ಸಂಸಾರ VS ರಾಜಕೀಯ ; ವಿಜಯ್ ವಿರುದ್ಧ ಸಂಗೀತಾ ಬ್ರಹ್ಮಾಸ್ತ್ರ ? ಏಪ್ರಿಲ್ 21ರಂದು ಅಕ್ರಮ ಸಂಬಂಧದ ಸಾಕ್ಷಿ ಬಿಡುಗಡೆ ?
ಮದುವೆ ಎನ್ನುವುದು ಕೇವಲ ಹೊಸ ಬದುಕಿನ ಮುನ್ನುಡಿ ಮಾತ್ರ ಅಲ್ಲ. ಬದುಕಿನ ಅಗ್ನಿ ಪರೀಕ್ಷೆ ಕೂಡ ಹೌದು. ಆದರೆ ಈ ಪರೀಕ್ಷೆಯಲ್ಲಿ ಚಿತ್ರರಂಗದ ಧ್ರುವತಾರೆಯರು ಈಗೀಗ ಹೆಚ್ಚಿನ ಪ್ರಮಾಣದಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ.
ಆರಂಭದ ದಿನಗಳಲ್ಲಿ ಕಾಣಿಸುವ ಪ್ರೇಮ ಪಲ್ಲವಿ ವರ್ಷಗಳ ನಂತರ ಲಯ ತಪ್ಪುತ್ತೆ. ಪ್ರೇಮದ ರಂಗು ಮಾಸುತ್ತೆ. ಮಧುರವಾದ ಮಾತು ಮೌನಕ್ಕೆ ಶರಣಾಗುತ್ತೆ. ಪ್ರಣಯದ ಜಾಗದಲ್ಲಿ ಅಹಂ ಮತ್ತು ಭಿನ್ನಾಭಿಪ್ರಾಯಗಳು ಮನೆ ಮಾಡುತ್ತೆ. ಹೂವಿನ ಹಾದಿಯಂತೆ ಇದ್ದ ಸಂಬಂಧ ಏಕಾಏಕಿ ಮುಳ್ಳಿನ ಹಾದಿಯಾಗಿ ಬದಲಾಗುತ್ತೆ. ಪ್ರೀತಿಯ ಅರಮನೆ ಕುಸಿದ ನಂತರ ಅಲ್ಲಿ ಕೇವಲ ಮಾಸದ ಗಾಯಗಳು ಮಾತ್ರ ಉಳಿಯುತ್ತವೆ. ಆರೋಪ- ಪ್ರತ್ಯಾರೋಪದ ಪರ್ವ ಶುರುವಾಗುತ್ತೆ. ಉದಾಹರಣೆಗೆ ಇಳಯ ದಳಪತಿ ವಿಜಯ್ ಮತ್ತು ಸಂಗೀತಾ ಅವರ ಮುರಿದು ಬಿದ್ದ ದಾಂಪತ್ಯ ಜೀವನವನ್ನೇ ತೆಗೆದುಕೊಳ್ಳಿ.

ಹೌದು, ಎಲ್ಲರಿಗೆ ಗೊತ್ತಿರುವಂತೆ ವಿಜಯ್ ಮತ್ತು ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಇವರಿಬ್ಬರ 27ವರ್ಷಗಳ ಸುಖ ಸಂಸಾರದಲ್ಲಿ ಹುಳಿ ಹಿಂಡಿದ ಆರೋಪ ತ್ರಿಶಾ ಅವರ ಮೇಲೀದೆ.
ಇನ್ನು ಇದು ಚುನಾವಣೆಯ ಸಮಯ. ರಾಜಕೀಯದ ರಣರಂಗಕ್ಕೆ ಬಂದ ವಿಜಯ್ ಪಾಲಿಗೆ ಈಗ ತಮ್ಮ ವೈಯಕ್ತಿಕ ಬದುಕಿನ ಈ ವಿವಾದ ತಲೆ ನೋವಾಗಿದೆ. ವಿರೋಧ ಪಕ್ಷದವರೆಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ತಮಿಳುನಾಡಿನ ರಾಜಕಾರಣವೂ ನಾವು-ನೀವು ಅಂದುಕೊಂಡತೆ ಅಲ್ಲ. ಅದಕ್ಕೆ ಅದ್ರದ್ದೇ ಆದ ಇತಿಹಾಸ ಇದೆ.
ತಮ್ಮನ್ನು ತಾವು ಬುದ್ದಿವಂತ ಎಂದು ವಿಜಯ್ ಅಂದುಕೊಂಡಿರಬಹುದು. ಆದರೆ, ಜನಸಾಮಾನ್ಯರ ದೃಷ್ಟಿಯಲ್ಲಿ ರಾಜಕೀಯದಲ್ಲಿ ಈಗಷ್ಟೇ ಅಂಬೆಗಾಲಿಡುತ್ತಿರುವ ವ್ಯಕ್ತಿ ವಿಜಯ್.
ಇದಕ್ಕೆ ಪುರಾವೆ ಎಂಬಂತೆ ಚುನಾವಣೆಯ ಹೊಸ್ತಿಲಿನಲ್ಲಿಯೇ ಇವರ ಫ್ಯಾಮಿಲಿ ಇಮೇಜ್ ಸಂಪೂರ್ಣ ಡ್ಯಾಮೇಜ್ ಕೂಡ ಆಗಿದೆ. ಡ್ಯಾಮೇಜ್ ಆದ ಈ ಇಮೇಜ್‌ದಿಂದಾಗಿ ವಿಜಯ್ ಮುಂದಿರುವ ರಾಜಕೀಯದ ಹಾದಿ ದಿಕ್ಕು ತಪ್ಪುತ್ತಾ..? ಎನ್ನುವುದಕ್ಕೆ ಉತ್ತರ ಇನ್ನೇನು ಕೆಲವೇ ದಿನಗಳಲ್ಲಿ ಸಿಗಲಿದೆ ಆದರೂ, ವಿಜಯ್ ಮತ್ತು ಸಂಗೀತಾ ಅವರ ವಿಚ್ಚೇದನ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ಏಪ್ರಿಲ್ 20ರಂದು ನಡೆಯಲಿದೆ.

ಅವತ್ತು (ಏಪ್ರಿಲ್ 20) ಈ ದಾಂಪತ್ಯ ಕಲಹಕ್ಕೆ ಕಾರಣವಾದ ಇನ್ನೂ ಕೆಲ ವಿಚಾರ ಹೊರ ಬರುವ ಸಾಧ್ಯತೆ ಇದೆ. ಆದರೆ ಸದ್ಯ ಸಂಗೀತಾ ಅವರ ನಡೆ ಮಾತ್ರ ಹಲವರಲ್ಲಿ ಕುತೂಹಲ ಕೆರಳಿಸಿದೆ.
ಹೌದು, ಅಸಲಿಗೆ ಒಂದು ಕಡೆ ಏಪ್ರಿಲ್ 20ರಂದು ವಿಜಯ್ ಮತ್ತು ಸಂಗೀತಾ ವಿಚ್ಚೇದನದ ಅರ್ಜಿ ವಿಚಾರಣೆ ನಡೆಯಲಿದೆ. ಮತ್ತೊಂದು ಕಡೆ ಏಪ್ರಿಲ್ 23ರಂದು ತಮಿಳುನಾಡಿನಲ್ಲಿ ಮತದಾನ ನಡೆಯಲಿದೆ.
ಹೀಗಿರುವಾಗ ಏಪ್ರಿಲ್ 21ರಂದು ವಿಜಯ್ ವಿರುದ್ದ ಸಂಗೀತಾ ಪತ್ರಿಕಾಗೋಷ್ಠಿ ಮಾಡಲಿದ್ದಾರೆ ಎನ್ನುವ ಸುದ್ದಿ ಚೆನ್ನೈನೆಲ್ಲೆಡೆ ಗುಲ್ಲಾಗಿದೆ. ಅವತ್ತು ಅಂದರೆ ಏಪ್ರಿಲ್ 21ರಂದು ವಿಜಯ್ ಅಕ್ರಮ ಸಂಬಂಧಕ್ಕೆ ಸಂಬಂಧಿಸಿದಂತಹ ಪುರಾವೆಗಳನ್ನು ಸಂಗೀತಾ ಜಗಜ್ಜಾಹೀರು ಮಾಡಲಿದ್ದಾರೆ ಎಂಬ ಮಾತು ಸದ್ಯ ವಿಜಯ್ ಅವರ ನಿವಾಸದ ಸುತ್ತ ಮುತ್ತ ಕೇಳಿ ಬರುತ್ತಿದೆ. ತಮಿಳು ಮಾಧ್ಯಮಗಳು ಕೂಡ ಏಪ್ರಿಲ್ 21ರಂದು ಸಂಗೀತಾ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ವರದಿಯನ್ನು ಮಾಡಿವೆ.
ಒಟ್ನಲ್ಲಿ ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ. ಸದ್ಯ ಸಂಗೀತಾ ಅವರ ಬಳಿ ತಮ್ಮ ಪತಿ ವಿಜಯ್ ಅವರ ಅಕ್ರಮ ಸಂಬಂಧಕ್ಕೆ ಸಂಬಂಧಿಸಿದಂತೆ ಹಲವು ಪುರಾವೆಗಳಿವೆ ಎನ್ನುವ ಸುದ್ದಿ ಚಾಲ್ತಿಯಲ್ಲಿದೆ. ಏಪ್ರಿಲ್ 21ರಂದು ಸಂಗೀತಾ ಪತ್ರಿಕಾಗೋಷ್ಠಿ ಮಾಡಲಿದ್ದಾರೆ ಎಂದು ಅಖಂಡ ತಮಿಳುನಾಡು ಮಾತನಾಡಿಕೊಳ್ಳುತ್ತಿದೆ. ಮತದಾನಕ್ಕೂ ಮುನ್ನ ಒಂದು ವೇಳೆ ಸಂಗೀತಾ ತಮ್ಮ ಬತ್ತಳಿಕೆಯಿಂದ ಈ 'ಬ್ರಹ್ಮಾಸ್ತ್ರ' ಬಿಟ್ಟಿದ್ದೇ ಆದಲ್ಲಿ ವಿಜಯ್ ಪೊಲಿಟಿಕಲ್ ಕೆರಿಯರ್ ಶುರುವಾಗುವ ಮುನ್ನವೇ ಬಹುತೇಕ ಖತಂ ಆದಂತೆ. ಏಪ್ರಿಲ್ 21ಕ್ಕೆ ಸಂಗೀತಾ ಸಾಕ್ಷ್ಯಾಧಾರ ಬಿಡುಗಡೆ ಮಾಡುತ್ತಾರಾ..? ಲೆಟ್ಸ್ ಸೀ...!


Click it and Unblock the Notifications











