ಮಾಣಿಕ್ಯ ನಾಯಕಿ ವರಲಕ್ಷ್ಮೀ ಮದುವೆಯಾಗಿದ್ದು ಎಲ್ಲಿ, ಹೇಗಿತ್ತು ಸಂಭ್ರಮ...?

'ಮಾಣಿಕ್ಯ' ಹಾಗೂ 'ರನ್ನ' ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾದವರು 'ವರಲಕ್ಷ್ಮೀ ಶರತ್ ಕುಮಾರ್'. ಪ್ರಯೋಗಾತ್ಮಕ ಪಾತ್ರಗಳಿಗೆ ಒಡ್ಡಿಕೊಂಡು ಪ್ರತಿಯೊಂದು ಚಿತ್ರದಲ್ಲಿಯೂ ಸವಾಲಿನ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುವುದನ್ನೇ ರೂಢಿ ಮಾಡಿಕೊಂಡಿರುವ 'ವರಲಕ್ಷ್ಮೀ' ಕಳೆದ ಜುಲೈ 03ರಂದು ಮದುವೆಯಾಗಿದ್ದರು. ಆದರೆ..ಅವತ್ತು ಮದ್ವೆ ಸಮಾರಂಭದ ಕ್ಷಣ ಕ್ಷಣದ ಮಾಹಿತಿ ಗೊತ್ತಾಗಿರಲಿಲ್ಲ. ಫೋಟೋ ಬಹಿರಂಗವಾಗಿರಲಿಲ್ಲ. ಆದರೆ ಈಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ಮದುವೆ ಸಮಾರಂಭದ ನಡುವೆ, ವರಲಕ್ಷ್ಮೀ ಶರತ್ ಕುಮಾರ್ ಮತ್ತು ನಿಕೋಲಾಯ್ ಸಚ್‌ದೇವ್ ಮದುವೆ ಫೋಟೋಗಳು ಈಗ ವೈರಲ್ ಆಗುತ್ತಿವೆ.

ಇನ್ನೂ ಹಿಂದೂ ಸಂಪ್ರದಾಯದಂತೆ ಜುಲೈ 03ರಂದು ಸಪ್ತಪದಿ ತುಳಿದಿದ್ದ ಈ ಜೋಡಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಕೂಡ ಆ ನಂತರ ಮದುವೆ ಮಾಡಿಕೊಂಡಿದ್ದರು. ಇನ್ನೂ ಇವರಿಬ್ಬರ ಮದುವೆಗೆ ಬಂದವರು ಬೆರಳೆಣಿಕೆಯಷ್ಟು ಮಂದಿಯಾದರೂ ಎಲ್ಲರೂ ಆತ್ಮೀಯರೇ. ಉಳಿದಂತೆ ವರಲಕ್ಷ್ಮಿ ಬ್ರೈಟ್ ಕೆಂಪು ಬಣ್ಣದ ಸಿಲ್ಕ್ ಸೀರೆ ಧರಿಸಿ, ಬನ್ ಹೇರ್ ಸ್ಟೈಲ್ ಮಾಡಿ ಮಲ್ಲಿಗೆ ಮುಡಿದು, ಕುಂದನ್ ಜ್ಯುವೆಲ್ಲರಿಯಲ್ಲಿ ತುಂಬಾನೆ ಸುಂದರವಾಗಿ ಕಂಡರೆ ನಿಕೋಲಾಯ್ ಆ ದಿನ ಸಾಂಪ್ರದಾಯಿಕ ರೇಷ್ಮೆ ಶರ್ಟ್ ಮತ್ತು ಧೋತಿಯಲ್ಲಿ ಮಿಂಚುತ್ತಿದ್ದರು.

the-wedding-pictures-of-varalaxmi-sarathkumar-and-nicholai-sachdev-have-now-gone-viral

ಇನ್ನೂ ಕ್ರಿಶ್ಚಿಯನ್ ಸಂಪ್ರದಾಯದಂತೆ ನಡೆದ ಮದುವೆ ಸಮಾರಂಭದಲ್ಲಿ ವರಲಕ್ಷ್ಮೀ ಶರತ್ ಕುಮಾರ್, ಹಾಫ್ ವೈಟ್ ಶೋಲ್ಡರ್ ಲೆಸ್ ಲಾಂಗ್ ಗೌನ್ ನಲ್ಲಿ ಕಂಗೊಳಿಸಿದ್ದರೆ, ನಿಕೋಲಾಯ್ ಸಚ್ ದೇವ್ ವೈಟ್ ಬಣ್ಣದ ಸೂಟ್, ಬ್ಲೇಜರ್ ಧರಿಸಿದ್ದರು. ಕುಟುಂಬ ಸದಸ್ಯರು ಮತ್ತು ಎಲ್ಲಾ ಅತಿಥಿಗಳು ಹಿಂದೂ ಮತ್ತು ಕ್ರಿಶ್ಚಿಯನ್ ಸಮಾರಂಭಗಳಿಗೆ ಪ್ಯಾಸಲ್ ಬ್ಲೂ ಬಣ್ಣದ ಬಟ್ಟೆಗಳನ್ನು ಧರಿಸಿದ್ದರು.

ಅಂದ್ಹಾಗೇ ವರಲಕ್ಷ್ಮೀ ಶರತ್ ಕುಮಾರ್ ಮತ್ತು ನಿಕೋಲಾಯ್ ಸಚ್‌ ದೇವ್ ದೂರದ ಥಾಯ್ಲೆಂಡ್‌ನಲ್ಲಿ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಇದೆ. ಆದರೆ.. ವರಲಕ್ಷ್ಮೀ ಆಗಲಿ ಅವರ ತಂದೆ ಶರತ್ ಕುಮಾರ್ ಆಗಲಿ ಈ ವಿಚಾರವನ್ನು ಅಧಿಕೃತವಾಗಿ ಹಂಚಿಕೊಂಡಿಲ್ಲ. ಅಧಿಕೃತವಾಗಿ ಮದುವೆಯ ಫೋಟೋಗಳನ್ನೂ ಕೂಡ ಶೇರ್ ಮಾಡಿಲ್ಲ. ಆದರೂ ಕೂಡ ಮದುವೆಯ ಸಮಾರಂಭದ ಫೋಟೋಗಳು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಗದ್ದಲದ ನಡುವೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

the-wedding-pictures-of-varalaxmi-sarathkumar-and-nicholai-sachdev-have-now-gone-viral

ಇನ್ನೂ ಮದುವೆಯ ನಂತರ ಜುಲೈ 04ರಂದು ಶರತ್ ಕುಮಾರ್ ತಮ್ಮ ಮಗಳ ಆರತಕ್ಷತೆಯ ಕಾರ್ಯಕ್ರಮವನ್ನು ಚೆನ್ನೈನಲ್ಲಿ ಹಮ್ಮಿಕೊಂಡಿದ್ದರು. ಅದ್ಧೂರಿಯಾಗಿ ನಡೆದಿದ್ದ ಈ ಆರತಕ್ಷತೆ ಸಮಾರಂಭದಲ್ಲಿ ಕಿಚ್ಚ ಸುದೀಪ್ ತಮ್ಮ ಕುಟುಂಬ ಸಮೇತ ಭಾಗಿಯಾಗಿ ನವ ಜೋಡಿಗೆ ಶುಭಾಶಯವನ್ನೂ ಕೋರಿದ್ದರು.

ಮಿಕ್ಕಂತೆ ನಿಖೋಲಯ್ ಸಚ್​ದೇವ್ ಮುಂಬೈನಲ್ಲಿ ಆರ್ಟ್ ಗ್ಯಾಲರಿ ಹೊಂದಿದ್ದಾರೆ. ಉದ್ಯಮಿಯೂ ಹೌದು. ಇನ್ನೂ ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಸಂದರ್ಶನದಲ್ಲಿ ತನ್ನ ತಂದೆ ಶರತ್ ಕುಮಾರ್ ಮುಂದೆನೇ ತಮಗೆ ಭಾವಿ ಪತಿ ನಿಕೋಲಾಯ್ ಪ್ರಮೋಸ್ ಮಾಡಿದ್ದರು ಎಂದು ಹೇಳಿದ್ದರು ವರಲಕ್ಷ್ಮೀ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X