For Quick Alerts
  ALLOW NOTIFICATIONS  
  For Daily Alerts

  ವಿಜಯ್ ಅಭಿಮಾನಿಗಳಿಗೆ ಗುಡ್ ನ್ಯೂಸ್; 'ಮಾಸ್ಟರ್' ಸಿನಿಮಾದಿಂದ ಕಾದಿದೆ ಬಿಗ್ ಸರ್ಪ್ರೈಸ್

  |

  ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷೆಯ ಮಾಸ್ಟರ್ ಸಿನಿಮಾದಿಂದ ಬಿಗ್ ಅಪ್ ಡೇಟ್ ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ಹೌದು, ದೀಪಾವಳಿಗೆ ಸಿನಿಮಾದ ಟೀಸರ್ ರಿಲೀಸ್ ಆಗುತ್ತೆ ಎಂದು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಸಿನಿಮಾತಂಡದ ಕಡೆಯಿಂದ ಯಾವುದೇ ಅಪ್ ಡೇಟ್ ಸಿಗದೆ ಪರದಾಡುತ್ತಿದ್ದರು.

  ಟೀಸರ್ ರಿಲೀಸ್ ಮಾಡುವಂತೆ ವಿಜಯ್ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡಿದ್ದರು. ಇದೀಗ ಅಪ್ ಡೇಟ್ ನೀಡುವುದಾಗಿ ಸಿನಿಮಾತಂಡ ಅನೌನ್ಸ್ ಮಾಡಿದೆ. ಅಂದಹಾಗೆ ಮಾಸ್ಟರ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ದೀಪಾವಳಿಗೆ ಸಿನಿಮಾ ಬಿಡುಗಡೆಯಾಗಲಿದೆ ಎನ್ನುವ ಮಾತು ಕೇಳಿಬರುತ್ತಿತ್ತು, ಆದರೆ ಚಿತ್ರಮಂದಿರಗಳು ತೆರೆದ ಬಳಿಕ ಯಾವ ಹೊಸ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ತಯಾರಕರು ಸಿನಿಮಾ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

  'ನನ್ನ ಮಗ ವಾಪಸ್ ಬರ್ತಾರೆ': ವಿಜಯ್ ತಂದೆ ಚಂದ್ರಶೇಖರ್ ನಂಬಿಕೆ

  ಸಿನಿಮಾ ರಿಲೀಸ್ ತಡವಾದರೂ ಪರವಾಗಿಲ್ಲ, ಸಿನಿಮಾದಿಂದ ಟೀಸರ್ ಅಥವಾ ಟ್ರೈಲರ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇಂದು (ನವೆಂಬರ್ 12) ಸಿನಿಮಾತಂಡ ನೀಡುವ ಅಪ್ ಡೇಟ್ ಏನು ಎನ್ನುವುದು ಕುತೂಹಲ ಮೂಡಿಸಿದೆ. ಟೀಸರ್ ರಿಲೀಸ್ ಬಗ್ಗೆ ಬಹಿರಂಗ ಪಡಿಸಬಹುದಾ ಅಥವಾ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತಾ ಎಂದು ವಿಜಯ್ ಫ್ಯಾನ್ಸ್ ಉಸಿರು ಬಿಡಿಹಿಡಿದು ಕಾಯುತ್ತಿದ್ದಾರೆ.

  ಇಂದು ಸಂಜೆ 6 ಗಂಟೆಗೆ ಮಾಸ್ಟರ್ ಸಿಮಾದಿಂದ ಬಿಗ್ ಅಪ್ ಡೇಟ್ ಹೊರಬೀಳಲಿದೆ. ಮಾಸ್ಟರ್ ನಿರ್ದೇಶಕ ಲೋಕೇಶ್ ಕನಗರಾಜ್ ಸಾರಥ್ಯದಲ್ಲಿ ಮೂಡಿಬಂದಿರುವ ಸಿನಿಮಾ. ಚಿತ್ರದಲ್ಲಿ ವಿಜಯ್ ಗೆ ನಾಯಕಿಯಾಗಿ ಮಾಳವಿಕಾ ಮೋಹಕನ್ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ದಳಪತಿ ವಿಜಯ್ ಎದುರು ಖಳನಟನಾಗಿ ವಿಜಯ್ ಸೇತುಪತಿ ನಟಿಸಿದ್ದಾರೆ. ಚಿತ್ರದಲ್ಲಿ ವಿಜಯ್ ಮತ್ತು ವಿಜಯ್ ಇಬ್ಬರ ಕಾಳಗ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

  English summary
  Thalapathy Vijay starrer Master movie team will have an Udate today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X