ಕದ್ದು ಮುಚ್ಚಿ ನಿಶ್ಚಿತಾರ್ಥ ಮಾಡಿಕೊಂಡ ''ಗಂಗೆ ಬಾರೆ ತುಂಗೆ ಬಾರೆ'' ನಾಯಕಿ...!

ಸಿನಿ ತಾರೆಗಳೇ ಹಾಗೆ ಅನ್ನಿಸುತ್ತೆ. ಪ್ರಣಯ ಪಕ್ಷಿಗಳ ಹಾಗೆ ಜೊತೆಯಲ್ಲಿ ಸುತ್ತಾಡುತ್ತಾ, ಖಾಸಗಿ ಕಾರ್ಯಕ್ರಮಗಳಲ್ಲಿ ಎಲ್ಲರ ಕಣ್ಣುಕುಕ್ಕುವಂತೆ ಓಡಾಡುತ್ತಾ ಇಲ್ಲ ಸಲ್ಲದ ಮಾತುಗಳು ಹೊರಬಿದ್ದರೂ ತುಟಿಪಿಟಿಕ್ ಎನ್ನದೇ ಉಳಿದು ಅಂತಿಮವಾಗಿ ನಾವು ಮದುವೆಯಾಗಲಿದ್ದೇವೆ, ಬೇರೆಯಾಗಲಿದ್ದೇವೆ ಇತ್ಯಾದಿಗಳನ್ನು ಹೇಳಿಬಿಡ್ತಾರೆ. ಹಾಗಂತ ಅದೇನೂ ನೋಡುಗರಿಗೆ ಹೊಸ ವಿಚಾರವೋ, ಆಶ್ಚರ್ಯದ ಸಂಗತಿಯೋ ಆಗಿರಲಿಕ್ಕಿಲ್ಲ. ಇನ್ನೂ ಕೆಲವೊಮ್ಮೆ ಜೊತೆ ಜೊತೆಯಾಗಿ ತಿರುಗಿಲ್ಲ. ಮಾತನಾಡಿಲ್ಲ. ಆದರೆ ಮದುವೆಯಾಗಿರುತ್ತಾರೆ. ಲೀವಿಂಗ್ ಟು ಗೆದರ್ ನಲ್ಲೂ ಇದ್ದುಬಿಡುತ್ತಾರೆ. ಇದಕ್ಕೆ ಸುನೈನಾ ಸದ್ಯದ ಉದಾಹರಣೆ.

ಹೌದು, ಸುನೈನಾ, ಮಹಾರಾಷ್ಟ್ರದ ಹುಟ್ಟಿ ಬೆಳೆದ ತೆಲುಗು ಪಿಲ್ಲಾ. 2005ರಲ್ಲಿ ಕುಮಾರಿ VS ಕುಮಾರಿ ಎಂಬ ತೆಲುಗು ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಬಂದ ಸುನೈನಾ ಆ ನಂತರ 2008ರಲ್ಲಿ ಕನ್ನಡ ಚಿತ್ರರಂಗಕ್ಕೂ ಬಂದಿದ್ದರು. ಗಂಗೆ ಬಾರಿ ತುಂಗೆ ಬಾರೆ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರಿಗೆ ನಾಯಕಿಯಾಗುವ ಮೂಲಕ ಕನ್ನಡಿಗರ ಹೃದಯ ಗೆಲ್ಲುವ ಪ್ರಯತ್ನವನ್ನೂ ಮಾಡಿದ್ದರು.

the-gange-baare-thunge-baare-fame-sunaina-is-set-to-marry

ಗಂಗೆ ಬಾರಿ ತುಂಗೆ ಬಾರೆ ನಂತರ ಬಹುತೇಕ ಕಾಲಿವುಡ್‌ನಲ್ಲಿಯೇ ಕಾಣಿಸಿಕೊಂಡ ಸುನೈನಾ, ಕಳೆದ ವರ್ಷ ಆಸ್ಪತ್ರೆಯ ಬೆಡ್ ಮೇಲೆ ಮಲಗಿ ಆಕ್ಸಿಜನ್ ಪಡೆಯುತ್ತಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳನ್ನ ಬೆಚ್ಚಿ ಬೀಳಿಸಿದ್ದರು. ಸ್ವಲ್ಪ ಸಮಯ ಕೊಡಿ.. ಮತ್ತೆ ಬರ್ತೀನಿ ಎಂದು ಹೇಳಿದ್ದರು. ಇವರ ಅಭಿಮಾನಿಗಳು ನಿಮಗೆ ಏನಾಗಿದೆ ಎಂಬ ಪ್ರಶ್ನೆಯನ್ನ ಹತ್ತಾರು ಬಾರಿ ಕೇಳಿದ್ದರೂ ಕೂಡ ಸುನೈನಾ ಉತ್ತರವನ್ನ ನೀಡಿರಲಿಲ್ಲ. ಇದರಿಂದ ಸಹಜವಾಗಿ ಅಭಿಮಾನಿಗಳ ಆತಂಕ ಹೆಚ್ಚಾಗಿತ್ತು.

ಇಂಥಾ ಸುನೈನಾ ಈಗ ಮದುವೆಗೆ ಸಿದ್ಧರಾಗಿದ್ದಾರೆ. ಕದ್ದು ಮುಚ್ಚಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಮ್ಮೆಲ್ಲ ಅಭಿಮಾನಿಗಳಿಗಾಗಿ ಫೋಟೋ ಕೂಡ ಹಂಚಿಕೊಂಡಿದ್ದಾರೆ.ಆದರೆ ತಮ್ಮ ಕೈ ಹಿಡಿದಿರುವ ಆ ಅದೃಷ್ಟವಂತ ಯಾರು ಎನ್ನುವುದನ್ನ ಗೌಪ್ಯವಾಗಿಟ್ಟಿದ್ದಾರೆ ಸುನೈನಾ


ಹೌದು, ಕೇವಲ ಉಂಗುರ ಇರುವ ಬೆರಳಿನ ಫೋಟೋವನ್ನಷ್ಟೇ ಹಾಕಿರುವ ಸುನೈನಾ ಮದುವೆಯ ಗುಟ್ಟನ್ನ ರಟ್ಟು ಮಾಡಿಲ್ಲ. ಮದುವೆಯಾಗುವ ಆ ಅದೃಷ್ಟವಂತ ಯಾರು ಎಂದು ಹೇಳಿಲ್ಲ. ತಮ್ಮ ಭಾವಿ ಪತಿಯ ಹಿನ್ನೆಲೆ-ಮುನ್ನೆಲೆಯನ್ನೂ ತಿಳಿಸಿಲ್ಲ. ಕೇವಲ ನಿಶ್ಚಿತಾರ್ಥ ಮಾಡಿಕೊಂಡಿರುವ ಸಿಹಿ ಸುದ್ದಿಯನ್ನಷ್ಟೇ ಹಂಚಿಕೊಂಡಿದ್ದಾರೆ. ಶುಭಾಶಯ ಕೋರಿದವರಿಗೆ ಧನ್ಯವಾದವನ್ನ ಹೇಳಿದ್ದಾರೆ.

ಹೀಗಾಗಿಯೇ ತೀವೃ ಕುತೂಹಲಗೊಂಡಿರುವ ಇವರ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಹತ್ತಾರು ಪ್ರಶ್ನೆಗಳನ್ನ ಸುನೈನಾ ಅವರಿಗೆ ಕೇಳುತ್ತಿದ್ದಾರೆ. ಮದುವೆಯಾಗಲಿರುವ ಹುಡುಗ ಯಾರು..? ಅವರ ಫೋಟೋಗಳನ್ನು ಹಂಚಿಕೊಳ್ಳಿ ಎಂಬ ಬೇಡಿಕೆಯನ್ನೂ ಇಡ್ತಿದ್ದಾರೆ.

the-gange-baare-thunge-baare-fame-sunaina-is-set-to-marry

ಒಟ್ನಲ್ಲಿ ಸದ್ಯಕ್ಕೆ ನಿಶ್ಚಿತಾರ್ಥದ ಸುದ್ದಿಯನ್ನ ಸುನೈನಾ ಹಂಚಿಕೊಂಡಿದ್ಧಾರೆ. ಮದುವೆ ಸುದ್ದಿಯನ್ನ ಕೂಡ ಶೀಘ್ರದಲ್ಲಿಯೇ ಸುನೈನಾ ನೀಡಲಿದ್ದಾರೆ. ಇದೆಲ್ಲದರ ನಡುವೆ ಸುನೈನಾ ಮದುವೆಯಾದ ನಂತರ ಚಿತ್ರಗಳಲ್ಲಿ ನಟಿಸುತ್ತಾರಾ ಇಲ್ಲವಾ ಅನ್ನುವ ಚಿಂತೆ ಇವರ ಅಭಿಮಾನಿಗಳಿಗೆ ಕಾಡುತ್ತಿದೆ.

More from Filmibeat

English summary
Sunaina, the Kollywood actress who made her Sandalwood debut with 'Gange Baare Thunge Baare,' is set to marry soon."
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X