For Quick Alerts
  ALLOW NOTIFICATIONS  
  For Daily Alerts

  ಮದುವೆ ಬಗ್ಗೆ ತನ್ನ ಮನದಾಸೆ ಹಂಚಿಕೊಂಡ ನಟಿ ತ್ರಿಷಾ ಕೃಷ್ಣನ್!

  |

  96 ಚಿತ್ರದ ಬಳಿಕ ಸೌತ್ ಇಂಡಸ್ಟ್ರಿಯಲ್ಲಿ ಮತ್ತೆ ಕಂಬ್ಯಾಕ್ ಮಾಡಿರುವ ಬಹುಭಾಷೆ ನಟಿ ತ್ರಿಷಾ, ಈಗ ಬ್ಯಾಕ್ ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಬ್ಯುಸಿ ಇದ್ದಾರೆ.

  ಈ ನಡುವೆ ಅಭಿಮಾನಿಗಳ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಸಂವಾದ ನಡೆಸಿದ ನಟಿ, ಮದುವೆ ಕುರಿತು ವಿಶೇಷವಾದ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ತ್ರಿಷಾ ಮದುವೆ ಕುರಿತು ತಮ್ಮ ಮನದಾಸೆಯನ್ನು ಹೇಳಿಕೊಂಡಿದ್ದಾರೆ.

  ಮೋಹಕ ತಾರೆ ತ್ರಿಷಾ ಕೃಷ್ಣನ್ ಮದುವೆ ಮುರಿದು ಬಿತ್ತಾ?ಮೋಹಕ ತಾರೆ ತ್ರಿಷಾ ಕೃಷ್ಣನ್ ಮದುವೆ ಮುರಿದು ಬಿತ್ತಾ?

  ''ನಿಮ್ಮ ಜೀವನದಲ್ಲಿ ಕ್ರೇಜಿ ವಿಷಯ ಏನು?'' ಎಂದು ಅಭಿಮಾನಿ ಕೇಳಿದ್ದಾನೆ. ಅದಕ್ಕೆ ಉತ್ತರಿಸಿರುವ ತ್ರಿಷಾ ''ಲಾಸ್ ವೇಗಾಸ್ ನಲ್ಲಿ ಮದುವೆಯಾಗುವುದು'' ಎಂದು ತಿಳಿಸಿದ್ದಾರೆ. ತ್ರಿಷಾ ಅವರ ಈ ಉತ್ತರ ಈಗ ಸಿನಿಕ್ಷೇತ್ರದಲ್ಲಿ ಕುತೂಹಲ ಮೂಡಿಸಿದೆ.

  ಇದ್ದಕ್ಕಿದ್ದಂತೆ ಮದುವೆ ಕುರಿತು ಪ್ರಸ್ತಾಪ ಮಾಡಿದ ತ್ರಿಷಾ, ನಿಜಕ್ಕೂ ಮದುವೆ ತಯಾರಿ ನಡೆಸುತ್ತಿದ್ದಾರಾ ಎಂಬ ಚರ್ಚೆ ಆರಂಭವಾಗಿದೆ. ತ್ರಿಷಾ ಅವರ ಖಾಸಗಿ ಜೀವನದ ಕುರಿತು ನೋಡುವುದಾದರೇ, ತೆಲುಗು ನಟ ರಾಣಾ ಜೊತೆ ತ್ರಿಷಾ ಡೇಟಿಂಗ್ ಮಾಡುತ್ತಿದ್ದರು ಎಂಬ ಮಾತಿದೆ.

  '96' ಜಾನು ಪಾತ್ರಕ್ಕೆ ತ್ರಿಷಾ ಪಡೆದ ಪ್ರಶಸ್ತಿಗಳ ಸಂಖ್ಯೆ ಇಷ್ಟು'96' ಜಾನು ಪಾತ್ರಕ್ಕೆ ತ್ರಿಷಾ ಪಡೆದ ಪ್ರಶಸ್ತಿಗಳ ಸಂಖ್ಯೆ ಇಷ್ಟು

  ಆ ಗಾಸಿಪ್ ನಡುವೆಯೂ ಉದ್ಯಮಿ ವರುಣ್ ಮನಿಯನ್ ಎಂಬುವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. ಇನ್ನೇನೂ ಮದುವೆ ಆಗಿಯೇ ಬಿಡುತ್ತೆ ಎನ್ನುವಷ್ಟರಲ್ಲಿ ಆ ನಿಶ್ಚಿತಾರ್ಥ ಬ್ರೇಕ್ ಅಪ್ ಆಯಿತು. ಈ ಘಟನೆಯ ಬಳಿಕ ತ್ರಿಷಾ ಸಿನಿಮಾಗಳ ಕಡೆ ಮಾತ್ರ ಗಮನ ಹರಿಸುತ್ತಿದ್ದಾರೆ.

  ಆದ್ರೀಗ, ಯಾರೂ ಕೇಳದೆಯೇ ಮದುವೆ ಬಗ್ಗೆ ಮಾತನಾಡಿದ್ದು ಅಭಿಮಾನಿಗಳಲ್ಲಿ ಆಸೆ ಮೂಡಿಸಿದೆ. ಸದ್ಯ ಮೋಹನ್ ಲಾಲ್ ಜೊತೆ ರಾಮ್ ಸಿನಿಮಾ ಮಾಡುತ್ತಿರುವ ತ್ರಿಷಾ, ಚಿರಂಜೀವಿ ನಟನೆಯ 152 ಚಿತ್ರದಲ್ಲೂ ನಾಯಕಿಯಾಗಿದ್ದಾರೆ. ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವೆನ್ ಚಿತ್ರದಲ್ಲೂ ಬಣ್ಣ ಹಚ್ಚುತ್ತಿದ್ದಾರೆ.

  English summary
  South actress Trisha Krishnan gave hints about her marriage.she want to married in las vegas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X