Vettaiyan: 73 ನೇ ವಸಂತಕ್ಕೆ ಕಾಲಿಟ್ಟ ರಜನಿಕಾಂತ್ ನಟನೆಯ 170ನೇ ಸಿನಿಮಾದ ಟೈಟಲ್ ಬಿಡುಗಡೆ
ಸೂಪರ್‌ಸ್ಟಾರ್ ರಜನಿಕಾಂತ್ ಅವರು ಡಿಸೆಂಬರ್ 12 ರ ಮಂಗಳವಾರ 73 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ವಿಶೇಷ ದಿನದಂದು ತಲೈವರ್‌ಗೆ ಕೋಟ್ಯಾಂತರ ಜನರು ಶುಭ ಹಾರೈಸುತ್ತಿದ್ದಾರೆ. ಭಾರತೀಯ ಚಲನಚಿತ್ರರಂಗ ಮತ್ತು ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿವೆ.
ಈ ಸಂದರ್ಭದಲ್ಲಿ, ತಲೈವರ್ 170 ಚಿತ್ರತಂಡ ಅಧಿಕೃತವಾಗಿ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡಿದ್ದಾರೆ. ರಜನಿಕಾಂತ್ ಅಭಿನಯದ 170ನೇ ಚಿತ್ರಕ್ಕೆ ವೆಟ್ಟೈಯನ್ ಎಂದು ಹೆಸರಿಡಲಾಗಿದೆ. ಚಿತ್ರತಂಡ ವೆಟ್ಟೈಯನ್ ಎಂದು ಟೈಟಲ್ ಟೀಸರ್ ಬಿಡುಗಡೆ ಮಾಡಿದೆ. ಇದರಲ್ಲಿ ರಜನಿಕಾಂತ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ವೆಟ್ಟೈಯನ್ ಟೀಸರ್ ಔಟ್
ಚಿತ್ರತಂಡ ಬಿಡುಗಡೆ ಮಾಡಿರುವ ಟೈಟಲ್ ರಿವೀಲ್ ವೀಡಿಯೊದಲ್ಲಿ, ಸ್ಟೈಲಿಶ್ ರಜನಿಕಾಂತ್ ಅವರು ಸಕತ್ ಡೈಲಾಗ್ ಹೇಳುತ್ತಾ ತಮ್ಮ ಹಳೇ ಶೈಲಿಯಲ್ಲಿ ಕನ್ನಡಕವನ್ನು ಹಾಕಿಕೊಳ್ಳುತ್ತಿದ್ದಾರೆ. ವಿಡಿಯೋದಲ್ಲಿ ಗಮನಿಸಿದಂತೆ ಇದೊಂದು ಮರ್ಡರ್ ಮಿಸ್ಟರಿ ಆಧರಿಸಿದ ಸಿನಿಮಾ ಎನಿಸುತ್ತಿದೆ. ಹೀಗಾಗಿ ಸಕತ್ ಡೈಲಾಗ್ ಮತ್ತು ಸಸ್ಪೆನ್ಸ್ ಕಥೆಯನ್ನು ಹೊಂದಿರಲಿದೆ.
ತಲೈವರ್ 170 ಚಿತ್ರದ ನಿರ್ಮಾಪಕರು ಭರವಸೆ ನೀಡಿದಂತೆ, ರಜನಿಕಾಂತ್ ಹುಟ್ಟುಹಬ್ಬದಂದು ವಿಶೇಷ ಟೀಸರ್ ಜೊತೆಗೆ ಚಿತ್ರದ ಅಧಿಕೃತ ಶೀರ್ಷಿಕೆಯನ್ನು ಬಿಡುಗಡೆ ಮಾಡಿದ್ದಾರೆ. 'ವೆಟ್ಟೈಯಾನ್' ಎಂಬ ಶೀರ್ಷಿಕೆ ಸಿನಿಮಾಗೆ ಫೈನಲ್ ಮಾಡಲಾಗಿದೆ. ಈ ಚಿತ್ರವನ್ನು ಜೈ ಭೀಮ್ ಖ್ಯಾತಿಯ ನಿರ್ದೇಶಕ ಟಿಜೆ ಜ್ಞಾನವೇಲ್ ನಿರ್ದೇಶಿಸಲಿದ್ದಾರೆ.
'ವೆಟ್ಟೈಯಾನ್' ಹೊಸ ಟೀಸರ್‌ನಲ್ಲಿ ರಜನಿಕಾಂತ್ ಸಕತ್ ಸ್ಟೈಲಿಶ್ ಆಗಿದ್ದಾರೆ. ಟೀಸರ್‌ನಲ್ಲಿ ಅವರು ಪೋಲಿಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಪೊಲೀಸರು ಧರಿಸುವ ಬೂಟುಗಳು ಮತ್ತು ಕೈಯಲ್ಲಿ ಲಾಠಿ ಹಿಡಿದು ಕೋಪದಲ್ಲಿ ಹೋಗುತ್ತಿರುವುದನ್ನು ಕಾಣಬಹುದು. ಹೀಗಾಗಿ ಮೊದಲೇ ವರದಿಯಾಗಿರುವಂತೆ ಅವರು ಮತ್ತೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ವೆಟ್ಟೈಯಾನ್
'ವೆಟ್ಟೈಯಾನ್'ಗೆ ಅನಿರುದ್ಧ್ ರವಿಚಂದರ್ ಅವರ ಅದ್ಭುತ ಹಿನ್ನೆಲೆ ಸಂಗೀತವಿದೆ. ಹೀಗಾಗಿ ಜೈಲರ್ ಸಿನಿಮಾದಂತೆಯೇ ಇದರ ಬಿಜಿಎಂ ಕೂಡ ಸಕತ್ ಗಮನ ಸೆಳೆಯುತ್ತಿದೆ. ಇದಲ್ಲದೆ, ಟೀಸರ್‌ನ ಶೀರ್ಷಿಕೆ ವಿನ್ಯಾಸ ಗಮನಿಸುವುದಾದರೇ, ಶೀರ್ಷಿಕೆ ಒಳಗಿನಿಂದ ಬುಲೆಟ್ ತೂರಿ ಹೋಗುತ್ತದೆ. ಹೀಗಾಗಿ ಸಿನಿಮಾ ಸಕತ್ ಆಕ್ಷನ್ ಎಂಟರ್‌ಟೈನರ್ ಆಗಿದ್ದು, ಹೊಡಿ ಬಡಿ ದೃಶ್ಯಗಳನ್ನು ನಾವು ನಿರೀಕ್ಷಿಸಬಹುದು.
ಈ 'ವೆಟ್ಟೈಯಾನ್' ಚಿತ್ರದಲ್ಲಿ ಅಮಿತಾಭ್ ಬಚ್ಚನ್, ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್, ಮಂಜು ವಾರಿಯರ್, ರಿತಿಕಾ ಸಿಂಗ್, ವಿಜಯನ್ ಮತ್ತು ಇನ್ನೂ ಅನೇಕ ಪ್ರಮುಖ ನಟರು ನಟಿಸಲಿದ್ದಾರೆ. ಹೀಗಾಗಿಯೇ ಇದು ಬಹು ತಾರಾಗಣದ ಚಿತ್ರವಾಗಲಿದೆ. ಸಿನಿಮಾವನ್ನು ಲೈಕಾ ಪ್ರೋಡಕ್ಷನ್ ನಿರ್ಮಿಸುತ್ತಿದೆ.
ರಜನಿಕಾಂತ್ ಮುಂದಿನ ಸಿನಿಮಾಗಳು
ವೆಟ್ಟೈಯನ್ ಸಿನಿಮಾ ನಂತರ, ನಟ ರಜನಿಕಾಂತ್ ಈಗಾಗಲೇ ತಮ್ಮ ಮುಂದಿನ ಪ್ರಮುಖ ಪ್ರಾಜೆಕ್ಟ್ ತಲೈವರ್ 171ಗೆ ಸಿದ್ಧರಾಗುತ್ತಿದ್ದಾರೆ. ಈ ಚಿತ್ರಕ್ಕೆ ಮಾಸ್ಟರ್, ಲಿಯೋ ಮತ್ತು ವಿಕ್ರಮ್‌ನಂತಹ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಲೋಕೇಶ್ ಕನಕರಾಜ್ ಆಕ್ಷನ್ ಕಟ್ ಹೇಳಲಿದ್ದಾರೆ. ಮೊದಲ ಬಾರಿಗೆ ಲೋಕೇಶ್ ಕನಕರಾಜ್ ಮತ್ತು ರಜನಿಕಾಂತ್ ಒಂದಾಗುತ್ತಿದ್ದಾರೆ. ಇದೇ ಕಾರಣಕ್ಕೆ ಇದರ ಬಗ್ಗೆ ಸಕತ್ ಹೈಪ್ ಕ್ರಿಯೆಟ್ ಆಗಿದೆ. ಸಿನಿಮಾದಲ್ಲಿ ನಟ ರಾಘವ ಲಾರೆನ್ಸ್ ರಜನಿಕಾಂತ್ ಎದುರು ಖಳನಾಯಕನಾಗಿ ನಟಿಸಲು ಸಹಿ ಹಾಕಿದ್ದಾರೆ ಎಂದು ಮೂಲಗಳು ಸೂಚಿಸುತ್ತಿವೆ. ಈ ಚಿತ್ರಕ್ಕೂ ಅನಿರುದ್ಧ್ ರವಿಚಂದರ್ ಅವರ ಸಂಗೀತ ಇರಲಿದೆ.


Click it and Unblock the Notifications











