IPL 2026 ; ಅಜಿತ್ ಮಗಳ ಪಕ್ಕದಲ್ಲಿರುವ ಈ ಸುರಸುಂದರ ಯಾರು ? ಅಳಿಯನಾ ? ಬರೀ ಮಗಳ ಸ್ನೇಹಿತನಾ ?
ಚಿತ್ರರಂಗದಲ್ಲಿ ಅಪ್ಪ- ಅಮ್ಮ ಯಾರಾದರೂ ಇದ್ದರೆ ಮುಗಿಯಿತು. ಅವರ ಮಕ್ಕಳು.. ಸಂಬಂಧಿಕರೆಲ್ಲ .. ಅನಾಯಾಸವಾಗಿ ಚಿತ್ರರಂಗಕ್ಕೆ ಬಂದು ಬಿಡ್ತಾರೆ. ಅನೇಕರ ವಿಚಾರದಲ್ಲಿ ಈ ಮಾತು ರುಜುವಾತಾಗಿದೆ ಕೂಡ. ನಿಜಾ.. ಅವರು ಅದೇ ಕ್ಷೇತ್ರದಲ್ಲಿ ಮುಂದುವರೆಯುವುದು.. ಉಳಿಯುವುದು.. ಬೆಳೆಯುವುದು.. ಅವರ ಅವರ ಟ್ಯಾಲೆಂಟ್ ಮೇಲೆ ನಿರ್ಧಾರವಾಗುತ್ತೆ ಆದರೂ.. ಇವರ ಹಾದಿ ಸರಾಗವಾಗಲು ಅವರ ಹೆತ್ತವರು ಕಾರಣವೆನ್ನುವುದನ್ನು ಅಲ್ಲಗೆಳೆಯಲು ಸಾಧ್ಯ ಇಲ್ಲ.
ಪಕ್ಕದ ಮನೆಯ ತಲಾ ಅಜಿತ್ ಅವರ ಮಗಳು ಅನೌಷ್ಕಾ ತಂದೆಯ ಜಾಡು ಹಿಡಿದು ಚಿತ್ರರಂಗಕ್ಕೆ ಬರ್‍ತಾರಾ ಅಥವಾ ಬೇರೆಯದ್ದೇ ಹಾದಿ ತುಳಿಯುತ್ತಾರಾ.? ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಅನೌಷ್ಕಾ ಅವರ ವೈಯಕ್ತಿಕ ಬದುಕಿನ ಕುರಿತು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಸದ್ಯ ಐಪಿಎಲ್ ಜ್ವರ ಭಾರತದೆಲ್ಲೆಡೆ ಹಬ್ಬಿದೆ. ದಿನಾ ಬೆಳಗಾದರೆ ಸಾಕು ಹಲವರು ಬೆಂಬಲದ ಧ್ವಜ ಹಿಡಿದುಕೊಂಡು ರಸ್ತೆಗಿಳಿಯುತ್ತಿದ್ದಾರೆ. ಮೊನ್ನೆ (ಏಪ್ರಿಲ್ 3) ಇಂತಹದ್ದೇ ಒಂದು ಅಭಿಮಾನದ ಅಲೆ ಚೆನ್ನೈ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆದ ಪಂದ್ಯದಲ್ಲಿ ಕಂಡು ಬಂದಿತ್ತು.
ಆದರೆ.. ಅವತ್ತು ಕ್ಯಾಮರಾಗಳ ಕಣ್ಣು ಪಂದ್ಯದ ಮೇಲಿರಲಿಲ್ಲ. ಸ್ಟಾರ್ ಪ್ಲೇಯರ್ ಗಳ ಮೇಲಿರಲಿಲ್ಲ. ಬದಲಿಗೆ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರೀಡಾಂಗಣಕ್ಕೆ ಬಂದಿದ್ದ ಅಜಿತ್ ಅವರ ಮುದ್ದಿನ ಮಗಳು ಅನೌಷ್ಕಾ ಅವರ ಮೇಲಿತ್ತು.
ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ಅನೌಷ್ಕಾ ಅವರ ಕೆಲ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಚರ್ಚೆಗೆ ಗ್ರಾಸವಾಗಿವೆ. ಯಾಕೆಂದರೆ ಅವತ್ತು ಅನೌಷ್ಕಾ ಅವರ ಪಕ್ಕ ಒಬ್ಬ ಸುರಸುಂದರ ಕ್ಯಾಮರಾದಲ್ಲಿ ಸೆರೆಯಾಗಿದ್ದಾನೆ.
ವೈರಲ್ ಆದ ಈ ಫೋಟೊಗಳಲ್ಲಿ ಅನೌಷ್ಕಾ ಅವರ ಜೊತೆ ಅವರ ತಾಯಿ ಶಾಲಿನಿ ಇದ್ದಾರೆ. ರಜಿನಿಕಾಂತ್ ಅವರ ಮಾಜಿ ಅಳಿಯ ಧನುಷ್ ಇದ್ದಾರೆ. ಎದೆಯೆತ್ತರಕ್ಕೆ ಬೆಳೆದ ತಮ್ಮ ಮಗ ಲಿಂಗ ಜೊತೆ ಪಂದ್ಯವನ್ನು ನೋಡಿದ್ದಾರೆ. ಆದರೂ ಕೂಡ ಎಲ್ಲರ ಕಣ್ಣು ಅನೌಷ್ಕಾ ಅವರ ಪಕ್ಕ ಇರುವ ವ್ಯಕ್ತಿಯನ್ನು ಕಂಡು ಅರಳಿದೆ.

ಹೀಗಾಗಿಯೇ ತಲೆ ಕೆಡಿಸಿಕೊಂಡಿರುವ ಹಲವರು ಧನುಷ್ ಅವರ ಸಂಬಂಧಿ ಪಾವಿಶ್ ಇರಬಹುದು ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ. ಧನುಷ್ ಅವರ ಹೆಜ್ಜೆಯ ಜಾಡು ಹಿಡಿದು ಈ ಪಾವಿಶ್ ಕೂಡ ಚಿತ್ರರಂಗಕ್ಕೆ ಬಂದಿದ್ದು ಇವರ ''ನೀಳವುಕು ಎನ್ ಮೆಲ್ ಎನ್ನಡಿ ಕೋಬಂ'' ಚಿತ್ರ ಇನ್ನು ತೆರೆಗೆ ಬರಬೇಕಿದೆ.
ವಿಶೇಷ ಅಂದರೆ ಹಲವರ ಈ ಲೆಕ್ಕಾಚಾರ ಕೂಡ ತಲೆಕೆಳಗಾಗಿದೆ. ಫೋಟೊದಲ್ಲಿರುವ ಚೆಲುವ ಪಾನಿಶ್ ಅಲ್ಲ ಎನ್ನುವುದು ಕೂಡ ಗೊತ್ತಾಗಿದೆ.
ಇದಕ್ಕೆ ಪುರಾವೆ ಎನ್ನುವಂತೆ ಕುತೂಹಲ ತಡೆಯಲಾರದೆ ಹಲವರು, ಸದ್ಯ ಹುಡುಗನ ಕುಲ-ಗೋತ್ರ ಹುಡುಕಲು ಶುರು ಮಾಡಿದ್ದು, ಮತ್ತೂ ಕೆಲವರು ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್‌ನಲ್ಲಿರುವ ಎಐ (AI) ಟೂಲ್ ಗ್ರೋಕ್ ಬಳಿ ಈ ವ್ಯಕ್ತಿ ಯಾರು ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.
ಈ ಪ್ರಶ್ನೆಗೆ ಅನೌಷ್ಕಾ ಅವರ ಜೊತೆ ಇರುವ ಹುಡುಗ ಚಿತ್ರರಂಗದ ಹಿನ್ನೆಲೆಯವನು ಅಲ್ಲ, ಸಾರ್ವಜನಿಕವಾಗಿವಾಗಿ ಗುರುತಿಸಿಕೊಂಡ ವ್ಯಕ್ತಿಯೂ ಅಲ್ಲ ಎಂಬ ಉತ್ತರವನ್ನು ಗ್ರೋಕ್ ನೀಡಿದೆ.
ಇದರಿಂದ ಅಜಿತ್ ಅವರ ಅಭಿಮಾನಿಗಳ ಕುತೂಹಲ ಇನ್ನೂ ಹೆಚ್ಚಾಗಿದ್ದು ಸದ್ಯ ಅನೌಷ್ಕಾ ಅವರ ಜೊತೆ ಈ ಅನಾಮಿಕ ಯಾರು ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.
ಇನ್ನೂ ಅಜಿತ್ ಮೊದಲಿಂದ ವೈಯಕ್ತಿಕ ವಿಚಾರಗಳನ್ನು ಬಹಿರಂಗವಾಗಿ ಚರ್ಚೆ ಮಾಡಿದ್ದು ಕಡಿಮೆ. ಹಲವರ ಅನುಮಾನ ಹೆಚ್ಚಾಗಲು ಇದು ಕೂಡ ಒಂದು ಕಾರಣವಾಗಿದ್ದು ಈ ಅನಾಮಿಕ ಹುಡುಗ ಅನೌಷ್ಕಾ ಅವರ ಹೃದಯ ಗೆದ್ದ ಚೆಲುವ ಆಗಿರಬಹುದಾ ಎನ್ನುವ ಪ್ರಶ್ನೆಯನ್ನು ಕೂಡ ಹಲವರಲ್ಲಿ ಹುಟ್ಟು ಹಾಕಿದೆ. ಉತ್ತರ ತಲಾ ಅಜಿತ್, ಶಾಲಿನಿ ಮತ್ತು ಅನೌಷ್ಕಾ ಅವರಿಗೆ ಗೊತ್ತು.


Click it and Unblock the Notifications











