Vijay's Leo: ವಿಜಯ್ ಅಭಿನಯದ ಲಿಯೋ ಆಡಿಯೋ ಬಿಡುಗಡೆ ರದ್ದು, ಕಾರಣವಿದು

ಲೋಕೇಶ್ ಕನಕರಾಜ್ ನಿರ್ದೇಶನದ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಲಿಯೋ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಈ ಬಗ್ಗೆ ಚಿತ್ರದ ನಿರ್ಮಾಪಕರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಆಡಿಯೋ ಬಿಡುಗಡೆ ಕಾರ್ಯಕ್ರಮ್ ಪಾಸ್‌ಗಳಿಗಾಗಿ ಹೆಚ್ಚಿದ ಬೇಡಿಕೆ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ರದ್ದುಗೊಳಿಸಲಾಗಿದೆ ಎಂದು ಚಿತ್ರದ ನಿರ್ಮಾಪಕರು ಘೋಷಿಸಿದ್ದಾರೆ. ಇತ್ತೀಚೆಗೆ ಸಂಗೀತ ನಿರ್ದೇಶಕ ಎಆರ್ ರಹಮಾನ್ ಕಾರ್ಯಕ್ರಮದಲ್ಲಿ ಉಂಟಾದ ಗದ್ದಲದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

thalapathy-vijays-leo-audio-launch-cancelled

ಚೆನ್ನೈನಲ್ಲಿ ಸಂಗೀತ ನಿರ್ದೇಶಕ ಎಆರ್ ರಹಮಾನ್ ಅವರ ಸಂಗೀತ ಕಛೇರಿಯಲ್ಲಿ ಉಂಟಾದ ನೂಕುನುಗ್ಗಲು, ಸುರಕ್ಷತೆ ಇಲ್ಲದಿರುವುದು, ಹಲವು ಸಮಸ್ಯೆಗಳಿಗೆ ಕಾರಣವಾಗಿತು. ಜೊತೆಗೆ ಆಸನಗಳ ವ್ಯವಸ್ಥೆ ಇಲ್ಲದೆ ಜನರಿಗೆ ಟಿಕೆಟ್ ಮಾರಾಟ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿತ್ತು. ಜನರು ಸಮಸ್ಯೆಗಳಿಂದ ಕಷ್ಟಕ್ಕೆ ಓಲಗಾಗಿರುವ ಫೋಟೋ ಮತ್ತು ವಿಡಿಐಒಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಬಳಿಕ ಕಾರ್ಯಕ್ರಮ ಸಂಘಟಕರು, ಎಆರ್ ರಹಮಾನ್ ಕೂಡ ಜನರಲ್ಲಿ ಕ್ಷಮೆ ಕೇಳಿದ್ದರು.

ಲಿಯೋ ಆಡಿಯೋ ಲಾಂಚ್ ರದ್ದು!

ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಸೆವೆನ್ ಸ್ಟುಡಿಯೋ ಕಾರ್ಯಕ್ರಮ ರದ್ದಾದ ಬಗ್ಗೆ ಮಾಹಿತಿ ನೀಡಿದೆ. "ಪಾಸ್‌ಗಳಿಗಾಗಿ ಉಕ್ಕಿ ಹರಿದು ಬರುತ್ತಿರುವ ಬೇಡಿಕೆಗಳು ಮತ್ತು ಸುರಕ್ಷತೆಯ ನಿರ್ಬಂಧಗಳನ್ನು ಪರಿಗಣಿಸಿ, ನಾವು ಲಿಯೋ ಆಡಿಯೋ ಲಾಂಚ್ ಅನ್ನು ನಡೆಸದಿರಲು ನಿರ್ಧರಿಸಿದ್ದೇವೆ. ಅಭಿಮಾನಿಗಳ ಇಚ್ಛೆಗೆ ಸಂಬಂಧಿಸಿದಂತೆ, ನಾವು ನಿಮಗೆ ಆಗಾಗ್ಗೆ ಈ ಬಗ್ಗೆ ಅಪ್‌ಡೇಟ್ ನೀಡುತ್ತೇವೆ. ಆದರೆ, ಅನೇಕರು ಊಹಿಸುವಂತೆ, ಇದು ರಾಜಕೀಯ ಒತ್ತಡ ಅಥವಾ ಇತರ ಕಾರಣಗಳಿಂದಲ್ಲ" ಎಂದು ಹೇಳಿದೆ.

ಇದು ರಾಜಕೀಯ ಒತ್ತಡವೇ ಎಂದು ಅಭಿಮಾನಿಗಳು!

ತಮ್ಮ ಪೋಸ್ಟ್‌ನಲ್ಲಿ, ನಿರ್ಮಾಪಕರು ಕಾರ್ಯಕ್ರಮ ರದ್ದು ಮಾಡಲು ಯಾವುದೇ ರಾಜಕೀಯ ಒತ್ತಡ ಕಾರಣವಲ್ಲ ಎಂದು ಹೇಳಿದ್ದಾರೆ. ಆದರೆ, ನಾಯಕ ನಟ ವಿಜಯ್ ಅಭಿಮಾನಿಗಳು ಬೇರೆ ರೀತಿಯಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಅವರಲ್ಲಿ ಒಬ್ಬರು " ಇದು ರಾಜಕೀಯ ಒತ್ತಡ (ಹೃದಯ ಒಡೆದ ಎಮೋಜಿ)" ಎಂದು ಬರೆದಿದ್ದಾರೆ.

thalapathy-vijays-leo-audio-launch-cancelled

ಕೆಲವು ಅಭಿಮಾನಿಗಳು ನಟ ವಿಜಯ್ ಈ ಬಗ್ಗೆ ಮಾತಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. "ಕನಿಷ್ಟ, ಸನ್‌ಟಿವಿ / ಯೂಟ್ಯೂಬ್‌ನಲ್ಲಿ ದಳಪತಿಯ ಸಂದರ್ಶನ ಮಾಡಬೇಕು. ನಮ್ಮವರ ಮಾತುಗಳನ್ನು ನಾವು ಕೇಳಬೇಕು" ಎಂದು ಹಲವರು ನಿರ್ಮಾಪಕರನ್ಉ ಟ್ಯಾಗ್ ಮಾಡಿ ಕೇಳಿದ್ದಾರೆ.

ಲಿಯೋ

ಲಿಯೋ ಸಿನಿಮಾದಲ್ಲಿ ನಟ ವಿಜಯ್ ಜೊತೆಗೆ ಸಂಜಯ್ ದತ್, ತ್ರಿಶಾ, ಮತ್ತು ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಲಿಯೋ ಅಕ್ಟೋಬರ್ 19 ರಂದು ಬಿಡುಗಡೆಗೆ ಸಿದ್ಧವಾಗಿದೆ. ಸಂಜಯ್ ದತ್ ಅವರಿಗೆ ಇದು ಚೊಚ್ಚಲ ತಮಿಳು ಸಿನಿಮಾ. ಲಿಯೋ ಚಿತ್ರದಲ್ಲಿ ತ್ರಿಷಾ ಹಲವು ವರ್ಷಗಳ ನಂತರ ವಿಜಯ್ ಎದುರು ಜೋಡಿಯಾಗಿದ್ದಾರೆ. ಚಿತ್ರದಲ್ಲಿ ಕೀರ್ತಿ ಸುರೇಶ್, ಮಿಶಾ ಘೋಷಾಲ್, ಮನ್ಸೂರ್ ಅಲಿ ಖಾನ್ ಮತ್ತು ಪ್ರಿಯಾ ಆನಂದ್ ಸಹ ನಟಿಸಿದ್ದಾರೆ. ಲಿಯೋಗೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ಮನೋಜ್ ಪರಮಹಂಸ ಛಾಯಾಗ್ರಹಣ, ಫಿಲೋಮಿನ್ ರಾಜ್ ಸಂಕಲನ ಚಿತ್ರಕ್ಕಿದೆ.

More from Filmibeat

English summary
Thalapathy Vijay's 'Leo' audio launch cancelled.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X