For Quick Alerts
  ALLOW NOTIFICATIONS  
  For Daily Alerts

  ದಾಖಲೆ ನಿರ್ಮಿಸಿದ ಅಭಿಮಾನಿಗಳ ಜೊತೆಗಿನ ದಳಪತಿ ವಿಜಯ್ ಸೆಲ್ಫಿ

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟ ದಳಪತಿ ವಿಜಯ್ ಸಾಮಾಜಿಕ ಜಾಲತಾಣದಲ್ಲಿ ನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಹೌದು, ವಿಜಯ್ ಅಭಿಮಾನಿ ಸಾಗರದ ಜೊತೆ ಕ್ಲಿಕ್ಕಿಸಿಕೊಂಡಿರುವ ಸೆಲ್ಫಿ ಟ್ವಿಟ್ಟರ್ ನಲ್ಲಿ ರೆಕಾರ್ಟ್ ಕ್ರಿಯೇಟ್ ಮಾಡಿದೆ.

  ದಳಪತಿ ವಿಜಯ್ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ನಟ. ವಿಜಯ್ ನೋಡಲು, ವಿಜಯ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಶೂಟಿಂಗ್ ಸ್ಥಳಗಳಲ್ಲಿ ವಿಜಯ್ ಗಾಗಿ ಅಭಿಮಾನಿಗಳು ಹಗಲು ರಾತ್ರಿ ಕಾಯುತ್ತಿರುತ್ತಾರೆ. ಸದ್ಯ ರಿಲೀಸ್ ಗೆ ಸಿದ್ಧವಾಗಿರುವ ಮಾಸ್ಟರ್ ಸಿನಿಮಾದ ಚಿತ್ರೀಕರಣ ವೇಳೆಯೂ ಅಭಿಮಾನಿಗಳು ಚಿತ್ರೀಕರಣ ಸ್ಥಳಕ್ಕೆ ಬಂದು ಜಮಾಯಿಸುತ್ತಿದ್ದರು. ಆ ಸಮಯದಲ್ಲಿ ಕ್ಲಿಕ್ಕಿಸಿದ ಸೆಲ್ಫಿ ಈಗ ರೆಕಾರ್ಡ್ ಕ್ರಿಯೇಟ್ ಮಾಡಿದೆ. ಮುಂದೆ ಓದಿ..

  ದಳಪತಿ ವಿಜಯ್ ಪುತ್ರಿ ದಿವ್ಯಾ ಚಿತ್ರರಂಗದ ಎಂಟ್ರಿಗೆ ತಯಾರಿದಳಪತಿ ವಿಜಯ್ ಪುತ್ರಿ ದಿವ್ಯಾ ಚಿತ್ರರಂಗದ ಎಂಟ್ರಿಗೆ ತಯಾರಿ

  ಫೆಬ್ರವರಿಯಲ್ಲಿ ನಡೆದ ಚಿತ್ರೀಕರಣ

  ಫೆಬ್ರವರಿಯಲ್ಲಿ ನಡೆದ ಚಿತ್ರೀಕರಣ

  2020 ಫೆಬ್ರವರಿಯಲ್ಲಿ ತಮಿಳುನಾಡಿನ ನಯೆವೆಲಿಯಲ್ಲಿ 'ಮಾಸ್ಟರ್' ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿತ್ತು. ಈ ಸಮಯದಲ್ಲಿ ವಿಜಯ್ ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. ಅಭಿಮಾನಿ ಸಾಗರ ನೋಡಿ ಸಂತಸಗೊಂಡ ವಿಜಯ್ ವಾಹನದ ಮೇಲೆ ಹತ್ತಿ ಅಭಿಮಾನಿಗಳತ್ತ ಕೈ ಬೀಸಿದ್ದಾರೆ. ಅಷ್ಟೆಯಲ್ಲ ಸಾಗರೋಪಾದಿಯಲ್ಲಿ ಸೇರಿದ್ದ ಅಭಿಮಾನಿಗಳನ್ನು ನೋಡಿ ಥ್ರಿಲ್ ಆಗಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

  ಫೋಟೋ ಶೇರ್ ಮಾಡಿ ಧನ್ಯವಾದ ತಿಳಿಸಿದ್ದ ವಿಜಯ್

  ಫೋಟೋ ಶೇರ್ ಮಾಡಿ ಧನ್ಯವಾದ ತಿಳಿಸಿದ್ದ ವಿಜಯ್

  ಈ ಫೋಟೋವನ್ನು ವಿಜಯ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, "ಧನ್ಯವಾದಗಳು ನಯೆವೆಲಿ" ಎಂದು ಹೇಳಿದ್ದರು. ಈ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದು ಬಂದಿತ್ತು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಈ ಫೋಟೋ ಅತೀ ರಿಟ್ವೀಟ್ ಆದ ಫೋಟೋ ಎನ್ನುವ ಖ್ಯಾತಿಗಳಿಸಿದೆ.

  <br />ಅಭಿಮಾನಿಯನ್ನೇ ಪ್ರೀತಿಸಿ ಮದುವೆಯಾದ ದಳಪತಿ ವಿಜಯ್ ಇಂಟರೆಸ್ಟಿಂಗ್ ಲವ್ ಸ್ಟೋರಿ
  ಅಭಿಮಾನಿಯನ್ನೇ ಪ್ರೀತಿಸಿ ಮದುವೆಯಾದ ದಳಪತಿ ವಿಜಯ್ ಇಂಟರೆಸ್ಟಿಂಗ್ ಲವ್ ಸ್ಟೋರಿ

  ಅತೀ ಹೆಚ್ಚು ರಿಟ್ವೀಟ್ ಆದ ಸೆಲ್ಫಿ

  ಅತೀ ಹೆಚ್ಚು ರಿಟ್ವೀಟ್ ಆದ ಸೆಲ್ಫಿ

  ಮೊದಲ ಬಾರಿಗೆ ಭಾರತೀಯ ನಟನೊಬ್ಬನ ಫೋಟೋ ಅತೀ ಹೆಚ್ಚು ಬಾರಿ ರಿಟ್ವೀಟ್ ಆಗುವ ಮೂಲಕ ದಾಖಲೆ ನಿರ್ಮಿಸಿದೆ. ಈ ಸಂತಸವನ್ನು ವಿಜಯ್ ಅಬಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಮತ್ತೆ ಈ ಫೋಟೋವನ್ನು ಶೇರ್ ಮಾಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

  ನನ್ನ ನಂಬಿ ಸರ್ಕಾರ ದೊಡ್ಡ ಜವಾಬ್ದಾರಿ ಕೊಟ್ಟಿದೆ | Shruthi Krishna | Filmibeat Kannada
  ಐಟಿ ರೈಡ್ ಆದ ಸಮಯದಲ್ಲಿ ಕ್ಲಿಕ್ಕಿಸಿದ ಸೆಲ್ಫಿ

  ಐಟಿ ರೈಡ್ ಆದ ಸಮಯದಲ್ಲಿ ಕ್ಲಿಕ್ಕಿಸಿದ ಸೆಲ್ಫಿ

  ನಯೆವೆಲಿ ಚಿತ್ರೀಕರಣದಲ್ಲಿದ್ದಾಗ ನಟ ವಿಜಯ್ ಮನೆಮೇಲೆ ಐಟಿ ರೈಡ್ ಆಗಿತ್ತು. ನಯೆವೆಲಿ ಚಿತ್ರೀಕರಣ ಸ್ಥಳದಿಂದ ವಿಜಯ್ ದಿಢೀರ್ ಚೆನ್ನೈ ನಿವಾಸಕ್ಕೆ ತೆರೆಳಿದ್ದರು. ಈ ಸಮಯದಲ್ಲಿ ವಿಜಯ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ವಿಜಯ್ ಮನೆಮೇಲಿನ ದಾಳಿಯನ್ನು ಖಂಡಿಸಿದ್ದರು. ಈ ಸಮಯದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ನಯೆವೆಲೆ ಚಿತ್ರೀಕರಣ ಸ್ಥಳಕ್ಕೆ ಬಂದು ಜಮಾಯಿಸಿದ್ದರು. ಆಗ ಸೆರೆಹಿಡಿದ ಸೆಲ್ಫಿ ಇದಾಗಿದೆ.

  English summary
  Thalapathy vijay's neyveli selfie with fans become most retweeted post.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X