For Quick Alerts
  ALLOW NOTIFICATIONS  
  For Daily Alerts

  ಕೊರೊನಾದಿಂದ ತಮಿಳು ನಟ, ಛಾಯಾಗ್ರಾಹಕ ಶಮನ್ ನಿಧನ

  |

  ತಮಿಳಿನ ನಟ, ಛಾಯಾಗ್ರಾಹಕ ಶಮನ್ ಮಿತ್ರು ಕೊರೊನಾದಿಂದ ಮೃತಪಟ್ಟಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ. ಗುರುವಾರ (ಜೂನ್ 17) ಬೆಳಗ್ಗೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಶಮನ್ ಕೊನೆಯುಸಿರೆಳೆದರು.

  ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಶಮನ್ ಸುಮಾರು ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದ ಕಾರಣ 43 ವರ್ಷದ ಶಮನ್ ಸಾನ್ನಪ್ಪಿದ್ದಾರೆ.

  ಶಮನ್ ಮಿತ್ರು ವಿವಾಹವಾಗಿದ್ದು ಪತ್ನಿ ಮತ್ತು ಐದು ವರ್ಷ ಮಗನನ್ನು ಬಿಟ್ಟು ಅಗಲಿದ್ದಾರೆ.

  ತಮಿಳು ಇಂಡಸ್ಟ್ರಿಯಲ್ಲಿ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದ ಶಮನ್ 2019ರಲ್ಲಿ ತೆರೆಕಂಡ 'ತೊರಟ್ಟಿ' ಚಿತ್ರದ ಮೂಲಕ ನಾಯನಟನಾಗಿಯೂ ಪರಿಚಯ ಆಗಿದ್ದರು. ಖುದ್ದು ಅವರೇ ಈ ಚಿತ್ರ ನಿರ್ಮಿಸಿದ್ದರು. ಮಾರಿಮುತ್ತು ಈ ಚಿತ್ರ ನಿರ್ದೇಶಿಸಿದ್ದರು. ದೇಶದ ಹಲವು ಚಿತ್ರೋತ್ಸವಗಳಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿದೆ.

  ಶಮನ್ ಮಿತ್ರು ಅವರ ಅಂತ್ಯಕ್ರಿಯೆಯನ್ನು ಕುಟುಂಬ, ಸ್ನೇಹಿತರ ಸಮ್ಮುಖದಲ್ಲಿ ಚೆನ್ನೈನ ಪಾಲಿಕೆಯ ಸಿಬ್ಬಂದಿ ನೆರವೇರಿಸಲಿದ್ದಾರೆ.

  ಹಿರಿಯ ನಟಿಯ ಮಗ ನಿಧನ

  ದರ್ಶನ್ ಮಾತಿಗೆ ಬೆಲೆ ಕೊಟ್ಟ ಸ್ಯಾಂಡಲ್ ವುಡ್ ಸೀನಿಯರ್ಸ್ ಹಾಗೂ ಜೂನಿಯರ್ಸ್ | Filmibeat Kannada

  ದಕ್ಷಿಣ ಭಾರತದ ಖ್ಯಾತ ಹಿರಿಯ ನಟಿ ಕವಿತಾ ಅವರ ಮಗ ಸಂಜಯ್ ರೂಪ್ ಕೋವಿಡ್‌ಗೆ ಬಲಿಯಾಗಿದ್ದರು. ಕವಿತಾ ಪತಿ ದಶರಥ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  English summary
  Thoratti Actor Shaman Mithru who also produced it, passed away due to Covid complications in Chennai early this morning.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X