ದಳಪತಿ 'ಲಿಯೋ' ಪ್ರೀ ರಿಲೀಸ್ ಬ್ಯುಸಿನೆಸ್ ₹400 ಕೋಟಿ: ಸ್ಯಾಟಲೈಟ್, ಡಿಜಿಟಲ್, ಥ್ರಿಯೇಟ್ರಿಕಲ್ ರೈಟ್ಸ್ ಡಿಲೈಟ್ಸ್
ಲೋಕೇಶ್ ಕನಕರಾಜ್ ಹಾಗೂ ದಳಪತಿ ವಿಜಯ್ ಕಾಂಬಿನೇಷನ್‌ನಲ್ಲಿ 'ಲಿಯೋ' ಎನ್ನುವ ಸಿನಿಮಾ ಶುರುವಾಗಿದೆ. ಮುಹೂರ್ತ ನೆರವೇರಿಸಿ ಸಿನಿಮಾ ಚಿತ್ರೀಕರಣಕ್ಕೆ ಚಾಲನೆ ಕೊಡಲಾಗಿದೆ. ಆದರೆ ಸಿನಿಮಾ ಸೆಟ್ಟೇರುತ್ತಿದ್ದಂತೆ ಕೋಟಿ ಕೋಟಿ ಬ್ಯುಸಿನೆಸ್ ಮಾಡಿ ಎಲ್ಲರ ಹುಬ್ಬೇರಿಸಿದ್ದಾರೆ. ಕಾಲಿವುಡ್‌ನ ಎಲ್ಲಾ ಹಳೇ ದಾಖಲೆಗಳನ್ನು ಮುರಿದು 'ಲಿಯೋ' ಹೊಸ ದಾಖಲೆ ಬರೆದಿದ್ದಾನೆ.
'ಲಿಯೋ' ಚಿತ್ರದ ಥ್ರಿಯೇಟ್ರಿಕಲ್ ಹಾಗೂ ನಾನ್ ಥ್ರಿಯೇಟ್ರಿಕಲ್ ರೈಟ್ಸ್ ಬರೋಬ್ಬರಿ ₹400 ಕೋಟಿಗೆ ಮಾರಾಟವಾಗಿದೆ ಎನ್ನುತ್ತಿದೆ ಕಾಲಿವುಡ್ ಮೂಲಗಳು. ತಮಿಳಿನ ಮತ್ಯಾವುದೇ ಸಿನಿಮಾ ಶೂಟಿಂಗ್ ಹಂತದಲ್ಲಿ ಈ ಪಾಟಿ ಸದ್ದು ಮಾಡಿರಲಿಲ್ಲ. ಈಗಾಗಲೇ ಕಾಶ್ಮೀರದಲ್ಲಿ ಚಿತ್ರದ ಫಸ್ಟ್ ಶೆಡ್ಯೂಲ್ ಶೂಟಿಂಗ್ ಕಂಪ್ಲೀಟ್ ಆಗಿದೆ. 'ಕೈದಿ', 'ವಿಕ್ರಮ್' ರೀತಿಯ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಲೋಕೇಶ್ ಕನಕರಾಜ್, ನಟ ವಿಜಯ್ ಜೊತೆ ಕೈ ಜೋಡಿಸಿರುವುದು ಕುತೂಹಲ ಮೂಡಿಸಿದೆ.

ಈಗಾಗಲೇ ವಿಜಯ್- ಲೋಕೇಶ್ ಕಾಂಬಿನೇಷನ್‌ನಲ್ಲಿ ಬಂದ 'ಮಾಸ್ಟರ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಹಾಗಾಗಿ ಸಹಜವಾಗಿಯೇ ಇವರಿಬ್ಬರು ಮತ್ತೆ ಒಂದಾಗಿರೋದು ನಿರೀಕ್ಷೆ ಮೂಡಿಸಿದೆ. ಇನ್ನು ವಿಕ್ರಮ್, 'ಕೈದಿ' ಸಿನಿಮಾಗಳಿಗೆ ಲಿಂಕ್ ಇದ್ದಂತೆ ಆ ಎರಡು ಸಿನಿಮಾಗಳ ಜೊತೆ 'ಲಿಯೋ' ಕಥೆಗೂ ಲಿಂಕ್ ಇದೆ ಎನ್ನಲಾಗ್ತಿದೆ. ಅಂದರೆ ಇದು ಲೋಕೇಶ್ ಕನಕರಾಜ್ ಸಿನಿಮ್ಯಾಟಿಕ್ ಯೂನಿವರ್ಸ್‌ನ ಮತ್ತೊಂದು ಸಿನಿಮಾ.
ನಾನ್ ಥ್ರಿಯೇಟ್ರಿಕಲ್ ರೈಟ್ಸ್‌ನಿಂದ ₹240 ಕೋಟಿ ಹಾಗೂ ಥ್ರಿಯೇಟ್ರಿಕಲ್ ರೈಟ್ಸ್ ₹175 ಕೋಟಿ ಸೇರಿ ಸಿನಿಮಾ ಈಗಾಗಲೇ ₹400 ಕೋಟಿ ಬ್ಯುಸಿನೆಸ್ ಮಾಡಿದೆ ಎನ್ನಲಾಗ್ತಿದೆ. ಹೌದು ಚಿತ್ರದ(ತಮಿಳು, ತೆಲುಗು, ಹಿಂದಿ, ಕನ್ನಡ) ಓಟಿಟಿ ರೈಟ್ಸ್ ₹120 ಕೋಟಿಗೆ ನೆಟ್‌ಫ್ಲಿಕ್ಸ್ ಸಂಸ್ಥೆ ಕೊಂಡುಕೊಂಡಿದೆ. ₹70 ಕೋಟಿಗೆ ಸನ್ ಟಿವಿ ಚಿತ್ರದ ಸ್ಯಾಟಲೈಟ್ ರೈಟ್ಸ್ ಧಕ್ಕಿಸಿಕೊಂಡಿದೆ. ಸೋನಿ ಮ್ಯೂಸಿಕ್ ಸಂಸ್ಥೆ ₹18 ಕೋಟಿ ಆಡಿಯೋ ರೈಟ್ಸ್ ಸ್ವಂತ ಮಾಡಿಕೊಂಡಿದೆ.
ಇನ್ನು ಹಿಂದಿ ಡಬ್ ವರ್ಷನ್ ಸ್ಯಾಟಲೈಟ್ ರೈಟ್ಸ್ 30 ಕೋಟಿಗೆ ಚರ್ಚೆ ನಡೀತಿದೆಯಂತೆ. ಇದಿಷ್ಟು ನಾನ್ ಥ್ರಿಯೇಟ್ರಿಕಲ್ ರೈಟ್ಸ್ ಕಥೆ ಆಯಿತು. ಇನ್ನು ಥ್ರಿಯೇಟ್ರಿಕಲ್ ರೈಟ್ಸ್ ವಿಚಾರಕ್ಕೆ ಬಂದರೆ ಓವರ್‌ಸೀಸ್ ರೈಟ್ಸ್‌ಗೆ ₹50 ಕೋಟಿವರೆಗೂ ಬೇಡಿಕೆ ಇಟ್ಟಿದ್ದಾರಂತೆ. ತಮಿಳುನಾಡು ₹75 ಕೋಟಿ, ಇನ್ನು ಆಂಧ್ರ, ತೆಲಂಗಾಣ, ಕೇರಳ ರೈಟ್ಸ್ ₹35 ಕೋಟಿ ಹಾಗೂ ಇನ್ನುಳಿದಂತೆ ದೇಶಾದ್ಯಂತ ಸಿನಿಮಾ ರೈಟ್ಸ್‌ಗೆ ₹15 ಕೋಟಿವರೆಗೂ ಹಣ ಕೊಡಲು ವಿತರಕರು ಮುಂದಾಗಿದ್ದಾರೆ.

ಈಗಾಗಲೇ ₹400 ಕೋಟಿ ಬ್ಯುಸಿನೆಸ್ ಮಾಡಿದೆ ಎನ್ನುವ ಅಂದಾಜಿದೆ. ಚಿತ್ರದಲ್ಲಿ ನಟ ವಿಜಯ್ ಗ್ಯಾಂಗ್‌ಸ್ಟರ್ ಆಗಿ ನಟಿಸ್ತಿದ್ದಾರೆ ಎನ್ನಲಾಗ್ತಿದೆ. ತ್ರಿಶಾ ನಾಯಕಿಯಾಗಿ ನಟಿಸ್ತಿದ್ದು, ಸಂಜಯ್ ದತ್, ಅರ್ಜುನ್ ಸರ್ಜಾ, ಗೌತಮ್ ವಾಸುದೇವ್ ಮೆನನ್, ಪ್ರಿಯಾ ಆನಂದ್, ಮನ್ಸೂರ್ ಅಲಿಖಾನ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಕಾಲಿವುಡ್‌ನಲ್ಲಿ ಈ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ.
ವಿಜಯ್, ಲೋಕೇಶ್ ಇಬ್ಬರು ಬಹಳ ಬೇಗ ತಮ್ಮ ಸಿನಿಮಾಗಳ ಶೂಟಿಂಗ್ ಮುಗಿಸುತ್ತಾರೆ. ಈಗಾಗಲೇ ಕಾಶ್ಮೀರ ಶೆಡ್ಯೂಲ್ ಮುಗಿಸಿರುವ ಟೀಂ ಕೊಂಚ ಬ್ರೇಕ್ ಪಡೆದು ಚೆನ್ನೈನಲ್ಲಿ ಮತ್ತೆ ಸಿನಿಮಾ ಚಿತ್ರೀಕರಣ ಆರಂಭಿಸಲಿದೆ. ಆಗಸ್ಟ್ ವೇಳೆಗೆ ಸಿನಿಮಾ ಶೂಟಿಂಗ್ ಮುಗಿಸಿ ದಸರಾ ಸಂಭ್ರಮದಲ್ಲಿ ಅಕ್ಟೋಬರ್ 19ಕ್ಕೆ ಸಿನಿಮಾ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಮನೋಜ್ ಪರಮಹಂಸ ಸಿನಿಮಾಟೋಗ್ರಫಿ, ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರಕ್ಕಿದೆ. 200 ಕೋಟಿ ಬಜೆಟ್‌ನಲ್ಲಿ ಸಿನಿಮಾ ಸಿದ್ಧವಾಗ್ತಿದೆ.


Click it and Unblock the Notifications











