For Quick Alerts
  ALLOW NOTIFICATIONS  
  For Daily Alerts

  ಹಿಂದಿಗೆ ರಿಮೇಕ್ ಆಗುತ್ತಿದೆ ವಿಜಯ್ 'ಮಾಸ್ಟರ್' ಚಿತ್ರ; ಯಾರಾಗಲಿದ್ದಾರೆ ನಾಯಕ?

  |

  ದಳಪತಿ ವಿಜಯ್ ಮತ್ತು ವಿಜಯ್ ಸೇತುಪತಿ ನಟನೆಯ ಮಾಸ್ಟರ್ ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದ್ದಾರೆ. ಲಾಕ್ ಡೌನ್ ಬಳಿಕ ರಿಲೀಸ್ ಆದ ಮೊದಲ ಬಿಗ್ ಸ್ಟಾರ್ ನ ಬಿಗ್ ಬಜೆಟ್ ಚಿತ್ರವನ್ನು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಸುಮಾರು 9 ತಿಂಗಳ ಬಳಿಕ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ ಪ್ರೇಕ್ಷಕರು ಸಂತಸಪಟ್ಟಿದ್ದಾರೆ.

  ಕೊರೊನಾ ಸಮಯದಲ್ಲೂ ಅದ್ಭುತ ಪ್ರದರ್ಶನ ಕಾಣುತ್ತಿರುವ ಮಾಸ್ಟರ್ ಸಿನಿಮಾವನ್ನು ಹಿಂದೆ ರಿಮೇಕ್ ಮಾಡುವ ತಯಾರಿ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈಗಾಗಲೇ ದಕ್ಷಿಣ ಭಾರತದ ಅನೇಕ ಸೂಪರ್ ಹಿಟ್ ಸಿನಿಮಾಗಳು ಹಿಂದಿಗೆ ರಿಮೇಕ್ ಆಗಿ ಸಕ್ಸಸ್ ಆಗಿವೆ.

  'ಮಾಸ್ಟರ್' ಕಲೆಕ್ಷನ್: ಕೊರೊನಾ ನಡುವೆಯೂ ಮೊದಲ ದಿನ ದಾಖಲೆ ಬರೆದ ವಿಜಯ್

  ಇದೀಗ ಮಾಸ್ಟರ್ ಸಿನಿಮಾದ ಮೇಲೆ ಬಾಲಿವುಡ್ ನಿರ್ಮಾಪಕರ ಕಣ್ಣು ಬಿದ್ದಿದ್ದು, ಈಗಾಗಲೇ ರಿಮೇಕ್ ಮಾಡಲು ಸಿದ್ಧತೆ ನಡೆಯುತ್ತಿದೆಯಂತೆ. ಮೂಲಗಳ ಪ್ರಕಾರ ತೆಲುಗಿನ ಸೂಪರ್ ಹಿಟ್ ಅರ್ಜುನ್ ರೆಡ್ಡಿ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್ ಮಾಡಿದ್ದ ನಿರ್ಮಾಪಕ ಮುರಾದ್ ಖೇತಾನಿ ಮಾಸ್ಟರ್ ಸಿನಿಮಾದ ರಿಮೇಕ್ ಹಕ್ಕು ಖರೀಸಿದ್ದಾರೆ ಎಂದು ಹೇಳಲಾಗುತ್ತಿದೆ.

  ಈಗಾಗಲೇ ಎಲ್ಲಾ ಮಾತುಕತೆ ನಡೆದಿದ್ದು, ಅಧಿಕೃತ ಘೋಷಣೆಯೊಂದೆ ಬಾಕಿ ಇದಿಯಂತೆ. ನಿರ್ಮಾಪಕ ಮುರಾದ್ ಖೇತಾನಿ ದೊಡ್ಡ ಮೊತ್ತದಲ್ಲಿ ಮಾಸ್ಟರ್ ಸಿನಿಮಾದ ರಿಮೇಕ್ ಹಕ್ಕನ್ನು ಖರೀದಿ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

  ಮಾಸ್ಟರ್ ಚಿತ್ರದಲ್ಲಿ ವಿಜಯ್ ಸೇತುಪತಿ ಪ್ರಾಧ್ಯಾಪಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಲನ್ ಆಗಿ ನಟ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಕಾದಾಟ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಮೊದಲ ಬಾರಿಗೆ ವಿಜಯ್ ಮತ್ತು ವಿಜಯ್ ಅವರನ್ನು ಒಟ್ಟಿಗೆ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

  ಸದ್ಯ ಬಾಲಿವುಡ್ ಗೆ ರಿಮೇಕ್ ಆಗುತ್ತಿರುವ ಮಾಸ್ಟರ್ ಸಿನಿಮಾದಲ್ಲಿ ದಳಪತಿ ವಿಜಯ್ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಮತ್ತುಸೇತುಪತಿ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಎನ್ನುವ ಕುತೂಹಲ ಚಿತ್ರಪ್ರಿಯರಲ್ಲಿ ಮನೆ ಮಾಡಿದೆ. ಬಾಲಿವುಡ್ ನ ಇಬ್ಬರು ಬಿಗ್ ಸ್ಟಾರ್ಸ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಯಾರು ಎನ್ನುವುದಕ್ಕೆ ಉತ್ತರ ಕೆಲವೇ ದಿನಗಳಲ್ಲಿ ಹೊರಬೀಳುವ ಸಾಧ್ಯತೆ ಇದೆ.

  ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ನಡೆಯಲಿದೆ ಸಲಾರ್ ಮುಹೂರ್ಥ | Filmibeat Kannada
  English summary
  Thalapathy Vijay starrer Super hit Master movie to be remade in Hindi by Kabir Singh producer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X