Tamil Nadu Elections 2026 ; ದ್ರಾವಿಡ ಪಕ್ಷದ ಭದ್ರಕೋಟೆ ಕೆಡವುತ್ತಾರಾ ವಿಜಯ್ ? 234 ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ
ಚಿತ್ರರಂಗ ಮತ್ತು ರಾಜಕೀಯ ಎರಡು ಒಂದೇ ನಾಣ್ಯದ ಎರಡು ಮುಖ. ಅಲ್ಲಿದ್ದವರು ಇಲ್ಲಿ ಸಲ್ಲುತ್ತಾರೆ. ಇಲ್ಲಿದ್ದವರು ಅಲ್ಲಿಯೂ ಬೆಳೆಯುತ್ತಾರೆ. ಇದಕ್ಕೆ ಅಣ್ಣಾದೊರೈ, ಕರುಣಾನಿಧಿ, ಜಯಲಲಿತಾ ಅವರನ್ನೊಳಗೊಂಡು ವಿಜಯಕಾಂತ್, ಶರತ್ ಕುಮಾರ್, ಕಮಲ್ ಹಾಸನ್ ವರೆಗೆ ಹತ್ತು ಹಲವು ಉದಾಹರಣೆ ಭಾರತೀಯ ಚಿತ್ರರಂಗದಲ್ಲಿವೆ.
ಹಾಗಂಥ ಇಲ್ಲಿ ಎಲ್ಲರೂ ಗೆದ್ದಿಲ್ಲ. ಅದರಲ್ಲಿಯೂ ತಮಿಳುನಾಡಿನ ಜನ ಯಾರನ್ನು ಸುಲಭವಾಗಿ ತಲೆ ಮೇಲೆ ಹೊತ್ತು ಮೆರೆಸಿಲ್ಲ. ಆದರೆ ಈಗ ದಶಕಗಳ ಕಾಲ ದ್ರಾವಿಡ ಪಕ್ಷಗಳ ಭದ್ರಕೋಟೆಯಾಗಿದ್ದ ಈ ನೆಲದಲ್ಲಿ ಈಗ ಹೊಸ ಅಲೆ ಎದ್ದಿದೆ. ಆ ಅಲೆಯ ಹೆಸರು ವಿಜಯ್.

ಬೆಳ್ಳಿತೆರೆಯ ಮೇಲೆ ಜಾದೂ ಮಾಡುವ ವಿಜಯ್ ರಾಜಕೀಯ ರಣರಂಗದಲ್ಲಿ ಕಿಂಗ್ ಆಗ್ತಾರಾ ಅಥವಾ ಕಿಂಗ್ ಮೇಕರ್ ಆಗ್ತಾರಾ..? ಅನ್ನೋದು ಇನ್ನೇನು ಕೆಲ ದಿನಗಳಲ್ಲಿ ಗೊತ್ತಾಗಲಿದೆಯಾದರೂ ವಿಜಯ್‌ಗೆ ತಮ್ಮ ಸ್ಟಾರ್ ಪವರ್ ಮೇಲೆ ನಂಬಿಕೆ ಇದೆ. ಗೆಲ್ಲುವ ವಿಶ್ವಾಸ ಇದೆ.
ಇನ್ನೂ ಜನಸಾಮಾನ್ಯರ ವಲಯಕ್ಕೆ ಬಂದರೆ ಅಲ್ಲಿಯೂ ಕೂಡ ವಿಜಯ್ ವಿಜಲ್ ಹೊಡೆಯುತ್ತಾರೆ, ಗೆದ್ದು ಬೀಗುತ್ತಾರೆ ಎನ್ನುವ ನಂಬಿಕೆ ಹಲವರಲ್ಲಿದೆ. ನಂಬಿಕೆ ನಿಜವಾಗುತ್ತಾ..? ಹುಸಿಯಾಗುತ್ತಾ..? ಉತ್ತರ ಮೇ 4ಕ್ಕೆ ಸಿಗಲಿದ್ದು ನಿನ್ನೆ (ಏಪ್ರಿಲ್ 21) ಪ್ರಚಾರ ಕೊನೆಯಾಗಿದೆ. ಎರಡು ಕ್ಷೇತ್ರಗಳಲ್ಲಿ ಈ ಬಾರಿ ವಿಜಯ್ ಕಣಕ್ಕಿಳಿದಿದ್ದು 234 ಕ್ಷೇತ್ರಗಳಲ್ಲಿಯೂ ತನ್ನ ಸೈನಿಕರನ್ನು ಕಣಕ್ಕಿಳಿಸಿದ್ದಾರೆ.
ಹಾಗಿದ್ದರೆ ತಮಿಳುಗ ವೆಟ್ರಿ ಕಳಗಂ (TVK) ಪಕ್ಷದಿಂದ ರಾಜಕೀಯದ ರಣರಂಗದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಧುಮುಕಿರುವ 234 ಕ್ಷೇತ್ರಗಳ ಅಭ್ಯರ್ಥಿಗಳು ಯಾರು ಯಾರು ಎಂದು ತಿಳಿಯಲು ಮುಂದೆ ಓದಿ.
ದಳಪತಿ ವಿಜಯ್ ಅವರ TVK ಅಭ್ಯರ್ಥಿಗಳ ಪಟ್ಟಿ (2026)
ಕ್ಷೇತ್ರ ಅಭ್ಯರ್ಥಿ ಹೆಸರು
ಪೆರಂಬೂರ್ - ಸಿ. ಜೋಸೆಫ್ ವಿಜಯ್
ತಿರುಚಿರಾಪಳ್ಳಿ ಪೂರ್ವ - ಸಿ. ಜೋಸೆಫ್ ವಿಜಯ್
ಟಿ. ನಗರ - 'ಬುಸ್ಸಿ' ಎನ್. ಆನಂದ್
ವಿಲ್ಲಿವಾಕ್ಕಂ - ಆಧವ್ ಅರ್ಜುನ
ಗೋಬಿಚೆಟ್ಟಿಪಾಳಯಂ - ಕೆ.ಎ. ಸೆಂಗೋಟ್ಟಯ್ಯನ್
ಮೈಲಾಪುರ - ಪಿ. ವೆಂಕಟರಮಣನ್
ತಿರುಚೆಂಗೋಡ್ - ಕೆ.ಜಿ. ಅರುಣ್‌ರಾಜ್
ತಿರುಪ್ಪರಂಕುಂದ್ರಂ - ಸಿ.ಟಿ.ಆರ್. ನಿರ್ಮಲ್ ಕುಮಾರ್
ಕುಮಾರಪಾಳಯಂ - ಸಿ. ವಿಜಯಲಕ್ಷ್ಮಿ
ಎಗ್ಮೋರ್ (SC) - ಎ. ರಾಜ್‌ಮೋಹನ್

ಲಾಲ್ಗುಡಿ - ಕು.ಪಾ. ಕೃಷ್ಣನ್
ತಿರುಪ್ಪೂರ್ ಉತ್ತರ - ವಿ. ಸತ್ಯಭಾಮ
ಥೌಸಂಡ್ ಲೈಟ್ಸ್ - ಜೆ.ಸಿ.ಡಿ. ಪ್ರಭಾಕರ್
ತಿಟ್ಟಕುಡಿ (SC) - ಎ. ರಾಜಶೇಖರ್
ಸೈದಾಪೇಟೆ - ಎಂ. ಅರುಳ್ ಪ್ರಕಾಶಂ
ವಾಲ್ಪಾರೈ (SC) - ಡಾ. ಎ. ಶ್ರೀಧರನ್
ಆರ್.ಕೆ. ನಗರ - ಎನ್. ಮಾರಿಯಾ ವಿಲ್ಸನ್
ಕೊಳತ್ತೂರು - ವಿ.ಎಸ್. ಬಾಬು
ಶೋಳವಂದನ್ (SC) - ಎಂ.ವಿ. ಕರುಪ್ಪಯ್ಯ
ನಾಂಗುನೇರಿ - ರೆಡ್ಡಿಯಾಪಟ್ಟಿ ನಾರಾಯಣನ್
ರಾಯಪುರಂ - ಕೆ.ವಿ. ವಿಜಯ್ ಥಾಮು
ಹಾರ್ಬರ್ - ಸಿನೋರಾ ಪಿ.ಎಸ್. ಅಶೋಕ್
ಚೆಪಾಕ್-ತಿರುವಲ್ಲಿಕೇಣಿ - ಟಿ. ಸೆಲ್ವಂ
ಅಣ್ಣಾ ನಗರ - ವಿ.ಕೆ. ರಾಮ್‌ಕುಮಾರ್
ವಿರುಗಂಬಾಕ್ಕಂ - ಆರ್. ಶಬರಿನಾಥನ್
ವೇಲಾಚೇರಿ - ಆರ್. ಕುಮಾರ್
ಶೋಳಂಗನಲ್ಲೂರು - ಪಿ. ಶರವಣಮೂರ್ತಿ
ಆಲಂದೂರು - ಎಂ. ಹರೀಶ್
ಅಂಬತ್ತೂರು - ಜಿ. ಬಾಲಮುರುಗನ್
ಮಾಧವರಂ - ಎಂ.ಎಲ್. ವಿಜಯ್ ಪ್ರಭು
ತಿರುವೊಟ್ಟಿಯೂರು - ಎನ್. ಸೆಂಥಿಲ್ ಕುಮಾರ್
ಗುಮ್ಮಿಡಿಪೂಂಡಿ - ಎಸ್. ವಿಜಯಕುಮಾರ್
ಪೊನ್ನೇರಿ (SC) - ಡಾ. ಎಂ.ಎಸ್. ರವಿ
ತಿರುತ್ತಣಿ - ಎಂ. ಸತ್ಯಕುಮಾರ್
ತಿರುವಳ್ಳೂರು - ಡಾ. ಟಿ. ಅರುಣ್ ಕುಮಾರ್
ಪೂನಮಲ್ಲಿ (SC) - ಆರ್. ಪ್ರಕಾಶಂ
ಆವಡಿ - ಆರ್. ರಮೇಶ್‌ಕುಮಾರ್
ಮಧುರವಾಯಲ್ - ಪಿ. ರೇವಂತ್ ಶರಣ್
ತಿರು-ವಿ-ಕ ನಗರ (SC) - ಎಂ.ಆರ್. ಪಲ್ಲವಿ
ಶ್ರೀಪೆರಂಬದೂರು (SC) - ಕೆ. ತೆನ್ನರಸು
ಪಲ್ಲವರಂ - ಜೆ. ಕಾಮಾಚಿ
ತಾಂಬರಂ - ಡಿ. ಶರತ್‌ಕುಮಾರ್
ಚೆಂಗಲ್ಪಟ್ಟು - ಎಸ್. ತ್ಯಾಗರಾಜನ್
ತಿರುಪ್ಪೋರೂರ್ - ಬಿ. ವಿಜಯರಾಜ್
ಚೆಯ್ಯೂರು (SC) - ಕೆ. ಮೋಹನರಾಜಾ
ಮಧುರಾಂತಕಂ (SC) - ಇ. ಎಳಿಲ್ ಕ್ಯಾಥರಿನ್
ಉತಿರಮೇರೂರ್ - ಜೆ. ಮುನಿರತ್ನಂ
ಕಾಂಚೀಪುರಂ - ಆರ್.ವಿ. ರಂಜಿತ್ ಕುಮಾರ್
ಅರಕ್ಕೋಣಂ (SC) - ವಿ. ಗಾಂಧಿರಾಜ್
ಶೋಲಿಂಗುರ್ - ಡಾ. ಜಿ. ಕಪಿಲ್
ಕಾಟ್ಪಾಡಿ - ಡಾ. ಎಂ. ಸುಧಾಕರ್
ರಾಣಿಪೇಟೆ - ಐ. ತಾಹೀರಾ
ಆರ್ಕಾಟ್ - ಜಿ. ವಿಜಯ್ ಮೋಹನ್
ವೆಲ್ಲೂರು - ಎಂ.ಎಂ. ವಿನೋದ್ ಕಣ್ಣನ್
ಅನೈಕಟ್ಟು - ಆರ್. ವೇಲ್ಮುರುಗನ್
ಕಿಲ್ವೈತಿನಾಂಕುಪ್ಪಂ (SC) - ಇ. ತೆಂಡ್ರಲ್ ಕುಮಾರ್
ಗುಡಿಯಾಟ್ಟಂ (SC) - ಕೆ. ಸಿಂಧು
ವಾಣಿಯಂಬಾಡಿ - ಎಸ್. ಸಯದ್ ಬುರ್ಹಾನುದ್ದೀನ್
ಅಂಬೂರು - ಪಿ. ಇಮ್ತಿಯಾಸ್
ಜೋಲಾರ್‌ಪೇಟೆ - ಸಿ. ಮುನಿಸ್ವಾಮಿ
ತಿರುಪತ್ತೂರು - ಡಾ. ಎನ್. ತಿರುಪ್ಪತಿ
ಉತ್ತಂಗರೈ (SC) - ಪಿ. ಕುಮಾರವೇಲ್
ಬರ್ಗುರ್ - ಇ. ಮುರಳಿಧರನ್
ಕೃಷ್ಣಗಿರಿ - ಪಿ. ಮುಕುಂದನ್
ವೆಪ್ಪನಹಳ್ಳಿ - ಎಸ್.ಆರ್. ಸಂಬಂಗಿ
ಹೊಸೂರು - ಎಂ. ಅಂಬರೀಶ್
ತಳ್ಳಿ - ಜಿ. ಸುರೇಶ್
ಪಾಲಕೋಡು - ಆರ್. ಗೋಪಿ
ಪೆಣ್ಣಾಗರಂ - ಸಿ. ಗಜೇಂದ್ರನ್
ಧರ್ಮಪುರಿ - ಎಂ. ಶಿವನ್
ಪಾಪ್ಪಿರೆಡ್ಡಿಪಟ್ಟಿ - ಎಸ್. ತಿಲಾವತಿ
ಹರೂರ್ (SC) - ಕೆ. ರಾಕೇಶ್
ಚೆಂಗಮ್ (SC) - ಕೆ. ಭರತಿದಾಸನ್
ತಿರುವಣ್ಣಾಮಲೈ - ಎ. ಅರುಳ್ ಅರುಮುಗಂ
ಕಿಲ್ಪೆನ್ನಾತ್ತೂರು - ಡಿ. ರಾಜಾ
ಕಲಸಪಾಕ್ಕಂ - ಸಿ. ಎಲುಮಲೈ
ಪೋಲೂರು - ಆರ್. ಅಭಿಷೇಕ್
ಅರಣಿ - ವಿ. ವೆಂಕಟೇಶ್ ಕುಮಾರ್
ಚೆಯ್ಯಾರ್ - ದೂಸಿ ಕೆ. ಮೋಹನ್
ವಂದವಾಸಿ (SC) - ಎಂ. ಉದಯಕುಮಾರ್
ಗಿಂಜಿ - ವಿ. ಚಂದ್ರಶೇಖರನ್
ಮೈಲಂ - ಎ. ವಿಜಯ್ ನಿರಂಜನ್
ತಿಂದಿವನಂ (SC) - ಎಸ್. ಶಕ್ತಿವೇಲ್
ವಾನೂರು (SC) - ಜಿ.ಪಿ. ಸುರೇಶ್
ವಿಲ್ಲುಪುರಂ - ಎನ್. ಮೋಹನ್‌ರಾಜ್
ವಿಕ್ರವಾಂಡಿ - ಎ. ವಿಜಯ್ ವಡಿವೇಲ್
ತಿರುಕ್ಕೋಯಿಲೂರು - ವಿಜಯ್ ಆರ್. ಭರಣಿಬಾಲಾಜಿ
ಉಳುಂದೂರುಪೇಟೆ - ಎಂ. ಸುಧಾಕರ್
ರಿಷಿವಂದಿಯಂ - ಜಿ. ಅಶೋಕ್ ಕುಮಾರ್
ಶಂಕರಪುರಂ - ಎ. ಜಗದೀಶನ್
ಕಲ್ಲಕುರಿಚಿ (SC) - ಸಿ. ಅರುಳ್ ವಿಘ್ನೇಶ್
ಗಂಗವಲ್ಲಿ (SC) - ವಿ. ಸುಜಾತಾ
ಅತ್ತೂರು (SC) - ಆರ್. ಸೆಲ್ವಭಾರತಿ
ಯೇರ್ಕಾಡು (ST) - ಜೆ. ಲಕ್ಷ್ಮಿ
ಓಮಲೂರು - ಆರ್.ವಿ. ಅಧಿಯಾಮನ್
ಮೆಟ್ಟೂರು - ಕೆ. ಸೆಲ್ವಂ
ಎಡಪ್ಪಾಡಿ - ಎಂ. ಅರುಣ್‌ಕುಮಾರ್ (ತಿರಸ್ಕೃತ); ಬೆಂಬಲ: ಕೆ. ಪ್ರೇಮ್ ಕುಮಾರ್
ಸಂಗಗಿರಿ - ಕೆ. ಸೆಂಥಿಲ್‌ಕುಮಾರ್
ಸೇಲಂ ಪಶ್ಚಿಮ - ಎಸ್. ಲಕ್ಷ್ಮಣನ್
ಸೇಲಂ ಉತ್ತರ - ಕೆ. ಶಿವಕುಮಾರ್
ಸೇಲಂ ದಕ್ಷಿಣ - ಎ. ವಿಜಯ್ ತಮಿಳನ್ ಪಾರ್ಥಿಬನ್
ವೀರಾಪಾಂಡಿ - ಎಂ.ಎಸ್. ಪಳನಿವೇಲ್
ರಾಸಿಪುರಂ (SC) - ಡಿ. ಲೋಕೇಶ್ ಧನಪಾಲ್
ಸೇಂಥಮಂಗಲಂ (ST) - ಪಿ. ಚಂದ್ರಶೇಖರ್
ನಾಮಕ್ಕಲ್ - ಸಿ.ಎಸ್. ದಿಲೀಪ್
ಪರಮತಿ-ವೇಲೂರು - ಎ. ನಂದಕುಮಾರ್
ಈರೋಡ್ ಪೂರ್ವ - ಎಂ. ವಿಜಯ್ ಬಾಲಾಜಿ
ಈರೋಡ್ ಪಶ್ಚಿಮ - ಕೆ.ಕೆ. ಆನಂದ್ ಮೋಹನ್
ಮೋದಕ್ಕುರಿಚಿ - ಡಿ. ಷಣ್ಮುಗಂ
ಧಾರಾಪುರಂ (SC) - ಎಸ್. ಗೌರಿ ಚಿತ್ರಾ
ಕಾಂಗೇಯಂ - ಪಿ. ಮಣಿ
ಪೆರುಂದುರೈ - ವಿ.ಪಿ. ಅರುಣಾಚಲಂ
ಭವಾನಿ - ಎಂ.ಪಿ. ಬಾಲಕೃಷ್ಣನ್
ಅಂತಿಂಯೂರು - ಎಂ. ವಿಜಯ್ ವೆಂಕಟೇಶ್
ಭವಾನಿಸಾಗರ (SC) - ವಿ.ಪಿ. ತಮಿಳ್ ಸೆಲ್ವಿ
ಉದಗಮಂಡಲಂ (ಊಟಿ) - ಆರ್. ಇಬ್ರಾಹಿಂ
ಗೂಡಲೂರು (SC) - ಎ. ದೀಪಕ್ ಸಾಯಿ ಕಿಶೋರ್
ಕುನೂರು - ಸಿ. ತಂಗರಾಜು
ಮೆಟ್ಟುಪಾಳಯಂ - ಎನ್. ಸುನಿಲ್ ಆನಂದ್
ಅವಿನಾಶಿ (SC) - ಎಸ್. ಕಮಲಿ
ತಿರುಪ್ಪೂರ್ ದಕ್ಷಿಣ - ಎಸ್. ಬಾಲಮುರುಗನ್
ಪಲ್ಲಡಂ - ಕೆ. ರಾಮ್‌ಕುಮಾರ್
ಸೂಲೂರು - ಎನ್.ಎಂ. ಸುಕುಮಾರ್
ಕವುಂಡಂಪಾಳಯಂ - ಆರ್.ಡಿ. ಕನಿಮೊಳಿ
ಕೊಯಮತ್ತೂರು ಉತ್ತರ - ವಿ. ಸಂಪತ್‌ಕುಮಾರ್
ತೊಂಡಮುತ್ತೂರು - ಆರ್. ಸತೀಶ್ ರಾಜು
ಕೊಯಮತ್ತೂರು ದಕ್ಷಿಣ - ವಿ. ಸೆಂಥಿಲ್ ಕುಮಾರ್
ಸಿಂಗನಲ್ಲೂರು - ಕೆ.ಎಸ್. ಗಿರಿಪ್ರಸಾದ್
ಕಿಣತುಕಡವು - ಕೆ. ವಿಘ್ನೇಶ್
ಪೊಳ್ಳಾಚಿ - ಜಿ. ರಾಮನಾಥನ್
ಉಡುಮಲೈಪೆಟ್ಟೈ - ಜಿ.ಕೆ. ಶಂಕರ್
ಮಡತುಕುಳಂ - ಆರ್. ತಿರುಮಲೈ
ಪಳನಿ - ಡಾ. ಎಂ. ಪ್ರವೀಣ್ ಕುಮಾರ್
ಒದ್ದಂಚತ್ರಂ - ಎಸ್. ಮೋಹನ್
ಅತ್ತೂರು (ದಿಂಡಿಗಲ್) - ಎನ್. ಕಲೈಸೆಲ್ವಿ
ನಿಲಕ್ಕೋಟ್ಟೈ (SC) - ಆರ್. ಅಯ್ಯನಾರ್
ನತ್ತಂ - ಎಲ್.ಎನ್. ರಮೇಶ್
ದಿಂಡಿಗಲ್ - ಜಿ. ನಜೀರ್ ರಾಜಾ
ವೇದಸಂದೂರು - ಡಾ. ಎನ್. ನಾಗಜ್ಯೋತಿ
ಅರವಕುರಿಚಿ - ಪಿ. ಕಾರ್ತಿಕೇಯನ್
ಕರೂರು - ವಿ.ಪಿ. ಮತಿಯಳಗನ್
ಕೃಷ್ಣರಾಯಪುರಂ (SC) - ಎಸ್. ಮಧನ್
ಕುಳಿತಲೈ - ಜಿ. ಬಾಲಸುಬ್ರಮಣಿ
ಮಣಪ್ಪಾರೈ - ಆರ್. ಕದಿರವನ್
ಶ್ರೀರಂಗಂ - ಎಸ್. ರಮೇಶ್
ತಿರುಚಿ ಪಶ್ಚಿಮ - ಜಿ. ರಾಮಮೂರ್ತಿ
ತಿರುವೇರುಂಬೂರು - ನವಲ್ಪಟ್ಟು ಎಸ್. ವಿಜಿ
ಮಣ್ಣಚನಲ್ಲೂರು - ವಿ. ಶರವಣನ್
ಮುಸಿರಿ - ಎಂ. ವಿಘ್ನೇಶ್
ತುರೈಯೂರು (SC) - ಎಂ. ರವಿಶಂಕರ್
ಪೆರಂಬಲೂರು (SC) - ಕೆ. ಶಿವಕುಮಾರ್
ಕುನ್ನಂ - ಎಂ. ರೇವತಿ
ಅರಿಯಲೂರು - ಎಂ. ಶಿವಕುಮಾರ್
ಜಯಂಕೊಂಡಂ - ಕವಿತಾ ಜಿ. ರಾಜೇಂದ್ರನ್
ವೃದ್ಧಾಚಲಂ - ಎಸ್. ವಿಜಯ್
ನೈವೇಲಿ - ಕೆ. ಆನಂದ್
ಪನ್ರುಟಿ - ಎಂ. ಮಣಿಕಂಠನ್
ಕಡಲೂರು - ಬಿ. ರಾಜಕುಮಾರ್
ಕುರಿಂಜಿಪಾಡಿ - ಡಿ. ರಾಜಕುಮಾರ್
ಭುವನಗಿರಿ - ಟಿ. ಮಹಾಲಿಂಗಂ
ಚಿದಂಬರಂ - ಡಾ. ಎನ್. ಪಾರಿ
ಕಾಟ್ಟುಮನ್ನಾರ್‌ಕೋಯಿಲ್ (SC) - ಡಾ. ಎಸ್. ಸೀನುವಾಸನ್
ಸೀರ್ಕಾಳಿ (SC) - ಸಿ.ಎಸ್. ಗೋಪಿನಾಥ್
ಮೈಲಾಡುತುರೈ - ಎಸ್.ಎಸ್. ಹಾರೂನ್ ರಶೀದ್
ಪೂಂಪುಹಾರ್ - ಜೆ. ವಿಜಯಲಯನ್
ನಾಗಪಟ್ಟಿಣಂ - ಎಂ. ಸುಕುಮಾರ್
ಕೀಳ್ವೇಲೂರು (SC) - ಟಿ.ಎ.ಪಿ. ಸೆಂಥಿಲ್ ಪಾಂಡಿಯನ್
ವೇದಾರಣ್ಯಂ - ಎ. ಕಿಂಗ್ಸ್‌ಲಿ ಗೆರಾಲ್ಡ್
ತಿರುತುರೈಪೂಂಡಿ (SC) - ಎಸ್. ಪಾಂಡಿಯನ್
ಮನ್ನಾರ್‌ಗುಡಿ - ಯು.ವಿ.ಎಂ. ರಾಜರಾಜನ್
ತಿರುವಾರೂರು - ವಿ. ವೀರಮಣಿ
ನನ್ನಿಲಂ - ಎಸ್. ಪ್ರಭಾಕರನ್
ತಿರುವಿಡೈಮರುದೂರು - ಎಸ್. ಪ್ರಭಾಕರನ್
ಕುಂಭಕೋಣಂ - ಆರ್. ವಿನೋದ್
ಪಾಪನಾಶಂ - ಯು. ಅಜರುದ್ದೀನ್
ತಿರುವೈಯಾರು - ಎಂ. ಮಣಿಕಂಠನ್
ತಂಜಾವೂರು - ಆರ್. ವಿಜಯ್ ಶರವಣನ್
ಒರತ್ತನಾಡು - ಕೆ. ಅರವಿಂದ್
ಪಟ್ಟುಕ್ಕೊಟ್ಟೈ - ಸಿ. ಮಧನ್
ಪೇರಾವೂರನಿ - ಡಿ. ಚಂದ್ರಕಾಂಡೀಬನ್
ಗಂಧರ್ವಕೊಟ್ಟೈ (SC) - ಎನ್. ಸುಬ್ರಮಣಿಯನ್
ವಿರಾಲಿಮಲೈ - ಪಿ. ಮುರುಗೇಶನ್
ಪುದುಕೊಟ್ಟೈ - ಕೆ.ಎಂ. ಶರೀಫ್
ತಿರುಮಯಂ - ಸಿ. ಸಿಂಧಮಣಿ
ಆಲಂಗುಡಿ - ದುರೈ ಕಂದಸಾಮಿ
ಅರಂತಾಂಗಿ - ಜೆ. ಮೊಹಮ್ಮದ್ ಪರ್ವೇಜ್
ಕಾರೈಕುಡಿ - ಡಾ. ಟಿ.ಕೆ. ಪ್ರಭು
ತಿರುಪ್ಪತ್ತೂರು (ಶಿವಗಂಗಾ) - ಶ್ರೀನಿವಾಸ ಸೇತುಪತಿ
ಶಿವಗಂಗಾ - ಕುಳಂದೈ ರಾಣಿ ನಾಚಿಯಾರ್
ಮಾನಮಧುರೈ (SC) - ಡಿ. ಇಳಂಗೋವನ್
ಮೇಲೂರು - ಎ. ಮಧುರೈ ವೀರನ್
ಮಧುರೈ ಪೂರ್ವ - ಎಸ್. ಕಾರ್ತಿಕೇಯನ್
ಮಧುರೈ ಉತ್ತರ - ಎ. ಕಲ್ಲನೈ
ಮಧುರೈ ದಕ್ಷಿಣ - ಜೆ. ಜೋ ಪೀಟರ್
ಮಧುರೈ ಕೇಂದ್ರ - ವಿ.ಎಂ.ಎಸ್. ಮುಸ್ತಫಾ
ಮಧುರೈ ಪಶ್ಚಿಮ - ಎಸ್.ಆರ್. ತಂಗಪಾಂಡಿ
ತಿರುಮಂಗಲಂ - ಎನ್. ಸತೀಶ್‌ಕುಮಾರ್
ಉಸಿಲಂಪಟ್ಟಿ - ಎಂ. ವಿಜಯ್
ಆಂಡಿಪಟ್ಟಿ - ವಿ. ಪಾಂಡಿ
ಪೆರಿಯಾಕುಳಂ (SC) - ಜಿ. ಶಬರಿ
ಬೋಡಿನಾಯಕನೂರು - ಎಸ್. ಪ್ರಕಾಶ್
ಕಂಬಂ - ಪಿ.ಎಲ್.ಎ. ಜಗನಾಥ್ ಮಿಶ್ರಾ
ರಾಜಪಾಳಯಂ - ಕೆ. ಜಗದೀಶ್ವರಿ
ಶ್ರೀವಿಲ್ಲಿಪುತ್ತೂರು (SC) - ಎ. ಕಾರ್ತಿಕ್
ಸಾತ್ತೂರು - ಎಂ. ಅಜಿತ್
ಶಿವಕಾಶಿ - ಎಸ್. ಕೀರ್ತನಾ
ವಿರುದುನಗರ - ಎಸ್.ಪಿ. ಸೆಲ್ವಂ
ಅರುಪ್ಪುಕ್ಕೊಟ್ಟೈ - ಕೆ. ಕಾರ್ತಿಕ್ ಕುಮಾರ್
ತಿರುಚುಲಿ - ಎಸ್. ಸಮಾಯನ್
ಪರಮಕುಡಿ (SC) - ಜಿ. ಗೋಪಿರಾಜನ್
ತಿರುವಡಾನೈ - ವಿ.ಕೆ. ರಾಜೀವ್
ರಾಮನಾಥಪುರಂ - ಇ.ಎ. ಶಾಹುಲ್ ಹಮೀದ್
ಮುದುಕೊಳತ್ತೂರು - ಬಿ. ಮಲರ್ವಿಳಿ ಜಯಬಾಲ
ವಿಲಾತಿಕುಳಂ - ಪಿ. ಕಾಸಿರಾಮ್
ತೂತುಕುಡಿ - ಎ. ಶ್ರೀನಾಥ್
ತಿರುಚೆಂದೂರು - ಜೆ. ಮುರುಗನ್
ಶ್ರೀವೈಕುಂಠಂ - ಜಿ. ಶರವಣನ್
ಒಟ್ಟಪಿಡಾರಂ (SC) - ಪಿ. ಮಧನ್‌ರಾಜಾ
ಕೋವಿಲ್ಪಟ್ಟಿ - ಎಸ್. ಬಾಲಸುಬ್ರಮಣಿಯನ್
ಶಂಕರನಕೋವಿಲ್ (SC) - ಸಿ. ರಾಮರಾಜನ್
ವಾಸುದೇವನಲ್ಲೂರು (SC) - ಆರ್. ಅಮುದಾ ರಾಣಿ
ಕಡಯನಲ್ಲೂರು - ಆರ್.ಕೆ. ಅಬ್ದುಲ್ ಜಲೀಲ್
ತೆಂಕಶಿ - ಎ. ರಾಜಪ್ರಕಾಶ್
ಆಲಂಗುಳಂ - ವಿ. ವಿಪಿನ್ ಚಕ್ರವರ್ತಿ
ತಿರುನಲ್ವೇಲಿ - ಆರ್.ಎಸ್. ಮುರುಗನ್
ಅಂಬಾಸಮುದ್ರಂ - ಎಸ್. ರಾಜಗೋಪಾಲ್
ಪಾಳಯಂಕೊಟ್ಟೈ - ಎಸ್. ಮಾರಿಯಾ ಜಾನ್
ರಾಧಾಪುರಂ - ಕೆ. ಸತೀಶ್ ಕ್ರಿಸ್ಟೋಫರ್
ಕನ್ನಿಯಾಕುಮಾರಿ - ಎಸ್.ಆರ್. ಮಾಧವನ್
ನಾಗರ್‌ಕೋಯಿಲ್ - ಜಿ. ಪರ್ವೀನ್ ಕಿಂಗ್
ಕುಳಚೆಲ್ - ಡಾ. ಪ್ರೇಮ್ ಅಲೆಕ್ಸ್ ಲಾರೆನ್ಸ್
ಪದ್ಮನಾಭಪುರಂ - ಎಸ್. ಕೃಷ್ಣಕುಮಾರ್
ವಿಲವಂಕೋಡ್ - ಕೆ. ಮೈಕೆಲ್ ಕುಮಾರ್
ಕಿಳ್ಳಿಯೂರು - ಎಸ್. ಸಬೀನ್
ಅಂದ್ಹಾಗೇ ಈ 234 ಅಭ್ಯರ್ಥಿಗಳಲ್ಲಿ ಎಡಪ್ಪಾಡಿ ಕ್ಷೇತ್ರದಲ್ಲಿ ಚುನಾವಣಾ ಆಯೋಗ ವಿಜಯ್ ಪಕ್ಷದ ಅಭ್ಯರ್ಥಿಯ ನಾಮಪತ್ರ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ವಿಜಯ್ ಎಡಪ್ಪಾಡಿಯಲ್ಲಿ ಸ್ವತಂತ್ರ ಅಭ್ಯರ್ಥಿ ಕೆ. ಪ್ರೇಮ್‌ಕುಮಾರ್‌ಗೆ ತಮ್ಮ ಬೆಂಬಲ ಘೋಷಿಸಿದ್ದಾರೆ . ''ಟೆಲಿವಿಷನ್'' ಚಿಹ್ನೆಯಡಿ ಸ್ಫರ್ಧಿಸುತ್ತಿರುವ ಪ್ರೇಮ್‌ಕುಮಾರ್ ಅವರನ್ನು ಬೆಂಬಲಿಸುವಂತೆ ಮತದಾರರಿಗೆ ಕರೆ ನೀಡಿದ್ದಾರೆ.
ಇನ್ನುಳಿದಂತೆ ಮತದಾನಕ್ಕೆ ಕೇವಲ ಒಂದು ದಿನ ಬಾಕಿ ಇದೆ. ಏಪ್ರಿಲ್ 23ರಂದು ಮತದಾರರ ಪ್ರತಿಕ್ರಿಯೆ ಹೇಗಿರುತ್ತದೆ ಮತ್ತು ಮೇ 4ರ ಫಲಿತಾಂಶ ಏನಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications