ಚಿತ್ರೀಕರಣ ಸಂದರ್ಭದಲ್ಲಿ ದುರಂತ, ಸ್ಥಳದಲ್ಲಿಯೇ ಖ್ಯಾತ ಸ್ಟಂಟ್​ಮ್ಯಾನ್ ಸಾವು

ಸಿನಿಮಾ ಮಾಡುವುದು ಸುಲಭ ಅಲ್ಲ. ಈ ಪ್ರಕ್ರಿಯೆಯಲ್ಲಿ ಹಲವು ಕಷ್ಟಗಳಿರುತ್ತವೆ. ನಷ್ಟಗಳಿರುತ್ತವೆ. ಕೆಲ ಒಮ್ಮೆ ಪ್ರಾಣವನ್ನು ಕೂಡ ಇಲ್ಲಿ ಅನೇಕರು ಪಣಕ್ಕಿಡುತ್ತಾರೆ. ಆದರೆ ಎರಡು ಅಥವಾ ಮೂರು ಗಂಟೆಯ ಚಿತ್ರವನ್ನು ನೋಡುವ ಪ್ರೇಕ್ಷಕರಿಗೆ ಇದರ ಅರಿವು ಆಗುವುದೇ ಇಲ್ಲ. ಇದಕ್ಕೆ ಮತ್ತೊಂದು ಉದಾಹರಣೆ ಇಂದು { ಜುಲೈ 13 } ಸಂಭವಿಸಿದ ಮತ್ತೊಂದು ದುರಂತ ಸಾವು.

ಹೌದು.. ಚಿತ್ರದ ಚಿತ್ರೀಕರಣ ನಡೆಯುವಾಗ ಎಷ್ಟೇ ಮುಂಜಾಗೃತೆ ವಹಿಸಿದರು ಕೂಡ ಕೆಲ ಒಮ್ಮೆ ನಡೆಯಬಾರದ ದುರಂತ ನಡೆದು ಹೋಗುತ್ತೆ. ಇದಕ್ಕೆಕನ್ನಡದ ಲಾಕಪ್ ಡೆತ್ ಚಿತ್ರದಿಂದ ಹಿಡಿದು ಮಾಸ್ತಿಗುಡಿಯವರೆಗೆ ಕೂಲಿ ಚಿತ್ರದಿಂದ ಹಿಡಿದು ಶಂಕರ್ ನಿರ್ದೇಶನದ ಇಂಡಿಯನ್ 2 ವರೆಗೆ ಹಲವು ಉದಾಹರಣೆಗಳು ಸಿಗುತ್ತವೆ.

Tragedy Strikes Stuntman Raju Dies During Arya-Pa Ranjith Film Shoot Vishal Vows Support

ದುರಂತ ಅಂದರೆ ತಂತ್ರಜ್ಞಾನ ಎಷ್ಟೇ ಬದಲಾದರೂ ಕೂಡ ಈ ಸಾವು- ನೋವನ್ನು ತಪ್ಪಿಸಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಇದಕ್ಕೆ ಮತ್ತೊಂದು ಉದಾಹರಣೆ ತಮಿಳು ಚಿತ್ರರಂಗದಲ್ಲಿ ನಡೆದ ಅವಘಡ.

ಹೌದು.. ಅಸಲಿಗೆ ತಮ್ಮ ಚಿತ್ರ ಮತ್ತು ಚಿಂತನೆಗಳ ಮೂಲಕವೇ ಸದ್ದು ಮಾಡುವ ಕಾಲಿವುಡ್‌ನ ಖ್ಯಾತ ನಿರ್ದೇಶಕ ಪಾ.ರಂಜಿತ್ ಸದ್ಯ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ.

ಇನ್ನೂ ಹೆಸರಿಡದ ಈ ಚಿತ್ರದಲ್ಲಿ ತಮಿಳಿನ ಖ್ಯಾತ ನಾಯಕ ಆರ್ಯ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಇದೇ ಚಿತ್ರದ ಚಿತ್ರೀಕರಣದಲ್ಲಿ ಅವಘಡ ಸಂಭವಿಸಿದ್ದು ಸಾಹಸ ಸನ್ನಿವೇಶವೊಂದರಲ್ಲಿ ಕಾರಿನ ಸ್ಟಂಟ್ ಮಾಡುವಾಗ ಚಿತ್ರದ ಸ್ಟಂಟ್‌ಮ್ಯಾನ್ ರಾಜು ಉಸಿರು ಚೆಲ್ಲಿದ್ದಾರೆ.

ಈ ಕುರಿತು ತಮಿಳಿನ ನಿರ್ಮಾಪಕರ ಸಂಘದ ಅಧ್ಯಕ್ಷ ಕೂಡ ಆಗಿರುವ ನಟ ವಿಶಾಲ್, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ದುಖವನ್ನು ಹಂಚಿಕೊಂಡಿದ್ದಾರೆ.

tragedy-strikes-stuntman-raju-dies-during-arya-pa-ranjith-film-shoot-vishal-vows-support

ಕಾರು ಪಲ್ಟಿ ಹೊಡೆಯುವ ದೃಶ್ಯವನ್ನು ಮಾಡುವಾಗ ಸ್ಟಂಟ್ ಕಲಾವಿದ ರಾಜು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ ಎಂಬ ವಿಚಾರ ಅರಗಿಸಿಕೊಳ್ಳಲು ತುಂಬಾ ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ. ರಾಜು ಅವರನ್ನು ನಾನು ಹಲವು ವರ್ಷಗಳಿಂದ ತಿಳಿದಿದ್ದೇನೆ. ಮತ್ತು ಅವರು ನನ್ನ ಚಿತ್ರಗಳಲ್ಲಿ ಹಲವು ಅಪಾಯಕಾರಿ ಸಾಹಸಗಳನ್ನು ಮಾಡಿದ್ದಾರೆ. ಅವರು ತುಂಬಾ ಧೈರ್ಯಶಾಲಿ ವ್ಯಕ್ತಿಯಾಗಿದ್ದರು ಎಂದು ಕೂಡ ವಿಶಾಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಮುಂದುವರೆದು ರಾಜು ಅವರ ಸಾವಿಗೆ ನನ್ನ ತೀವ್ರ ಸಂತಾಪಗಳು ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಅವರ ಕುಟುಂಬಕ್ಕೆ ಅವರ ನಷ್ಟವನ್ನು ಭರಿಸುವ ಹೆಚ್ಚಿನ ಶಕ್ತಿಯನ್ನು ನೀಡಲಿ ಎಂದು ಹೇಳಿರುವ ವಿಶಾಲ್, ಇದು ಕೇವಲ ಸಂತಾಪ ಸೂಚಿಸುವ ಟ್ವೀಟ್ ಮಾತ್ರವಲ್ಲ, ಅವರ ಕುಟುಂಬದ ಭವಿಷ್ಯಕ್ಕಾಗಿ ಖಂಡಿತವಾಗಿಯೂ ನಾವು ಅವರ ಜೊತೆ ಇರುತ್ತೇವೆ ಎಂದು ಹೇಳಿದ್ದಾರೆ. ಒಂದೇ ಚಲನಚಿತ್ರೋದ್ಯಮದಿಂದ ಬಂದವರು ನಾವು, ಹಲವಾರು ಚಿತ್ರಗಳಿಗೆ ಅವರು ನೀಡಿದ ಅನನ್ಯ ಕೊಡುಗೆಗಾಗಿ. ನಾನು ಹೃದಯಪೂರ್ವಕವಾಗಿ ಅವರಿಗೆ ನಮಿಸುತ್ತೇನೆ ಎಂದು ಹೇಳಿದ್ದಾರೆ.

ವಿಶಾಲ್ ಮಾತ್ರವಲ್ಲ ತಮಿಳು ಚಿತ್ರರಂಗದ ಹಲವರು ರಾಜು ಅವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕಂಬನಿ ಮಿಡಿದಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ತಮ್ಮ ದುಖವನ್ನು ಕೂಡ ಅನೇಕರು ವ್ಯಕ್ತಪಡಿಸಿದ್ದಾರೆ.

ಒಟ್ನಲ್ಲಿ ಚಿತ್ರತಂಡದ ಅಜಾಗರೂಕತೆಯಿಂದ ಇಂದು ಮತ್ತೊಬ್ಬ ತೆರೆಮರೆಯ ಹೀರೋ ತೆರೆಯ ಹಿಂದೆ ಶಾಶ್ವತವಾಗಿ ಸರಿದಿದ್ದಾರೆ. ಈ ಪ್ರಕರಣವನ್ನು ತಮಿಳುನಾಡಿನ ಪೊಲೀಸರು ಹೇಗೆ ಸ್ವೀಕರಿಸುತ್ತಾರೆ, ನೋಡುತ್ತಾರೆ ಎನ್ನುವ ಕುತೂಹಲ ಸದ್ಯ ಹಲವರಲ್ಲಿದ್ದು ಪಾ ರಂಜಿತ್ ಮತ್ತು ಆರ್ಯ ಅವರ ದಿವ್ಯ ನಿರ್ಲಕ್ಷ್ಯಕ್ಕೆ ರಾಜು ಅವರ ಪ್ರಾಣ ಪಕ್ಷಿ ಹಾರಿ ಹೋಯ್ತು ಈ ಹಿನ್ನೆಲೆ ಅವರನ್ನು ಬಂಧಿಸಬೇಕೆನ್ನುವ ಕೂಗು ಕೂಡ ಸದ್ಯ ಕೇಳಿ ಬರುತ್ತಿದೆ.

More from Filmibeat

English summary
Actor Vishal confirms the heartbreaking demise of stunt artist Raju on a film set. Get details on the tragic accident during Arya-Pa Ranjith's shoot and Vishal's promise to his family.
Read more about: tragedy kollywood death
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X