Don't Miss!
- Lifestyle
ಈ ಆಹಾರಗಳನ್ನು ಒಟ್ಟಿಗೆ ಸೇವಿಸಬೇಡಿ, ಡೆಡ್ಲಿ ಕಾಂಬಿನೇಷನ್ ಆಹಾರಗಳಿವು!
- News
Vivo ಕಥೆ: ಇಡಿ ದಾಳಿ ಮಾಡಿದರೆ ವ್ಯಾಪಾರಕ್ಕೆ ಅಡ್ಡಿ ಎಂದ ಚೀನಾ ರಾಯಭಾರಿ!
- Automobiles
ಇವಿ ಕಾರು ಮಾರಾಟ: ಜೂನ್ ಅವಧಿಯ ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಟಾಟಾ
- Sports
ಲಂಡನ್ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಧೋನಿ; ಎಂಎಸ್ಡಿ ಭಾರತದ ಐಕಾನ್ ಎಂದ ವಿಂಬಲ್ಡನ್
- Education
NIMHANS Recruitment 2022 : ರಿಸರ್ಚ್ ಅಸೋಸಿಯೇಟ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಇಂದು ಒನ್ಪ್ಲಸ್ ಟಿವಿ 50 Y1S ಪ್ರೊ ಫಸ್ಟ್ ಸೇಲ್; ಇದೆ ಭರ್ಜರಿ ಆಫರ್!
- Finance
ಜುಲೈ 07: ನಿಮ್ಮ ನಗರಗಳ ಪೆಟ್ರೋಲ್-ಡೀಸೆಲ್ ದರ ಇಲ್ಲಿದೆ
- Travel
ಬೆಂಗಳೂರಿನಿಂದ ವಾರಾಂತ್ಯದಲ್ಲಿ ಭೇಟಿ ಕೊಡಬಹುದಾದ 60 ಪ್ರವಾಸಿ ತಾಣಗಳು
Beast Day 1 Box Office Collection: 'KGF 2' ಎದುರು ನಿಂತ 'ಬೀಸ್ಟ್' ಕಲೆಕ್ಷನ್ ಎಷ್ಟು? ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?
ತಮಿಳಿಗರಿಗೆ ಏಪ್ರಿಲ್ 14 ಹೊಸ ವರ್ಷ. ಈ ಕಾರಣಕ್ಕೆ ಒಂದು ದಿನ ಮುನ್ನ ಅಂದ್ರೆ, ಏಪ್ರಿಲ್ 13ರಂದು ದಳಪತಿ ವಿಜಯ್ ಸಿನಿಮಾ 'ಬೀಸ್ಟ್' ರಿಲೀಸ್ ಆಗಿತ್ತು. ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಸಿನಿಮಾ 'ಕೆಜಿಎಫ್ 2'ಗೆ ಟಕ್ಕರ್ ಕೊಡಲೆಂದೇ ರಿಲೀಸ್ ಆಗಿದೆ ಎಂದು ಆರೋಪ ಮಾಡಲಾಗಿತ್ತು. ಆದರೆ, ಸ್ವತ: ಎರಡೂ ಸಿನಿಮಾ ತಂಡಗಳು ಕೂಡ ಪರಸ್ಪರ ವಿಶ್ ಮಾಡಿಕೊಳ್ಳುವ ಮೂಲಕ ಅಭಿಮಾನಿ ಸ್ಟಾರ್ ವಾರ್ಗೆ ತಿಲಾಂಜಲಿ ಇಟ್ಟಿದ್ದರು.

'ಬೀಸ್ಟ್' ವಿಶ್ವದಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಕರ್ನಾಟಕದಲ್ಲೂ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಆದರೆ, ಸಿನಿಮಾ ರಿಲೀಸ್ ಆದ ಮೊದಲ ದಿನವೇ 'ಬೀಸ್ಟ್'ಗೆ ನೆಗೆಟಿವ್ ರಿಪೋರ್ಟ್ ಬಂದಿತ್ತು. ಆದರೂ 'ಬೀಸ್ಟ್' ಸಿನಿಮಾದ ಮೊದಲ ದಿನದ ಗಳಿಕೆಯಲ್ಲಿ ಕಿಂಚಿತ್ತೂ ಎಫೆಕ್ಟ್ ಆಗಿಲ್ಲ.
Beast
OTT
Release
Date:
ಚಿತ್ರಮಂದಿರದಿಂದ
ಒಟಿಟಿಯತ್ತ
ಓಟಕಿತ್ತ
'ಬೀಸ್ಟ್'
ದಳಪತಿ ವಿಜಯ್ ಈಗಾಗಲೇ ಬಾಕ್ಸಾಫೀಸ್ನಲ್ಲಿ ತನ್ನದೇ ಕೆಲವು ದಾಖಲೆಗಳನ್ನು ಬರೆದಿದ್ದಾರೆ. ಈ ಕಾರಣಕ್ಕೆ 'ಬೀಸ್ಟ್' ಬಾಕ್ಸಾಫೀಸ್ನಲ್ಲಿ ಎಷ್ಟು ಗಳಿಕೆ ಮಾಡಿದೆ ? ವಿಶ್ವದಾದ್ಯಂತ ಫಸ್ಟ್ ಡೇ ಎಷ್ಟು ಗಳಿಕೆಯಾಗಿದೆ ? ಕರ್ನಾಟಕದಾದ್ಯಂತ ಎಷ್ಟು ಕೋಟಿ ಗಳಿಸಿದೆ ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

'ಬೀಸ್ಟ್' ಫಸ್ಟ್ ಡೇ ಕಲೆಕ್ಷನ್ ಎಷ್ಟು?
'ಬೀಸ್ಟ್' ಸಿನಿಮಾಗೆ ಮೊದಲ ದಿನ ಬಾಕ್ಸಾಫೀಸ್ನಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ದಳಪತಿ ವಿಜಯ್ ಸಿನಿಮಾ ಅದಷ್ಟೇ ಕೆಟ್ಟ ರೆಸ್ಪಾನ್ಸ್ ಸಿಕ್ಕರೂ, ಗಳಿಕೆಗಂತೂ ಮೋಸ ಆಗಲ್ಲ. ಹೀಗಾಗಿ ಭಾರತದಾದ್ಯಂತ ಮೊದಲ ದಿನ ಸುಮಾರು 40 ಕೋಟಿ ಗಳಿಕೆ ಕಂಡಿದೆ ಎನ್ನಲಾಗಿದೆ. ಈ 40 ಕೋಟಿಯಲ್ಲಿ ನಿರ್ಮಾಪಕರಿಗೆ ಪ್ರಾಫಿಟ್ ಅಂತ ಸಿಕ್ಕಿದ್ದು, 27 ಕೋಟಿ. ಇದು ಕೋವಿಡ್ ಬಳಿಕ ಮೊದಲ ದಿನ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎನ್ನಲಾಗಿದೆ.

'ಬೀಸ್ಟ್' ಸಿನಿಮಾ ಕಮಾಲ್
'ಬೀಸ್ಟ್' ಸಿನಿಮಾ ಚೆನ್ನೈನಲ್ಲಿ ಹೆಚ್ಚು ಗಳಿಕೆ ಕಂಡಿದೆ. ಕೊರೊನಾ ಬಳಿಕ ಮೊದಲ ಚೆನ್ನೈ ನಗರದಲ್ಲಿ ಹೆಚ್ಚು ಗಳಿಕೆ ಕಂಡ ವಿಜಯ್ ಎರಡನೇ ಸಿನಿಮಾ ಎಂಬ ಹೆಗ್ಗಳಿಕೆ ಕಂಡಿದೆ. 2018ರಲ್ಲಿ ತೆರೆಕಂಡಿದ್ದ 'ಸರ್ಕಾರ್' ಸಿನಿಮಾ ಹೆಚ್ಚು ಗಳಿಕೆ ಕಂಡಿತ್ತು. ಆ ಸಿನಿಮಾ ನಂತ್ರ ಚೆನ್ನೈನಲ್ಲಿ ಸುಮಾರು 1.96 ಕೋಟಿ ಗಳಿಕೆ ಕಂಡು 'ಬೀಸ್ಟ್' ಸಿನಿಮಾ ಎರಡನೇ ಸ್ಥಾನದಲ್ಲಿದೆ.

ಕರ್ನಾಟಕದಲ್ಲಿ 'ಬೀಸ್ಟ್' ಗಳಿಸಿದ್ದೆಷ್ಟು?
'ಬೀಸ್ಟ್' ಸಿನಿಮಾ ಕರ್ನಾಟಕದಲ್ಲಿ ಹೆಚ್ಚು ಗಳಿಕೆ ಮಾಡುವುದಿಲ್ಲ ಎಂದು ಊಹಿಸಲಾಗಿತ್ತು. 'ಕೆಜಿಎಫ್ 2' ಹೆಚ್ಚು ಥಿಯೇಟರ್ಗಳನ್ನು ನೀಡುತ್ತಿರುವುದರಿಂದ 'ಬೀಸ್ಟ್' ಕರ್ನಾಟಕದಲ್ಲಿ ಹೆಚ್ಚು ಗಳಿಕೆ ಮಾಡುವುದಿಲ್ಲವೆಂದು ನಿರೀಕ್ಷೆ ಮಾಡಲಾಗಿತ್ತು. ಆದರೂ, ಕರ್ನಾಟಕದ ಗಲ್ಲಾಪೆಟ್ಟಿಗೆಯಲ್ಲಿ ಸುಮಾರು 3 ಕೋಟಿ 80 ಲಕ್ಷದಷ್ಟು ಹಣ ಗಳಿಕೆಯಾಗಿದೆ ಎನ್ನುತ್ತಿದ್ದಾರೆ ವಿತರಕರು.

'ವಲಿಮೈ' ಹಿಂದಿಕ್ಕಿದ 'ಬೀಸ್ಟ್'
ದಳಪತಿ ವಿಜಯ್ ಹಾಗೂ ಅಜಿತ್ ಅಭಿಮಾನಿಗಳ ನಡುವೆ ಕಲೆಕ್ಷನ್ ವಿಚಾರದಿಂದ ಹಿಡಿದು ಪ್ರತಿಯೊಂದು ವಿಷಯಕ್ಕೂ ತಿಕ್ಕಾಟ ನಡೆಯುತ್ತಲೇ ಇರುತ್ತೆ. ಹೀಗಾಗಿ 'ಬೀಸ್ಟ್' ಕಲೆಕ್ಷನ್ ವಿಜಯ್ ಫ್ಯಾನ್ಸ್ಗೆ ತುಂಬಾನೇ ಮುಖ್ಯ. ಮೂಲಗಳ ಪ್ರಕಾರ ವಿಜಯ್ 'ಬೀಸ್ಟ್' ಮೊದಲ ದಿನವೇ ಅಜಿತ್ ಅಭಿನಯದ 'ವಲಿಮೈ' ಚಿತ್ರವನ್ನು ಹಿಂದಿಕ್ಕಿದೆ. ಮೊದಲ ದಿನದ ಗಳಿಕೆ ನಿರೀಕ್ಷೆಯನ್ನೂ ಮೀರಿದೆ. ಆದರೆ, 'ಕೆಜಿಎಫ್ 2' ರಿಲೀಸ್ ಆದ ಬಳಿಕ 'ಬೀಸ್ಟ್' ಕಲೆಕ್ಷನ್ ಹೇಗಿರುತ್ತೆ? ಅನ್ನುವುದು ಮತ್ತಷ್ಟು ಕುತೂಹಲ ಕೆರಳಿಸಿದೆ.