ನಟ ಧನುಷ್ ಮೊದಲ ತೆಲುಗು ಚಿತ್ರ ಪ್ರಕಟ: ತಮಿಳು ವಿಜಯ್‌ಗೆ ಧನುಷ್ ಸವಾಲು!
ತಮಿಳು ನಟ ಧನುಷ್ ಹೊಸ ಚಿತ್ರವನ್ನು ಪ್ರಕಟ ಮಾಡಿದ್ದಾರೆ. ನಟ ಧನುಷ್ ಸಿನಿಮಾಗಳು ಸದಾ ವಿಭಿನ್ನತೆಗೆ ಹಾತೊರೆಯುತ್ತಿರುತ್ತವೆ. ಈಗಾಗಲೇ ಸಾಲು ಸಾಲು ಚಿತ್ರಗಳಲ್ಲಿ ನಟ ಧನುಷ್ ನಿರತರಾಗಿದ್ದಾರೆ. ಈ ನಡುವೆ ಈಗ ಮತ್ತೊಂದು ಚಿತ್ರವನ್ನು ಧನುಷ್ ಪ್ರಕಟ ಮಾಡಿದ್ದಾರೆ.
ಈ ಚಿತ್ರದ ಟೈಟಲ್ ಕಥೆಯ ವಿಶೇಷತೆಯನ್ನು ಸಾರುತ್ತಿದೆ. ಚಿತ್ರಕ್ಕೆ ತಮಿಳಿನಲ್ಲಿ 'ವಾತಿ' ಮತ್ತು ತೆಲುಗಿನಲ್ಲಿ 'ಸರ್' ಎನ್ನುವ ಟೈಟಲ್ ಇಡಲಾಗಿದೆ. ಅಂದರೆ ಈ ಚಿತ್ರ ಶಿಕ್ಷಣದ ಸುತ್ತ ಹೆಣೆದಿರುವ ಕಥೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಸದ್ಯ ಚಿತ್ರದ ಟೈಟಲ್ ಜೊತೆಗೆ ಟೀಸರ್ ಕೂಡ ರಿಲೀಸ್ ಆಗಿದೆ.
ಧನುಷ್ ಅವರು ವಿಶೇಷವಾದ ಪ್ರಯೋಗಾತ್ಮಕ ಚಿತ್ರಗಳಲ್ಲಿ ಇದು ಒಂದು ಹೇಳಲಾಗುತ್ತಿದೆ. ಹೊಸ ಚಿಂತನೆಯ ಜೊತೆಗೆ ಚಿತ್ರದಲ್ಲಿ ಕಮರ್ಷಿಯಲ್ ಅಂಶಗಳನ್ನೂ ಕೂಡ ಅಳವಡಿಸಲಾಗುತ್ತದೆ.
ತಮಿಳು ನಟ ಧನುಷ್ ಇನ್ನು ಮುಂದೆ 'ಸರ್ ಧನುಷ್'!
ಚಿತ್ರದ ಹೆಸರೇ ಕತೆಯ ಬಗ್ಗೆ ಒಂದಷ್ಟು ಸುಳಿವು ಕೊಡುತ್ತದೆ. ಇದು ಶಿಕ್ಷಣದ ಕುರಿತಾದ ಚಿತ್ರ ಅಥವಾ ಶೈಕ್ಷಣಿಕ ವ್ಯವಸ್ಥೆಯ ಸುತ್ತಲೂ ನಡೆಯುವ ಕಥೆಯಂತೆ ಅನಿಸುತ್ತೆ. ಈ ಚಿತ್ರದಲ್ಲಿ ಧನುಷ್ ಪಾತ್ರ ಏನು ಎನ್ನುವುದು ಕೂಡ ರಿವೀಲ್ ಆಗಿದೆ. ನಟ ಧನುಷ್ ಶಿಕ್ಷಕನ ಪಾತ್ರ ಮಾಡುತ್ತಿದ್ದಾರೆ. ಪ್ರಥಮ ದರ್ಜೆಯ ಕಾಲೇಜು ಶಿಕ್ಷಕನಾಗಿ ಈ ಚಿತ್ರದಲ್ಲಿ ಧನುಷ್ ಕಾಣಿಸಿ ಕೊಳ್ಳುತ್ತಿದ್ದಾರೆ. ಟೀಸರ್ ಹಂಚಿಕೊಂಡಿರುವ ಧನುಷ್ 'ಇದು ನನ್ನ ಮುಂದಿನ ಚಿತ್ರ' ಎಂದು ಬರೆದುಕೊಂಡಿದ್ದಾರೆ.
'ಸರ್' ಧನುಷ್ ಮೊದಲ ತೆಲುಗು ಚಿತ್ರ!
ನಟ ಧನುಷ್ ಒಂದೇ ರೀತಿಯ ಪಾತ್ರಗಳಿಗೆ ಜೋತು ಬೀಳುವವರಲ್ಲ. ಅವರ ಒಂದು ಚಿತ್ರಕ್ಕಿಂತಲೂ ಮತ್ತೊಂದು ಚಿತ್ರದ ಪಾತ್ರ ಭಿನ್ನ ಎನಿಸುವಂತೆಯೇ ಇರುತ್ತದೆ, ಹಾಗೆಯೇ 'ಅಸುರನ್' ಚಿತ್ರದ ಬಳಿಕ ಧನುಷ್ ಚಿತ್ರಗಳ ಮೇಲಿನ ನಿರೀಕ್ಷೆಗಳು ಮತ್ತಷ್ಟು ಹೆಚ್ಚಾಗಿವೆ. ಹಾಗಾಗಿ 'ವಾತಿ' ಚಿತ್ರದ ಮೇಲು ಕೂಡ ಮೊದಲ ಹೆಜ್ಜೆಯಲ್ಲೇ ನಿರೀಕ್ಷೆಗಳು ಮನೆ ಮಾಡಿವೆ. ಶಿಕ್ಷಕನ ಪಾತ್ರದಲ್ಲಿ ಧನುಷ್ ಏನು ಹೇಳ್ತಾರೆ. ಎನ್ನುವುದನ್ನು ನೋಡ ಬೇಕಾದರೆ ಸಿನಿಮಾ ತಯಾರಾಗಿ ರಿಲೀಸ್ ಆಗುವ ತನಕ ಕಾಯಬೇಕು. ಇನ್ನೂ ಈ ಚಿತ್ರ ಧನುಷ್ ಅವರ ಮೊದಲ ತೆಲುಗು ಚಿತ್ರ ಎನ್ನುವುದು ವಿಶೇಷ. ಇಲ್ಲಿ ತನಕ ಧನುಷ್ ತಮ್ಮ ಚಿತ್ರಗಳನ್ನು ತೆಲುಗು, ತಮಿಳಿನಲ್ಲಿ ಒಟ್ಟಿಗೆ ನಿರ್ಮಿಸಿಲ್ಲ. ಇದೆ ಮೊದಲ ಬಾರಿಗೆ 'ಸರ್' ಚಿತ್ರದ ಮೂಲಕ ತೆಲುಗಿಗೆ ಎಂಟ್ರಿ ಕೊಡ್ತಿದ್ದಾರೆ.

'ಮಾಸ್ಟರ್' ವಿಜಯ್‌ಗೆ ಪಾಠ ಮಾಡುತ್ತಾರಾ 'ವಾತಿ' ಧನುಷ್!
ಈ ವರ್ಷ ಆರಂಭದಲ್ಲಿ ನಟ ವಿಜಯ್ ಅಭಿನಯದ 'ಮಾಸ್ಟರ್' ಚಿತ್ರ ಬಿಡುಗಡೆ ಆಗಿದೆ. ಈ ಚಿತ್ರದಲ್ಕಿ ನಟ ವಿಜಯ್ ಮಾಸ್ಟರ್ ಪಾತ್ರದಲ್ಲಿ ಅಂದರೆ ಶಿಕ್ಷಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅದೇ ಅರ್ಥದ ಕೊಡುವ ಪದ ಸರ್ ಅಥವಾ ವಾತಿ. ಈ ಹೆಸರಿನ್ಲಲಿ ಧನುಷ್ ಸಿನಿಮಾ ಮಾಡುತ್ತಿದ್ದಾರೆ. ಅಂದರೆ ಎಲ್ಲೂ ಒಂದು ಕಡೆ ವಿಜಯ್ ಅವರ 'ಮಾಸ್ಟರ್' ಚಿತ್ರಕ್ಕೆ ನಟ ಧನುಷ್ ಪಾಠ ಮಾಡಲು ಮುಂದಾಗಿದ್ದಾರೆ ಎನ್ನುವ ಚರ್ಚೆಗಳೂ ಹುಟ್ಟಿಕೊಂಡಿವೆ. ಮಾಸ್ಟರ್ ಚಿತ್ರ ಬಾಲಕಾರಾಗೃಹದ ಸುತ್ತಲು ಸಾಗುವ ಕಥೆ. ಅಲ್ಲಿ ಒಬ್ಬ ಶಿಕ್ಷಕನ ಜವಾಬ್ದಾರಿ ಏನು ಎನ್ನುವುದನ್ನು ಹೇಳಲಾಗಿದೆ. ಹಾಗಾಗಿ ಈ ಚಿತ್ರದ ಹೇಗೆ ಮಾಸ್ಟರ್ ಗಿಂತಲೂ ವಿಭಿನ್ನವಾಗಿ ಇರುತ್ತದೆ ಎನ್ನುವ ಕುತೂಹಲಗಳು ಸೃಷ್ಟಿ ಆಗಿವೆ.

ಟೀಸರ್ ಅಡಗಿರುವ ಅಂಶಗಳೇನು?
ಇನ್ನು ಟೀಸರ್‌ನಲ್ಲಿ ಒಂದಷ್ಟು ವಿಶೇಷತೆಗಳನ್ನು ಇಡಲಾಗಿದೆ. ಕಾಲೇಜು ಆವರಣ, ಕ್ಲಾಸ್ ರೂಮ್, ಬ್ಲ್ಯಾಕ್ ಬೋರ್ಡ್ ಟೀಸರ್‌ನಲ್ಲಿ ಹೈಲೈಟ್ ಆಗಿವೆ. ಹಾಗಾಗಿ ಈ ಚಿತ್ರ ಬಹುತೇಕ ಕಾಲೇಜು ಅವರಣದಲ್ಲಿಯೇ ಸಾಗುತ್ತದೆ ಎಂದು ಊಹಿಸಬಹುದು. ಈ ಚಿತ್ರಕ್ಕೆ ವೆಂಕಿ ಅಟ್ಲುರಿ ನಿರ್ದೇಶನವಿದೆ. ಈ ಹಿಂದೆ ಮಿಸ್ಟರ್ ಮಜ್ನು, ತೊಲಿ ಪ್ರೇಮ, ರಂಗ್ ದೇ, ಸೇರಿದಂತೆ ಕೆಲವು ಚಿತ್ರಗಳನ್ನು ವೆಂಕಿ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











