ಅಂದು ನಕಲಿ ಬಾತ್‌ರೂಂ ವಿಡಿಯೋದಿಂದ ಬೆಚ್ಚಿಬಿದ್ದಿದ್ದ ತ್ರಿಶಾ? ಮುಂದೆ ಸೌತ್ ಕ್ವೀನ್ ಆಗಿದ್ದೇಗೆ?

ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್'- 2 ಚಿತ್ರ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಚಿತ್ರದ ಪ್ರತಿ ಪಾತ್ರದ ಬಗ್ಗೆ ಪ್ರೇಕ್ಷಕರು ಮಾತನಾಡುತ್ತಿದ್ದಾರೆ. ಅದರಲ್ಲೂ ಚೋಳ ಸಾಮ್ರಾಜ್ಯದ ರಾಜಕುಮಾರಿ ಕುಂದವೈ ಆಗಿ ತ್ರಿಶಾ ಮೋಡಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ವರ್ಷಗಳು ಕಳೆದ್ರು ಆಕೆಯ ಚಾರ್ಮ್ ಕಮ್ಮಿ ಆಗಿಲ್ಲ. ಮತ್ತೊಮ್ಮೆ ಕುಂದವೈ ಆಗಿ ತಾನು ಎವರ್‌ಗ್ರೀನ್ ಕ್ವೀನ್ ಅಂತ ಸಾಬೀತುಪಡಿಸಿದ್ದಾರೆ.

ಕಾಲಿವುಡ್ ಬ್ಯೂಟಿ ತ್ರಿಶಾ ಹುಟ್ಟುಹಬ್ಬದ ಸಡಗರದಲ್ಲಿದ್ದಾರೆ. ಇದೇ ಸಂಭ್ರಮದಲ್ಲಿ 'ಪೊನ್ನಿಯಿನ್ ಸೆಲ್ವನ್'- 2 ಚಿತ್ರದಲ್ಲಿ ಕುಂದವೈ ಆಗಿ ದರ್ಬಾರ್ ನಡೆಸುತ್ತಿದ್ದಾರೆ. ದಶಕಗಳ ಹಿಂದೆ ತ್ರಿಶಾ ಅವರದ್ದು ಎನ್ನಲಾಗಿದ್ದ ಬಾತ್‌ರೂಮ್ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇಂಟರ್‌ನೆಟ್ ಇಷ್ಟೊಂದು ಬೆಳವಣಿಗೆ ಆಗುವುದಕ್ಕೂ ಮೊದ್ಲೆ ಆ ವಿಡಿಯೋ ಮಾಡಿದ ಸದ್ದು ಗದ್ದಲ ಅಷ್ಟಿಷ್ಟಲ್ಲ. ಇಂತಾದೊಂದು ವಿಡಿಯೋ ವೈರಲ್ ಆಗ್ತಿದ್ದಂತೆ ತ್ರಿಶಾ ಸಿನಿಕರಿಯರ್ ಮುಗಿದೇ ಹೋಯಿತು ಅಂತ ಕೆಲವರು ಅಂದುಕೊಂಡಿದ್ದರು.

Trisha Birthday Special: Ponniyin Selvan actress proves that she is Queen Of South India as Kundavai

ತ್ರಿಶಾ ರೀತಿ ಕಾಣುವ ಯುವತಿಯೊಬ್ಬಳು ಬೆತ್ತಲಾಗಿ ಸ್ನಾನ ಮಾಡುವ 2 ನಿಮಿಷ 30 ಸೆಕೆಂಡ್‌ಗಳ ವಿಡಿಯೋ ಲೀಕ್ ಆಗಿತ್ತು. ಕೆಲವರು ಇದು ತ್ರಿಶಾ ಅವರದ್ದೇ ವಿಡಿಯೋ ಎಂದು ಅಂದುಕೊಂಡರು. ಇಂತಾದೊಂದು ವಿಡಿಯೋ ವೈರಲ್ ಆದ ಸಮಯದಲ್ಲಿ ನಟಿ ತ್ರಿಶಾ ದಕ್ಷಿಣ ಆಫ್ರಿಕಾದಲ್ಲಿ ಇದ್ದರು. ಯೂಎಸ್‌ನಲ್ಲಿರುವ ಸ್ನೇಹಿತರಿಂದ ಈ ವಿಡಿಯೋ ಬಗ್ಗೆ ಕೇಳಿ ತಿಳಿದ ನಟಿ ಕೂಡ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದರು. "ಆ ವಿಡಿಯೋದಲ್ಲಿ ಇರುವುದು ನಾನಲ್ಲ. ನನ್ನ ಹೆಸರನ್ನು ಕೆಡಿಸಲು ಯಾರೋ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿದ್ದಾರೆ. ವಿಡಿಯೋ ಮಾರ್ಪ್‌ ಮಾಡಿ ಲೀಕ್ ಮಾಡಿದ್ದಾರೆ ಎಂದು ಹೇಳಿದ್ದರು. ಈ ಸಂಬಂಧ ತ್ರಿಶಾ ಚೆನ್ನೈ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು.

ಇನ್ನು ತ್ರಿಶಾ ಅವರ ತಾಯಿ ಉಮಾ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದರು. "ತನ್ನ ಮಗಳಿಗೆ ಶವರ್‌ನಲ್ಲಿ ಸ್ನಾನ ಮಾಡುವ ಅಭ್ಯಾಸ ಇಲ್ಲ. ಆಕೆ ಬಾತ್‌ಟಬ್ ಬಳಸುತ್ತಾಳೆ" ಎಂದು ಹೇಳಿದ್ದರು. ಒಟ್ನಲ್ಲಿ ಈ ವಿಡಿಯೋ ಭಾರೀ ಸುದ್ದಿ ಮಾಡಿದಂತೂ ಸುಳ್ಳಲ್ಲ. 1999ರಲ್ಲಿ ಮಿಸ್ ಚೆನ್ನೈ ಪೆಜೆಂಟ್, 2001ರಲ್ಲಿ ಮಿಸ್ ಇಂಡಿಯಾ ಪೇಜೆಂಟ್ ಬ್ಯೂಟಿಫುಲ್ ಸ್ಪೈಲ್ ಅವಾರ್ಡ್ ಗಿಟ್ಟಿಸಿಕೊಂಡಿದ್ದರು. 1999ರಲ್ಲಿ ಬಿಡುಗಡೆಯಾದ 'ಜೋಡಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರು. 2004ರಲ್ಲಿ ಬಿಡುಗಡೆಯಾಗಿದ್ದ 'ಸಾಮಿ' ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು.

Trisha Birthday Special: Ponniyin Selvan actress proves that she is Queen Of South India as Kundavai

ತೆಲುಗಿನ 'ವರ್ಷಂ' ತ್ರಿಶಾ ಕರಿಯರ್‌ನಲ್ಲಿ ಮೈಲಿಗಲ್ಲಾದ ಮತ್ತೊಂದು ಸಿನಿಮಾ. ಚಿತ್ರಂಗಕ್ಕೆ ಬಂದು 23 ವರ್ಷ ಕಳೆದರೂ ಇವತ್ತಿಗೂ ಯುವ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ. ಇನ್ನು ಆಕೆಯ ಅಂದ, ನಗು, ಅಭಿನಯಕ್ಕೆ ಅಭಿಮಾನಿಗಳು ಮಾರು ಹೋಗಿದ್ದಾರೆ. 'ವಿನೈ ತಾಂಡಿ ವರುವಾಯ', '96', 'ನುವ್ವು ವಸ್ತಾನಂಟೆ ನೇನು ವದಂಟಾನಾ', 'ಮೌನಂ ಪೇಸಿದಯೇ', 'ಅಭಿಯುಂ ನಾನುಂ' ಚೆನ್ನೈ ಚೆಲುವೆಯ ಕೆಲ ಸೂಪರ್ ಹಿಟ್ ಸಿನಿಮಾಗಳು.

'ಪೊನ್ನಿಯಿನ್ ಸೆಲ್ವನ್' ಚಿತ್ರದಲ್ಲಿ ನಂದಿನಿ ಪಾತ್ರ ಮಾಡುವುದು ತ್ರಿಶಾ ಕನಸಾಗಿತ್ತು. ಮಣಿರತ್ನಂ ಈ ಸಿನಿಮಾ ಮಾಡುತ್ತಿದ್ಧಾರೆ ಎಂದು ಗೊತ್ತಾದಾಗ ತ್ರಿಶಾ ನೇರವಾಗಿ ಅವರ ಕಚೇರಿಗೆ ಹೋಗಿ ಆ ಪಾತ್ರ ಕೇಳಿದ್ದರಂತೆ. ಆದರೆ ಮಣಿರತ್ನಂ "ಆ ಪಾತ್ರಕ್ಕೆ ಐಶ್ವರ್ಯ ರೈ ಮಾತ್ರ ನ್ಯಾಯ ಒದಗಿಸಲು ಸಾಧ್ಯ" ಎಂದು ಹೇಳಿದ್ದರಂತೆ. ಕಥೆಗೆ ನಂದಿನಿ ಪಾತ್ರವನ್ನೇ ಮೊದಲು ಆಯ್ಕೆ ಮಾಡಿದ್ದೇನೆ ಅದು, ಐಶ್ವರ್ಯ ರೈ ಎಂದು ಹೇಳಿದ ಮೇಲೆ ತ್ರಿಶಾ ಸುಮ್ಮನಾಗಿದ್ದರು. ಆದರೆ ಕುಂದವೈ ಪಾತ್ರಕ್ಕೂ ಚಿತ್ರದಲ್ಲಿ ಬಹಳ ಮಹತ್ವ ಇದೆ. ಆ ಪಾತ್ರವನ್ನು ಬಹಳ ಸೊಗಸಾಗಿ ತ್ರಿಶಾ ನಿಭಾಯಿಸಿ ಗೆದ್ದಿದ್ದಾರೆ.

ಇನ್ನು 2015ರಲ್ಲಿ ಚೆನ್ನೈ ಮೂಲದ ಉದ್ಯಮಿ ವರುಣ್ ಮನ್ನೇನ್ ಎಂಬುವರವ ಜೊತೆ ತ್ರಿಶಾ ಮದುವೆ ನಿಶ್ಚಿತಾರ್ಥ ನಡೆದಿತ್ತು. ಇಬ್ಬರು ಮದುವೆ ಕೂಡ ಆಗುತ್ತಾರೆ ಎಂದು ಎಲ್ಲಾ ಅಂದುಕೊಂಡಿದ್ದರು. ಆದರೆ 4 ತಿಂಗಳ ನಂತರ ಪರಸ್ಪರ ಭಿನ್ನಾಭಿಪ್ರಾಯಗಳಿಂದ ತ್ರಿಶಾ ಆ ನಿಶ್ಚಿತಾರ್ಥ ಮುರಿದುಕೊಂಡಿದ್ದಾಗಿ ಹೇಳಿದ್ದರು. ಇನ್ನು ಮಲಯಾಲಂ 'ರಾಮ್', ತಮಿಳಿನ 'ಲಿಯೋ', 'ದಿ ರೋಡ್', 'ಸತುರಂಗ ವೆಟೈ- 2' ಸಿನಿಮಾಗಳಲ್ಲಿ ಚೆಲುವೆ ಈಗ ಬಣ್ಣ ಹಚ್ಚಿದ್ದಾರೆ.

More from Filmibeat

English summary
Trisha Birthday Special: Ponniyin Selvan actress proves that she is Queen Of South India as Kundavai. A few years ago, the actress's morphed bathroom video went viral and became a big news. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X