ಜಾತಿಯ ಹೆಸರೇಳಿದ್ದಕ್ಕೆ ನಟಿ ತ್ರಿಶಾ ವಿರುದ್ಧ ಟೀಕೆ
ನಟಿ ತ್ರಿಶಾ ವಿವಾದಗಳಿಂದ ಸಾಧ್ಯವಾದಷ್ಟು ದೂರವೇ. ಎರಡು ದಶಕದಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ತ್ರಿಶಾ, ವಿವಾದದ ಕಾರಣಕ್ಕೆ ಸುದ್ದಿಯಾಗಿದ್ದು ಬಹಳ ಕಡಿಮೆಯೇ.
ಆದರೆ ಈಗ ತ್ರಿಶಾ ವಿರುದ್ಧ ನೆಟ್ಟಿಗರು ಟೀಕಾ ಪ್ರಹಾರ ಮಾಡುತ್ತಿದ್ದಾರೆ. ಇದಕ್ಕೆ ಕಾರಣ, ತ್ರಿಶಾ ತಮ್ಮ ಸಂದರ್ಶನವೊಂದರಲ್ಲಿ ಸಹಜವಾಗಿಯೇ ಮಾತನಾಡುತ್ತಾ ಜಾತಿಯೊಂದರ ಹೆಸರು ಹೇಳಿದ್ದು.
ತ್ರಿಶಾ ಜಾತಿಯ ಹೆಸರು ಹೇಳಿದ್ದಾರಷ್ಟೆ, ಜಾತಿ ನಿಂದನೆಯಾಗಲಿ, ಅಪಮಾನವಾಗಲಿ ಏನನ್ನೂ ಮಾಡಿಲ್ಲ ಹಾಗಿದ್ದರೂ ತ್ರಿಶಾ ಅವರನ್ನು ಟಾರ್ಗೆಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಲಾಗುತ್ತಿದೆ. ಕ್ಷಮೆಗೆ ಸಹ ಒತ್ತಾಯಿಸಲಾಗುತ್ತಿದೆ.

ತಮ್ಮ ಹೊಸ ಸಿನಿಮಾ 'ರಾಂಗಿ'ಯ ಪ್ರಚಾರದಲ್ಲಿ ತ್ರಿಶಾ ತೊಡಗಿದ್ದಾರೆ. ಇದೇ ಕಾರಣಕ್ಕೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ತ್ರಿಶಾಗೆ ಕೆಲವು ಫನ್ ಪ್ರಶ್ನೆಗಳನ್ನು ನಿರೂಪಕರು ಕೇಳಿದ್ದಾರೆ. ನಿಮ್ಮಿಷ್ಟದ ಕಸಿನ್ ಯಾರು ಎಂದಾಗ ತ್ರಿಶಾ ಹೆಸರು ಹೇಳಿದ್ದಾರೆ. ಆ ಬಳಿಕ ನಿಮಗೆ ಕಂಫರ್ಟ್ ಎನಿಸುವ ಆಹಾರ ಯಾವುದು? ಎಂದಾಗ ಮನೆಯ ಊಟ ನನಗೆ ಆರಾಮದಾಯಕ ಎನಿಸುತ್ತದೆ. ಅದರಲ್ಲೂ ಸರಳವಾದ ಬ್ರಾಹ್ಮಿಣ್ ಊಟ ಹೆಚ್ಚು ಆರಾಮದಾಯಕ ಎನಿಸುತ್ತದೆ ಎಂದಿದ್ದಾರೆ.
'ಬ್ರಾಹ್ಮಣ' ಹೆಸರು ತೆಗೆದುಕೊಂಡಿದ್ದಕ್ಕೆ ತ್ರಿಶಾ ಅವರನ್ನು ಕೆಲವರು ಟೀಕಿಸುತ್ತಿದ್ದಾರೆ. ಕೆಲವರು ತ್ರಿಶಾಗೆ ಬೆಂಬಲವನ್ನೂ ನೀಡಿದ್ದಾರೆ. ಆಕೆಯ ಇಷ್ಟವನ್ನು ಆಕೆ ಹೇಳಿದ್ದಾರೆ ಅದರಲ್ಲಿ ತಪ್ಪೇನು ಎಂದು ಸಹ ಪ್ರಶ್ನೆ ಮಾಡಿದ್ದಾರೆ.
ತ್ರಿಶಾ ಚಿತ್ರರಂಗ ಪ್ರವೇಶಿಸಿ 20 ವರ್ಷವಾಗಿದೆ. ಈಗಲೂ ನಟಿಗೆ ಬೇಡಿಕೆ ಹಾಗೆಯೇ ಇದೆ. 'ರಾಂಗಿ' ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಧನಾತ್ಮಕ ಅಭಿಪ್ರಾಯ ಪಡೆದುಕೊಂಡಿದೆ. ಇದರ ಜೊತೆಗೆ 'ಶತುರಂಗ ವೇಟೈ 2', 'ರಾಮ್; ಪಾರ್ಟ್ 1', 'ಪೊನ್ನಿಯಿನ್ ಸೆಲ್ವನ್ 2', 'ದಿ ರೋಡ್' ಹಾಗೂ ಮಲಯಾಳಂನ 'ಧೂಮಂ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಕನ್ನಡದಲ್ಲಿಯೂ ಪುನೀತ್ ರಾಜ್‌ಕುಮಾರ್ ಜೊತೆಗೆ ಒಂದು ಸಿನಿಮಾದಲ್ಲಿ ನಟಿಸಿದ್ದ ತ್ರಿಶಾ, ಇನ್ನೊಂದು ಸಿನಿಮಾದಲ್ಲಿ ನಟಿಸಬೇಕಿತ್ತು, ಅಷ್ಟರಲ್ಲಿ ಅಪ್ಪು ಅಗಲಿದರು.


Click it and Unblock the Notifications











