ಬಾಕ್ಸಾಫೀಸ್‌ನಲ್ಲಿ 'ವಿಡಾಮುಯಾರ್ಚಿ' ವಿಲ ವಿಲ, ನಾಲ್ಕು ದಿನದಲ್ಲಿ ಚಿತ್ರ ಗಳಿಸಿದ್ದು ಇಷ್ಟೇನಾ..?

ಒಬ್ಬ ಸೂಪರ್ ಸ್ಟಾರ್ ಹೀಗೆ ಇರಬೇಕು, ಹೀಗೆ ನಡೆದುಕೊಳ್ಳಬೇಕು, ಅಭಿಮಾನಿಗಳ ಜೊತೆ ಹೀಗೆ ಬೆರೆಯಬೇಕು ಎಂಬ ಅಲಿಖಿತ ನಿಯಮಗಳನ್ನ ಗಾಳಿಗೆ ತೂರಿರುವ ಅಜಿತ್ ಯಾರೊಂದಿಗೂ ಬೆರೆಯದ, ಯಾವ ಅಭಿಮಾನಿ ಸಂಘಗಳೂ ಸೃಷ್ಟಿಯಾಗದಂತೆ ನೋಡಿಕೊಂಡಿರುವ ಭಾರತೀಯ ಚಿತ್ರರಂಗದ ಅತ್ಯಂತ ವಿಕ್ಷಿಪ್ತ ಹಾಗೂ ವಿಚಿತ್ರ ಹೀರೋ.

ನನಗೆ ಯಾವ ಅಭಿಮಾನಿಗಳು ಬೇಡ ಬೇಕಿದ್ದರೆ ನನ್ನ ಚಿತ್ರ ನೋಡಿ ಇಲ್ಲವಾದರೆ ಬಿಡಿ ಎನ್ನುವ ಅಜಿತ್ ಸದ್ಯ ಆ ಕಡೆ ಕಾರ್ ರೇಸ್‌ನ ಧ್ಯಾನದಲ್ಲಿದ್ದರೆ, ಇವರ ಚಿತ್ರವನ್ನು ನಿರ್ಮಾಣ ಮಾಡಿರುವ ನಿರ್ಮಾಪಕರು ಚಿಂತೆಯಲ್ಲಿ ಮುಳುಗಿದ್ದಾರೆ. ಲೆಕ್ಕಾಚಾರ ತಲೆ ಕೆಳಗಾಯ್ತು ಎಂದು ತಲೆ ಮೇಲೆ ಕೈ ಹೊತ್ತು ಕುಂತಿದ್ದಾರೆ.

The struggle of Vidaamuyarchi continues at the box office earning only 60 crore in its first week

ಹೌದು, ಅಸಲಿಗೆ ಹಿಂದೊಂದು ಕಾಲ ಇತ್ತು. ಆ ಕಾಲದಲ್ಲಿ ಅಜಿತ್‌ ಅಬ್ಬರಕ್ಕೆ ಕೇವಲ ಮೂರೇ ದಿನದಲ್ಲಿ ನಿರ್ಮಾಪಕರ ಜೇಬಿಗೆ 100 ಕೋಟಿ ಹಣ ಬಂದು ಬೀಳುತ್ತಿತ್ತು. ವೀವೇಗಂ, ವಿಶ್ವಾಸಂ, ವಲಿಮೈ, ತುಣಿವು, ಇವೆಲ್ಲ ನೂರು ಕೋಟಿ ಹಣವನ್ನು ಗಳಿಸಿದ್ದು ಕೇವಲ ಮೂರು ದಿನದಲ್ಲಿ ಮಾತ್ರ. ಆದರೆ, 'ವಿಡಾಮುಯಾರ್ಚಿ' ಬಾಕ್ಸಾಫೀಸ್‌ನಲ್ಲಿ ವಿಲ ವಿಲ ಒದ್ದಾಡುತ್ತಿದೆ. ತೆರೆಗೆ ಬಂದು ನಾಲ್ಕು ದಿನವಾದರೂ ಚಿತ್ರದ ಗಳಿಕೆ ತೆವಳುತ್ತಾ ಸಾಗಿದೆ.

ಹೌದು, ಕಳೆದ ಗುರುವಾರ ತೆರೆಗೆ ಬಂದ ವಿಡಾಮುಯಾರ್ಚಿ ಮೊದಲ ದಿನ ಭರ್ಜರಿ ಗಳಿಕೆಯನ್ನು ಮಾಡಿತ್ತು. ಭಾರತದಲ್ಲಿ 26 ಕೋಟಿಯನ್ನು ಕೊಳ್ಳೆ ಹೊಡೆದಿತ್ತು. ಆದರೆ. ಮರು ದಿನ ವಿಡಮುಯಾರ್ಚಿ ಲಯ ತಪ್ಪಿತ್ತು. ಸ್ಯಾಕ್ನಿಲ್ಕ್.ಕಾಮ್ ಪ್ರಕಾರ ಎರಡನೇ ದಿನ ವಿಡಾಮುಯಾರ್ಚಿ ಕೇವಲ ₹ ₹8.75 ಕೋಟಿಯನ್ನು ಮಾತ್ರ ಗಳಿಸಿತ್ತು. ಈ ಮೂಲಕ ಚಿತ್ರದ ಗಳಿಕೆಯಲ್ಲಿ ಶೇಕಡಾ -66.35% ಕುಸಿತವಾಗಿತ್ತು.

ಆದರೆ ಶನಿವಾರ ಈ ಗಳಿಕೆಯಲ್ಲಿ 31.71 % ಸುಧಾರಣೆ ಕಂಡು ಬಂತು. ಚಿತ್ರ ₹13.5 ಕೋಟಿಯನ್ನು ದೋಚಿತ್ತು. ಶನಿವಾರದ ಈ ಗಳಿಕೆಯಿಂದ ಸಹಜವಾಗಿ ಭಾನುವಾರದ ಮೇಲಿನ ನಿರೀಕ್ಷೆ ಹೆಚ್ಚಾಗಿತ್ತು. ಆದರೆ ನಿರೀಕ್ಷೆ ಹುಸಿಯಾಯಿತು. ಇನ್ನೂ ಹೆಚ್ಚಾಗಬೇಕಿದ್ದ ಗಳಿಕೆಯಲ್ಲಿ ಶೇಕಡಾ 11.70 % ಕುಸಿತವಾಯಿತು. ಚಿತ್ರ ಭಾನುವಾರ ಕೇವಲ ₹11.92 ಕೋಟಿಯನ್ನು ಮಾತ್ರ ಗಳಿಸಿತು.

ಹೀಗೆ ನಾಲ್ಕು ದಿನದಲ್ಲಿ 'ವಿಡಾಮುಯಾರ್ಚಿ' ಭಾರತದಲ್ಲಿ ಕೇವಲ ₹61.67 ಕೋಟಿಯನ್ನು ಮಾತ್ರ ಗಳಿಸಿದೆ. ಇನ್ನು ಹೊರದೇಶದಲ್ಲಿ ಸಾಮಾನ್ಯವಾಗಿ ಅಜಿತ್ ಚಿತ್ರಕ್ಕೆ ತುಸು ಹೆಚ್ಚಿನ ಬೇಡಿಕೆ ಕಂಡು ಬರುತ್ತೆ. ಜನಜಂಗುಳಿ ಇರುತ್ತೆ. ಆದರೆ ವಿಡಾಮುಯಾರ್ಚಿ ಚಿತ್ರಕ್ಕೆ ಅಲ್ಲಿಯೂ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಓವರ್ ಸೀಸ್ ಮಾರುಕಟ್ಟೆಯಲ್ಲಿ ಚಿತ್ರ ಇಲ್ಲಿಯವರೆಗೆ ₹32.3 ಕೋಟಿಯನ್ನು ಮಾತ್ರ ಗಳಿಸಿದೆ. ಹೇಗೆ ಕೂಡಿ ಕಳೆದರೂ ಕೂಡ ಚಿತ್ರದ ಗಳಿಕೆ ₹100 ಕೋಟಿಯ ಗಡಿಯನ್ನು ಇನ್ನು ತಲುಪಿಲ್ಲ. ಇನ್ನು ಇಂದು ಸೋಮವಾರ. ಚಿತ್ರದ ಮುಂದಿನ ಭವಿಷ್ಯ ನಿರ್ಧಾರವಾಗುವ ದಿನ. ಹೀಗಾಗಿಯೇ ನಿರ್ಮಾಪಕ ಮತ್ತು ವಿತರಕರ ಜೊತೆ ಚಿಂತಾಕ್ರಾಂತವಾಗಿರುವ ಕಾಲಿವುಡ್ ಪಂಡಿತರು ₹125 ಕೋಟಿಯಾದರೂ ಚಿತ್ರ ಗಳಿಸುತ್ತಾ ಎನ್ನುವ ಆಲೋಚನೆಯಲ್ಲಿದ್ದಾರೆ. ಚಿತ್ರಕ್ಕೆ ಹಿನ್ನೆಡೆಯಾಗಿದ್ದೇಕೆ ಎಂದು ಕಾರಣ ಹುಡುಕುತ್ತಿದ್ದಾರೆ.

ಒಟ್ನಲ್ಲಿ ಸದ್ಯ ಅಜಿತ್ ಅಭಿನಯದ 'ವಿಡಾಮುಯಾರ್ಚಿ' ಇನ್ನು ನೂರು ಕೋಟಿಯನ್ನು ಗಳಿಸಿಲ್ಲ. ಸದ್ಯ ಭಾರತದಲ್ಲಿ 60 ಕೋಟಿಯನ್ನು ಮಾತ್ರ ಚಿತ್ರ ಗಳಿಸಿದೆ. ಹಾಕಿದ ಬಂಡವಾಳದ ಮೇಲೆ ವಿಡಾಮುಯಾರ್ಚಿ ನಿರ್ಮಾಪಕರಿಗೆ ಲಾಭ ತಂದು ಕೊಡುತ್ತಾ ಅನ್ನುವುದನ್ನು ಈಗ ಕಾದು ನೋಡಬೇಕಿದೆ.

Disclaimer: ಈ ಸಿನಿಮಾದ ಕಲೆಕ್ಷನ್ ಅನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಅಧಿಕೃತ ಮಾಹಿತಿಯನ್ನು ನೀಡಬೇಕಿದೆ.

More from Filmibeat

Read more about: box office ajith filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X