ವಿಜಯ್ ಹೊಸ ಮನೆ ಅಕ್ಕಪಕ್ಕ ನಟಿಯರ ದಂಡು; ದಳಪತಿ ಭವ್ಯ ಅರಮನೆ ಹೇಗಿದೆ ಗೊತ್ತಾ?
ಸಿನಿಮಾ ತಾರೆಯರ ಆದಾಯ ಕೋಟಿ ಕೋಟಿ ಇರುತ್ತದೆ. ಅದಕ್ಕೆ ತಕ್ಕಂತೆ ಐಷಾರಾಮಿ ಜೀವನ ಸಾಗಿಸುತ್ತಿರುತ್ತಾರೆ. ದೊಡ್ಡ ದೊಡ್ಡ ಬಂಗಲೆ, ದೇಶ ವಿದೇಶದ ಐಷಾರಾಮಿ ಕಾರುಗಳಲ್ಲಿ ತಿರುಗಾಡುತ್ತಿರುತ್ತಾರೆ. ತಮಿಳು ನಟ ದಳಪತಿ ವಿಜಯ್ ಭಾರೀ ಜನಪ್ರಿಯರೆ ಇರುವ ನಟ. ಸಂಭಾವನೆ, ಕ್ರೇಜ್ ವಿಚಾರದಲ್ಲಿ ರಜನಿಕಾಂತ್‌ಗೆ ಪೈಪೋಟಿ ಕೊಟ್ಟ ನಟ.
ನಟ ವಿಜಯ್ ಈಗಾಗಲೇ ರಾಜಕೀಯರಂಗದತ್ತ ಮುಖ ಮಾಡಿದ್ದಾರೆ. ಹೊಸ ಪಕ್ಷ ಕಟ್ಟಿ ಮುಂದೆ ತಮಿಳುನಾಡು ಸಿಎಂ ಆಗುವ ಕನಸು ಕಂಡಿದ್ದಾರೆ. ಅದಕ್ಕಾಗಿ ಭರ್ಜರಿ ತಯಾರಿ ನಡೆಸಿಸದ್ದಾರೆ. ಸದ್ಯ 'ಗೋಟ್'(Goat) ಎನ್ನುವ ಚಿತ್ರದಲ್ಲಿ ದಳಪತಿ ನಟಿಸುತ್ತಿದ್ದಾರೆ. ಕೆಲ ದಿನಗಳಿಂದ ವಿಜಯ್ ಚೆನ್ನೈನಲ್ಲಿ ಭಾರೀ ಅಪಾರ್ಟ್‌ಮೆಂಟ್ ಖರೀದಿಸಿರುವ ಮಾತುಗಳು ಕೇಳಿಬಂದಿತ್ತು. ಇದೇ ವಿಚಾರ ಈಗ ಕಾಲಿವುಡ್‌ನಲ್ಲಿ ಹಾಟ್ ಟಾಪಿಕ್ ಆಗಿದೆ.

ಭಾರತದ ಷೇರು ಮಾರುಕಟ್ಟೆ ಜಗತ್ತಿನಲ್ಲಿ ಪ್ರಮುಖ ವ್ಯಕ್ತಿಯಾಗಿರುವ ಪಿ.ಆರ್ ಸುಂದರ್ ತಮ್ಮ ಚೆನ್ನೈ ಅಪಾರ್ಟ್‌ಮೆಂಟ್ ಟೂರ್ ಮಾಡಿದ್ದಾರೆ. ಇದೇ ಅಪಾರ್ಟ್‌ಮೆಂಟ್‌ನಲ್ಲಿ ಪಕ್ಕದಲ್ಲಿ ನಟ ದಳಪತಿ ವಿಜಯ್ ಕೂಡ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಶಾಲಾ ಶಿಕ್ಷಕರಾಗಿದ್ದ ಸುಂದರ್ ಇದೀಗ ಕೋಟ್ಯಾಧಿಪತಿ ಆಗಿದ್ದು ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ. ದುಬೈನಲ್ಲಿ ಕೂಡ ಮನೆ ಹೊಂದಿದ್ದಾರೆ.
ಪಿಆರ್ ಸುಂದರ್ ಚೆನ್ನೈನ ಪ್ರತಿಷ್ಠಿತ ಏರಿಯಾದಲ್ಲಿ ದೊಡ್ಡ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಅಂತದ್ದೇ ಅಪಾರ್ಟ್‌ಮೆಂಟ್ ನಟ ವಿಜಯ್ ಪಕ್ಕದಲ್ಲೇ ಖರೀದಿಸಿದ್ದಾರೆ. ಇನ್ನು ಆ ಅಪಾರ್ಟ್‌ಮೆಂಟ್‌ನಲ್ಲಿ ಮಲಯಾಳಂ ನಟ ದುಲ್ಕರ್ ಸಲ್ಮಾನ್, ತಮಿಳು ನಟ ಆರ್ಯ, ನಟಿಯರಾದ ಸಾಯಿ ಪಲ್ಲವಿ, ನಿಕ್ಕಿ ಗರ್ಲಾನಿ ಸೇರಿದಂತೆ ಹಲವರು ಫ್ಲಾಟ್‌ಗಳನ್ನು ಖರೀದಿಸಿದ್ದಾರೆ ಎಂದು ಸುಂದರ್ ತಿಳಿಸಿದ್ದಾರೆ. ವಿಜಯ್ ಖರೀದಿಸಿರುವ ಅಪಾರ್ಟ್‌ಮೆಂಟ್ ದರ 35 ಕೋಟಿ ರೂ. ಎನ್ನಲಾಗ್ತಿದೆ.

ನಮ್ಮ ಅಪಾರ್ಟ್‌ಮೆಂಟ್ ಅನ್ನು 50 ಕೋಟಿ ರೂ.ಗೆ ಕೇಳುತ್ತಿದ್ದಾರೆ. ನಾವು ಮಾರುವುದಿಲ್ಲ. ಮುಂದೆ ಇದರ ಬೆಲೆ ಮತ್ತಷ್ಟು ಹೆಚ್ಚುತ್ತದೆ ಎಂದು ಅವರು ಹೇಳಿದ್ದಾರೆ. ತಮ್ಮ ಹೋಮ್ ಟೂರ್‌ನಲ್ಲಿ ಅಪಾರ್ಟ್‌ಮೆಂಟ್‌ನ ವಿಶೇಷತೆಗಳನ್ನು ವಿವರಿಸಿದ್ದಾರೆ. ಹೆಚ್ಚು ಕಮ್ಮಿ ಇದೇ ರೀತಿ ನಟ ವಿಜಯ್ ಪೆಂಟ್‌ಹೌಸ್ ಸಹ ಇದೆ ಎಂದಿದ್ದಾರೆ. ಚೆನ್ನೈನ ನೀಲಂಗರೈಯಲ್ಲಿರುವ ಮನೆಯಲ್ಲಿ ನಟ ವಿಜಯ್ ಸದ್ಯ ವಾಸಿಸುತ್ತಿದ್ದಾರೆ. ಶೀಘ್ರದಲ್ಲೇ ಹೊಸ ಅಪಾರ್ಟ್‌ಮೆಂಟ್‌ಗೆ ಶಿಫ್ಟ್ ಆಗುತ್ತಾರೆ ಎನ್ನಲಾಗ್ತಿದೆ.
ತಮ್ಮ ಹಳೇ ನಿವಾಸವನ್ನು ಮುಂದೆ ಕಚೇರಿಯಾಗಿ ಬಳಸುತ್ತಾರೆ. ಇನ್ನುಳಿದಂತೆ ಫ್ಯಾಮಿಲಿ ಸಮೇತ ಹೊಸ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸುತ್ತಾರೆ ಎನ್ನಲಾಗ್ತಿದೆ. ಇತ್ತೀಚೆಗೆ ನಟಿ ರಂಭಾ ಕೂಡ ಅದೇ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್ ಖರೀದಿಸಿದ್ದಾರೆ ಎಂದು ಕಾಲಿವುಡ್‌ನಲ್ಲಿ ಗುಲ್ಲಾಗಿದೆ. ನಟಿ ರಂಭಾ ಫ್ಯಾಮಿಲಿ ಸಮೇತ ವಿಜಯ್ ಭೇಟಿ ಮಾಡಿದ್ದ ಫೋಟೊಗಳನ್ನು ಇತ್ತೀಚೆಗೆ ಹಂಚಿಕೊಂಡಿದ್ದರು. ತಮ್ಮ ಫ್ಲಾಟ್ ಪಕ್ಕದಲ್ಲೇ ಇರುವ ವಿಜಯ್ ಮನೆಗೆ ಆಕೆ ಭೇಟಿ ನೀಡಿದ್ದರು ಎನ್ನಲಾಗ್ತಿದೆ. ನಟಿ ತ್ರಿಶಾ ಕೂಡ ಅಲ್ಲಿ ಫ್ಲಾಟ್ ಖರೀದಿಸಿದ್ದಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ.
ಪಿಆರ್ ಸುಂದರ್ ಅಪಾರ್ಟ್‌ಮೆಂಟ್ 8500 ಚ.ಮೀ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಬಂಗಲೆಯಲ್ಲಿ ಈಜುಕೊಳ, ಆಂತರಿಕ ಲಿಫ್ಟ್, 5 ಬೆಡ್ ರೂಂ, ಪಾರ್ಟಿ ಹಾಲ್, 8 ಜನರಿಗೆ ಮಿನಿ ಥಿಯೇಟರ್ ಮುಂತಾದ ಹಲವು ಸೌಲಭ್ಯಗಳಿವೆ. ಈ ಮನೆಯ ಬಾಲ್ಕನಿ ಮಾತ್ರ 1500 ಚದರ ಅಡಿ ಇದೆ. ಮನೆಯಿಂದ ಮರೀನಾ ಬೀಚ್ ಕಾಣುತ್ತದೆ. ಬರೀ ಬಾತ್ ರೂಂ, ಟಾಯ್ಲೆಟ್‌ಗೆ ಲಕ್ಷ ಲಕ್ಷ ವ್ಯಯಿಸಲಾಗಿದೆ. ಅಷ್ಟು ಐಷಾರಾಮಿಯಾಗಿ ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗಿದೆ.


Click it and Unblock the Notifications











