Jana Nayagan Trailer; ದಳಪತಿ ವಿಜಯ್ 'ಜನ ನಾಯಗನ್' ಆರ್ಭಟ; ರೀಮೆಕ್ ಅನ್ನೋದು ಕನ್ಫರ್ಮ್
ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಇದೇ ಜನವರಿ 9ರಂದು ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿ ಸದ್ದು ಸದ್ದು ಮಾಡ್ತಿದೆ. ರಾಜಕೀಯರಂಗದತ್ತ ಮುಖ ಮಾಡಿರುವ ನಟ ವಿಜಯ್ ಕೊನೆಯ ಸಿನಿಮಾ ಇದು.
ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ವಿನೋದ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದೆ. ಪೂಜಾ ಹೆಗ್ಡೆ ನಾಯಕಿಯಾಗಿ ಮಿಂಚಿದ್ದು ಪ್ರಿಯಾಮಣಿ, ಪ್ರಕಾಶ್ ರಾಜ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. 2 ನಿಮಿಷ 45 ಸೆಕೆಂಡ್‌ಗಳ 'ಜನ ನಾಯಗನ್' ಆಕ್ಷನ್ ಪ್ಯಾಕ್ಡ್ ಟ್ರೈಲರ್ ಧೂಳೆಬ್ಬಿಸಿದೆ. ಕೆಲವೇ ನಿಮಿಷಗಳಲ್ಲಿ ಲಕ್ಷ ಲಕ್ಷ ವೀವ್ಸ್ ಸಾಧಿಸಿ ಟ್ರೈಲರ್ ಸದ್ದು ಮಾಡ್ತಿದೆ.

ತೆಲುಗಿನ 'ಭಗವಂತ್ ಕೇಸರಿ' ಸಿನಿಮಾ ರೀಮೆಕ್ 'ಜನ ನಾಯಗನ್' ಎನ್ನುವ ಊಹಾಪೋಹ ಶುರುವಾಗಿತ್ತು. ಟ್ರೈಲರ್ ಅದಕ್ಕೆ ಇಂಬು ನೀಡುವಂತಿದೆ. ಮಕ್ಕಿ ಕಾ ಮಕ್ಕಿ ರೀಮೇಕ್ ಮಾಡದೇ ಇದ್ದರೂ ಅದೇ ಕತೆಯಿಂದ ಸ್ಫೂರ್ತಿ ಪಡೆದು ಸಿನಿಮಾ ಕಟ್ಟಿಕೊಟ್ಟಿರುವುದು ಗೊತ್ತಾಗುತ್ತಿದೆ. ಟ್ರೈಲರ್ ಕಟ್ ಅಭಿಮಾನಿಗಳಿಗೆ ಇಷ್ಟವಾಗುವಂತಿದೆ. ವಿಜಯ್ ಆಕ್ಷನ್, ಜಬರ್ದಸ್ತ್ ಡೈಲಾಗ್ಸ್ ಮಿಕ್ಸ್ ಮಾಡಿ ಟ್ರೈಲರ್ ಬಿಡುಗಡೆ ಮಾಡಿದ್ದಾರೆ.
ತೆಲುಗಿನ 'ಭಗವಂತ್ ಕೇಸರಿ' ಸಿನಿಮಾ ರೀಮೆಕ್ 'ಜನ ನಾಯಗನ್' ಎನ್ನುವ ಊಹಾಪೋಹ ಶುರುವಾಗಿತ್ತು. ಟ್ರೈಲರ್ ಅದಕ್ಕೆ ಇಂಬು ನೀಡುವಂತಿದೆ. ಮಕ್ಕಿ ಕಾ ಮಕ್ಕಿ ರೀಮೇಕ್ ಮಾಡದೇ ಇದ್ದರೂ ಅದೇ ಕತೆಯಿಂದ ಸ್ಫೂರ್ತಿ ಪಡೆದು ಸಿನಿಮಾ ಕಟ್ಟಿಕೊಟ್ಟಿರುವುದು ಗೊತ್ತಾಗುತ್ತಿದೆ. ಟ್ರೈಲರ್ ಕಟ್ ಅಭಿಮಾನಿಗಳಿಗೆ ಇಷ್ಟವಾಗುವಂತಿದೆ. ವಿಜಯ್ ಆಕ್ಷನ್, ಜಬರ್ದಸ್ತ್ ಡೈಲಾಗ್ಸ್ ಮಿಕ್ಸ್ ಮಾಡಿ ಟ್ರೈಲರ್ ಬಿಡುಗಡೆ ಮಾಡಿದ್ದಾರೆ.
ಸ್ವಂತ ಪಕ್ಷ ಕಟ್ಟಿರುವ ವಿಜಯ್ ಈ ಚಿತ್ರವನ್ನು ತಮ್ಮ ರಾಜಕೀಯರಂಗ ಪ್ರವೇಶಕ್ಕೆ ವೇದಿಕೆ ಮಾಡಿಕೊಳ್ಳುತ್ತಾರೆ ಎನ್ನಲಾಗಿತ್ತು. ಅದಕ್ಕೆ ತಕ್ಕಂತೆ ಟೈಟಲ್ ಕೂಡ ಇಟ್ಟಿದ್ದರು. ಆದರೆ ಟ್ರೈಲರ್ ನೋಡಿದರೆ ಅಂತಹ ಹೆಚ್ಚಿನ ಸುಳಿವು ಸಿಕ್ತಿಲ್ಲ. ರೆಗ್ಯುಲರ್ ಕಮರ್ಷಿಯಲ್ ಸಿನಿಮಾದಲ್ಲೇ ನಟಿಸಿದ್ದಾರೆ. ಅಲ್ಲಲ್ಲಿ ಕೆಲ ಡೈಲಾಗ್ ಮೂಲಕ ಪಾಲಿಟಿಕ್ಸ್ ಬಗ್ಗೆ ಮಾತನಾಡಿದ್ದಾರೆ.
"ಎಲ್ಲಾ ಅಯೋಗ್ಯರು ಒಟ್ಟಾಗಿ ನಿಂತಿದ್ದಾರೆ, ಅವ್ರು ಗೆಲ್ಲಬಾರದು" ಎನ್ನುವ ಡೈಲಾಗ್ ವಿಜಯ್ ತಮ್ ರಾಜಕೀಯ ಎದುರಾಳಿಗಳಿಗೆ ಕೌಂಟರ್ ಕೊಟ್ಟಂತೆ ಇದೆ. "ನಿನ್ನನ್ನು ಮುಗಿಸಿಬಿಡ್ತೀನಿ, ಅವಮಾನಿಸುತ್ತೀನಿ ಅನ್ನೋರು ಯಾರೇ ಇದ್ದರೂ ವಾಪಸ್ ಹೋಗುವ ಐಡಿಯಾನೇ ಇಲ್ಲ, ಐ ಯಾಮ್ ಕಮ್ಮಿಂಗ್" ಎನ್ನುವ ಮತ್ತೊಂದು ಡೈಲಾಗ್ ಕೂಡ ಅದೇ ರೀತಿ ಇದೆ. ಜನರಿಗೆ ಒಳ್ಳೆದು ಮಾಡೋಕೆ ರಾಜಕೀರಂಗಕ್ಕೆ ಬನ್ರೋ ಅಂದ್ರೆ ಕೊಳ್ಳೆ ಹೊಡೆಯೋಕೆ ಬರ್ತೀರಾ? ಎಂದು ವಿಜಯ್ ಮತ್ತೊಂದು ಕೌಂಟರ್ ಡೈಲಾಗ್ ಹೊಡೆದಿದ್ದಾರೆ.
ಜೈಲಿನಿಂದ ಬಿಡುಗಡೆಯಾಗಿ ಬಂದ ವ್ಯಕ್ತಿ ಮಗಳ ಸಮಾನ ವಿಜಯಲಕ್ಷ್ಮಿಯನ್ನು ಭಾರತೀಯ ಸೇನೆಗೆ ಸೇರಿಸಲು ಪ್ರಯತ್ನಿಸುತ್ತಾನೆ. ಈ ಹಾದಿಯಲ್ಲಿ ಕ್ರೂರಿ ಉದ್ಯಮಿಯೊಬ್ಬ ಅಡ್ಡಗಾಲಾಗುತ್ತಾನೆ. ಈ ಹೋರಾಟದಲ್ಲಿ ನಾಯಕ ಹೇಗೆ ಗೆಲ್ಲುತ್ತಾನೆ ಎನ್ನುವುದು 'ಭಗವಂತ್ ಕೇಸರಿ' ಚಿತ್ರದ ಕಥೆ. ತೆಲುಗಿನಲ್ಲಿ ಬಾಲಕೃಷ್ಣ ಹೀರೊ ಆಗಿ ನಟಿಸಿದ್ದರು. ಮಗಳ ಪಾತ್ರದಲ್ಲಿ ಶ್ರೀಲೀಲಾ ಕಾಣಿಸಿಕೊಂಡಿದ್ದರು. ಇಲ್ಲಿ ವಿಜಯ್ ಜೊತೆ ಮಮಿತಾ ಬೈಜು ಆ ಪಾತ್ರದಲ್ಲಿ ನಟಿಸಿದ್ದಾರೆ. ಬಾಬಿ ಡಿಯೋಲ್ ವಿಲನ್ ಆಗಿ ಅಬ್ಬರಿಸಿದ್ದಾರೆ.
ತಮಿಳು ಜೊತೆಗೆ ತೆಲುಗು ಹಾಗೂ ಹಿಂದಿಯಲ್ಲಿ 'ಜನ ನಾಯಗನ್' ಸಿನಿಮಾ ಟ್ರೈಲರ್ ಬಿಡುಗಡೆ ಆಗಿದೆ. ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರಕ್ಕಿದೆ. ಈ ಚಿತ್ರದಲ್ಲಿ ವಿಜಯ್ 250 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.
ಈಗಾಗಲೇ 'ಜನ ನಾಯಗನ್' ಸಿನಿಮಾ ಕ್ರೇಜ್ ಶುರುವಾಗಿದೆ. ಮಲೇಷಿಯಾದಲ್ಲಿ ಇತ್ತೀಚೆಗೆ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ನಡೆದಿತ್ತು. ಬೆಂಗಳೂರು ಸೇರಿದಂತೆ ಕೆಲವೆಡೆ ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಫ್ಯಾನ್ಸ್ ಶೋ ಟಿಕೆಟ್ ದರ ಬೆಂಗಳೂರಿನಲ್ಲಿ 1000 ರೂ. ದಾಟಿದೆ. ಕೇವಲ 2 ಗಂಟೆಗಳಲ್ಲಿ ಚಿತ್ರದ ಟ್ರೈಲರ್ 2 ಕೋಟಿಗೂ ಹೆಚ್ಚು ವೀವ್ಸ್ ಸಾಧಿಸಿ ದರ್ಬಾರ್ ನಡೆಸ್ತಿದೆ.


Click it and Unblock the Notifications











