ಅಂದುಕೊಂಡಿದ್ದೇ ನಿಜಾ ಆಯ್ತಾ ? ವಿಜಯ್ ಕೊನೆಯ ಸಿನಿಮಾ ಈ ಚಿತ್ರದ ರಿಮೇಕಾ ?

ಇಳಯ ದಳಪತಿ ಎಂದೇ ಖ್ಯಾತರಾದವರು ವಿಜಯ್ ಜೋಸೆಫ್ . ತಮ್ಮನ್ನು ತಾವು ಕೇವಲ ಚಿತ್ರರಂಗಕ್ಕೆ ಸೀಮಿತಗೊಳಿಸದೇ ಮೊದಲಿಂದ ಸಮಾಜದ ಆಗುಹೋಗುಗಳ ಕುರಿತು ವಿಜಯ್ ಮಾತನಾಡುತ್ತಲೇ ಬಂದಿದ್ದಾರೆ. ಕಾವೇರಿ ನೀರಿನ ಸಮಸ್ಯೆ, ಜಲ್ಲಿಕಟ್ಟು ಪ್ರತಿಭಟನೆ, ಶಬರಿಮಲೈ ದೇಗುಲಕ್ಕೆ ಮಹಿಳೆಯರ ಪ್ರವೇಶ, ನೀಟ್ ಪರೀಕ್ಷೆ ಸೇರಿ ಹೀಗೆ ಹತ್ತು ಹಲವು ವಿಚಾರಗಳ ಕುರಿತು ವಿಜಯ್ ತಮ್ಮ ಧ್ವನಿಯನ್ನು ಎತ್ತುತ್ತಾನೇ ಬಂದಿದ್ದಾರೆ.

ಅಂದಿನಿಂದ ಇದೆಲ್ಲವನ್ನೂ ನೋಡಿದವರು ವಿಜಯ್ ರಾಜಕೀಯದೆಡೆ ಹೊರಳುತ್ತಾರೆ ಎಂದೇ ಅಂದುಕೊಂಡಿದ್ದರು. ಅದು ನಿಜಾ ಕೂಡ ಆಗಿದೆ. ತಮ್ಮ ಪಕ್ಷಕ್ಕೆ 'ತಮಿಳಗ ವೆಟ್ರಿ ಕಳಗಂ' ಎಂದು ನಾಮಕರಣವನ್ನು ಮಾಡಿರುವ ವಿಜಯ್ ಸದ್ಯ ತಮ್ಮ ಕೊನೆಯ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಆ ಚಿತ್ರದ ಹೆಸರು ಜನನಾಯಗನ್. ಸದ್ಯ ಈ ಚಿತ್ರದ ಟೀಸರ್ ಇಂದು { ಜೂನ್ 22 } ವಿಜಯ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿದೆ. ಅಭಿಮಾನಿಗಳ ಸಂಭ್ರಮಕ್ಕೂ ಕೂಡ ಕಾರಣವಾಗಿದೆ.

The Grand Finale Is Vijay s Last Film a Remake Fans Begin To Decode The New Teaser

ಇನ್ನು ಹೇಳಿ ಕೇಳಿ ಇದು ವಿಜಯ್ ಕೊನೆಯ ಚಿತ್ರ. ಹೀಗಾಗಿ ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲ ಮಸಾಲೆಗಳನ್ನು ಸೇರಿಸಿ ಹೆಚ್ ವಿನೋದ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸದ್ಯ ಬಿಡುಗಡೆಯಾದ ಒಂದು ನಿಮಿಷದ ಟೀಸರ್ ಕೂಡ ಈ ಮಾತನ್ನೇ ಸಾರಿ ಸಾರಿ ಹೇಳುತ್ತಿದೆ.

ಇನ್ನು ಮುಂದಿನ ವರ್ಷ ತಮಿಳುನಾಡು ವಿಧಾನಸಭೆ ಚುನಾವಣೆ ಇರುವ ಹಿನ್ನೆಲೆ ವಿಜಯ್ ಈ ಚಿತ್ರವನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ. ಚಿತ್ರದ ಮೂಲಕ ತಮ್ಮ ಪಕ್ಷದ ಪ್ರಚಾರವನ್ನು ಕೂಡ ಮಾಡುವ ಸಾಧ್ಯತೆ ಇದೆ.

ಸದ್ಯ ಬಿಡುಗಡೆಯಾದ ಟೀಸರ್ ಕೂಡ ಈ ಮಾತುಗಳನ್ನು ಪುಷ್ಠಿಕರಿಸುವಂತೆ ಇದ್ದು ನಿಜವಾದ ನಾಯಕ ಅಧಿಕಾರಕ್ಕಾಗಿ ಅಲ್ಲ, ಜನಗಳಿಗಾಗಿ ಎದ್ದು ನಿಂತು ಹೋರಾಡುತ್ತಾನೆ ಎಂಬ ಸಾಲನ್ನು ಟೀಸರ್‌ನಲ್ಲಿ ಉಪಯೋಗಿಸಲಾಗಿದೆ. ಜೊತೆಯಾಗಿ ಎದ್ದು ನಿಲ್ಲೋಣ ಎಂದು ಕೂಡ ಹೇಳಲಾಗಿದೆ.

ಅಂದ್ಹಾಗೇ ಕನ್ನಡದ ನಿರ್ಮಾಣ ಸಂಸ್ಥೆ ಕೆವಿಎನ್ ಹಣ ಹೂಡಿರುವ ಈ ಜನ ನಾಯಗನ್, ನಂದಮೂರಿ ಬಾಲಕೃಷ್ಣ ಅಭಿನಯದ 'ಭಗವಂತ್ ಕೇಸರಿ' ಚಿತ್ರದ ರಿಮೇಕ್ ಎನ್ನುವ ಅನುಮಾನ ಹಲವರಲ್ಲಿದೆ. ಕೊನೆಯ ಚಿತ್ರದ ಕಥೆಯನ್ನು ಬೇರೆ ಭಾಷೆಯಿಂದ ಎತ್ತಿದ್ದಾರೆ ಎಂಬ ಸುದ್ದಿಯಿಂದ ವಿಜಯ್ ಅಭಿಮಾನಿಗಳಲ್ಲಿಯೇ ಈ ಜನ ನಾಯಗನ್ ವಿರುದ್ಧ ಅಸಮಾಧಾನ, ಬೇಸರ ಇದೆ.

The Grand Finale Is Vijay s Last Film a Remake Fans Begin To Decode The New Teaser

ಸದ್ಯ ಬಿಡುಗಡೆಯಾದ ಟೀಸರ್ ಈ ಅಸಮಾಧಾನದ ಅಲೆಯನ್ನು ಇನ್ನು ಹೆಚ್ಚಿಸಿದೆ. ಭಗವಂತ್ ಕೇಸರಿಯ ಯಥಾವತ್ತು ನಕಲು ಈ ಜನನಾಯಗನ್ ಎನ್ನುವ ಮಾತು ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ಕೇಳಿ ಬರುತ್ತಿದೆ. ಮೀಸೆ ತಿರುಗಿಸುವ ಶೈಲಿಯಿಂದ ಹಿಡಿದು ಕತ್ತಿ ಹಿಡಿಯುವ ಸ್ಟೈಲ್‌ವರೆಗೆ ನಂದಮೂರಿ ಬಾಲಕೃಷ್ಣ ಅವರನ್ನು ವಿಜಯ್ ಅನುಸರಿಸಿದ್ದಾರೆ ಎನ್ನುವ ಮಾತು ಇವರ ಅಭಿಮಾನಿ ಬಳಗದಲ್ಲಿಯೇ ಸದ್ಯ ಕೇಳಿ ಬರುತ್ತಿದೆ.

ಆದರೆ ಅಭಿಮಾನಿಗಳ ಈ ಮಾತುಗಳನ್ನ, ವಾದವನ್ನ ನಿರ್ಮಾಣ ಸಂಸ್ಥೆ ಕೆವಿಎನ್‌ ಆಗಲಿ, ಚಿತ್ರದ ನಿರ್ದೇಶಕ ಹೆಚ್ ವಿನೋದ್ ಒಪ್ಪಿಕೊಂಡಿಲ್ಲ. ರಿಮೇಕ್ ಎನ್ನುವ ಸುದ್ದಿಯನ್ನು ತಳ್ಳಿಯೂ ಕೂಡ ಹಾಕಿಲ್ಲ. ಇನ್ನುಳಿದಂತೆ

ಅಂದಾಜು 300 ಕೋಟಿ ರೂ. ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣ ಆಗ್ತಿದೆ ಎಂದು ಹೇಳಲಾಗ್ತಿದೆ. ಇದರಲ್ಲಿ ವಿಜಯ್ ಸಂಭಾವನೆ 250 ಕೋಟಿ ರೂ. ಎನ್ನುವ ಚರ್ಚೆ ನಡೀತಿದೆ. ಪೂಜಾ ಹೆಗ್ಡೆ, ಮಮತಾ ಬೈಜು ಈ ಚಿತ್ರದಲ್ಲಿದ್ದಾರೆ. ಭಗವಂತ್ ಕೇಸರಿಯಲ್ಲಿ ಶ್ರೀಲೀಲಾ ನಿರ್ವಹಿಸಿದ್ದ ಪಾತ್ರವನ್ನು ಇಲ್ಲಿ ಮಮತಾ ಬೈಜು ನಿರ್ವಹಿಸಿದ್ದರು ನಿರ್ವಹಿಸಿರಬಹುದು. ಸದ್ಯ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಮುಂದಿನ ವರ್ಷ ಜನವರಿ 9ರಂದು ತಮಿಳು, ತೆಲುಗು, ಕನ್ನಡ ಮತ್ತು ಹಿಂದಿಯಲ್ಲಿ ಜನ ನಾಯಗನ್ ಬಿಡುಗಡೆಯಾಗಲಿದೆ.

More from Filmibeat

English summary
Dive deep as fans begin to decode the new teaser for Vijay's potential last film. Explore if the grand finale of his career is truly a remake!
Read more about: vijay teaser kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X