ದಿ ಲವ್ ಈಸ್ ಆಲ್ವೇಸ್ ಲೌಡರ್; ವಿಜಯ್ ಸಿಎಂ ಆದ ಬಳಿಕ ತ್ರಿಷಾ ಮೊದಲ ಪೋಸ್ಟ್

ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ನಟಿ ತ್ರಿಷಾ ಕೂಡ ಭಾಗಿ ಆಗಿದ್ದರು. ತಮ್ಮ ತಾಯಿ ಜೊತೆ ಬಂದಿದ್ದ ಚೆಲುವೆ ಅಭಿಮಾನಿಗಳ ಕಡೆ ಕೈ ಬೀಸಿದರು. ವಿಜಯ್ ತಾಯಿ ಶೋಭಾ ಹಾಗೂ ಸಹೋದರಿಯನ್ನು ಅಪ್ಪಿ ಮಾತನಾಡಿಸಿದ್ದರು. ಇನ್ನು ವಿಜಯ್ ಪ್ರಮಾಣವಚನ ಸ್ವೀಕರಿಸಿ ಎಲ್ಲರನ್ನು ಉದ್ದೇಶಿಸಿ ಮಾತನಾಡುವಾಗ ತ್ರಿಷಾ ಭಾವುಕರಾಗಿದ್ದರು.

ನೀಲಿ ಬಣ್ಣದ ರೇಷ್ಮೆ ಸೀರೆ ಉಟ್ಟು ಕಾರ್ಯಕ್ರಮದಲ್ಲಿ ಚೆನ್ನೈ ಚೆಲುವೆ ಗಮನ ಸೆಳೆದರು. ವಿಜಯ್ ಹಾಗೂ ತ್ರಿಷಾ ನಡುವೆ ಆತ್ಮೀಯ ಒಡನಾಟವಿದೆ. ಈ ಬಗ್ಗೆ ಪದೇ ಪದೆ ಚರ್ಚೆ ನಡೆಯುತ್ತಲೇ ಇರುತ್ತದೆ. ವಿಜಯ್ ಪತ್ನಿ ಸಂಗೀತಾ ಡಿವೋರ್ಸ್ ಅರ್ಜಿ ಸಲ್ಲಿಸುವುದಕ್ಕೆ ತ್ರಿಷಾ ಕಾರಣ ಎನ್ನುವ ಅರ್ಥದಲ್ಲಿ ಕೆಲವರು ಮಾತನಾಡುತ್ತಾರೆ. ಅದಕ್ಕೆ ಇಬ್ಬರೂ ಪ್ರತಿಕ್ರಿಯೆ ನೀಡುತ್ತಿಲ್ಲ. ವಿಜಯ್ ನೇತೃತ್ವದ ಟಿವಿಕೆ ಪಕ್ಷ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುವುದು ಖಚಿತವಾಗುತ್ತಿದ್ದಂತೆ ತ್ರಿಷಾ ಹೋಗಿ ಅಭಿನಂದನೆ ತಿಳಿಸಿ ಬಂದಿದ್ದರು. ತಿರುಪತಿಯಿಂದ ನೇರವಾಗಿ ವಿಜಯ್ ಮನಗೆ ಭೇಟಿ ನೀಡಿದ್ದರು. ಆ ವಿಚಾರ ಭಾರೀ ಚರ್ಚೆ ಆಗಿತ್ತು.

The love is always louder Trisha s post after vijay s Oath Ceremony goes viral

ವಿಜಯ್ ಪ್ರಮಾಣವಚನ ಕಾರ್ಯಕ್ರಮಕ್ಕೆ ಪತ್ನಿ ಸಂಗೀತಾ ಹಾಗೂ ಮಕ್ಕಳು ಕೂಡ ಹಾಜರಾಗಲಿಲ್ಲ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ವಿಜಯ್ ಭರವಸೆ ನೀಡಿದ್ದಾರೆ ಎನ್ನಲಾಗ್ತಿದೆ. ಪತ್ನಿಯನ್ನು ಆಹ್ವಾನಿಸದೇ ಇದ್ದರೂ ಕೊನೆ ಪಕ್ಷ ಮಕ್ಕಳನ್ನು ಕಾರ್ಯಕ್ರಮಕ್ಕೆ ಕರೆಯಬಹುದಿಲ್ಲ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ತ್ರಿಷಾ ಹೊಸ ಪೋಸ್ಟ್ ವೈರಲ್ ಆಗುತ್ತಿದೆ. ಪ್ರಮಾಣವಚನ ಕಾರ್ಯಕ್ರಮಕ್ಕೆ ಉಟ್ಟಿದ್ದ ಸೀರೆಯಲ್ಲಿ ಒಂದಷ್ಟು ಫೋಟೊ ಕ್ಲಿಕ್ಕಿಸಿ ಪೋಸ್ಟ್ ಮಾಡಿದ್ದಾರೆ.

"ಪ್ರೀತಿ ಯಾವಾಗಲೂ ಜೋರಾಗಿರುತ್ತದೆ.. ನನ್ನ ನೆಚ್ಚಿನ ಜನರಿಗೆ ಧನ್ಯವಾದಗಳು" ಎಂದು ಬರೆದು ತ್ರಿಷಾ ಫೋಟೊಗಳನ್ನು ಹಾಕಿದ್ದಾರೆ. ಕಾಸ್ಟ್ಯೂಮ್ ಡಿಸೈನ್ ಮಾಡಿದವರಿಗೆ ಧನ್ಯವಾದ ತಿಳಿಸಿದ್ದಾರೆ. ಇದಕ್ಕೆ ಸಾಕಷ್ಟು ಜನ ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದೆಲ್ಲ ಬೇಕಿತ್ತಾ? 'ಲವ್' ಅಂತ ಕ್ಯಾಪ್ಷನ್ ಕೊಟ್ಟು ಪರೋಕ್ಷವಾಗಿ ಏನೋ ಹೇಳಲು ಪ್ರಯತ್ನ ಮಾಡುವ ಅವಶ್ಯಕತೆ ಇತ್ತಾ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಪ್ರಮಾಣವಚನ ಕಾರ್ಯಕ್ರಮಕ್ಕೆ ನಿಮ್ಮ ಆಗಮನವನ್ನು ನಿರೀಕ್ಷಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಚುನಾವಣೆ ಫಲಿತಾಂಶದ ದಿನ ತ್ರಿಷಾ ವಿಜಯ್ ನಿವಾಸಕ್ಕೆ ಭೇಟಿ ನೀಡಿದ್ದು ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದು ನೋಡಿ ರಾಜಕೀಯ ಪ್ರವೇಶ ನಿಜಾನಾ? ಎನ್ನುವ ಚರ್ಚೆ ಹೆಚ್ಚಾಗುತ್ತಿದೆ. ವಿಜಯ್ ಜೊತೆ ತ್ರಿಷಾ ಕೂಡ ರಾಜಕೀಯರಂಗಕ್ಕೆ ಬರ್ತಾರೆ ಎನ್ನುವ ಚರ್ಚೆ ಬಹಳ ದಿನಗಳಿಂದ ನಡೀತಿದೆ. ವಿಜಯ್ ಎರಡೂ ಕ್ಷೇತ್ರಗಳಲ್ಲಿ ನಿಂತು ಗೆಲುವು ಸಾಧಿಸಿದ್ದಾರೆ. ಪೆರಂಬೂರ್ ಕ್ಷೇತ್ರವನ್ನು ಉಳಿಸಿಕೊಂಡು ತಿರುಚ್ಚಿ ಈಸ್ಟ್ ಕ್ಷೇತ್ರಕ್ಕೆ ರಾಜಿನಾಮೆ ನೀಡಿದ್ದಾರೆ. ಹಾಗಾಗಿ ಅದೇ ಕ್ಷೇತ್ರದಲ್ಲಿ ತ್ರಿಷಾ ಕಣಕ್ಕಿಳಿಯುತ್ತಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

ನಾನು ಮುಖ್ಯಮಂತ್ರಿ ಆಗಬೇಕು ಎಂದು ತ್ರಿಷಾ ದಶಕಗಳ ಹಿಂದೆಯೇ ಆಸೆ ವ್ಯಕ್ತಪಡಿಸಿದ್ದರು. ವಿಜಯ್ ನೇತೃತ್ವದ ಸರ್ಕಾರದಲ್ಲಿ ಕೊನೆ ಪಕ್ಷ ತ್ರಿಷಾ ಯಾವುದಾದರೂ ಸಚಿವೆ ಸ್ಥಾನ ಪಡೆಯಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ. ಶೀಘ್ರದಲ್ಲೇ ತಿರುಚ್ಚಿ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ. ತ್ರಿಷಾ ಅಲ್ಲ, ಮಾಜಿ ಐಎಎಸ್ ಅಧಿಕಾರಿ ಒಬ್ಬರು ಟಿವಿಕೆ ಪಕ್ಷದಿಂದ ಸ್ಪರ್ಧಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಶೀಘ್ರದಲ್ಲೇ ಎಲ್ಲದಕ್ಕೂ ಉತ್ತರ ಸಿಗಲಿದೆ. ಮತ್ತೊಂದು ಕಡೆ ತ್ರಿಷಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೂರ್ಯ ಜೊತೆ ನಟಿಸಿರುವ 'ಕರುಪ್ಪು' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

Read more about: trisha vijay politics
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X