಜನ ನಾನು ಹೇಳಿದ ವಿಚಾರದ ಬಗ್ಗೆ ಮಾತನಾಡಿದರು. ಅದನ್ನೇ ಟೀಕಿಸಿದರು. ಆದರೆ ಈಗಿನ ನಿರ್ದೇಶಕರಿಗೆ ಟೀಕೆಗಳನ್ನು ಸ್ವೀಕರಿಸುವ ಧೈರ್ಯ ಮತ್ತು ಪ್ರಬುದ್ಧತೆ ಇಲ್ಲ" ಎಂದು ಚಂದ್ರಶೇಖರ್ ಹೇಳಿದ್ದಾರೆ. ವಿಜಯ್ ತಂದೆ ಸಿನಿಮಾ ಹೆಸರನ್ನು ಆಗಲಿ, ನಿರ್ದೇಶಕರ ಹೆಸರನ್ನು ಆಗಲಿ ಪ್ರಸ್ತಾಪಿಸಿಲ್ಲ. ಆದರೆ ಸಿನಿರಸಿಕರಿಗೆ 'ಲಿಯೋ' ನಿರ್ದೇಶಕರ ಬಗ್ಗೆಯೇ ಹೇಳಿರುವುದು ಎನ್ನುವುದು ಗೊತ್ತಾಗುತ್ತಿದೆ.

ಸದ್ಯ 'ಲಿಯೋ' ಸಿನಿಮಾ ಕುರಿತು ವಿಜಯ್ ತಂದೆ ಎಸ್‌. ಎ ಚಂದ್ರಶೇಖರ್ ಕಾಮೆಂಟ್ಸ್ ವೈರಲ್ ಆಗುತ್ತಿದೆ. ಅವರು ಹೇಳಿರುವುದರಲ್ಲಿ ಯಾವುದೇ ತಪ್ಪು ಇಲ್ಲ. ನಿಜಕ್ಕೂ 'ಲಿಯೋ' ಫಸ್ಟ್ ಹಾಫ್ ಚೆನ್ನಾಗಿತ್ತು. ಸೆಕೆಂಡ್ ಹಾಫ್ ಸಿನಿಮಾ ಹಾಳು ಮಾಡಿದರೂ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಲೋಕೇಶ್ ಕನಕರಾಜ್ ನಿರ್ದೇಶನದ 'ಲಿಯೋ' ಚಿತ್ರದಲ್ಲಿ ವಿಜಯ್ ಜೋಡಿಯಾಗಿ ತ್ರಿಷಾ ನಟಿಸಿದ್ದರು. ಸಂಜಯ್ ದತ್, ಅರ್ಜುನ್ ಸರ್ಜಾ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. ಚಿತ್ರದ ಬಗ್ಗೆ ಹೆಚ್ಚು ಪ್ರಚಾರ ಮಾಡದೇ ಬಿಡುಗಡೆ ಮಾಡಲಾಗಿತ್ತು. ಸಿನಿಮಾ 600 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಆಗಿರುವುದಾಗಿ ಅಂದಾಜಿಸಲಾಗಿತ್ತು.

More from Filmibeat

English summary
Thalapathy Vijay's father SA Chandrasekhar share his review of LEO movie;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X