ದಂಡುಪಾಳ್ಯ ಗ್ಯಾಂಗ್ ಸೇರಿದ್ರಾ ಪ್ರಿಯಾಮಣಿ, ಸನ್ನಿ ಲಿಯೋನ್ ; ಗ್ಲ್ಯಾಮರ್ ಗೊಂಬೆಗಳ ಹೊಸ ಲುಕ್‌ಗೆ ಫ್ಯಾನ್ಸ್ ಬೆಕ್ಕಸ ಬೆರಗು..!
ಭಾರತೀಯ ಸಿನಿಮಾಗಳಲ್ಲಿ ನಾಯಕಿ ಪ್ರಧಾನ ಚಿತ್ರಗಳಿಗೆ ವಿಶೇಷ ಸ್ಥಾನವಿದೆ. ನರ್ಗಿಸ್ ನಟಿಸಿದ್ದ ಹಿಂದಿ ಚಿತ್ರ 'ಮದರ್ ಇಂಡಿಯಾ ಕಾಲದಿಂದಲೂ ನಾಯಕಿ ಪ್ರಧಾನ ಚಿತ್ರಗಳು ತಯಾರಾಗುತ್ತಿವೆ. ಈ ಸಾಲಿಗೆ ಈಗ ಕೊಟೇಶನ್ ಗ್ಯಾಂಗ್ ಸೇರಿಕೊಂಡಿದೆ. ವಿಶೇಷ ಅಂದರೆ ಈ ಚಿತ್ರದ ಇಬ್ಬರು ನಾಯಕಿಯರು ಸಾಮಾನ್ಯರಲ್ಲ. ಅಸಾಮಾನ್ಯರು. ತಮ್ಮ ಸೌಂದರ್ಯ ಮತ್ತು ಅಭಿನಯದಿಂದ ಎಲ್ಲರ ಮನಸೂರೆಗೊಂಡವರು. ಅವರು ಬೇರೆ ಯಾರು ಅಲ್ಲ ಬದಲಿಗೆ ಪ್ರಿಯಾಮಣಿ ಮತ್ತು ಸನ್ನಿ ಲಿಯೋನ್ ಅನ್ನುವುದೇ ಈ ಕ್ಷಣದ ವಿಶೇಷ
ಹೌದು, ಸಮ್ಮೋಹಕವಾದೊಂದು ಸೆಳೆತವನ್ನೊಂದಿರುವ ಸನ್ನಿ ಲಿಯೋನ್, ಇಲ್ಲಿಯವರೆಗೆ ಗ್ಲ್ಯಾಮರಸ್ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದು ಹೆಚ್ಚು. ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ತಾವು ಕೇವಲ ಬೇಬಿ ಡಾಲ್ ಮಾತ್ರ ಅಲ್ಲ ಅಭಿನಯವನ್ನೂ ಮಾಡಬಲ್ಲೆ ಅನ್ನುವುದನ್ನೂ ನಿರೂಪಿಸಿದವರು ಇವರು.

ಇನ್ನೂ .. ಪ್ರಿಯಾಮಣಿ ಬಗ್ಗೆ ಹೆಚ್ಚೇನು ಹೇಳುವ ಅವಶ್ಯಕತೆ ಇಲ್ಲ. ಯಾಕೆಂದರೆ ತಮ್ಮ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದವರು ಇವರು. ಇನ್ನೂ.. ಗ್ಲ್ಯಾಮರಸ್ ಪಾತ್ರಗಳಲ್ಲಿ ಕೂಡ ಪ್ರಿಯಾಮಣಿ ಮುಂದು. ದಕ್ಷಿಣದಿಂದ ಉತ್ತರದವರೆಗೆ ಪ್ರಿಯಾಮಣಿಗೆ ಅಭಿಮಾನಿಗಳಿದ್ದರೆ, ಸನ್ನಿ ಲಿಯೋನ್ ಗೆ ದೆಹಲಿಯಿಂದ ಮಂಡ್ಯದವರೆಗೆ ಅಭಿಮಾನಿಗಳಿದ್ದಾರೆ. ಇಂತಹ ಇಬ್ಬರು ನಾಯಕಿಯರು ಈಗ ಒಂದೇ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಹೌದು, ಪ್ರಿಯಾಮಣಿ ಮತ್ತು ಸನ್ನಿ ಲಿಯೋನ್.. ಸದ್ದು ಗದ್ದಲ ಮಾಡದೇ ಒಂದೇ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆ ಚಿತ್ರದ ಹೆಸರೇ ಕೊಟೇಶನ್ ಗ್ಯಾಂಗ್. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಪ್ರೇಕ್ಷಕರು ಈ ಇಬ್ಬರು ಚೆಲುವೆಯರನ್ನೂ ನೋಡಿ ಬೆಕ್ಕಸ ಬೆರಗಾಗಿದ್ದಾರೆ. ಯಾಕೆಂದರೆ.. ಇಬ್ಬರು ಇಲ್ಲಿ ಡಿಗ್ಲಾಮ್ ಪಾತ್ರ ನಿರ್ವಹಿಸಿದ್ದಾರೆ.

ಪೌಡರು ಮತ್ತು ಲಿಪ್ ಸ್ಟಿಕುಗಳಿಂದ ಅಂತರವನ್ನೂ ಕಾಪಾಡಿಕೊಂಡು ಪಾತ್ರವನ್ನೇ ಆವಾಹನೆ ಮಾಡಿಕೊಂಡಂತೆ ಸನ್ನಿ ಲಿಯೋನ್ ಮತ್ತು ಪ್ರಿಯಾಮಣಿ ಇಲ್ಲಿ ಆಕ್ಟ್ ಮಾಡಿದ್ದಾರೆ. ಇವರ ಈ ಹಾವ-ಭಾವ-ವೇಷ-ಭೂಷಣ ಅನೇಕರಿಗೆ ದಂಡು ಪಾಳ್ಯ ಗ್ಯಾಂಗ್‌ನ್ನೂ ನೆನಪಿಸುತ್ತಿದೆ. ಹಾಗಂಥ ಇದಕ್ಕೂ ಅದಕ್ಕೂ ಸಂಬಂಧ ಇಲ್ಲ. ಇಲ್ಲಿ ಹಣದ ಮೋಹ ಇದೆ. ದಾರಿ ತಪ್ಪಿದ ಶ್ರೀಮಂತರ ಮಗಳ ಕಥೆ ಇದೆ. ಸೇಡು ಪ್ರತಿಕಾರದ ಕಿಚ್ಚಿದೆ.
ಮುಂಬೈ, ಚೆನೈ ಮತ್ತು ಕಾಶ್ಮೀರದಲ್ಲಿ ಚಿತ್ರೀಕರಣಗೊಂಡ ಈ ಚಿತ್ರದಲ್ಲಿ ಬಾಲಿವುಡ್‌ನ ಹಿರಿಯ ನಟ ಜಾಕಿ ಶ್ರಾಫ್ ಮತ್ತು ಸಾರಾ ಅರ್ಜುನ್ ಕೂಡ ಇದ್ದಾರೆ. ವಿವೇಕ್ ಕುಮಾರ್ ಕಣ್ಣನ್ ಈ ಚಿತ್ರವನ್ನ ನಿರ್ದೇಶಿಸಿದ್ದಾರೆ. ದುಡ್ಡನ್ನೂ ಹಾಕಿದ್ದಾರೆ. ಇವರಿಗೆ ಗಾಯತ್ರಿ ಸುರೇಶ್ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ಸದ್ಯಕ್ಕೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಚಿತ್ರ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ. ಸದ್ಯಕ್ಕೆ ಕೊಟೇಶನ್ ಗ್ಯಾಂಗ್ ಚಿತ್ರದ ಈ ಟ್ರೇಲರ್ ಎಲ್ಲರ ಚಿತ್ತವನ್ನು ಕದಿಯುತ್ತಿದೆ. ಸನ್ನಿ ಲಿಯೋನ್ ಮತ್ತು ಪ್ರಿಯಾಮಣಿ ಅವರ ಭಕ್ತಗಣದ ಕುತೂಹಲವನ್ನೂ ಟ್ರೇಲರ್ ಹೆಚ್ಚಿಸಿದೆ. ಇದಲ್ಲದೇ ಚಿತ್ರದ ಮೇಲೀನ ನಿರೀಕ್ಷೆಯನ್ನೂ ಈ ಟ್ರೇಲರ್ ಹೆಚ್ಚಿಸಿದೆ.
.


Click it and Unblock the Notifications











