Don't Miss!
- News
ರಾಜಸ್ಥಾನದ ಕಾಂಗ್ರೆಸ್ ಸರಕಾರ ವಜಾಗೊಳಿಸುವಂತೆ ನಳಿನ್ ಕುಮಾರ್ ಕಟೀಲ್ ಆಗ್ರಹ
- Sports
ಐರ್ಲೆಂಡ್ಗೆ ಭಾರತ ನೀಡಿದ್ದ 228 ರನ್ ಗುರಿಯನ್ನು 226ಕ್ಕೆ ಇಳಿಸಿದ್ದು ಈ ಕಾರಣಕ್ಕೆ!
- Automobiles
ಭಾರತದಲ್ಲಿ ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಎಂಜಿ ಎಲೆಕ್ಟ್ರಿಕ್ ಕಾರು
- Education
IWST Recruitment 2022 : 13 ಪ್ರಾಜೆಕ್ಟ್ ಫೆಲೋ ಮತ್ತು ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಬಿಳಿ ನಾಲಿಗೆ ನೀಡುತ್ತದೆ ಅರೋಗ್ಯದ ಬಗ್ಗೆ ಆಪಾಯದ ಮುನ್ಸೂಚನೆ
- Finance
ಡಾಲರ್ ಎದುರು ಮತ್ತೆ ಸಾರ್ವಕಾಲಿತ ಕುಸಿತ ಕಂಡ ರೂಪಾಯಿ
- Technology
ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್ನಲ್ಲಿ ಈ ಫೋನ್ಗಳಿಗೆ ಬಿಗ್ ಆಫರ್!
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
Thalapathy Vijay: ದಳಪತಿ ವಿಜಯ್ 10 ವರ್ಷ ಸಂದರ್ಶನ ಕೊಡದೆ ಇರಲು ಕಾರಣ ಇದೇ!
ದಳಪತಿ ವಿಜಯ್ ಸಿನಿಮಾ ವೇಳೆ ಬಿಟ್ಟರೆ ಹೆಚ್ಚಾಗಿ ಎಲ್ಲಾ ಕಾಣಿಸಿಕೊಳ್ಳುವುದಿಲ್ಲ. ಕಳೆದ 10 ವರ್ಷಗಳಿಂದ ವಿಜಯ್ ಒಂದೇ ಒಂದು ಸಂದರ್ಶನ ಕೂಡ ನೀಡಿರಲಿಲ್ಲ. ಸ್ಟೇಜ್ ಮೇಲೆ ಸಿನಿಮಾ ಬಗ್ಗೆ ಮಾತಾಡಿದ್ದು ಬಿಟ್ಟರೆ, ದಳಪತಿ ವಿಜಯ್ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದೇ ಇಲ್ಲ.
ಇಷ್ಟು ದಿನ ವಿಜಯ್ ಮಾಧ್ಯಮಗಳಿಗೆ ಯಾಕೆ ಸಿಗಲ್ಲ. ಸಂದರ್ಶನ ಯಾಕೆ ಸಿಗುವುದಿಲ್ಲ ಎಂಬುವುದು ರಹಸ್ಯವಾಗಿಯೇ ಉಳಿದಿತ್ತು. ಇತ್ತ ಅಭಿಮಾನಿಗಳೂ ಕೂಡ ತಮ್ಮ ನೆಚ್ಚಿನ ನಟನ ಸಂದರ್ಶನವನ್ನು ನೋಡುವುದಕ್ಕೆ ಕಾಯುತ್ತಲೇ ಇದ್ದರು. ಅದರಂತೆ, ವಿಜಯ್ 10 ವರ್ಷಗಳ ಬಳಿಕ ಕೊನೆಗೂ ಇಂಟರ್‌ವ್ಯೂ ನೀಡಿದ್ದಾರೆ. ಈ ಸಂದರ್ಶನದಲ್ಲಿ ತಾನು ಯಾಕೆ ಈ 10 ವರ್ಷಗಳಲ್ಲಿ ಸಂದರ್ಶನ ನೀಡಿಲ್ಲ ಎಂಬುದನ್ನು ರಿವೀಲ್ ಮಾಡಿದ್ದಾರೆ.

ದಶಕದ ಬಳಿಕ ಸಂದರ್ಶನ ನೀಡಿದ ವಿಜಯ್
ತಮಿಳಿನ ಸೂಪರ್‌ಸ್ಟಾರ್ ದಳಪತಿ ವಿಜಯ್ 'ಬೀಸ್ಟ್' ಸಿನಿಮಾ ಏಪ್ರಿಲ್ 13 ರಂದು ಬಿಡುಗಡೆಯಾಗಿದೆ. ತಮಿಳರ ಹೊಸ ವರ್ಷದಂದು ಈ ಸಿನಿಮಾ ವಿಶ್ವದಾದ್ಯಂತ ತೆರೆಕಂಡಿತ್ತು. ಆದರೆ, ಸಿನಿಮಾ ಬಿಡುಗಡೆಗೂ ಮುನ್ನ ವಿಜಯ್‌ರನ್ನು ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಸಂದರ್ಶನ ಮಾಡಿದ್ದರು. ಕಳೆದ 10 ವರ್ಷಗಳಿಂದ ಸಂದರ್ಶನವನ್ನೇ ನೀಡದ ದಳಪತಿ ವಿಜಯ್, ಕ್ಯಾಮರಾ ಮುಂದೆ ಪ್ರತ್ಯಕ್ಷ ಆಗಿದ್ದು ಮಾಧ್ಯಮ ಸೇರಿದಂತೆ, ಅಭಿಮಾನಿಗಳು ಆಶ್ಚರ್ಯ ಆಗಿತ್ತು. ಇದೇ ವೇಳೆ ಕಳೆದ 10 ವರ್ಷಗಳಿಂದ ಯಾಕೆ ಸಂದರ್ಶನ ನೀಡಿಲ್ಲ ಎಂಬ ಗುಟ್ಟನ್ನು ರಿವೀಲ್ ಮಾಡಿದ್ದಾರೆ.

ವಿಜಯ್ ಸಂದರ್ಶನ ನೀಡದೆ ಇರಲು ಏನು ಕಾರಣ?
ಒಂದು ದಶಕ ಸಂದರ್ಶನ ಯಾಕೆ ನೀಡಿಲ್ಲ ಎಂಬುದನ್ನು ವಿಜಯ್ ರಿವೀಲ್ ಮಾಡಿದ್ದಾರೆ. " ನನಗೆ ಸಂದರ್ಶನ ನೀಡುವುದಕ್ಕೆ ಸಮಯವಿತ್ತು. 10 ವರ್ಷದ ಹಿಂದೆ ನಾನೊಂದು ಸಂದರ್ಶನ ನೀಡಿದ್ದೆ. ಆ ವೇಳೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂಬುದು ನನ್ನ ಭಾವನೆಯಾಗಿತ್ತು. ನನ್ನ ಕುಟುಂಬ ಹಾಗೂ ಆಪ್ತರು ಇಷ್ಟು ಆಕ್ರೋಶದಿಂದ ಯಾಕೆ ಮಾತಾಡುತ್ತೀಯಾ ಎಂದು ಹೇಳಿದ್ದರು. ಇದು ನಿನಗೆ ಸೂಟ್ ಆಗುವುದಿಲ್ಲ ಎಂದೂ ಹೇಳಿದ್ದರು. ಬಳಿಕ ಆ ವ್ಯಕ್ತಿಗೆ ಪೋನ್ ಮಾಡಿ ವಿವರಣೆ ನೀಡಬೇಕಾಯಿತು. ಪ್ರತಿ ಬಾರಿಯೂ ನಾನು ಹೀಗೆ ಮಾಡಲು ಸಾಧ್ಯವಿಲ್ಲ ಅಲ್ವಾ? ಅದಕ್ಕೆ ಸಂದರ್ಶನದಿಂದ ದೂರ ಉಳಿದಿದ್ದೆ." ಎಂದು ರಿವೀಲ್ ಮಾಡಿದ್ದಾರೆ.


ಈ ಘಟನೆ ನಡೆದಿದ್ದು ಯಾವಾಗ?
2009ರಲ್ಲಿ ದಳಪತಿ ವಿಜಯ್ 'ವಿಲ್ಲು' ಸಿನಿಮಾದಲ್ಲಿ ನಟಿಸಿದ್ದರು. ಇದೇ ಸಿನಿಮಾ ಪತ್ರಿಕಾಗೋಷ್ಟಿಯಲ್ಲಿ ವಿಜಯ್ ತಾಳ್ಮೆ ಕಳೆದುಕೊಂಡು, ಕೋಪಗೊಂಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಆ ದಿನ ವೇದಿಕೆಯಲ್ಲಿ ಮಾತಾಡುವಾಗ ಕಾರ್ಪೆಂಟರಿ ಕೆಲಸ ನಡೆಯುತ್ತಿತ್ತು. ಈ ವೇಳೆ ಸಿಟ್ಟಿಗೆದ್ದ ವಿಜಯ್ ಕೂಗಾಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.

ವಿಜಯ್ ರಾಜಕೀಯ ಎಂಟ್ರಿ ಬಗ್ಗೆ ಹೇಳಿದ್ದೇನು?
'ಬೀಸ್ಟ್' ಸಂದರ್ಶನದಲ್ಲಿ ದಳಪತಿ ವಿಜಯ್ ರಾಜಕೀಯ ಪ್ರವೇಶದ ಬಗ್ಗೆನೂ ಪರೋಕ್ಷವಾಗಿ ಮಾತಾಡಿದ್ದಾರೆ. " ಅಭಿಮಾನಿಗಳ ಇಷ್ಟ ಪಟ್ಟಂತೆ ನಡೆಯುತ್ತೇನೆ. ಸದ್ಯ ಈಗ ದಳಪತಿ (ಸಿನಿಮಾ ತಾರೆ)ಯಾಗಿ ಇಷ್ಟ ಪಡುತ್ತಿದ್ದಾರೆ. ಮುಂದೆ ತಲೈವಾನ್( ನಾಯಕ) ನಾಗಿ ಇಷ್ಟಪಟ್ಟರೆ, ಅದೂ ಆಗುತ್ತೆ. ಎಂದಿದ್ದಾರೆ.