GOAT: ದಳಪತಿ ವಿಜಯ್ ಹೊಸ ಲುಕ್: ಫ್ಯಾನ್ಸ್ ಜೊತೆ ಸೆಲ್ಫಿ ವೈರಲ್

'ಲಿಯೋ' ಸಿನಿಮಾ ಬಳಿಕ ತಮಿಳು ನಟನ ವಿಜಯ್ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಎನ್ನುವ ಚಿತ್ರಕ್ಕೆ ವಿಜಯ್ ಬಣ್ಣ ಹಚ್ಚಿದ್ದು ವೆಂಕಟ್ ಪ್ರಭು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಸೈನ್ಸ್ ಫಿಕ್ಷನ್ ಚಿತ್ರದಲ್ಲಿ ವಿಜಯ್ ದ್ವಿಪಾತ್ರದಲ್ಲಿ ನಡಿಸುತ್ತಿದ್ದಾರೆ.

ಎರಡು ವಿಭಿನ್ನ ಪಾತ್ರಗಳಲ್ಲಿ ದಳಪತಿ ವಿಜಯ್ ನಟಿಸುತ್ತಿದ್ದು ಕ್ಲೀನ್‌ ಶೇವ್‌ ಲುಕ್‌ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಹೊಸ ವರ್ಷದ ಸಂದರ್ಭದಲ್ಲಿ ವಿಜಯ್ ಪೋಸ್ಟರ್ ಸಮೇತ ಚಿತ್ರದ ಟೈಟಲ್ ರಿವೀಲ್ ಮಾಡಿದ್ದರು. ಪೋಸ್ಟರ್‌ನಲ್ಲೇ ಎರಡು ಪಾತ್ರಗಳ ಲುಕ್ ರಿವೀಲ್ ಆಗಿತ್ತು. ಸದ್ಯ ಕ್ಲೀನ್‌ ಶೇವ್‌ ಲುಕ್‌ನಲ್ಲಿ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಚಿತ್ರೀಕರಣದಲ್ಲಿ ವಿಜಯ್ ಭಾಗವಹಿಸಿದ್ದಾರೆ.

Thalapathy Vijay Selfie with Fans From the Sets of The Greatest Of All Time goes viral

ಕಾಲಿವುಡ್‌ನಲ್ಲಿ ರಜನಿಕಾಂತ್ ಬಿಟ್ಟರೆ ದಳಪತಿ ವಿಜಯ್‌ಗೆ ದೊಡ್ಡ ಅಭಿಮಾನಿಗಳ ಬಳಗ ಇದೆ. ವಿಜಯ್ ಎಲ್ಲೇ ಹೋದರು ಬಂದರೂ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಸಿನಿಮಾ ಚಿತ್ರೀಕರಣ ಸೆಟ್‌ಗೂ ಭೇಟಿ ನೀಡುತ್ತಾರೆ. ಇತ್ತೀಚೆಗೆ ನೆಚ್ಚಿನ ನಟನನ್ನು ನೋಡಲು 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಸಿನಿಮಾ ಸೆಟ್‌ಗೆ ನೂರಾರು ಅಭಿಮಾನಿಗಳು ಆಗಮಿಸಿದ್ದರು. ಎತ್ತರದ ಜಾಗದಲ್ಲಿ ನಿಂತು ಅಭಿಮಾನಿಗಳ ಜೊತೆ ವಿಜಯ್ ಗ್ರೂಪ್ ಸೆಲ್ಫಿ ಕ್ಲಿಕ್ಕಿಸಿದ್ದಾರೆ.

ವಿಜಯ್ ಕ್ಲಿಕ್ಕಿಸಿದ ಮಾಸ್ ಸೆಲ್ಫಿ ಫೋಟೊ ಈ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಹಳ ದಿನಗಳ ನಂತರ ನೆಚ್ಚಿನ ನಟನನ್ನು ಈ ರೀತಿ ಕ್ಲೀನ್‌ಶೇವ್‌ನಲ್ಲಿ ಯಂಗ್ ಲುಕ್‌ನಲ್ಲಿ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಅಥವಾ ಸಾರ್ವಜನಿಕವಾಗಿ ಕ್ಲೀನ್‌ ಶೇವ್‌ನಲ್ಲಿ ದಳಪತಿ ಕಾಣಿಸಿಕೊಂಡಿರಲಿಲ್ಲ.

Thalapathy Vijay Selfie with Fans From the Sets of The Greatest Of All Time goes viral

2020ರಲ್ಲಿ' ಮಾಸ್ಟರ್' ಚಿತ್ರದ ಶೂಟಿಂಗ್ ವೇಳೆ ನೆವೆಲಿನಲ್ಲಿ ಇದೇ ರೀತಿ ಸೆಟ್‌ ಬಳಿ ಬಂದಿದ್ದ ಅಭಿಮಾನಿಗಳ ಜೊತೆ ವಿಜಯ್ ಸೆಲ್ಫಿ ಕ್ಲಿಕ್ಕಿಸದ್ದರು. ಆ ಸಮಯದಲ್ಲಿ ದಳಪತಿ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಆದರೂ ಅಭಿಮಾನಿಗಳ ಜೊತೆ ಫೋಟೊ ಹಂಚಿಕೊಂಡು ತನ್ನ ಆತ್ಮಸ್ಥೈರ್ಯ ಕುಗ್ಗಿಲ್ಲ ಎನ್ನುವ ಸಂದೇಶ ರವಾನಿಸಿದ್ದರು. ಇದೀಗ ಅಂತದ್ದೇ ಮತ್ತೊಂದು ಸೆಲ್ಫಿ ಅಭಿಮಾನಿಗಳ ಗಮನ ಸೆಳೆದಿದೆ.

ಕಳೆದ ವರ್ಷ ದಸರಾ ಸಂಭ್ರಮದಲ್ಲಿ ಬಂದಿದ್ದ ವಿಜಯ್ ನಟನೆಯ 'ಲಿಯೋ' ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು.

More from Filmibeat

English summary
Thalapathy Vijay clicks Selfie with Fans at The Greatest Of All Time sets;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X