ಬಾಕ್ಸಾಫೀಸ್‌ನಲ್ಲಿ 'ವಾರಿಸು' Vs 'ಥುನಿವು': 300 ಕೋಟಿ ಬಾಚಿದ ದಳಪತಿ, ಥಲಾ ಕಥೆಯೇನು?

ಸಂಕ್ರಾಂತಿ ಸಂಭ್ರಮದಲ್ಲಿ ಬಿಡುಗಡೆಯಾದ ತಮಿಳಿನ 'ವಾರಿಸು' ಹಾಗೂ 'ಥುನಿವು' ಸಿನಿಮಾಗಳು ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಮುಂದುವರೆಸಿವೆ. ಕೋಟಿ ಕೋಟಿ ಕೊಳ್ಳೆ ಹೊಡೆದು 2 ಸಿನಿಮಾಗಳು ಬಾಕ್ಸಾಫೀಸ್ ಶೇಕ್ ಮಾಡ್ತಿವೆ. ಸದ್ಯ 'ವಾರಿಸು' ಸಿನಿಮಾ ಹೊಸ ಮೈಲಿಗಲ್ಲು ಸಾಧಿಸಿರುವುದಾಗಿ ಚಿತ್ರತಂಡ ಘೋಷಿಸಿದೆ.

Thunivu vs Varisu collection: Varisu enters the 300 Crs worldwide gross collection

ಕಾಲಿವುಡ್‌ನಲ್ಲಿ ದಳಪತಿ ವಿಜಯ್ ಹಾಗೂ ಥಲಾ ಅಜಿತ್ ನಡುವಿನ ಸ್ಟಾರ್ ವಾರ್, ಫ್ಯಾನ್ಸ್ ಗೊತ್ತೇಯಿದೆ. ಅದೇ ಕಾರಣಕ್ಕೆ ಸಂಕ್ರಾಂತಿಗೆ ಇಬ್ಬರು ಸಿನಿಮಾಗಳನ್ನು ರಿಲೀಸ್ ಮಾಡಲು ಮುಂದಾಗಿದ್ದರು. ಒಂದೇ ದಿನ 2 ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದಿದ್ದವು. ಆದರೆ ಎರಡೂ ಸಿನಿಮಾಗಳಿಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಹಬ್ಬದ ಸಂಭ್ರಮದಲ್ಲಿ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದರು. ಪರಿಣಾಮ ಕಲೆಕ್ಷನ್ ಹೆಚ್ಚಾಗಿತ್ತು. ಸದ್ಯ 2 ಸಿನಿಮಾಗಳು 25 ದಿನ ಪೂರೈಸಿ ಮುನ್ನುಗ್ಗುತ್ತಿವೆ.

Thunivu vs Varisu collection: Varisu enters the 300 Crs worldwide gross collection

ವಂಶಿ ಪೈಡಿಪಲ್ಲಿ ನಿರ್ದೇಶನದ ಫ್ಯಾಮಿಲಿ ಆಕ್ಷನ್ ಎಂಟರ್‌ಟೈನರ್ ಸಿನಿಮಾ 'ವಾರಿಸು'. ರಶ್ಮಿಕಾ ಮಂದಣ್ಣ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು. ಇನ್ನು ಹೆಚ್. ವಿನೋದ್ ನಿರ್ದೇಶನದ 'ಥುನಿವು' ಪಕ್ಕಾ ಆಕ್ಷನ್ ಎಂಟರ್‌ಟೈನರ್ ಸಿನಿಮಾ. ಸದ್ಯ 'ವಾರಿಸು' ಸಿನಿಮಾ 300 ಕೋಟಿ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಘೋಷಿಸಿದೆ. ಆದರೆ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಗೂ ಹೇಳುತ್ತಿರುವ ಕಲೆಕ್ಷನ್‌ಗೂ ವ್ಯತ್ಯಾಸ ಇದೆ ಎಂದು ಕೆಲವರು ಹೇಳುತ್ತಿದ್ದಾರೆ.

Thunivu vs Varisu collection: Varisu enters the 300 Crs worldwide gross collection

ಇನ್ನು 'ಥುನಿವು' ಚಿತ್ರತಂಡ ಅಧಿಕೃತವಾಗಿ ಒಟ್ಟು ಕಲೆಕ್ಷನ್ ಎಷ್ಟು ಎಂದು ಘೋಷಿಸಿಲ್ಲ. ಆದರೆ ಸಿನಿಮಾ 250 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಹಾಗಾಗಿ ಸಂಕ್ರಾಂತಿ ಫೈಟ್‌ನಲ್ಲಿ 'ವಾರಿಸು' ವಿಜಯ್ ಗೆದ್ದಂತಾಗಿದೆ. ಇನ್ನು ಶೀಘ್ರದಲ್ಲೇ 2 ಸಿನಿಮಾಗಳು ಓಟಿಟಿಗೆ ಬರಲಿದೆ. ಆದರೆ ಮತ್ತೊಂದು ಕಡೆ ಚಿತ್ರದ ಹೆಚ್‌ಡಿ ಪ್ರಿಂಟ್ ಲೀಕ್ ಆಗಿ ಹರಿದಾಡ್ತಿದೆ.

More from Filmibeat

English summary
Thunivu vs Varisu box office collection: Varisu officially enters the 300 Crs worldwide gross collection.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X