'ಜನ ನಾಯಗನ್' ಚಿತ್ರಕ್ಕಾಗಿ ವಿಜಯ್, ಅನಿರುದ್ಧ್, ಪೂಜಾ, ಪ್ರಿಯಾಮಣಿ, ವಿನೋದ್ ಸಂಭಾವನೆ ಎಷ್ಟು?

ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾ ಬಿಡುಗಡೆಗೆ 2 ದಿನ ಬಾಕಿಯಿದೆ. ವಿನೋದ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಇದು ವಿಜಯ್ ನಟನೆಯ ಕೊನೆ ಸಿನಿಮಾ ಎನ್ನಲಾಗ್ತಿದೆ. ಹಾಗಾಗಿ ಭಾರೀ ಮೊತ್ತದ ಸಂಭಾವನೆ ಪಡೆದಿದ್ದಾರೆ.

ತೆಲುಗಿನ 'ಭಗವಂತ್ ಕೇಸರಿ' ಚಿತ್ರದ ರೀಮೆಕ್ ಇದು. ತೆಲುಗಿನಲ್ಲಿ ಬಾಲಕೃಷ್ಣ ಹಾಗೂ ಶ್ರೀಲೀಲಾ ಮಾಡಿದ್ದ ತಂದೆ, ಮಗಳ ಪಾತ್ರಗಳನ್ನು ತಮಿಳಿನಲ್ಲಿ ವಿಜಯ್ ಹಾಗೂ ಮಮಿತಾ ಬೈಜು ನಿಭಾಯಿಸಿದ್ದಾರೆ. ಸದ್ಯ ವಿಜಯ್ ರಾಜಕೀಯರಂಗ ಪ್ರವೇಶಿಸಿದ್ದಾರೆ. ಹಾಗಾಗಿ ಎದುರಾಳಿಗಳಿಗೆ ಕೌಂಟರ್ ಕೊಡುವಂತಹ ಡೈಲಾಗ್‌ಗಳು ಚಿತ್ರದಲ್ಲಿದೆ. ಇದೇ ಕಾರಣಕ್ಕೆ ಸಿನಿಮಾ ಬಿಡುಗಡೆ ಸಾಕಷ್ಟು ವಿಘ್ನಗಳು ಎದುರಾಗಿದೆ ಎನ್ನುವ ಚರ್ಚೆ ನಡೀತಿದೆ.

Thalapathy Vijay s Jana Nayagan Gears Up for Release star cast remuneration plot and more

ವಿಜಯ್ ಕೊನೆಯ ಚಿತ್ರಕ್ಕೆ ರೀಮೆಕ್ ಕತೆ ಯಾಕೆ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ 'ಜನ ನಾಯಗನ್' ಸಿನಿಮಾ ನಿರ್ಮಾಣ ಮಾಡಿದೆ. ಘಟಾನುಘಟಿ ಕಲಾವಿದರು, ತಂತ್ರಜ್ಞರು ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿರುವುದು ಟ್ರೈಲರ್ ನೋಡಿದರೆ ಅರ್ಥವಾಗ್ತಿದೆ. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭಾರೀ ಕಲೆಕ್ಷನ್ ಮಾಡುವ ಲೆಕ್ಕಾಚಾರ ಶುರುವಾಗಿದೆ. ವಿಜಯ್ ಮಾತ್ರವಲ್ಲ ಚಿತ್ರತಂಡದ ಕೆಲಸ ಮಾಡಿರುವ ಎಲ್ಲರಿಗೂ ಭಾರೀ ಸಂಭಾವನೆ ಸಿಕ್ಕಿದೆ. 'ಜನ ನಾಯಗನ್' ಚಿತ್ರದ ಕಲಾವಿದರು, ತಂತ್ರಜ್ಞರ ಸಂಭಾವನೆ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಡೆಕ್ಕನ್ ಹೆರಾಲ್ಡ್ ಪ್ರಕಾರು ಯಾರಿಗೆ ಎಷ್ಟು ಸಂಭಾವನೆ ಸಿಕ್ಕಿದೆ ಮುಂದೆ ಓದಿ.

ವಿಜಯ್ ಸಂಭಾವನೆ?

ತಮಿಳುನಾಡಿನಲ್ಲಿ ವಿಜಯ್ ಸಿನಿಮಾಗಳಿಗೆ ಭಾರೀ ಕ್ರೇಜ್ ಇದೆ. ಬೆಂಗಳೂರಿನಲ್ಲೇ 'ಜನ ನಾಯಗನ್' ಚಿತ್ರದ ಟಿಕೆಟ್ ದರ 2 ಸಾವಿರ ರೂಪಾಯಿಯಿದೆ. ಹಾಗಾಗಿ ವಿಜಯ್ ಸಿನಿಮಾಗಳ ಬಗ್ಗೆ ಎಷ್ಟು ನಿರೀಕ್ಷೆಯಿದೆ ಎನ್ನುವುದು ಗೊತ್ತಾಗುತ್ತದೆ. ವಿಜಯ್ ನಟಿಸಿದ ಸಿನಿಮಾಗಳೆಲ್ಲಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಹಾಗಾಗಿ ನಿರ್ಮಾಪಕರು ಭಾರೀ ಸಂಭಾವನೆ ಕೊಡಲು ಮುಂದೆ ಬರುತ್ತಾರೆ. 220 ಕೋಟಿ ರೂ. ಸಂಭಾವನೆ ಜೊತೆಗೆ ಸಿನಿಮಾ ಗೆದ್ದರೆ 30 ಕೋಟಿ ರೂ. ಬೋನಸ್ ರೂಪದಲ್ಲಿ ವಿಜಯ್ ಹಣ ಪಡೆಯುತ್ತಾರೆ ಎನ್ನಲಾಗ್ತಿದೆ.

Thalapathy Vijay s Jana Nayagan Gears Up for Release star cast remuneration plot and more

ವಿನೋದ್ ಸಂಭಾವನೆ

ವಿಜಯ್ ಕೊನೆಯ ಚಿತ್ರಕ್ಕೆ ಯಾರು ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಕುತೂಹಲ ಇತ್ತು. ಎಲ್ಲರನ್ನು ಹಿಂದಿಕ್ಕಿ ವಿನೋದ್ ಆ ಅವಕಾಶ ಗಿಟ್ಟಿಸಿಕೊಂಡಿದ್ದರು. ರೀಮೆಕ್ ಕತೆ ಹೇಳಿ ಒಪ್ಪಿಸಿ ಗಮನ ಸೆಳೆದಿದ್ದರು. ಚಿತ್ರಕ್ಕಾಗಿ ವಿನೋದ್ 25 ಕೋಟಿ ರೂ. ಜೇಬಿಗಿಳಿಸಿದ್ದಾರೆ ಎನ್ನಲಾಗ್ತಿದೆ.

ಅನಿರುದ್ಧ್ ಮ್ಯಾಜಿಕ್

ಕಾಲಿವುಡ್ ರಾಕ್‌ಸ್ಟರ್ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕ್ರೇಜ್ ಗೊತ್ತೇಯಿದೆ. ದೊಡ್ಡ ದೊಡ್ಡ ಸಿನಿಮಾಗಳಿಗೆ ಅನಿರುದ್ದ್ ಮ್ಯೂಸಿಕ್ ಇರಲೇಬೇಕು ಎನ್ನುವಂತಾಗಿದೆ. 'ಜನ ನಾಯಗನ್' ಚಿತ್ರಕ್ಕೂ ಮ್ಯೂಸಿಕ್ ಕಂಪೋಸ್ ಮಾಡಿ ಗೆದ್ದಿದ್ದಾರೆ. ಚಿತ್ರಕ್ಕಾಗಿ ಸಂಗೀತ ಮಾಂತ್ರಿಕ 13 ಕೋಟಿ ರೂ. ಚಾರ್ಜ್ ಮಾಡಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಈಗಾಗಲೇ ಚಿತ್ರಗಳು ಹಾಡುಗಳು ವಿಜಯ್ ಫ್ಯಾನ್ಸ್ ಗಮನ ಸೆಳೆದಿದೆ.

ಬಾಬಿ ಡಿಯೋಲ್

ಖಳ ನಟನಾಗಿ ಅಬ್ಬರಿಸಿರುವ ಬಾಬಿ ಡಿಯೋಲ್ 5 ಕೋಟಿ ರೂ, ನಾಯಕಿ ಪೂಜಾ ಹೆಗ್ಡೆ 3 ಕೋಟಿ ರೂ, ಮತ್ತೊಂದು ಪಾತ್ರದಲ್ಲಿ ನಟಿಸಿದರುವ ಮಮಿತಾ ಬೈಜು 60 ಲಕ್ಷ ರೂ, ಗೌತಮ್ ವಾಸುದೇವ್ ಮೆನನ್ 30 ಲಕ್ಷ ರೂ, ಪ್ರಿಯಾಮಣಿ 30 ಲಕ್ಷ ರೂ, ಹೀಗೆ ಎಲ್ಲರಿಗೂ ಭರ್ಜರಿ ಸಂಭಾವನೆ ಸಿಕ್ಕಿದೆ. ಸಿನಿಮಾ ಬಜೆಟ್ 380 ಕೋಟಿ ರೂ. ದಾಟಿದೆ ಎನ್ನಲಾಗ್ತಿದೆ.

More from Filmibeat

Read more about: vijay kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X