ವಿಜಯ್ ಮತ್ತು ತ್ರಿಶಾ ಬೇಗ ಮದುವೆಯಾಗಬೇಕು, ಮೆಹಂದಿ ಶಾಸ್ತ್ರಕ್ಕೆ ನಾನು ಹೋಗಬೇಕು ; ಮನದ ಆಸೆ ಹಂಚಿಕೊಂಡ ಖ್ಯಾತ ನಟಿ

ದಾಂಪತ್ಯ ಕಲಹದಿಂದ ಈ ಚುನಾವಣೆಯಲ್ಲಿ ವಿಜಯ್‌ಗೆ ಹಿನ್ನೆಡೆಯಾಗಬಹುದು ಎಂದು ಹಲವರು ಅಂದುಕೊಂಡಿದ್ದರು. ಆದರೆ .. ಲೆಕ್ಕ ತಪ್ಪಿತು. ಮುಖ್ಯಮಂತ್ರಿಯ ಗದ್ದುಗೆ ವಿಜಯ್‌ಗೆ ಒಲಿಯಿತು. ಇನ್ನೂ ಗೆದ್ದಿದ್ದು ವಿಜಯ್ ಆದರೂ ಸಂಭ್ರಮ ಕಂಡು ಬರುತ್ತಿರುವುದು ತ್ರಿಶಾ ಮೊಗದಲ್ಲಿ. ನಿಜಾ, ಇಬ್ಬರು ಅತ್ಯಾಪ್ತ ಸ್ನೇಹಿತರಾಗಿರಬಹುದು. ಗೆಳೆಯ ಗೆದ್ದ ಖುಷಿಯಲ್ಲಿ ತ್ರಿಶಾ ಇರಬಹುದು.

ಆದರೆ ಇವರ ಸಂಬಂಧದ ಮೇಲೆ ಇವತ್ತು ಕೂಡ ಪ್ರಶ್ನಾರ್ಥಕ ಚಿಹ್ನೆ ಇದ್ದೇ ಇದೆ. ಈ ಪ್ರಶ್ನೆಗೆ ಅಧಿಕೃತ ಉತ್ತರ ಸಿಗುವವರೆಗೆ ಅಂತೆ-ಕಂತೆಯ ಸಂತೆಯಲ್ಲಿ ವಿಜಯ್ ಮತ್ತು ತ್ರಿಶಾ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧ ಇದೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಾರೆ. ಮಾತನಾಡಿಕೊಳ್ಳುತ್ತಿದ್ದಾರೆ. ಸಂಗೀತಾ ಮತ್ತು ವಿಜಯ್ ಅವರ 27 ವರ್ಷದ ದಾಂಪತ್ಯ ಮುರಿದು ಬೀಳಲು ತ್ರಿಶಾನೇ ನೇರ ಕಾರಣ ಎಂದು ಹಲವರು ಆರೋಪವನ್ನು ಕೂಡ ಹೊರಿಸಿದ್ಧಾರೆ.

They Should Just Marry Rakhi Sawant Drops Bombshell On Thalapathy Vijay-Trisha Rumors

ಇನ್ನೂ ಇವರಿಬ್ಬರ ನಡುವಿನ ಆತ್ಮೀಯತೆ ಈಗ ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ರಾಜಕೀಯದ ಪಡಸಾಲೆಯವರೆಗೂ ವಿಸ್ತಾರಗೊಂಡಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ವಿಜಯ್ ಅವರ ಹಿಂದೆ ಹಿಂದೆಯೇ ತ್ರಿಶಾ ಕೂಡ ರಾಜಕೀಯದ ರಣರಂಗಕ್ಕೆ ಧುಮುಕುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹೀಗಿರುವಾಗ ರಾಖಿ ಸಾವಂತ್ ವಿಜಯ್ ಮತ್ತು ತ್ರಿಶಾ ಅವರನ್ನು ಗಂಡ-ಹೆಂಡತಿಯನ್ನಾಗಿ ನೋಡಬೇಕೆನ್ನುವ ತಮ್ಮ ಮನದಾಸೆಯನ್ನು ಹಂಚಿಕೊಂಡಿದ್ಧಾರೆ.

ಹೌದು, ವಿವಾದಗಳ ಹೊರತಾಗಿ ಬದುಕುವ ಹಂಬಲ ಇಲ್ಲದವರು ರಾಖಿ ಸಾವಂತ್. ಆದರೆ ಒಂದ್ಕಾಲದಲ್ಲಿ ತನ್ನ ಅಂದ ಚೆಂದ ರೂಪದಿಂದ ಎಲ್ಲರನ್ನು ಸೆಳೆದ ಸುಂದರಿ. ''ಪರದೇಸಿಯಾ ಯೇ ಸಚ್ ಹೈ ಪಿಯಾ'' ಎಂದು ಕುಣಿದಾಗ ಸುಪ್ತವಾಗಿದ್ದ ಪ್ರಜ್ಞೆಯೊಂದು ಹೆಡೆ ಬಿಚ್ಚಿತ್ತು. ಕಂಪ್ಯೂಟರ್ ಹ್ಯಾಂಗ್ ಆಗಿ ಶಟ್‌ಡೌನ್ ಆಗುವ ಹಂತಕ್ಕೆ ಬರುತ್ತಿತ್ತು.

ಆದರೆ ದುರಾದೃಷ್ಟ ಸಿಕ್ಕ ಈ ಜನಪ್ರಿಯತೆಯಿಂದ ರಾಖಿ ಸಾವಂತ್ ಮೈ ಮರೆತರು. ಬಾಲಿವುಡ್ ಪಾಲಿಗೆ ದಾರಿ ತಪ್ಪಿದ ಮಗಳಾದರು. ಇಲ್ಲಿಂದಾಚೆ ಕೇವಲ ರಂಪ ರಾಮಾಯಣದಿಂದ ಸದ್ದು ಮಾಡುತ್ತಾ ಬಂದ ರಾಖಿ ಸಾವಂತ್ ಸದ್ಯ ವಿಜಯ್ ಮತ್ತು ತ್ರಿಶಾ ಆದಷ್ಟು ಬೇಗ ಮದುವೆಯಾಗಬೇಕು ಎಂದಿದ್ಧಾರೆ.

ಈ ಕುರಿತು ''ಫಿಲ್ಮಿಮಂತ್ರ ಮೀಡಿಯಾ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಾಖಿ ಸಾವಂತ್, ವಿಜಯ್ ಮತ್ತು ತ್ರಿಶಾ ಆದಷ್ಟು ಬೇಗ ಮದುವೆಯಾಗಬೇಕು ಎಂದು ನನಗೆ ಅನಿಸುತ್ತೆ ಎಂದು ಹೇಳಿದ್ಧಾರೆ. ಅವರ ಮದುವೆಯ ಮೆಹಂದಿ ಸಮಾರಂಭಕ್ಕೆ ನಾವು ಹೋಗುತ್ತೇವೆ ಎಂದಿದ್ಧಾರೆ. ಇಬ್ಬರನ್ನು ಗಂಡ-ಹೆಂಡ್ತಿಯನ್ನಾಗಿ ನೋಡುವ ತಮ್ಮ ಮನದ ಆಸೆಯನ್ನು ಈ ಮೂಲಕ ಹಂಚಿಕೊಂಡಿದ್ಧಾರೆ.

ತ್ರಿಶಾ ಮತ್ತು ವಿಜಯ್ ಜೋಡಿ ತುಂಬಾ ಚೆನ್ನಾಗಿ ಕಾಣುತ್ತೆ ಎಂದು ಹೇಳಿರುವ ರಾಖಿ ಸಾವಂತ್ ನನಗೆ ಮೊದಲಿಂದ ತ್ರಿಶಾ ಪರಿಚಯ, ನಾವು ಇಬ್ಬರು ಒಟ್ಟಿಗೆ ಚಿತ್ರರಂಗಕ್ಕೆ ಬಂದಿದ್ದು, ಇಲ್ಲಿ ಅವಕಾಶ ಸಿಗದ ಹಿನ್ನೆಲೆ ತ್ರಿಶಾ ದಕ್ಷಿಣ ಭಾರತಕ್ಕೆ ಹೋದರು ಎಂದು ಹೇಳಿದ್ದಾರೆ. ನನ್ನ ''ಪರದೇಸಿಯಾ'' ಆಲ್ಬಂ ಬಂದಾಗಿನಿಂದ ನನಗೆ ತ್ರಿಶಾ ಗೊತ್ತು ಎಂದಿದ್ದಾರೆ.

ಇಷ್ಟೇ ಅಲ್ಲ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ಕುರಿತು ಕೂಡ ಪ್ರತಿಕ್ರಿಯೆ ನೀಡಿರುವ ರಾಖಿ ಸಾವಂತ್, ತಮಿಳುನಾಡಿನಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಸ್ಥಾನಗಳನ್ನು ಗೆದ್ದ ಮೊದಲ ಕ್ರಿಶ್ಚಿಯನ್ ವ್ಯಕ್ತಿ ವಿಜಯ್ ಎಂದು ಬಣ್ಣಿಸಿದ್ದಾರೆ. ನನಗೆ ವೈಯಕ್ತಿಕವಾಗಿ ವಿಜಯ್ ಅಂದರೆ ತುಂಬಾ ಇಷ್ಟ ಎಂದು ಹೇಳಿರುವ ರಾಖಿ ಸಾವಂತ್, ಅವರ ಜೊತೆ ಒಂದೇ ಒಂದು ಹಾಡಿನಲ್ಲಿ ಡ್ಯಾನ್ಸ್ ಮಾಡಬೇಕು ಎನ್ನುವುದು ನನ್ನ ಕನಸಾಗಿತ್ತು. ಆ ಕನಸು ಕನಸಾಗಿಯೇ ಉಳಿಯಿತು ಎಂದಿದ್ದಾರೆ. ಅವರ ಪಕ್ಷಕ್ಕೆ ಸೇರಬೇಕು ಎಂದು ನನಗೆ ಈಗ ಅನಿಸುತ್ತಿದೆ ಎಂದು ಕೂಡ ಹೇಳಿದ್ದಾರೆ. ಸದ್ಯ ರಾಖಿ ಸಾವಂತ್ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

English summary
Rakhi Sawant finally weighs in on the Thalapathy Vijay and Trisha Krishnan dating rumors! Read her viral "get married" demand that has the internet talking.
Read more about: rakhi sawanth vijay trisha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X