Leo Vs Jailer: 'ಲಿಯೋ' ಕಲೆಕ್ಷನ್ ರಿಪೋರ್ಟ್ ಫೇಕ್?: 'ಜೈಲರ್' ದಾಖಲೆ ಮುರಿಯುವುದು ಸಾಧ್ಯವಿಲ್ಲ!
ಕಾಲಿವುಡ್‌ನಲ್ಲಿ 'ಲಿಯೋ' ವರ್ಸಸ್ 'ಜೈಲರ್' ಬಾಕ್ಸಾಫೀಸ್ ಕಲೆಕ್ಷನ್ ಫೈಟ್ ಮುಂದುವರೆದಿದೆ. 'ಲಿಯೋ' ಕಲೆಕ್ಷನ್ ರಿಪೋರ್ಟ್ ಫೇಕ್ ಎನ್ನುವ ವಾದದ ನಡುವೆಯೂ ಚಿತ್ರತಂಡವೇ ಕಲೆಕ್ಷನ್ ಎಷ್ಟು ಎನ್ನುವುದನ್ನು ಹೇಳಿ ಶಾಕ್ ಕೊಡುತ್ತಿದೆ. ಸದ್ಯ 'ಲಿಯೋ' ಸಿನಿಮಾ 'ಜೈಲರ್' ದಾಖಲೆ ಮುರಿದಿದೆ ಎನ್ನುವ ಚರ್ಚೆ ಶುರುವಾಗಿದೆ.
11 ದಿನಕ್ಕೆ ದಳಪತಿ ವಿಜಯ್ ನಟನೆಯ 'ಲಿಯೋ' ಸಿನಿಮಾ 540 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ನಿರ್ಮಾಪಕಡು ಘೋಷಿಸಿದ್ದಾರೆ. ಮಿಶ್ರ ಪ್ರತಿಕ್ರಿಯೆ ಪಡೆದ ಸಿನಿಮಾ ಇಷ್ಟು ಕಲೆಕ್ಷನ್ ಮಾಡೋಕೆ ಸಾಧ್ಯವೇ ಇಲ್ಲ. ಥಿಯೇಟರ್‌ಗಳ ಸಂಖ್ಯೆ ಕೂಡ ಕಮ್ಮಿ ಇತ್ತು. ಆದಾಗ್ಯೂ 'ಲಿಯೋ' ಸಿನಿಮಾ ಇಷ್ಟು ಬೇಗ 500 ಕೋಟಿ ರೂ. ಕ್ಲಬ್ ಸೇರುವುದು ಸಾಧ್ಯವಿಲ್ಲ ಎನ್ನುವುದು ಕೆಲವರ ವಾದ. ಆದರೆ ಚಿತ್ರತಂಡವೇ ಘೋಷಣೆ ಮಾಡುತ್ತಿರುವುದರಿಂದ ಇದನ್ನು ನಂಬಬೇಕೋ, ಬೇಡವೋ ಎಂದು ತಮಿಳು ಪ್ರೇಕ್ಷಕರು ಗೊಂದಲಕ್ಕೀಡಾಗಿದ್ದಾರೆ.

ಲೋಕೇಶ್ ಕನಕರಾಜ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ಲಿಯೋ' ಸಿನಿಮಾ ಅಕ್ಟೋಬರ್ 19ಕ್ಕೆ ರಿಲೀಸ್ ಆಗಿತ್ತು. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿತ್ತು. ದಳಪತಿ ಅಭಿಮಾನಿಗಳು ಮಾತ್ರ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಭರ್ಜರಿ ಅಡ್ವಾನ್ಸ್ ಬುಕ್ಕಿಂಗ್‌ನಿಂದ ಮೊದಲ ದಿನವೇ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ಮೊದಲ ದಿನ 148 ಕೋಟಿ ರೂ. ಗಳಿಕೆ ಕಂಡಿದ್ದಾಗಿ ಸಿನಿಮಾ ನಿರ್ಮಿಸಿರುವ ಸೆವೆನ್ ಸ್ಕ್ರೀನ್ ಸ್ಟುಡಿಯೋ ಸಂಸ್ಥೆ ಘೋಷಿಸಿತ್ತು.
'ಲಿಯೋ' ಸಿನಿಮಾ ಬಿಡುಗಡೆಗೂ ಮೊದಲಿನಿಂದ ವಿಜಯ್ ಹಾಗೂ ರಜನಿಕಾಂತ್ ಅಭಿಮಾನಿಗಳ ನಡುವೆ ತಿಕ್ಕಾಟ ಶುರುವಾಗಿತ್ತು. 'ಜೈಲರ್' ದಾಖಲೆಯನ್ನು 'ಲಿಯೋ' ಸಿನಿಮಾ ಮುರಿಯುತ್ತದೆ ಎನ್ನುವ ಚರ್ಚೆ ನಡೆದಿತ್ತು. 'ಜೈಲರ್' ಸಿನಿಮಾ 15 ದಿನಕ್ಕೆ 530 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಆದರೆ 'ಲಿಯೋ' 12 ದಿನಕ್ಕೆ 540 ಕೋಟಿ ಗಳಿಸಿದೆ. ಆ ಮೂಲಕ 'ಜೈಲರ್' ಬಾಕ್ಸಾಫೀಸ್ ದಾಖಲೆ ಅಳಿಸಿ ಹಾಕಿದೆ ಎನ್ನುವುದು ಕೆಲವರ ವಾದ.
'ಲಿಯೋ' ಕಲೆಕ್ಷನ್ ರಿಪೋರ್ಟ್ ಫೇಕ್, ಯಾವುದೇ ಕಾರಣಕ್ಕೂ ಸಿನಿಮಾ 'ಜೈಲರ್' ದಾಖಲೆ ಮುರಿಯುವುದಿಲ್ಲ ಎಂದು ತಿರುಚ್ಚಿಯ ಚಿತ್ರಮಂದಿರ ಮಾಲೀಕ, ವಿತರಕ ಶ್ರೀಧರ್ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಶ್ರೀಧರ್ ನೀಡಿರುವ ಹೇಳಿಕೆ ಸದ್ಯ ವೈರಲ್ ಆಗುತ್ತಿದೆ.

"ಸಿನಿಮಾ ಬಿಡುಗಡೆಯಾದ ಗುರುವಾರ, ಶುಕ್ರವಾರ, ಶನಿವಾರ, ಭಾನುವಾರ, ಸೋಮವಾರ ಹಾಗೂ ಮಂಗಳವಾರ 'ಲಿಯೋ' ಕಲೆಕ್ಷನ್ ಚೆನ್ನಾಗಿತ್ತು. ಆದರೆ ಮತ್ತೆ ಬುಧವಾರ, ಗುರುವಾರ ಗಳಿಕೆ ಹೀನಾಯವಾಗಿತ್ತು. ಹಲವು ಕಡೆ ಶೋಗಳು ರದ್ದಾದವು. ಎರಡನೇ ದಿನ 'ಲಿಯೋ' ಕಲೆಕ್ಷನ್ ಕಡಿಮೆಯಾಗಿದ್ದ ನಿಜ. ನಾನು ಕೂಡ ಥಿಯೇಟರ್ ನಡೆಸುತ್ತಿದ್ದೇನೆ ಹಾಗಾಗಿ ಹೀಗೆ ಹೇಳುತ್ತಿದ್ದೇನೆ"
2ನೇ ವಾರಾಂತ್ಯದಲ್ಲಿ ಶನಿವಾರ, ಭಾನುವಾರ, ಸೋಮವಾರ, ಮಂಗಳವಾರ ಕಲೆಕ್ಷನ್ ಚೆನ್ನಾಗಿತ್ತು. ನವೆಂಬರ್ 1, ನವೆಂಬರ್ 2ರಂದು ಕಲೆಕ್ಷನ್ ಹೇಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ನಾನು ಚಿತ್ರಮಂದಿರ ನಡೆಸುತ್ತಿದ್ದೇನೆ. ನನಗೆ ಪ್ರೇಕ್ಷಕರ ನಾಡಿಮಿಡಿತ ಗೊತ್ತು. ಒಂದೇ ಮಾತಲ್ಲಿ ಹೇಳಬೇಕು ಅಂದರೆ ಜೈಲರ್ ಮೊದಲ ವಾರದ ಕಲೆಕ್ಷನ್ ಹಾಗೂ ಲೈಫ್ ಟೈಮ್ ಕಲೆಕ್ಷನ್ ಅನ್ನು 'ಲಿಯೋ' ಮೀರಿಸೋದಕ್ಕೆ ಸಾಧ್ಯತೆಯಿಲ್ಲ. ಕಾರಣ 'ಲಿಯೋ' ಸಿನಿಮಾ ಚೆನ್ನಾಗಿಲ್ಲ. ಇನ್ನು 5 ವಾರ ಸಿನಿಮಾ ಪ್ರದರ್ಶನ ಕಂಡರೂ 'ಜೈಲರ್' ಗಳಿಕೆ ಮೀರಿಸಲು ಸಾಧ್ಯವಿಲ್ಲ" ಎಂದು ಶ್ರೀಧರ್ ಹೇಳಿದ್ದಾರೆ.
'ಲಿಯೋ' ಚಿತ್ರದಲ್ಲಿ ತ್ರಿಷಾ ನಾಯಕಿಯಾಗಿ ನಟಿಸಿದ್ದು ಅರ್ಜುನ್ ಸರ್ಜಾ, ಸಂಜಯ್ ದತ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಅನಿರುದ್ ರವಿಚಂದರ್ ಸಂಗೀತ ಚಿತ್ರಕ್ಕಿದೆ. 'ಲಿಯೋ' ಸಿನಿಮಾ ಕೂಡ ಲೋಕೇಶ್ ಕನಕರಾಜ್ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ಜಾಗ ಮಾಡಿಕೊಂಡಿದೆ. ಹಾಗಾಗಿ ಲೋಕೇಶ್ ಮುಂದಿನ ಸಿನಿಮಾಗಳ ಬಗ್ಗೆ ಭಾರೀ ಕುತೂಹಲ ಮೂಡಿದೆ.


Click it and Unblock the Notifications











