ಭೀಕರ, ಭೀಭತ್ಸ, ಭಯಾನಕ - 'ಕಂಗುವ' ಟೀಸರ್ ; ಫಾರ್ಮ್ ಗೆ ಮರಳುತ್ತಾರಾ ಸೂರ್ಯ..?

ಗಜಿನಿ, ಪಿತಾಮಗನ್, ಕಾಕ್ಕ-ಕಾಕ್ಕದಂತಾ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟವರು ಸೂರ್ಯ. ಸಿಂಗಂ ಸರಣಿಯ ಮೂಲಕ ಜಗದ್ವಿಖ್ಯಾತಿಯನ್ನೂ ಗಳಿಸಿದ ಸೂರ್ಯ ಇತ್ತೀಚೆಗೆ ಮಂಕಾಗಿದ್ದರು.

24, ತಾನಾ ಸೇಂದ ಕೂಟ್ಟಂ, ಎನ್.ಜಿ.ಕೆ., ಕಪ್ಪಾನ್ ಚಿತ್ರದ ಸೋಲುಗಳಿಂದ ಹೈರಾಣಾಗಿದ್ದರು. ನಿಜಾ.. ಜೈ ಭೀಮ್ ಹಾಗೂ ಸೂರರೈ ಪೊಟ್ರು ಚಿತ್ರಗಳ ಮೂಲಕ ಸೂರ್ಯ ಪುಟಿದೆದ್ದು ನಿಂತರು.

The Teaser Of Suriya s Much Anticipated Film Kanguva Is Out Now

ಆದರೆ ಈ ಎರಡು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರಲಿಲ್ಲ. ಬದಲಿಗೆ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿದ್ದವು. ಈ ಕಾರಣಕ್ಕೆ ಎರಡು ಸಿನಿಮಾಗಳಿಗೆ ಪ್ರಶಂಸೆ ಸಿಕ್ಕರೂ ಕೂಡ ಅಭಿಮಾನಿಗಳಲ್ಲಿ ನಿರಾಸೆ ಇದ್ದೇ ಇತ್ತು. ಒಟಿಟಿ ಬೇಡ ಚಿತ್ರಮಂದಿರಕ್ಕೆ ಬನ್ನಿ ಎಂಬ ಕೂಗು ಕೇಳಿ ಬಂದಿತ್ತು.

ಇಂಥ ಸೂರ್ಯ ಇದೀಗ ನಾಲ್ಕು ವರ್ಷದ ನಂತರ ಅಭಿಮಾನಿಗಳ ಒತ್ತಾಸೆಯಂತೆ ಬೆಳ್ಳಿ ತೆರೆಯಲ್ಲಿ ಧಗಧಗಿಸಲು ಸಿದ್ಧರಾಗಿದ್ದಾರೆ. ತಮ್ಮ ಕಂಗುವ ಚಿತ್ರದ ಟೀಸರ್ ಮೂಲಕ ಎಲ್ಲರನ್ನ ಬೆಕ್ಕಸ ಬೆರಗಾಗಿಸಿದ್ದಾರೆ. ಹೌದು, ಕಂಗುವ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನೋಡ..ನೋಡುತ್ತಾ.. ಭಾರತದೆಲ್ಲೆಡೆ ಟೀಸರ್ ಮನೆ ಮಾತಾಗಿದೆ. ಎರಡು ಬುಡಕಟ್ಟು ಜನಾಂಗದ ನಾಯಕರ ನಡುವೆ ನಡೆಯುವ ಈ ರಣಭೀಕರ ಸಮರ ಅನನ್ಯವಾದ ಅನುಭವವನ್ನ ನೀಡುತ್ತೆ.

The Teaser Of Suriya s Much Anticipated Film Kanguva Is Out Now

ಇನ್ನೂ ಕಂಗುವ ಚಿತ್ರದ ಮೂಲಕ ಬಾಬಿ ಡಿಯೋಲ್ ದಕ್ಷಿಣಕ್ಕೆ ಇದೇ ಮೊದ ದಂಡೆತ್ತಿ ಬಂದಿದ್ದಾರೆ. ಆಶ್ರಮ್ ಸರಣಿ ಹಾಗೂ ಆನಿಮಲ್ ಚಿತ್ರದ ನಂತರ ಎಲ್ಲ ಭಾಷೆಯವರ ಅಚ್ಚು ಮೆಚ್ಚಿನ ನಟನಾಗಿರುವ ಬಾಬಿ ಡಿಯೋಲ್ ಅವರದ್ದು ಇಲ್ಲಿ ಭೀಭತ್ಸ ಅವತಾರ.

ಸದ್ಯಕ್ಕೆ ಟೀಸರ್ ಮೂಲಕ ಟಾಕ್ ಆಫ್ ದಿ ಟೌನ್ ಆಗಿರುವ ಕಂಗುವ ಚಿತ್ರವನ್ನ ಒಂದಲ್ಲ, ಎರಡಲ್ಲ, 38 ಭಾಷೆಗಳಲ್ಲಿ ಬಿಡುಗಡೆ ಮಾಡಬೇಕೆಂಬ ಇರಾದೆ ನಿರ್ಮಾಪಕರಿಗಿದೆ. ಪ್ಯಾನ್ ಇಂಡಿಯಾ ಜಾತ್ರೆಯಲ್ಲಿ ಎಲ್ಲರೂ ಭಾಗಿಯಾಗುತ್ತಿರುವ ಸಮಯದಲ್ಲಿ ನಿರ್ಮಾಪಕ ಕೆ.ಇ.ಜ್ಞಾನವೇಲ್ ರಾಜಾ ತಮ್ಮ ಚಿತ್ರದ ಕಥಾನಾಯಕ ಸೂರ್ಯ ಮತ್ತು ಅವರ ಸಂಗಡಿಗರನ್ನ ಕರೆದುಕೊಂಡು ಪ್ಯಾನ್ ವರ್ಲ್ಡ್ ಯಾತ್ರೆಗೆ ಈ ಮೂಲಕ ಹೊರಡಲು ಮುಂದಾಗಿದ್ದಾರೆ. ಚಿತ್ರದ ಪ್ರಚಾರಕ್ಕೆ ನಾನಾ ಯೋಜನೆಯನ್ನೂ ಹಾಕಿಕೊಂಡಿದ್ದಾರೆ.

The Teaser Of Suriya s Much Anticipated Film Kanguva Is Out Now

ಇನ್ನೂ ಅಮೆಜಾನ್ ಪ್ರೈಮ್ ಸಂಸ್ಥೆ ಕಂಗುವ ಸಿನಿಮಾದ ಒಟಿಟಿ ಹಕ್ಕನ್ನು ಬರೋಬ್ಬರಿ 80 ಕೋಟಿಗೆ ಖರೀದಿ ಮಾಡಿದೆ ಅನ್ನುವ ಸುದ್ದಿಯೂ ಇದೆ. ಎಲ್ಲ ಭಾಷೆಯ ಹಕ್ಕುಗಳನ್ನೂ ಒಳಗೊಂಡಿದೆ ಎನ್ನಲಾಗುತ್ತಿದೆ. ಇದು ನಿಜಾನಾ, ಸುಳ್ಳಾ ಗೊತ್ತಿಲ್ಲ. ಆದರೆ ಚಿತ್ರತಂಡವೇ ಇಂಥಹದ್ದೊಂದು ಮಾಹಿತಿಯನ್ನು ಬೇಕಂತಲೇ ತೇಲಿ ಬಿಟ್ಟಿದೆ ಎಂಬ ಅನುಮಾನ ಪಕ್ಕದ ತಮಿಳುನಾಡಿನಲ್ಲಿ ಅನೇಕರಿಗೆ ಇದೆ

ಶಿವ ನಿರ್ದೇಶನದ ಈ ಸಿನಿಮಾಗೆ ದೇವಿಶ್ರೀ ಪ್ರಸಾದ್​ ಅವರು ಸಂಗೀತ ನೀಡುತ್ತಿದ್ದಾರೆ. ವೆಟ್ರಿ ಪಳನಿಸಾಮಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಇನ್ನೂ ಬಾಲಿವುಡ್ ನ ಬೆಡಗಿ ದಿಶಾ ಪಟಾಠಿ ಕೂಡ ಚಿತ್ರದಲ್ಲಿದ್ದಾರೆ.ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್​ ತಿಂಗಳಲ್ಲಿ 'ಕಂಗುವ' ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂಬುದು ಚಿತ್ರತಂಡದ ಪ್ಲ್ಯಾನ್​ ಆಗಿತ್ತು. ಆದರೆ ಲೋಕಸಭಾ ಚುನಾವಣೆ ನಿಗದಿ ಆಗಿರುವುದರಿಂದ 'ಕಂಗುವ' ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಹೊಸ ದಿನಾಂಕ ಇನ್ನಷ್ಟೇ ಘೋಷಣೆ ಆಗಬೇಕಿದೆ.

ಒಟ್ನಲ್ಲಿ ಸದ್ಯಕ್ಕೆ ಕಂಗುವ ಚಿತ್ರದ ಟೀಸರ್ ಸದ್ದು ಮಾಡುತ್ತಿದೆ. ಎಲ್ಲರ ಚಿತ್ತವನ್ನ ಕದಿಯುತ್ತಿದೆ. ಎಲ್ಲವೂ ಅಂದುಕೊಂಡತೆ ಆದರೆ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ

More from Filmibeat

English summary
Teaser Suriya And Bobby Deol Starrer Kanguva Lives Up To The All The Hype Created By The Team.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X