For Quick Alerts
  ALLOW NOTIFICATIONS  
  For Daily Alerts

  ದಳಪತಿ ವಿಜಯ್ ಪುತ್ರಿ ದಿವ್ಯಾ ಚಿತ್ರರಂಗದ ಎಂಟ್ರಿಗೆ ತಯಾರಿ

  |

  ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇತ್ತೀಚಿಗಷ್ಟೆ ವಿಜಯ್ ದಂಪತಿ 21ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಖ್ಯಾತ ಜೋಡಿಗೆ ಶುಭಾಶಯಗಳ ಸುರಿಮಳೆಯೇ ಹರಿದುಬಂದಿದೆ. ವಿಜಯ್ ಕುಟುಂಬದ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿ ವ್ಯಕ್ತಪಡಿಸುವ ಅಭಿಮಾನಿಗಳಿಗೆ ಸಂತೋಷದ ಸುದ್ದಿಯೊಂದು ಕೇಳಿಬರುತ್ತಿದೆ.

  Ayogya ಸಿನಿಮಾದಲ್ಲಿ Satish Neenasam ಕೆಂಡದ ಮೇಲೆ ಓಡಿದ್ದು ಹೇಗೆ ನೋಡಿ|Ayogya song Making| Oneindia Kannada

  ವಿಜಯ್ ಪುತ್ರಿ ದಿವ್ಯಾ ಸದ್ಯದಲ್ಲೇ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ ಎನ್ನುವ ಮಾತು ಹರಿದಾಡುತ್ತಿದೆ. ವಿಜಯ್ ಮತ್ತು ಸಂಗೀತಾ ದಂಪತಿಗೆ ಇಬ್ಬರು ಮಕ್ಕಳು. ಜಾಸನ್ ಸಂಜಯ್ ಮತ್ತು ದಿವ್ಯಾ ಶಾ. ಈ ಮೊದಲು ವಿಜಯ್ ಪುತ್ರ ಜಾಸನ್ ಸಂಜಯ್ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಾರೆ ಎನ್ನುವ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಪುತ್ರಿ ಕೂಡ ಎಂಟ್ರಿ ಕೊಡ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  ಇತ್ತೀಚಿಗಷ್ಟೆ ಟ್ವಿಟ್ಟರ್ ಗೆ ಎಂಟ್ರಿ ಕೊಟ್ಟಿರುವ ದಿವ್ಯಾಗೆ ಫಾಲೋವರ್ಸ್ ಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಲಾಕ್ ಡೌನ್ ನಲ್ಲಿ ಸದ್ಯ ಮನೆಯಲ್ಲಿಯೇ ಇರುವ ವಿಜಯ್ ಪುತ್ರಿ ಸಿನಿಮಾ ಕಡೆ ಆಸಕ್ತಿ ತೋರಿದ್ದಾರೆ ಎಂದು ಹೇಳಲಾಗುತ್ತಿದೆ.

  ಸ್ಟಾರ್ ಮಕ್ಕಳು ಅಂದ್ಮೇಲೆ ಸಿನಿಮಾರಂಗಕ್ಕೆ ಎಂಟ್ರಿ ಕೊಡುವುದರಲ್ಲಿ ಅಚ್ಚರಿ ಏನಿಲ್ಲ. ಆದರೆ ಇನ್ನೂ ಓದುತ್ತಿರುವ ದಿವ್ಯಾ, ಇಷ್ಟು ಬೇಗ ಬಣ್ಣದ ಲೋಕಕ್ಕೆ ಬರ್ತಾರಾ ಎನ್ನುವುದು ಅಚ್ಚರಿ ಮೂಡಿಸಿದೆ. ವಿಶೇಷ ಅಂದರೆ ದಿವ್ಯಾ, ವಿಜಯ್ ಅಭಿನಯದ ಸಿನಿಮಾದಲ್ಲಿ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ತೆರೆಮೇಲೂ ವಿಜಯ್ ಮಗಳಾಗಿ ದಿವ್ಯಾ ನಟಿಸಿದ್ದಾರೆ.

  ವಿಜಯ್ ಪುತ್ರಿಯ ಸಿನಿಮಾ ಎಂಟ್ರಿ ಬಗ್ಗೆ ಕುಟುಂಬದವರು ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಆದರೆ ವಿಜಯ್ ಪುತ್ರಿ ಸದ್ಯದಲ್ಲೇ ಬಣ್ಣ ಹಚ್ಚಲಿದ್ದಾರೆ ಎನ್ನುವ ಸುದ್ದಿ ಮಾತ್ರ ಹರಿದಾಡುತ್ತಿದೆ. 14 ವರ್ಷದ ದಿವ್ಯಾ ಅಪ್ಪನ ಹಾಗೆ ಸಿನಿಮಾರಂಗದಲ್ಲಿ ಸಕ್ರೀಯರಾಗುತ್ತಾರಾ? ಅಥವಾ ಓದು ಮುಂದುವರೆಸುತ್ತಾರಾ ಎನ್ನುವುದನ್ನು ಕಾದುನೋಡಬೇಕು.

  English summary
  Kollywood Actor Thalapathy Vijay's daughter Divya make Kollywood debut soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X