Thangalaan box office collection day 3; ಬಾಕ್ಸಾಫೀಸ್‌ನಲ್ಲಿ 3 ದಿನಕ್ಕೆ 'ತಂಗಲಾನ್' ಕಥೆ ಏನಾಯ್ತು?

ಚಿಯಾನ್ ವಿಕ್ರಂ ನಟನೆಯ 'ತಂಗಲಾನ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ನಿಧಾನವಾಗಿ ಸದ್ದು ಮಾಡ್ತಿದೆ. ಆಗಸ್ಟ್ 15ರಂದು ತೆರೆಕಂಡ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ವೀಕೆಂಡ್‌ನಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಪಾ. ರಂಜಿತ್ ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕೋಲಾರದ ಚಿನ್ನದ ಗಣಿಯ ಸುತ್ತಾ 'ತಂಗಲಾನ್' ಸಿನಿಮಾ ಕಥೆ ಸುತ್ತುತ್ತದೆ. ಬ್ರಿಟೀಷರ ಕಾಲದಲ್ಲಿ ಗಣಿಯಲ್ಲಿ ಚಿನ್ನ ತೆಗೆಯಲು ನಡೆಸಿದ ಪ್ರಯತ್ನಗಳ ಬಗ್ಗೆ ಚಿತ್ರದಲ್ಲಿ ಚರ್ಚಿಸಲಾಗಿದೆ. ಚಿತ್ರದಲ್ಲಿ 'ತಂಗಲಾನ್' ಎನ್ನುವ ಬುಡಕಟ್ಟಿನ ನಾಯಕನಾಗಿ ಚಿಯಾನ್ ವಿಕ್ರಂ ಅಬ್ಬರಿಸಿದ್ದಾರೆ. ವಿಭಿನ್ನ ಗೆಟಪ್‌ಗಳಲ್ಲಿ ಹುಬ್ಬೇರಿಸಿದ್ದಾರೆ. 3 ಪಾತ್ರಗಳಲ್ಲಿ ಕೂಡ ಬಂದು ಹೋಗುತ್ತಾರೆ.

Thangalaan box office collection day 3 Vikram film likely to enter 75 crore club in WW by Sunday

ಬ್ರಿಟೀಷರು ಕೋಲಾರದಲ್ಲಿ ಚಿನ್ನ ತೆಗೆಯಲು ಮುಂದಾದಾಗ ಅಲ್ಲಿನ ವಾತಾವರಣ ಹೇಗಿತ್ತು? 'ತಂಗಲಾನ್' ಎನ್ನುವ ಬುಡಕಟ್ಟು ಜನರನ್ನು ಬಳಸಿಕೊಂಡು ಬ್ರಿಟೀಷ್ ಅಧಿಕಾರಿ ಕ್ಲೆಮೆಂಟ್ ಚಿನ್ನಕ್ಕಾಗಿ ಆಸೆ ಪಟ್ಟಿದ್ದು, ಚಿನ್ನದ ನಿಕ್ಷೇಪ ಕಾಯುತ್ತಿದ್ದ ಬುಡಕಟ್ಟು ನಾಯಕಿ ಆರತಿಯ ಪ್ರತಿರೋಧ ಎಲ್ಲವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಕೆಜಿಎಫ್ ಚಿನ್ನದ ಗಣಿಯಲ್ಲಿ ಆರಂಭದಲ್ಲಿ ಚಿನ್ನ ತೆಗೆಯಲು ಏನೆಲ್ಲಾ ಸಾಹಸಪಟ್ಟಿರಬಹುದು ಎನ್ನುವುದನ್ನು ಊಹಿಸಿಕೊಂಡು ಪಾ. ರಂಜಿತ್ ಕಥೆ ಹೆಣೆದಿದ್ದಾರೆ.

ದಲಿತ, ವರ್ಣಭೇದ, ಮೇಲು ಕೀಳು, ಅಸ್ಪೃಶ್ಯತೆ ಹೀಗೆ ಹಲವು ವಿಚಾರಗಳ ಮೇಲೆ ಚಿತ್ರದಲ್ಲಿ ಬೆಳಕು ಚೆಲ್ಲಲಾಗಿದೆ. ಒಂದು ಕಮರ್ಷಿಯಲ್ ಸಿನಿಮಾ ಆಗಿ ಕೆಲವರಿಗೆ 'ತಂಗಲಾನ್' ಸಂಪೂರ್ಣವಾಗಿ ಇಷ್ಟವಾಗದಿದ್ದರೂ ವಿಭಿನ್ನ ಸಿನಿಮಾಗಳನ್ನು ಬಯಸುವವರಿಗೆ ಹೇಳಿಮಾಡಿಸಿದಂತಿದೆ. ವಿಕ್ರಂ ಜೊತೆಗೆ ಪಾರ್ವತಿ ಮೆನನ್ ಹಾಗೂ ಮಾಳವಿಕಾ ಮೋಹನನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Thangalaan box office collection day 3 Vikram film likely to enter 75 crore club in WW by Sunday

ಆರತಿ ಪಾತ್ರದಲ್ಲಿ ಮಾಳವಿಕಾ ಪರ್ಫಾರ್ಮೆನ್ಸ್ ಹುಬ್ಬೇರಿಸುವಂತಿದೆ. ಇನ್ನು ನಿರ್ದೇಶಕ ಪಾ. ರಂಜಿತ್ ಪ್ರಯತ್ನಕ್ಕೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು ಕಲೆಕ್ಷನ್ ವಿಚಾರಕ್ಕೆ ಬಂದರೆ ಮೊದಲ ದಿನವೇ ವಿಶ್ವದಾದ್ಯಂತ 26.44 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಘೋಷಿಸಿತ್ತು. 2ನೇ ದಿನ ಹಾಗೂ 3ನೇ ದಿನವೂ ಸಿನಿಮಾ ಕಲೆಕ್ಷನ್ ಚೆನ್ನಾಗಿತ್ತು. ಭಾನುವಾರ ಸಿನಿಮಾ ದೊಡ್ಡಮಟ್ಟದಲ್ಲಿ ಗಳಿಕೆ ಕಾಣುವ ನಿರೀಕ್ಷೆಯಿದೆ.

ಭಾರತದಲ್ಲಿ ಸಿನಿಮಾ ಮೊದಲ 3 ದಿನಕ್ಕೆ 28 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗುತ್ತಿದೆ. ಇನ್ನು ವಿಶ್ವದಾದ್ಯಂತ 3 ದಿನಕ್ಕೆ ಸಿನಿಮಾ 53.45 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಘೋಷಿಸಿದೆ. ಇಂಡಿಪೆಂಡೆನ್ಸ್ ಡೇ ಲಾಂಗ್ ವೀಕೆಂಡ್ ಚಿತ್ರದ ಕಲೆಕ್ಷನ್‌ಗೆ ಸಹಕಾರಿಯಾಗಿದೆ. ನಾಳೆ(ಆಗಸ್ಟ್ 19) 'ತಂಗಲಾನ್' ಬಾಕ್ಸಾಫೀಸ್ ಭವಿಷ್ಯ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

ಪಾ. ರಂಜಿತ್ ಬಹಳ ಹಿಂದೆಯೇ 'ಕೆಜಿಎಫ್' ಗಣಿ ಸುತ್ತಾ ಸಿನಿಮಾ ಮಾಡುವ ಪ್ರಯತ್ನಿಸಿದ್ದರು. ಆದರೆ ಕನ್ನಡದಲ್ಲಿ ಯಶ್ ನಟನೆಯ 'ಕೆಜಿಎಫ್' ಸರಣಿ ಸಿನಿಮಾ ಘೋಷಣೆ ಆಗಿದ್ದು ನೋಡಿ ಸುಮ್ಮನಾಗಿದ್ದರಂತೆ. ಆದರೆ ಸಿನಿಮಾ ನೋಡಿದ ಮೇಲೆ ಅದು 70, 80ರ ದಶಕದ ಕಾಲ್ಪನಿಕ ಕಥೆ ಎನ್ನುವುದು ಗೊತ್ತಾಗಿತ್ತು. ಆ ಬಳಿಕ 18ನೇ ಶತಮಾನದ ಕೆಜಿಎಫ್ ಕಥೆ ಹೇಳಲು ಮತ್ತೆ ಮನಸ್ಸು ಮಾಡಿದರು.

ತಮಿಳುನಾಡು ಮಾತ್ರವಲ್ಲದೇ ಆಂಧ್ರ, ತೆಲಂಗಾಣದಲ್ಲಿ 'ತಂಗಲಾನ್' ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಈ ವೀಕೆಂಡ್ ತೆರೆಗೆ ಬಂದ ತೆಲುಗಿನ 'ಮಿ. ಬಚ್ಚನ್' ಹಾಗೂ 'ಡಬಲ್ ಇಸ್ಮಾರ್ಟ್ ಶಂಕರ್' ನಿರಾಸೆ ಮೂಡಿಸಿವೆ. ಅದು 'ತಂಗಲಾನ್'ಗೆ ಪ್ಲಸ್ ಆಗಿದೆ. ತೆಲುಗಿಗೂ ಸಿನಿಮಾ ಡಬ್ ಆಗಿ ಸದ್ದು ಮಾಡ್ತಿದೆ. ಸಿನಿಮಾ ಪ್ರಚಾರದ ವೇಳೆ 'ತಂಗಲಾನ್' ಸೀಕ್ವೆಲ್ ಮಾಡುವುದಾಗಿ ನಟ ವಿಕ್ರಂ ಹೇಳಿದ್ದಾರೆ.

More from Filmibeat

English summary
Chiyaan Vikram starrer Thangalaan movie 3 days box office collection report
Read more about: vikram tamil kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X