Vijay vs Jason: ಮಗ ಜೇಸನ್ ಎದುರು ಅಖಾಡಕ್ಕೆ ತಮಿಳುನಾಡು ಸಿಎಂ ವಿಜಯ್?

ತಮಿಳುನಾಡು ಮುಖ್ಯಮಂತ್ರಿಯಾಗಿ ನಟ ವಿಜಯ್ ಸಂಚಲನ ಸೃಷ್ಟಿಸಿದ್ದಾರೆ. ಅವರ ಕಾರ್ಯವೈಖರಿ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೆಲ್ಲದರ ನಡುವೆ ವಿಜಯ್ ವೈಯಕ್ತಿಕ ಜೀವನದ ವಿಚಾರ ಪದೇ ಪದೆ ಸುದ್ದಿ ಆಗ್ತಿದೆ. ಪತ್ನಿ ಸಂಗೀತಾ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಮಗ, ಮಗಳು ತಾಯಿ ಬೆನ್ನಿಗೆ ನಿಂತಿದ್ದಾರೆ.

ವಿಜಯ್ ಮಗ ಜೇಸನ್ ಸಂಜಯ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಟನಾಗಿ ಅಲ್ಲ ನಿರ್ದೇಶಕನಾಗಿ ಅಖಾಡಕ್ಕೆ ಇಳಿದಿದ್ದಾರೆ. ಜೇಸನ್ ನಿರ್ದೇಶನದ ಚೊಚ್ಚಲ ಚಿತ್ರ 'ಸಿಗ್ಮಾ' ಬಿಡುಗಡೆಗೆ ಸಜ್ಜಾಗಿದೆ. ಅಧಿಕೃತವಾಗಿ ರಿಲೀಸ್ ಡೇಟ್ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾ ಬಿಡುಗಡೆ ಬಗ್ಗೆ ಚರ್ಚೆ ಶುರುವಾಗಿದೆ ಎರಡು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಎದುರುಬದಿರಾಗುವ ಚರ್ಚೆ ನಡೀತಿದೆ.

Thalapathy Vijay s last film Jana Nayagan to clash with son Jason s sigma

ಜುಲೈ 31ಕ್ಕೆ 'ಸಿಗ್ಮಾ' ಸಿನಿಮಾ ತೆರೆಗೆ ತರುವುದಾಗಿ ಘೋಷಿಸಿದ್ದಾರೆ. ಇದೀಗ ವಿಜಯ್ ನಟನೆಯ 'ಜನನಾಯಗನ್' ಸಿನಿಮಾ ಕೂಡ ಅದೇ ವಾರ ಬಿಡುಗಡೆ ಆಗಬಹುದು ಎನ್ನಲಾಗ್ತಿದೆ. ಸೆನ್ಸಾರ್ ಸಮಸ್ಯೆಯಿಂದ ಸಿನಿಮಾ ಬಿಡುಗಡೆ ತಡವಾಗುತ್ತಲೇ ಇದೆ. ಸಂಕ್ರಾಂತಿಗೆ ಬರಬೇಕಿದ್ದ ಸಿನಿಮಾ ಇನ್ನು ಬಂದಿಲ್ಲ. ಈಗಾಗಲೇ ಆನ್ಲೈನ್‌ನಲ್ಲಿ ಕಂಪ್ಲೀಟ್ ಸಿನಿಮಾ ಲೀಕ್ ಆಗಿದೆ. ಕೋಟ್ಯಂತರ ಜನ ಪೈರಸಿ ಕಾಪಿ ನೋಡಿಬಿಟ್ಟಿದ್ದಾರೆ. ಆದರೂ ಸಿನಿಮಾ ತೆರೆಗೆ ಮಾತ್ರ ಬಂದಿಲ್ಲ.

ಸೆನ್ಸಾರ್ ಕಾಪಿ ಸಿಕ್ತಾ?

'ಜನನಾಯಗನ್' ಸಿನಿಮಾ ಸೆನ್ಸಾರ್ ಆಗಿದೆ. ಒಂದಷ್ಟು ದೃಶ್ಯಗಳಿಗೆ ಕತ್ತರಿ ಹಾಕಿ, ಮತ್ತೆ ಕೆಲವು ದೃಶ್ಯಗಳ ಆಡಿಯೋ ಮ್ಯೂಟ್ ಮಾಡಿ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಂದು ಹೇಳಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಬೇರೊಂದು ಸಿನಿಮಾ ಸೆನ್ಸಾರ್ ಕಾಪಿಯನ್ನು ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಇನ್ನು ಸೆನ್ಸಾರ್ ಆಗಿರುವ 'ಜನನಾಯಗನ್' ಸಿನಿಮಾ ಜುಲೈ 24 ಅಥವಾ ಜುಲೈ 31ಕ್ಕೆ ತೆರೆಗೆ ಬರಬಹುದು ಎನ್ನುವ ಊಹಾಪೋಹ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದೆ. ಇದೆಲ್ಲದರ ನಡುವೆ 'ಸಿಗ್ಮಾ' ವರ್ಸಸ್ 'ಜನನಾಯಗನ್' ಫೈಟ್ ಎನ್ನಲಾಗ್ತಿದೆ.

Thalapathy Vijay s last film Jana Nayagan to clash with son Jason s sigma

'ಸಿಗ್ಮಾ' ಸಿನಿಮಾ

ಸ್ಟಾರ್ ನಟರ ಮಕ್ಕಳು ಸಾಮಾನ್ಯವಾಗಿ ಬಣ್ಣ ಹಚ್ಚಿ ಕ್ಯಾಮರಾ ಮುಂದೆ ಬರ್ತಾರೆ. ಕೆಲವರು ಮಾತ್ರ ಕ್ಯಾಮರಾ ಹಿಂದೆ ನಿಲ್ಲುವ ಪ್ರಯತ್ನ ಮಾಡ್ತಾರೆ. ವಿಜಯ್ ಮಗ ಕೂಡ ಹೀರೊ ಆಗುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಅಚ್ಚರಿ ಎನ್ನುವಂತೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಸಂದೀಪ್ ಕಿಶನ್ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್ ಸದ್ದು ಮಾಡ್ತಿದೆ.

ಬಾಕ್ಸಾಫೀಸ್ ಕ್ಲ್ಯಾಶ್

ಪತ್ನಿಯಿಂದ ದೂರಾಗಲೂ ವಿಜಯ್ ಬಯಸಿದ್ದರೂ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಇವತ್ತಿಗೂ ಮಕ್ಕಳ ಮೇಲೆ ಪ್ರೀತಿಯಿದೆ. ಒಂದು ವೇಳೆ 'ಜನನಾಯಗನ್' ಸೆನ್ಸಾರ್ ಮುಗಿಸಿದ್ರು ಜುಲೈ 31ಕ್ಕೆ ಬಿಡುಗಡೆ ಮಾಡಲ್ಲ. ಮಗನ ಚಿತ್ರಕ್ಕೆ ಎದುರಾಗಿ ತಮ್ಮ ಸಿನಿಮಾ ತೆರೆಗೆ ತರಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ.

'ಜನನಾಯಗನ್' ಪ್ರಾಬ್ಲಂ

ಜನವರಿ 12ಕ್ಕೆ 'ಜನನಾಯಗನ್' ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಕರ್ನಾಟಕದಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿರಲಿಲ್ಲ. ಇದನ್ನು ಪ್ರಶ್ನಿಸಿ ಚಿತ್ರ ನಿರ್ಮಿಸಿರುವ ಕೆವಿಎನ್ ಸಂಸ್ಥೆ ಕೋರ್ಟ್ ಮೆಟ್ಟಿಲೇರಿತ್ತು. ಬಳಿಕ ಸಿನಿಮಾ ಬಿಡುಗಡೆಗೆ ಅವಕಾಶ ಸಿಕ್ಕರೂ ಮತ್ತೆ ಕೋರ್ಟ್ ಸಮಸ್ಯೆ ಎದುರಾಗಿತ್ತು. ಬಳಿಕ ತಮಿಳುನಾಡು ವಿಧಾನಸಭೆ ಚುನಾವಣೆ ಪ್ರಕ್ರಿಯೆ ಆರಂಭವಾಗಿ ಸಿನಿಮಾ ಬಿಡುಗಡೆ ತಡವಾಗುತ್ತಲೇ ಬಂತು.

Read more about: vijay kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X