Leo Box Office Collection: 200 ಕೋಟಿ ಕ್ಲಬ್‌ನತ್ತ ದಳಪತಿ ವಿಜಯ್ ಅಭಿನಯದ ಲಿಯೋ?

ದಳಪತಿ ವಿಜಯ್ ಅಭಿನಯದ, ಲೋಕೇಶ್ ಕನಕರಾಜ್ ನಿರ್ದೇಶನದ ತಮಿಳು ಭಾಷೆಯ ಆಕ್ಷನ್ ಥ್ರಿಲ್ಲರ್ 'ಲಿಯೋ' ಅಕ್ಟೋಬರ್ 19 ರಂದು ಚಿತ್ರಮಂದಿರಗಳಿಗೆ ಲಗ್ಗೆಯಿಟ್ಟಿದೆ. 'ಲಿಯೋ' ಸಿನಿಮಾ ವಿಶ್ವದಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ಸಿನಿಮಾ 148 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

ಎಸ್. ಎಸ್. ಲಲಿತ್ ಕುಮಾರ್ ಮತ್ತು ಜಗದೀಶ್ ಪಳನಿಸಾಮಿ ನಿರ್ಮಾನದ ಚಿತ್ರದ ತೆಲುಗು ಮತ್ತು ಹಿಂದಿ ಡಬ್ಬಿಂಗ್ ಆವೃತ್ತಿಗಳನ್ನು ಸಹ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ಏರಿಕೆಯಾಗುವ ಸಾಧ್ಯತೆಯಿದೆ. ಸಿನಿಮಾದಲ್ಲಿ ಸಂಜಯ್ ದತ್, ತ್ರಿಶಾ, ಅರ್ಜುನ್, ಗೌತಮ್ ವಾಸುದೇವ್ ಮೆನನ್, ಮಿಸ್ಕಿನ್, ಮನ್ಸೂರ್ ಅಲಿ ಖಾನ್ ಮತ್ತು ಪ್ರಿಯಾ ಆನಂದ್ ಅವರಂತಹ ಹೆಸರಾಂತ ಪ್ರತಿಭೆಗಳಿವೆ.

Thalapathy Vijays Leo Box Office Collection Day 4 Prediction

4 ನೇ ದಿನದ ಲಿಯೋ ಬಾಕ್ಸ್ ಆಫೀಸ್ ಕಲೆಕ್ಷನ್ ಭವಿಷ್ಯ

ಭಾರತದಲ್ಲಿ 'ಲಿಯೋ' ತನ್ನ ಮೊದಲ ಮೂರು ದಿನಗಳಲ್ಲಿ ಸುಮಾರು 140.05 ಕೋಟಿ ರೂಪಾಯಿಗಳಷ್ಟು ಗಳಿಸಿ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದೆ. ಲಿಯೋ ತನ್ನ ನಾಲ್ಕನೇ ದಿನದಲ್ಲಿ ಎಲ್ಲಾ ಭಾಷೆಗಳಿಗೆ ಸುಮಾರು 50.00 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.

ಲಿಯೋ ಬಾಕ್ಸ್ ಆಫೀಸ್ ಕಲೆಕ್ಷನ್

* ದಿನ 1 ( ಮೊದಲನೇ ಗುರುವಾರ) ₹ 64.8 ಕೋಟಿ

* ದಿನ 2 (ಮೊದಲನೇ ಶುಕ್ರವಾರ) ₹ 35.25 ಕೋಟಿ

* ದಿನ 3 (ಮೊದಲನೇ ಶನಿವಾರ) ₹ 40.00 ಕೋಟಿ * ಆರಂಭಿಕ ಅಂದಾಜುಗಳು

* 4ನೇ ದಿನ (ಮೊದಲನೇ ಭಾನುವಾರ) ₹ 50.00 ಕೋಟಿ ಗಳಿಸಬಹುದು

* ಒಟ್ಟು ₹ 190.05 ಕೋಟಿ

ಆದರೆ, "ಲಿಯೋ" ತನ್ನ ಮೊದಲ ಮತ್ತು ಎರಡನೆಯ ಭಾಗಗಳಿಗೆ ಪ್ರೇಕ್ಷಕರಿಂದ ಸಂಪೂರ್ಣವಾಗಿ ವ್ಯತಿರಿಕ್ತ ಪ್ರತಿಕ್ರಿಯೆ ಪಡೆಯುತ್ತಿದೆ. ಚಲನಚಿತ್ರದ ಮೊದಲಾರ್ಧ ಭಾಗವು ಸಕತ್ ಒಳ್ಳೆ ವಿಮರ್ಶೆಗಳನ್ನು ಪಡೆಯುತ್ತಿದೆ. ಆದರೆ, ಎರಡನೇ ಭಾಗಕ್ಕೆ ಮಾತ್ರ ನಿರಾಸೆ ವ್ಯಕ್ತವಾಗುತ್ತಿದೆ. ಹೀಗಾಗಿ ಮಿಶ್ರ ಪ್ರತಿಕ್ರಿಯೆ ಬರುತ್ತಿದ್ದು, ಸಿನಿಮಾ ಕಲೆಕ್ಷನ್ ಮೇಲೆ ಪ್ರಭಾವ ಬೀರುತ್ತಿದೆ.

Thalapathy Vijays Leo Box Office Collection Day 4 Prediction

ಸಾಮಾಜಿಕ ಮಾಧ್ಯಮಗಳಲ್ಲಿ ನೆಟಿಜನ್‌ಗಳು ಈಗ ಚಿತ್ರದ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ದ್ವಿತೀಯಾರ್ಧದ ಬಗ್ಗೆ ನಿರಾಸೆ ವ್ಯಕ್ತವಾಗಿದೆ. ಚಿತ್ರದ ಮಿಶ್ರ ವಿಮರ್ಶೆಗಳು ವ್ಯಾಪಕವಾದ ಚರ್ಚೆಗಳು ಮತ್ತು ಚರ್ಚೆಗಳನ್ನು ಹುಟ್ಟುಹಾಕಿವೆ. ದಳಪತಿ ವಿಜಯ್ ಅಭಿಮಾನಿಗಳು ಸಿನಿಮಾವನ್ನು ಇಷ್ಟಪಡುತ್ತಿದ್ದಾರೆ.

ಲಿಯೋ ಪಾತ್ರವರ್ಗ ಮತ್ತು ಸಿಬ್ಬಂದಿ

ಸೆವೆನ್ ಸ್ಕ್ರೀನ್ ಸ್ಟುಡಿಯೋ ಮತ್ತು ದಿ ರೂಟ್ ಬ್ಯಾನರ್‌ಗಳ ಅಡಿಯಲ್ಲಿ ಎಸ್.ಎಸ್. ಲಲಿತ್ ಕುಮಾರ್ ಮತ್ತು ಜಗದೀಶ್ ಪಳನಿಸಾಮಿ ನಿರ್ಮಿಸಿರುವ ಲಿಯೋ ಸಿನಿಮಾಗೆ ಲೋಕೇಶ್ ಕನಕರಾಜ್ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದಲ್ಲಿ ದಳಪತಿ ವಿಜಯ್ ನಾಯಕನಾಗಿ ಸಂಜಯ್ ದತ್, ತ್ರಿಶಾ ಕೃಷ್ಣನ್, ಮಡೋನಾ ಸೆಬಾಸ್ಟಿಯನ್, ಅರ್ಜುನ್ ಸರ್ಜಾ, ಗೌತಮ್ ಮೆನನ್, ಮ್ಯಾಥ್ಯೂ ಥಾಮಸ್, ಮಿಸ್ಕಿನ್ ಮತ್ತು ಪ್ರಿಯಾ ಆನಂದ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಲಿಯೋಗೆ ಲೋಕೇಶ್ ಕನಕರಾಜ್ ಜೊತೆಗೆ ರತ್ನ ಕುಮಾರ್ ಮತ್ತು ದೀರಜ್ ವೈದಿ ಸೇರಿ ಚಿತ್ರಕಥೆ ಬರೆದಿದ್ದಾರೆ.

More from Filmibeat

English summary
Leo Box Office Collection Day 4 Prediction.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X